ದೆಹಲಿಯಲ್ಲಿ 2 ಮೆಟ್ರೋ ಕಾರಿಡಾರ್ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ

ಇಂದು ಎರಡು ಹೊಸ ಮೆಟ್ರೋ ಕಾರಿಡಾರ್‌ಗಳಿಗೆ ಅನುಮತಿ ನೀಡಲಾಗಿದೆ, ಇದಕ್ಕಾಗಿ 8400 ಕೋಟಿ ರೂ. ವೆಚ್ಚವಾಗಲಿದೆ. ಲಜಪತ್ ನಗರದಿಂದ ಸಾಕೇತ್ ಜಿ ಬ್ಲಾಕ್‌ವರೆಗೆ ಸುಮಾರು 8.4 ಕಿಲೋಮೀಟರ್ ಮೆಟ್ರೋ ಮಾರ್ಗವಿದೆ. ಇದು ಎಂಟು ನಿಲ್ದಾಣಗಳನ್ನು ಹೊಂದಿರುತ್ತದೆ. ಎರಡನೆಯದು ಇಂದರ್‌ಲೋಕ್‌ನಿಂದ ಇಂದ್ರಪ್ರಸ್ಥದವರೆಗೆ, ಇದು ಸುಮಾರು 12.4 ಕಿಲೋಮೀಟರ್‌ಗಳ ಮೆಟ್ರೋ ಮಾರ್ಗವಾಗಿದೆ. ಇದು ಮಾರ್ಚ್ 2029 ರ ವೇಳೆಗೆ ಪೂರ್ಣಗೊಳ್ಳುತ್ತದೆ ಎಂದು ಸಚಿವ ಸಂಪುಟ ಸಭೆ ನಂತರ ಕೇಂದ್ರ ಸಚಿವ ಅನುರಾಗ್ ಠಾಕೂರ್ ಮಾಹಿತಿ ನೀಡಿದ್ದಾರೆ.

ದೆಹಲಿಯಲ್ಲಿ 2 ಮೆಟ್ರೋ ಕಾರಿಡಾರ್ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ
ಅನುರಾಗ್ ಠಾಕೂರ್
Follow us
|

Updated on:Mar 13, 2024 | 4:28 PM

ದೆಹಲಿ ಮಾರ್ಚ್ 18: ದೆಹಲಿಯಲ್ಲಿ(Delhi) 2 ಮೆಟ್ರೋ ಕಾರಿಡಾರ್ (Metro corridors )ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಬುಧವಾರ ನಡೆದ ಮೋದಿ 2.O ಅವಧಿಯ ಕೊನೆಯ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು  ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಸಚಿವ ಅನುರಾಗ್ ಠಾಕೂರ್ (Anurag Thakur) ಮಾಹಿತಿ ನೀಡಿದ್ದಾರೆ. ದೆಹಲಿಯಲ್ಲಿ 8,400 ಕೋಟಿ ರೂಪಾಯಿ ವೆಚ್ಚದಲ್ಲಿ ಎರಡು ಹೊಸ ಮೆಟ್ರೋ ಕಾರಿಡಾರ್‌ಗಳ ನಿರ್ಮಾಣಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದಕ್ಕಾಗಿ ಕೇಂದ್ರ ಮತ್ತು ದೆಹಲಿ ಸರ್ಕಾರ ಮತ್ತು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ಪಡೆಯಲಾಗುತ್ತದೆ

ಹೊಸ ಕಾರಿಡಾರ್‌ಗಳಲ್ಲಿ 12.377 ಕಿಮೀ ಇಂದರ್‌ಲೋಕ್ – ಇಂದ್ರಪ್ರಸ್ಥ ವಿಭಾಗ ಮತ್ತು 8.385 ಕಿಮೀ ಉದ್ದದ ಲಜಪತ್ ನಗರ – ಸಾಕೇತ್ ಜಿ ಬ್ಲಾಕ್ ಸೇರಿವೆ. ಇದು ದೆಹಲಿ ಮೆಟ್ರೋದ ಹಂತ-IV ಯೋಜನೆಯ ಭಾಗವಾಗಿರುತ್ತದೆ. ಈ ಎರಡು ಮಾರ್ಗಗಳು 20.762 ಕಿ.ಮೀ ವ್ಯಾಪ್ತಿ ಹೊಂದಿದೆ.ಇವು ರಾಷ್ಟ್ರ ರಾಜಧಾನಿಯಲ್ಲಿ ಮೆಟ್ರೋ ಸಂಪರ್ಕವನ್ನು ಇನ್ನಷ್ಟು ಸುಧಾರಿಸುವ ನಿರೀಕ್ಷೆಯಿದೆ ಎಂದು ಸರ್ಕಾರ ಬುಧವಾರ ಹೇಳಿಕೆಯಲ್ಲಿ ತಿಳಿಸಿದೆ.

ಅನುರಾಗ್ ಠಾಕೂರ್ ಸುದ್ದಿಗೋಷ್ಠಿ

ಇಂದರ್‌ಲೋಕ್ – ಇಂದ್ರಪ್ರಸ್ಥ ಕಾರಿಡಾರ್ ಹಸಿರು ರೇಖೆಯ ವಿಸ್ತರಣೆಯಾಗಿದ್ದು ಇದು ಕೆಂಪು, ಹಳದಿ, ಏರ್ ಪೋರ್ಟ್ ಲೈನ್, ಮೆಜೆಂಟಾ, ನೇರಳೆ ಮತ್ತು  ಬ್ಲೂ ಲೈನ್ ಜತೆ  ವಿನಿಮಯವನ್ನು ಒದಗಿಸುತ್ತದೆ. ಲಜಪತ್ ನಗರ-ಸಾಕೇತ್ ಜಿ ಬ್ಲಾಕ್ ಕಾರಿಡಾರ್ ಸಿಲ್ವರ್, ಮೆಜೆಂಟಾ, ಪಿಂಕ್ ಮತ್ತು ವೈಲೆಟ್ ಲೈನ್‌ಗಳನ್ನು ಸಂಪರ್ಕಿಸುತ್ತದೆ.

ಇಂದರ್‌ಲೋಕ್, ನಬಿ ಕರೀಮ್, ನವದೆಹಲಿ, ದೆಹಲಿ ಗೇಟ್, ಇಂದ್ರಪ್ರಸ್ಥ, ಲಜಪತ್ ನಗರ, ಚಿರಾಗ್ ಡಿಲ್ಲಿ ಮತ್ತು ಸಾಕೇತ್ ಜಿ ಬ್ಲಾಕ್‌ನಲ್ಲಿ ಎಂಟು ಹೊಸ ಇಂಟರ್‌ಚೇಂಜ್ ನಿಲ್ದಾಣಗಳು ಈ ಕಾರಿಡಾರ್‌ಗಳಲ್ಲಿ ಬರಲಿವೆ. ಈ ನಿಲ್ದಾಣಗಳು ದೆಹಲಿ ಮೆಟ್ರೋ ನೆಟ್‌ವರ್ಕ್‌ನ ಎಲ್ಲಾ ಕಾರ್ಯಾಚರಣಾ ಮಾರ್ಗಗಳ ನಡುವೆ ಪರಸ್ಪರ ಸಂಪರ್ಕವನ್ನು ಗಮನಾರ್ಹವಾಗಿ ಸುಧಾರಿಸುತ್ತದೆ.

ದೆಹಲಿ ಮೆಟ್ರೋ ತನ್ನ ನಾಲ್ಕನೇ ಹಂತದ ವಿಸ್ತರಣೆಯ ಭಾಗವಾಗಿ ಈಗಾಗಲೇ 65 ಕಿಮೀ ಜಾಲವನ್ನು ನಿರ್ಮಿಸುತ್ತಿದೆ. ಈ ಹೊಸ ಕಾರಿಡಾರ್‌ಗಳು ಹಂತ ಹಂತವಾಗಿ ಮಾರ್ಚ್ 2026 ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಪ್ರಸ್ತುತ, DMRC 286 ನಿಲ್ದಾಣಗಳನ್ನು ಒಳಗೊಂಡಿರುವ 391 ಕಿಲೋಮೀಟರ್‌ಗಳ ಜಾಲವನ್ನು ನಿರ್ವಹಿಸುತ್ತದೆ. ದೆಹಲಿ ಮೆಟ್ರೋ ಈಗ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮೆಟ್ರೋ ನೆಟ್‌ವರ್ಕ್‌ಗಳಲ್ಲಿ ಒಂದಾಗಿದೆ. ದೆಹಲಿ ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ (DMRC) ಈಗಾಗಲೇ ಬಿಡ್ ಪೂರ್ವ ಚಟುವಟಿಕೆಗಳನ್ನು ಮತ್ತು ಟೆಂಡರ್ ದಾಖಲೆಗಳ ತಯಾರಿಕೆಯನ್ನು ಪ್ರಾರಂಭಿಸಿದೆ.

ಮತ್ತೊಂದು ಕ್ರಮದಲ್ಲಿ, ಇಂಧನ ಸಂರಕ್ಷಣೆ ಕ್ಷೇತ್ರದಲ್ಲಿ ಭಾರತ ಮತ್ತು ಭೂತಾನ್ ನಡುವೆ ಎರಡು ತಿಳುವಳಿಕೆ ಒಪ್ಪಂದಗಳಿಗೆ (MOU) ಸಹಿ ಹಾಕಲು ಸಚಿವ ಸಂಪುಟ ಅನುಮೋದನೆ ನೀಡಿದೆ. ಇದು ಭಾರತದಿಂದ ಭೂತಾನ್‌ಗೆ ಪೆಟ್ರೋಲಿಯಂ, ತೈಲ, ಲೂಬ್ರಿಕಂಟ್‌ಗಳು (POL) ಮತ್ತು ಸಂಬಂಧಿತ ಉತ್ಪನ್ನಗಳ ಸಾಮಾನ್ಯ ಪೂರೈಕೆಗೆ ಇರುವ ಒಪ್ಪಂದವಾಗಿದೆ.

ಇಂಧನ ಸಂರಕ್ಷಣಾ ತಿಳಿವಳಿಕೆ ಒಪ್ಪಂದದ ಭಾಗವಾಗಿ, ಗೃಹ ವಲಯದಲ್ಲಿ ಇಂಧನ ದಕ್ಷತೆಯನ್ನು ಹೆಚ್ಚಿಸಲು ಭೂತಾನ್‌ಗೆ ಸಹಾಯ ಮಾಡುವ ಗುರಿಯನ್ನು ಭಾರತ ಹೊಂದಿದೆ. ಭೂತಾನ್‌ನೊಂದಿಗೆ ಸುಧಾರಿತ ಆರ್ಥಿಕ ಮತ್ತು ವಾಣಿಜ್ಯ ಸಂಪರ್ಕಗಳೊಂದಿಗೆ ಭಾರತ ಮತ್ತು ಅದರ ನಾಗರಿಕರಿಗೆ ವಿಶೇಷವಾಗಿ ಹೈಡ್ರೋಕಾರ್ಬನ್ ವಲಯದಲ್ಲಿ ಪ್ರಯೋಜನವನ್ನು ಪಡೆಯುವ ಉದ್ದೇಶವನ್ನು ಪಿಒಎಲ್‌ನಲ್ಲಿನ ತಿಳುವಳಿಕೆ ಒಪ್ಪಂದ  ಹೊಂದಿದೆ ಎಂದು ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.

ಆಹಾರ ಸುರಕ್ಷತೆಯ ಕ್ಷೇತ್ರಗಳಲ್ಲಿ ಸಹಕಾರಕ್ಕೆ ಸಂಬಂಧಿಸಿದಂತೆ ಭೂತಾನ್ ಆಹಾರ ಮತ್ತು ಔಷಧ ಪ್ರಾಧಿಕಾರ (BFDA) ಮತ್ತು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ನಡುವಿನ ಒಪ್ಪಂದಕ್ಕೆ ಸಹಿ ಹಾಕಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.

ಇದನ್ನೂ ಓದಿ: ಬಿಜೆಪಿ ಟಿಕೆಟ್ ಬೇಡವೆಂದು ಧಿಕ್ಕರಿಸಿ ಹೋಗಿದ್ದ ಭೋಜ್​ಪುರಿ ನಟ ಪವನ್​ ಸಿಂಗ್​ ನಿರ್ಧಾರ ಮತ್ತೆ ಬದಲು

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟವು ಫೆಬ್ರವರಿ 13 ರಂದು ಭಾರತ-ಮಧ್ಯಪ್ರಾಚ್ಯ ಯುರೋಪ್ ಆರ್ಥಿಕ ಕಾರಿಡಾರ್ (IMEC) ಸಬಲೀಕರಣ ಮತ್ತು ಕಾರ್ಯಾಚರಣೆಗಾಗಿ ಸಹಕಾರಕ್ಕಾಗಿ ಯುಎಇಗೆ ಪ್ರಧಾನ ಮಂತ್ರಿಯವರ ಉನ್ನತ ಮಟ್ಟದ ಭೇಟಿಯ ಸಂದರ್ಭದಲ್ಲಿ ಸಹಿ ಹಾಕಲಾದ ಅಂತರ-ಸರ್ಕಾರಿ ಚೌಕಟ್ಟಿನ ಒಪ್ಪಂದಕ್ಕೆ (IGFA) ತನ್ನ ಪೂರ್ವೋತ್ತರ ಅನುಮೋದನೆಯನ್ನು ನೀಡಿತು. ದ್ವಿಪಕ್ಷೀಯ ಸಂಬಂಧಗಳನ್ನು ಹೆಚ್ಚಿಸುವುದು ಮತ್ತು ಬಂದರುಗಳು, ಸಾಗರ ಮತ್ತು ಲಾಜಿಸ್ಟಿಕ್ಸ್ ವಲಯಗಳಲ್ಲಿ ಉಭಯ ದೇಶಗಳ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸುವುದು ಐಜಿಎಫ್‌ಎ ಉದ್ದೇಶವಾಗಿದೆ ಎಂದು ಸರ್ಕಾರ ಹೇಳಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:38 pm, Wed, 13 March 24

ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ