ದೆಹಲಿ: ಮನೆಯ ತಾರಸಿಯಿಂದ ಕೆಳಗೆ ಬಿದ್ದ ಸ್ನೇಹಿತೆಯರು, ಓರ್ವ ಮಹಿಳೆ ಸಾವು
ಮನೆಯ ತಾರಸಿ ಮೇಲೆ ಹರಟೆ ಹೊಡೆಯುತ್ತಾ ನಿಂತಿದ್ದ ಇಬ್ಬರು ಸ್ನೇಹಿತೆಯರು ಏಕಾಏಕಿ ಕೆಳಗೆ ಬಿದ್ದಿರುವ ಘಟನೆ ದೆಹಲಿಯ ಹೌಜ್ ಖಾಜಿ ಪ್ರದೇಶದಲ್ಲಿ ನಡೆದಿದೆ. ಕಟ್ಟಡದ ತಾರಸಿಯಿಂದ ಕೆಳಗೆ ಬಿದ್ದಿದ್ದವರ ಪೈಕಿ ಒಬ್ಬಾಕೆ ಸಾವನ್ನಪ್ಪಿದ್ದು, ಮತ್ತೊಬ್ಬಳ ಸ್ಥಿತಿ ಗಂಭೀರವಾಗಿದೆ. ಮಂಗಳವಾರ ರಾತ್ರಿ 8.41ಕ್ಕೆ ಹೌಜ್ ಖಾಜಿ ಪೊಲೀಸ್ ಠಾಣೆಗೆ ಕರೆ ಬಂದಿತ್ತು, ಮನೆಯ ಕಟ್ಟಡದ ಮೇಲಿಂದ ಒಬ್ಬ ಹುಡುಗ ಹಾಗೂ ಹುಡುಗಿ ಕೆಳಗೆ ಹಾರಿದ್ದಾರೆ ಎಂದು ಫೋನ್ನಲ್ಲಿ ತಿಳಿಸಲಾಗಿತ್ತು. ಸ್ಥಳಕ್ಕೆ ತಲುಪಿದಾಗ ಯುವತಿಯರಿಬ್ಬರು ಕೆಳಗೆ ಬಿದ್ದಿದ್ದರು.

ನವದೆಹಲಿ, ಅಕ್ಟೋಬರ್ 08: ಮನೆಯ ತಾರಸಿ ಮೇಲೆ ಹರಟೆ ಹೊಡೆಯುತ್ತಾ ನಿಂತಿದ್ದ ಇಬ್ಬರು ಸ್ನೇಹಿತೆಯರು ಏಕಾಏಕಿ ಕೆಳಗೆ ಬಿದ್ದಿರುವ ಘಟನೆ ದೆಹಲಿಯ ಹೌಜ್ ಖಾಜಿ ಪ್ರದೇಶದಲ್ಲಿ ನಡೆದಿದೆ. ಕಟ್ಟಡದ ತಾರಸಿಯಿಂದ ಕೆಳಗೆ ಬಿದ್ದವರ ಪೈಕಿ ಒಬ್ಬಾಕೆ ಸಾವನ್ನಪ್ಪಿದ್ದು, ಮತ್ತೊಬ್ಬಳ ಸ್ಥಿತಿ ಗಂಭೀರವಾಗಿದೆ. ಮಂಗಳವಾರ ರಾತ್ರಿ 8.41ಕ್ಕೆ ಹೌಜ್ ಖಾಜಿ ಪೊಲೀಸ್ ಠಾಣೆಗೆ ಕರೆ ಬಂದಿತ್ತು, ಮನೆಯ ಕಟ್ಟಡದ ಮೇಲಿಂದ ಒಬ್ಬ ಹುಡುಗ ಹಾಗೂ ಹುಡುಗಿ ಕೆಳಗೆ ಹಾರಿದ್ದಾರೆ ಎಂದು ಫೋನ್ನಲ್ಲಿ ತಿಳಿಸಲಾಗಿತ್ತು. ಸ್ಥಳಕ್ಕೆ ತಲುಪಿದಾಗ ಯುವತಿಯರಿಬ್ಬರು ಕೆಳಗೆ ಬಿದ್ದಿದ್ದರು.
ಒಬ್ಬರನ್ನು ರಮೇಶ್ ಅವರ ಮಗಳು ಮತ್ತು ಕಪಿಲ್ ಅವರ ಪತ್ನಿ ಸುನೀತಾ (21) ಎಂದು ಗುರುತಿಸಲಾಯಿತು. ಅವರ ತಲೆಗೆ ತುಂಬಾ ಹಾನಿಯಾಗಿದ್ದು, ತಲೆಗೆ ತೀವ್ರ ಗಾಯಗಳಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.
ಅಶೋಕ್ ದುಬೆ ಅವರ ಪುತ್ರಿ ಮತ್ತು ಅದೇ ಪ್ರದೇಶದ ನಿವಾಸಿಯಾಗಿರುವ ತ್ರಿಪ್ತಿ ಅಲಿಯಾಸ್ ಗುಂಗುನ್ (19) ಎಂದು ಗುರುತಿಸಲಾದ ಮತ್ತೊಬ್ಬರನ್ನು ಪೊಲೀಸರು ಬರುವ ಮೊದಲೇ ಆಕೆಯ ಕುಟುಂಬ ಆಸ್ಪತ್ರೆಗೆ ಕರೆದೊಯ್ದಿತ್ತು. ತೃಪ್ತಿ ಪ್ರಸ್ತುತ ಪ್ರಜ್ಞಾಹೀನಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಯಾವುದೇ ಹೇಳಿಕೆ ನೀಡುವ ಸ್ಥಿತಿಯಲ್ಲಿಲ್ಲ ಎಂದು ವೈದ್ಯರು ದೃಢಪಡಿಸಿದ್ದಾರೆ.
ಪ್ರಾಥಮಿಕ ವಿಚಾರಣೆಯಲ್ಲಿ ಸುನೀತಾ ಮತ್ತು ತೃಪ್ತಿ ಅಕ್ಕಪಕ್ಕದ ಮನೆಯವರು, ಇಬ್ಬರೂ ಆಪ್ತ ಸ್ನೇಹಿತೆಯರು ಎಂಬುದು ತಿಳಿದುಬಂದಿದೆ. ಎಂದಿನಂತೆ ಇಬ್ಬರೂ ಸಂಜೆ ತಮ್ಮ ಪಕ್ಕದ ಮನೆಯ ತಾರಸಿಯಲ್ಲಿ ಒಟ್ಟಿಗೆ ವಾಕ್ ಮಾಡುತ್ತಿದ್ದರು.
ಮತ್ತಷ್ಟು ಓದಿ: ತೆಲಂಗಾಣ: ನ್ಯಾಯಾಲಯದ ಕಟ್ಟಡದಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಕುಟುಂಬ, ಮಹಿಳೆ ಸಾವು
ಘಟನೆಗೆ ಸ್ವಲ್ಪ ಮೊದಲು ಇಬ್ಬರನ್ನೂ ನೋಡಿದ್ದೆ ಮತ್ತು ತಡವಾಗುತ್ತಿದೆ ಕೆಳಗೆ ಬಾ ಎಂದು ತನ್ನ ಸಹೋದರಿಗೆ ಹೇಳಿದ್ದೆ ಎಂದು ತೃಪ್ತಿಯ ಸಹೋದರ ಹೇಳಿದ್ದಾರೆ. ಇಬ್ಬರೂ ಮನಸ್ಥಿತಿ ಕೂಡ ಸಾಮಾನ್ಯವಾಗಿತ್ತು. ನಿಮಿಷಗಳ ನಂತರ, ಶಬ್ದ ಕೇಳಿಸಿತ್ತು, ಇಬ್ಬರೂ ಕೆಳಗೆ ಬಿದ್ದಿದ್ದರು.
ಮೃತ ಮಹಿಳೆಗೆ ವಿವಾಹವಾಗಿದ್ದು, ಚಿಕಿತ್ಸೆಗೆಂದು ಪೋಷಕರ ಮನೆಗೆ ಬಂದಿದ್ದಳು. ಸುನೀತಾ ಫೆಬ್ರವರಿ 2025 ರಲ್ಲಿ ಕೆಲವೇ ತಿಂಗಳುಗಳ ಹಿಂದೆ ವಿವಾಹವಾಗಿದ್ದರು ಮತ್ತು ಪ್ರಸ್ತುತ ಪಾರ್ಶ್ವವಾಯು ಚಿಕಿತ್ಸೆಯ ಕಾರಣದಿಂದಾಗಿ ಅವರ ಪೋಷಕರೊಂದಿಗೆ ವಾಸಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ತನಿಖೆ ಮುಂದುವರೆದಿದ್ದು, ಗಾಯಗೊಂಡ ಯುವತಿಯ ಪ್ರಜ್ಞೆ ಮರಳಿದ ಬಳಿಕ ಹೇಳಿಕೆ ದಾಖಲಿಸಿಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:37 pm, Wed, 8 October 25




