ಹೈಡ್ರೋಜನ್ ತುಂಬಿದ ಬಲೂನುಗಳಿಗೆ ಸಾಕಿದ ನಾಯಿಮರಿ ಕಟ್ಟಿ ಗಾಳಿಯಲ್ಲಿ ಹಾರಿಸಿಬಿಟ್ಟ ಯೂಟ್ಯೂಬರ್ನ ಬಂಧನ
ಯೂಟ್ಯೂಬರ್ ಗೌರವ್, ಹೈಡ್ರೋಜನ್ ತುಂಬಿದ ಬಲೂನುಗಳನ್ನು ಸಾಕಿದ ನಾಯಿಮರಿಗಳ ಹಿಂಭಾಗಗಕ್ಕೆ ಕಟ್ಟಿ ಗಾಳಿಯಲ್ಲಿ ತೇಲಿ ಬಿಡುವ ದೃಶ್ಯವನ್ನು ವಿಡಿಯೋ ಮಾಡಿದ್ದ. ಸಾಮಾಜಿಕ ಜಾಲತಾಣದಲ್ಲೂ ಹರಿಬಿಟ್ಟಿದ್ದ. ಈ ವಿಡಿಯೋ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಆದರೆ ಇದೀಗ ವಿಡಿಯೋವನ್ನು ಸಾಮಾಜಿಕ ಜಾಲತಾಣದಿಂದ ತೆಗೆದುಹಾಕಲಾಗಿದೆ.
ದೆಹಲಿ: ದೆಹಲಿ ಮೂಲದ ಗೌರವ್ ಜಾನ್ ಎಂಬ ಹೆಸರಿನ ಯುಟ್ಯೂಬರ್, ಸಾಕಿದ ನಾಯಿ ಮರಿಗಳ ಹಿಂಭಾಗಕ್ಕೆ ಹೈಡ್ರೋಜನ್ ತುಂಬಿದ ಬಲೂನುಗಳನ್ನು ಕಟ್ಟಿ ಗಾಳಿಯಲ್ಲಿ ತೇಲುವಂತೆ ಮಾಡಿದ್ದಾನೆ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ‘ಫ್ಲಾಯಿಂಗ್ ಡಾಗ್’ ಎಂಬ ಶೀರ್ಷಿಕೆಯಲ್ಲಿ ವಿಡಿಯೋವೊಂದನ್ನು ಅಪ್ಲೋಡ್ ಮಾಡಲಾಗಿತ್ತು. ಆನ್ಲೈನಲ್ಲಿ ಬಾರೀ ಆಕ್ರೋಶಕ್ಕೆ ಒಳಗಾಗುತ್ತಿದ್ದಂತೆಯೇ ಯುಟ್ಯೂಬರ್ ಗೌರವ್ ಜಾನ್ನ್ನು ಬಂಧಿಸಲಾಗಿದೆ.
ಯೂಟ್ಯೂಬರ್ ಗೌರವ್, ಹೈಡ್ರೋಜನ್ ತುಂಬಿದ ಬಲೂನುಗಳನ್ನು ಸಾಕಿದ ನಾಯಿಮರಿಗಳ ಹಿಂಭಾಗಗಕ್ಕೆ ಕಟ್ಟಿ ಗಾಳಿಯಲ್ಲಿ ತೇಲಿ ಬಿಡುವ ದೃಶ್ಯವನ್ನು ವಿಡಿಯೋ ಮಾಡಿದ್ದ. ಸಾಮಾಜಿಕ ಜಾಲತಾಣದಲ್ಲೂ ಹರಿಬಿಟ್ಟಿದ್ದ. ಈ ವಿಡಿಯೋ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಆದರೆ ಇದೀಗ ವಿಡಿಯೋವನ್ನು ಸಾಮಾಜಿಕ ಜಾಲತಾಣದಿಂದ ತೆಗೆದುಹಾಕಲಾಗಿದೆ.
ವಿಡಿಯೋದಲ್ಲಿ ಗಮನಿಸಿದಂತೆ, ಯೂಟ್ಯೂಬರ್ ರಸ್ತೆಯಲ್ಲಿ ನಿಲ್ಲಿಸಲಾದ ವಾಹನದ ಮೇಲೆ ಕುಳಿತು ಆಕಾಶಬುಟ್ಟಿಗೆ ಕಟ್ಟಿದ ನಾಯಿ ಮರಿಯನ್ನು ಗಾಳಿಯಲ್ಲಿ ತೇಲಿಸಿ ಬಿಡುತ್ತಾನೆ. ನಾಯಿಯು ಕಟ್ಟಡ ಎರಡನೇ ಮಹಡಿಯ ಮೇಲೆ ಹಾರುತ್ತಿದ್ದಂತೆ ದೃಶ್ಯದಲ್ಲಿ ನೋಡಬಹುದು.
ಯೂಟ್ಯೂಬ್ನಲ್ಲಿ 4 ಮಿಲಿಯನ್ಗೂ ಹೆಚ್ಚು ಚಂದಾದಾರರನ್ನು ಹೊಂದಿರುವ ಗೌರವ್ ಮತ್ತು ಅವರ ತಾಯಿಯ ವಿರುದ್ಧ ಕಾನೂನಿನ ವಿವಿಧ ವಿಭಾಗಗಳ ಅಡಿಯಲ್ಲಿ ದಕ್ಷಿಣ ದೆಹಲಿಯ ಮಾಲ್ವಿಯಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮೂರು ದಿನಗಳ ಹಿಂದೆ ಗೌರವ್, ‘ಫ್ಲಾಯಿಂಗ್ ಡಾಗ್’ ಎಂದು ಶೀರ್ಷಿಕೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋವನ್ನು ಏಕೆ ಡಿಲಿಟ್ ಮಾಡಿದ್ದಾರೆ ಎಂಬುದನ್ನು ವಿವರಿಸುವ ಮೂಲಕ ಎಲ್ಲರಲ್ಲಿ ಕ್ಷಮೆಯಾಚಿಸಿದ್ದರು. ಆಕಾಶಬುಟ್ಟಿಯನ್ನು ಹಾರಿಸುವ ಮೊದಲು ಎಲ್ಲಾ ಸುರಕ್ಷತಾ ಕ್ರಮವನ್ನು ಕೈಗೊಂಡಿದ್ದೆ. ವಿಡಿಯೋ ಮಾಡುವಾಗಲೂ ಈ ಕುರಿತಂತೆ ಹೇಳಿದ್ದೆ. ಆದರೆ ವಿಡಿಯೋ ಅತ್ಯಂತ ಉದ್ದವಾಗಿದ್ದರಿಂದ ಅಪ್ಲೋಡ್ ಮಾಡಲು ಸಾಧ್ಯವಾಗಲಿಲ್ಲಎಂದು ಹೆಳಿದ್ದರು.
ತನ್ನ ಚಂದಾದಾರರಿಗೆ ಮತ್ತು ಪ್ರಾಣಿ ಪ್ರಿಯರಿಗೆ ಕ್ಷಮೆಯಾಚಿಸಿದ ಅವರು, ನಾನು ಸಾಕಿದ ಪ್ರಾಣಿಗಳನ್ನು ನಾನು ಮಗುವಂತೆ ನೋಡಿಕೊಳ್ಳುತ್ತೇನೆ. ವಿಡಿಯೋ ನೋಡಿದ ನಿಮಗೆ ಇದು ತಪ್ಪಾಗಿ ಅನಿಸಿದರೆ ನಿಮ್ಮಲ್ಲಿ ನಾನು ಕ್ಷಮೆಯಾಚಿಸುತ್ತಿದ್ದೇನೆ. ಈ ಘಟನೆಯು ಮತ್ತೆ ನಡೆಯದಂತೆ ಎಚ್ಚರವಹಿಸುತ್ತೇನೆ. ವಿಡಿಯೋ ನೋಡಿ ಪ್ರಭಾವಕ್ಕೊಳಗಾಗಬೇಡಿ. ನಿಮ್ಮ ಭಾವನೆಗೆ ಧಕ್ಕೆ ಉಂಟಾಗಿದ್ದರೆ ದಯವಿಟ್ಟು ಕ್ಷಮಿಸಿ ಎಂದು ವಿಡಿಯೋ ಮೂಲಕ ಕ್ಷಮೆಯಾಚಿಸಿದ್ದರು.
ಇದನ್ನೂ ಓದಿ:
WhatsApp: ದೆಹಲಿ ಕೋರ್ಟ್ನಲ್ಲಿ ಸರ್ಕಾರದ ಕಾನೂನಿನ ವಿರುದ್ಧ ವಾಟ್ಸಾಪ್ ದಾವೆ ಹೂಡಿತೆ?
ಟೂಲ್ಕಿಟ್ ತನಿಖೆ: ಕಾಂಗ್ರೆಸ್ನ ಇಬ್ಬರು ನಾಯಕರಿಗೆ ನೋಟೀಸನ್ನು ಜಾರಿಮಾಡಿದ ದೆಹಲಿ ಪೊಲೀಸ್