ವಾಂತಿ ಬಂತೆಂದು ಬಸ್ನಿಂದ ತಲೆ ಹೊರಹಾಕಿದ ಮಹಿಳೆಗೆ ಮತ್ತೊಂದು ವಾಹನ ಡಿಕ್ಕಿ, ತಲೆ ನಜ್ಜುಗುಜ್ಜಾಗಿ ಸ್ಥಳದಲ್ಲೇ ಸಾವು
ಬಸ್ಸಿನಲ್ಲಿ ಕೂತಿರುವಾಗ ಮಕ್ಕಳು ತಲೆ ಹೊರಗೆ ಹಾಕಿದರೆ ಅಥವಾ ಕೈಗಳನ್ನು ಹೊರಹಾಕಿದರೆ ತಕ್ಷಣವೇ ಡ್ರೈವರ್ ಅಥವಾ ಕಂಡಕ್ಟರ್ ಮೊದಲು ತಲೆ ಒಳಗೆಹಾಕಿ ಎಂದು ಬೈಯ್ಯುವುದುಂಟು. ಪೋಷಕರು ಎಷ್ಟು ಎಚ್ಚರಿಕೆಯಿಂದಿದ್ದರೂ ಸಾಕಾಗುವುದಿಲ್ಲ. ಚಲಿಸುತ್ತಿರುವ ಬಸ್ನ ಕಿಟಕಿಯಿಂದ ತಲೆ, ಕೈಗಳನ್ನು ಹೊರಹಾಕಿದರೆ ಪರಿಣಾಮ ಏನಾಗುವುದು ಎಂಬುದು ಈ ಘಟನೆಯಿಂದ ಕಲಿಯಬೇಕಾದ ಪಾಠ.

ಮಹಿಳೆಯೊಬ್ಬಳು ವಾಂತಿ ಬಂತೆಂದು ತಲೆ ಹೊರ ಹಾಕಿದಾಗ ಬಸ್ಸಿನ ಬಂದ ಮತ್ತೊಂದು ವಾಹನ ತಲೆಗೆ ಹೊಡೆದಿದ್ದು, ಎರಡು ವಾಹನಗಳ ನಡುವೆ ಮಹಿಳೆಯ ತಲೆ ನಗುಜ್ಜಾಗಿತ್ತು.
ಹರಿಯಾಣ ರೋಡ್‌ವೇಸ್ ಬಸ್‌ಗೆ ಸೇರಿದ ಘಟನೆ ಅಲಿಪುರ ಪ್ರದೇಶದಲ್ಲಿ ಸಂಭವಿಸಿದೆ. ಉತ್ತರ ಪ್ರದೇಶದ ಪ್ರತಾಪ್‌ಗಢದಿಂದ ಬಂದಿದ್ದ ಬಾಬ್ಲಿ, ಕಾಶ್ಮೀರ್ ಗೇಟ್‌ನಿಂದ ಲುಧಿಯಾನಕ್ಕೆ ಬಸ್ ಏರಿದ್ದರು.
ಇನ್ನೊಂದು ವಾಹನ ಬಸ್ಸನ್ನು ಹಿಂದಿಕ್ಕಲು ಯತ್ನಿಸಿದಾದ ಸಂದರ್ಭದಲ್ಲೇ ವಾಂತಿ ಬಂತೆಂದು ಮಹಿಳೆ ಕಿಟಕಿಯಿಂದ ತಲೆ ಹಾಕಿದ್ದರು. ಆ ಸಂದರ್ಭದಲ್ಲಿ ಆಕೆಯ ತಲೆ ಎರಡು ವಾಹನಗಳ ನಡುವೆ ಸಿಲುಕಿ ನಜ್ಜುಗುಜ್ಜಾಗಿದೆ.
ಮತ್ತಷ್ಟು ಓದಿ: ಟ್ರ್ಯಾಕ್ಟರ್ಗೆ ಟ್ರಕ್ ಡಿಕ್ಕಿ, ಚಕ್ರದಡಿ ಸಿಲುಕಿದ ಚಾಲಕನನ್ನು 500 ಮೀಟರ್ ಎಳೆದೊಯ್ದ ಟ್ರಕ್, ಸ್ಥಳದಲ್ಲೇ ಸಾವು
ಆಕೆಯೊಂದಿಗೆ ಆಕೆಯ ಸಹೋದರಿ, ಆಕೆಯ ಪತಿ ಮತ್ತು ಅವರ ಮೂವರು ಮಕ್ಕಳು ಇದ್ದರು. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಇನ್ನೊಂದು ವಾಹನಕ್ಕಾಗಿ ಶೋಧ ನಡೆಸಲಾಗುತ್ತಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ