ಉಪಹಾರ್‌ ಥಿಯೇಟರ್ ಅಗ್ನಿ ದುರಂತ ಪ್ರಕರಣ: ಉದ್ಯಮಿಗಳಾದ ಅನ್ಸಾಲ್‌ ಸಹೋದರರಿಗೆ 7 ವರ್ಷ ಜೈಲು

ಉಪಹಾರ್‌ ಥಿಯೇಟರ್ ಅಗ್ನಿ ದುರಂತ ಪ್ರಕರಣ: ಉದ್ಯಮಿಗಳಾದ ಅನ್ಸಾಲ್‌ ಸಹೋದರರಿಗೆ 7 ವರ್ಷ ಜೈಲು
ಉಪಹಾರ್ ಥಿಯೇಟರ್ (ಸಂಗ್ರಹ ಚಿತ್ರ)

Uphaar theatre fire ಬೃಹತ್ ಆಸ್ತಿ ವ್ಯವಹಾರ ಹೊಂದಿರುವ ಅನ್ಸಾಲ್ ಸಹೋದರರಿಗೆ ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ತಲಾ ₹ 2.25 ಕೋಟಿ ದಂಡ ವಿಧಿಸಿದೆ. ಒಂದು ತಿಂಗಳ ಹಿಂದೆ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳನ್ನು ತಿರುಚಿದ ಆರೋಪದಲ್ಲಿ ಇಬ್ಬರಿಗೂ ಶಿಕ್ಷೆಯಾಗಿತ್ತು.

TV9kannada Web Team

| Edited By: Rashmi Kallakatta

Nov 08, 2021 | 5:31 PM

ದೆಹಲಿ: 1997ರಲ್ಲಿ ದೆಹಲಿಯ ಉಪಹಾರ್ ಥಿಯೇಟರ್‌ನಲ್ಲಿ(Uphaar theatre) 59 ಜನರ ಸಾವಿಗೆ ಕಾರಣವಾದ ಅಗ್ನಿ ದುರಂತ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ತಿರುಚಿದ್ದಕ್ಕಾಗಿ ಉದ್ಯಮಿಗಳಾದ ಸುಶೀಲ್ ಅನ್ಸಾಲ್ ( Sushil Ansal) ಮತ್ತು ಗೋಪಾಲ್ ಅನ್ಸಾಲ್ (Gopal Ansal) ಅವರಿಗೆ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಬೃಹತ್ ಆಸ್ತಿ ವ್ಯವಹಾರ ಹೊಂದಿರುವ ಅನ್ಸಾಲ್ ಸಹೋದರರಿಗೆ ದೆಹಲಿಯ ಪಟಿಯಾಲ ಹೌಸ್ ಕೋರ್ಟ್ (Patiala House Court) ತಲಾ ₹ 2.25 ಕೋಟಿ ದಂಡ ವಿಧಿಸಿದೆ. ಒಂದು ತಿಂಗಳ ಹಿಂದೆ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳನ್ನು ತಿರುಚಿದ ಆರೋಪದಲ್ಲಿ ಇಬ್ಬರಿಗೂ ಶಿಕ್ಷೆಯಾಗಿತ್ತು. ಸೋಮವಾರ ಶಿಕ್ಷೆಯ ತೀರ್ಪು ಹೊರಬಿದ್ದಿದೆ. ಈ ಹಿಂದೆ ಸುಪ್ರೀಂ ಕೋರ್ಟ್‌ನಿಂದ ಅನ್ಸಾಲ್‌ಗಳಿಗೆ ಎರಡು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿತ್ತು. ನಂತರ, ಅವರನ್ನು ಬಿಡುಗಡೆ ಮಾಡಲಾಯಿತು. ಇವರಿಗೆ ತಲಾ ₹ 30 ಕೋಟಿ ದಂಡ ವಿಧಿಸಲಾಯಿತು.ಇದನ್ನು ರಾಷ್ಟ್ರ ರಾಜಧಾನಿಯಲ್ಲಿ ಟ್ರಾಮಾ ಕೇರ್ ಸೆಂಟರ್ ನಿರ್ಮಿಸಲು ಬಳಸಲಾಗುವುದು.

ಉಪಹಾರ್ ಅಗ್ನಿ ದುರಂತದ ಇತರ ಇಬ್ಬರು ಆರೋಪಿಗಳಾದ ಹರ್ ಸ್ವರೂಪ್ ಪನ್ವಾರ್ ಮತ್ತು ಧರ್ಮವೀರ್ ಮಲ್ಹೋತ್ರಾ ಅವರು ವಿಚಾರಣೆಯ ವೇಳೆ ಸಾವಿಗೀಡಾಗಿದ್ದರು.

ಬಾಲಿವುಡ್ ಸಿನಿಮಾ ‘ಬಾರ್ಡರ್’ ಪ್ರದರ್ಶನದ ವೇಳೆ ಉಪಹಾರ್ ಚಿತ್ರಮಂದಿರದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಥಿಯೇಟರ್‌ನಲ್ಲಿ ಅಗ್ನಿ ಸುರಕ್ಷತಾ ವ್ಯವಸ್ಥೆ ಇಲ್ಲದ ಕಾರಣ  59 ಜನರು ಉಸಿರುಗಟ್ಟಿ ಸಾವನ್ನಪ್ಪಿದರು, 100 ಕ್ಕೂ ಹೆಚ್ಚು ಜನರು ಕಾಲ್ತುಳಿತದಲ್ಲಿ ಗಾಯಗೊಂಡರು.

ಈ ಪ್ರಕರಣವು ಆಸ್ತಿ ಮಾಲೀಕರ ವಿವರದಿಂದಾಗಿ ಭಾರಿ ಗಮನ ಸೆಳೆಯಿತು. ಆದರೆ ಬೆಂಕಿಯಲ್ಲಿ ಸಾವನ್ನಪ್ಪಿದ ಯುವಕರ ಪೋಷಕರು ಅನ್ಸಾಲ್ ಸಹೋದರರನ್ನು ನ್ಯಾಯಾಲಯದ ಕಟಕಟಗೆ ತಂದರು. ಅನ್ಸಾಲ್ ಸಹೋದರರ ವಿರುದ್ಧ ನಿರ್ಲಕ್ಷ್ಯದ ಆರೋಪದಿಂದ ನರಹತ್ಯೆಯವರೆಗೆ ಸುದೀರ್ಘ ಕಾನೂನು ಹೋರಾಟ ನಡೆಯಿತು. ಕಳೆದ ವರ್ಷ ಜೂನ್‌ನಲ್ಲಿ ಸಾಂಕ್ರಾಮಿಕ ರೋಗದ ಮಧ್ಯೆ, ಅನ್ಸಾಲ್ ಸಹೋದರರಿಂದ ವಸೂಲಿ ಮಾಡಿದ ₹ 60 ಕೋಟಿ ದಂಡದಿಂದ ನಿರ್ಮಿಸಲಾಗುವ ದೆಹಲಿಯ ದ್ವಾರಕಾದಲ್ಲಿ ಎರಡನೇ ಟ್ರಾಮಾ ಕೇರ್ ಸೆಂಟರ್‌ನ ನಿರ್ಮಾಣ ಸ್ಥಿತಿ ಬಗ್ಗೆ ಸುಪ್ರೀಂ ಕೋರ್ಟ್ ದೆಹಲಿ ಸರ್ಕಾರವನ್ನು ವಿಚಾರಿಸಿತ್ತು.

ಇದನ್ನೂ ಓದಿ:  Harekala Hajabba: ಪ್ರಧಾನಿ ಮೋದಿ ನನ್ನ ಕೈ ಮುಟ್ಟಿ ಮಾತಾಡಿಸಿದರು; ಖುಷಿ ಹಂಚಿಕೊಂಡ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ

Follow us on

Related Stories

Most Read Stories

Click on your DTH Provider to Add TV9 Kannada