AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: 6ಜಿಯಿಂದ ಸ್ಯಾಟಲೈಟ್ ಸಂವಹನದವರೆಗೆ, ಇಂಡಿಯಾ ಮೊಬೈಲ್ ಕಾಂಗ್ರೆಸ್ ಉದ್ಘಾಟಿಸಿದ ಪ್ರಧಾನಿ ಮೋದಿ

Video: 6ಜಿಯಿಂದ ಸ್ಯಾಟಲೈಟ್ ಸಂವಹನದವರೆಗೆ, ಇಂಡಿಯಾ ಮೊಬೈಲ್ ಕಾಂಗ್ರೆಸ್ ಉದ್ಘಾಟಿಸಿದ ಪ್ರಧಾನಿ ಮೋದಿ

ನಯನಾ ರಾಜೀವ್
|

Updated on: Oct 08, 2025 | 12:12 PM

Share

ಇಂಡಿಯಾ ಮೊಬೈಲ್ ಕಾಂಗ್ರೆಸ್‌(India Mobile Congress)ನ 9 ನೇ ಆವೃತ್ತಿ ಇಂದು ಆರಂಭಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಈ ಕಾರ್ಯಕ್ರಮವನ್ನು ಉದ್ಘಾಟಿಸಿದ್ದಾರೆ. ಇದು ಅಕ್ಟೋಬರ್ 8 ರಿಂದ 11 ರವರೆಗೆ ನಡೆಯಲಿದೆ.ತಿ ವರ್ಷದಂತೆ, ಈ ಕಾರ್ಯಕ್ರಮದ ಗಮನವು ಟೆಲಿಕಾಂ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಮೇಲೆ ಕೇಂದ್ರೀಕೃತವಾಗಿರಲಿದೆ. ಇಂಡಿಯಾ ಮೊಬೈಲ್ ಕಾಂಗ್ರೆಸ್ ಪ್ರತಿ ವರ್ಷ ಅನೇಕ ಪ್ರಮುಖ ತಂತ್ರಜ್ಞಾನ ಕಂಪನಿಗಳು ಭಾಗವಹಿಸುವ ತಂತ್ರಜ್ಞಾನ ಕಾರ್ಯಕ್ರಮವಾಗಿದೆ.

ನವದೆಹಲಿ, ಅಕ್ಟೋಬರ್ 08: ಇಂಡಿಯಾ ಮೊಬೈಲ್ ಕಾಂಗ್ರೆಸ್‌(India Mobile Congress)ನ 9 ನೇ ಆವೃತ್ತಿ ಇಂದು ಆರಂಭಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಈ ಕಾರ್ಯಕ್ರಮವನ್ನು ಉದ್ಘಾಟಿಸಿದ್ದಾರೆ. ಇದು ಅಕ್ಟೋಬರ್ 8 ರಿಂದ 11 ರವರೆಗೆ ನಡೆಯಲಿದೆ.ತಿ ವರ್ಷದಂತೆ, ಈ ಕಾರ್ಯಕ್ರಮದ ಗಮನವು ಟೆಲಿಕಾಂ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಮೇಲೆ ಕೇಂದ್ರೀಕೃತವಾಗಿರಲಿದೆ. ಇಂಡಿಯಾ ಮೊಬೈಲ್ ಕಾಂಗ್ರೆಸ್ ಪ್ರತಿ ವರ್ಷ ಅನೇಕ ಪ್ರಮುಖ ತಂತ್ರಜ್ಞಾನ ಕಂಪನಿಗಳು ಭಾಗವಹಿಸುವ ತಂತ್ರಜ್ಞಾನ ಕಾರ್ಯಕ್ರಮವಾಗಿದೆ.

ಇಂಡಿಯಾ ಮೊಬೈಲ್ ಕಾಂಗ್ರೆಸ್ (IMC) ಟೆಲಿಕಾಂ ಮೇಲೆ ವಿಶೇಷ ಗಮನ ಹರಿಸಿದೆ. ಈ ವರ್ಷ, ಈ ಕಾರ್ಯಕ್ರಮವನ್ನು ದೆಹಲಿಯ ಯಶೋಭೂಮಿ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಸಲಾಗುತ್ತಿದೆ. ಈ ಮೆಗಾ ಕಾರ್ಯಕ್ರಮವನ್ನು ದೂರಸಂಪರ್ಕ ಇಲಾಖೆ (DoT) ಮತ್ತು ಸೆಲ್ಯುಲಾರ್ ಆಪರೇಟರ್ಸ್ ಅಸೋಸಿಯೇಷನ್ ​​ಆಫ್ ಇಂಡಿಯಾ (COAI) ಜಂಟಿಯಾಗಿ ಆಯೋಜಿಸುತ್ತಿವೆ.

ಪ್ರಪಂಚದಾದ್ಯಂತದ ಅನೇಕ ಕಂಪನಿಗಳು ಭಾಗವಹಿಸಿವೆ. ಈ ವರ್ಷದ ಇಂಡಿಯಾ ಮೊಬೈಲ್ ಕಾಂಗ್ರೆಸ್‌ನ ಥೀಮ್ ಇನ್ನೋವೇಟ್ ಟು ಟ್ರಾನ್ಸ್‌ಫಾರ್ಮ್ ಇದು ಭಾರತದ ಡಿಜಿಟಲ್ ರೂಪಾಂತರವನ್ನು ಪ್ರತಿಬಿಂಬಿಸುತ್ತದೆ. ದೇಶದ ಯುವ ಪೀಳಿಗೆ ತಂತ್ರಜ್ಞಾನ ಕ್ರಾಂತಿಗೆ ಮಹತ್ವದ ಕೊಡುಗೆ ನೀಡುತ್ತಿದೆ, ಹಿಂದೆ ಭವಿಷ್ಯ ಎಂದರೆ ಮುಂದಿನ ಶತಮಾನ ಅಥವಾ ಮುಂದಿನ 10-20 ವರ್ಷಗಳು ಎಂದರ್ಥವಾಗಿತ್ತು ಆದರೆ ತಂತ್ರಜ್ಞಾನ ಎಷ್ಟು ವೇಗವಾಗಿ ಬದಲಾಗುತ್ತಿದೆ ಎಂದರೆ ನಮ್ಮ ಭವಿಷ್ಯ ನಮ್ಮ ಕಣ್ಣಮುಂದೆಯೇ ಇದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಒಂದು ಲೋಟ ಚಹಾಗಿಂತ ಕಡಿಮೆ ಬೆಲೆಯಲ್ಲಿ ಒಂದು ಜಿಬಿ ಡಾಟಾ ಸಿಗಲಿದೆ ಎಂದರು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ