AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಲಸಿಕೆ ಪಡೆದರೂ, ಪಡೆಯದಿದ್ದರೂ ತಗುಲುತ್ತದೆ ಡೆಲ್ಟಾ ಸೋಂಕು, ಆದರೆ..’-ಐಸಿಎಂಆರ್​ ಅಧ್ಯಯನ ಹೇಳಿದ್ದೇನು?

Delta Variant: ಕೊವಿಡ್ 19 ಎರಡನೇ ಅಲೆ ಸಂದರ್ಭದಲ್ಲಿ ಅತ್ಯಂತ ಹೆಚ್ಚು ಕೊರೊನಾ ಸೋಂಕಿನ ಪ್ರಕರಣಗಳು ಕಂಡು ಬಂದ ಪ್ರದೇಶಗಳಲ್ಲಿ ಚೆನ್ನೈ ಕೂಡ ಒಂದು. ಮೇ ತಿಂಗಳ ಪ್ರಾರಂಭದಲ್ಲಿ ಚೆನ್ನೈನಲ್ಲಿ ಪ್ರತಿದಿನ ಸರಾಸರಿ 6000 ಪ್ರಕರಣಗಳು ವರದಿಯಾಗುತ್ತಿದ್ದವು.

‘ಲಸಿಕೆ ಪಡೆದರೂ, ಪಡೆಯದಿದ್ದರೂ ತಗುಲುತ್ತದೆ ಡೆಲ್ಟಾ ಸೋಂಕು, ಆದರೆ..’-ಐಸಿಎಂಆರ್​ ಅಧ್ಯಯನ ಹೇಳಿದ್ದೇನು?
ಲಸಿಕೆ ಸಾಂಕೇತಿಕ ಚಿತ್ರ
TV9 Web
| Updated By: Lakshmi Hegde|

Updated on:Aug 19, 2021 | 6:16 PM

Share

ಕೊವಿಡ್​ 19 ಲಸಿಕೆ (Covid 19 Vaccine)​ ಪಡೆದವರ ದೇಹವನ್ನೂ ಪ್ರವೇಶಿಸುವಷ್ಟು ಸಾಮರ್ಥ್ಯವನ್ನು ಡೆಲ್ಟಾ ರೂಪಾಂತರಿ ವೈರಾಣು (Delta Variant) ಹೊಂದಿದೆ ಎಂಬುದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR), ಚೆನ್ನೈನಲ್ಲಿ ನಡೆಸಿದ ಅಧ್ಯಯನದಲ್ಲಿ ಸಾಬೀತಾಗಿದೆ. ಡೆಲ್ಟಾ ರೂಪಾಂತರಿ ವೈರಾಣು ವ್ಯಾಕ್ಸಿನ್​ ಪಡೆದವರು ಮತ್ತು ಪಡೆಯದೆ ಇರುವವರು, ಎರಡೂ ವರ್ಗದ ಜನರಿಗೆ ತಗುಲುತ್ತದೆ. ಆದರೆ ಒಂದು ಸಮಾಧಾನ ಏನೆಂದರೆ, ಕೊವಿಡ್​ 19 ಲಸಿಕೆ ಪಡೆದವರಿಗೆ ಡೆಲ್ಟಾ ಸೋಂಕು(Delta Variant) ತಗುಲಿದರೆ ಅವರು ಸಾಯುವ ಪ್ರಮಾಣ ಕಡಿಮೆ ಇರುತ್ತದೆ ಎಂದು ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.

ಈ ಅಧ್ಯಯನ ಚೆನ್ನೈ, ಐಸಿಎಂಆರ್-ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿಯ ಸಾಂಸ್ಥಿಕ ನೈತಿಕ ಸಮಿತಿಯಿಂದ ಅನುಮೋದನೆ ಪಡೆದಿದ್ದು, ಜರ್ನಲ್​ ಆಫ್​ ಇನ್​ಪೆಕ್ಷನ್​​ನಲ್ಲಿ ಆಗಸ್ಟ್​ 17ರಂದು ವರದಿ ಪ್ರಕಟಗೊಂಡಿದೆ. ಲಸಿಕೆ ಪಡೆದವು ಹಾಗೂ ಪಡೆಯದೆ ಇರುವವರು ಒಂದೇ ತೆರನಾಗಿ ಡೆಲ್ಟಾ ವೈರಾಣು ಅಥವಾ B.1.617.2 ಸೋಂಕಿಗೆ ಒಳಗಾಗುತ್ತಾರೆ. ಅದರಲ್ಲಿ ಯಾವುದೇ ಭಿನ್ನತೆಯೂ ಇಲ್ಲ ಎಂದು ಹೇಳಲಾಗಿದೆ. ಅಲ್ಲದೆ, ಸದ್ಯ ಪ್ರಪಂಚಾದ್ಯಂತ ಅತ್ಯಂತ ಹೆಚ್ಚು ಪ್ರಮಾಣದಲ್ಲಿ ಪ್ರಸರಣಗೊಳ್ಳುತ್ತಿರುವುದು ಈ ಡೆಲ್ಟಾ ರೂಪಾಂತರಿ ವೈರಾಣುವೇ ಆಗಿದ್ದು, ಭಾರತದ ಕೆಲವು ರಾಜ್ಯಗಳಲ್ಲೂ ಹೆಚ್ಚಾಗಿ ಕಂಡುಬರುತ್ತಿದೆ.

ಇನ್ನು ಅಧ್ಯಯನದ ವೇಳೆ, ಪೂರ್ತಿಯಾಗಿ ಲಸಿಕೆ ಪಡೆದ ಅಂದರೆ ಎರಡೂ ಡೋಸ್​ ಲಸಿಕೆಯನ್ನೂ ಪಡೆದವರಿಗೆ ಡೆಲ್ಟಾ ಸೋಂಕು ತಗುಲಿತ್ತಾದರೂ ಯಾರು ಸಾಯಲಿಲ್ಲ. ಅದೇ ಭಾಗಶಃ ಲಸಿಕೆ ಪಡೆದವರು, ಅಂದರೆ ಒಂದೇ ಡೋಸ್​ ಲಸಿಕೆ ಪಡೆದು ಡೆಲ್ಟಾಕ್ಕೆ ಒಳಗಾದ ಮೂರು ಮಂದಿ ಹಾಗೂ ಲಸಿಕೆಯನ್ನೇ ಪಡೆಯದೆ ಡೆಲ್ಟಾ ಸೋಂಕಿಗೆ ಒಳಗಾದ ಏಳು ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ. ಈ ಅಧ್ಯಯನ ವರದಿಯನ್ನು ತಮಿಳುನಾಡಿನ ಆರೋಗ್ಯ ಇಲಾಖೆಗೂ ನೀಡಲಾಗಿದೆ ಮತ್ತು ಲಸಿಕೆ ಅಭಿಯಾನದ ವೇಗವನ್ನು ಹೆಚ್ಚಿಸಲು ಸಂಶೋಧಕರು ಸಲಹೆ ನೀಡಿದ್ದಾರೆ ಎಂದೂ ಹೇಳಲಾಗಿದೆ.

ಕೊವಿಡ್ 19 ಎರಡನೇ ಅಲೆ ಸಂದರ್ಭದಲ್ಲಿ ಅತ್ಯಂತ ಹೆಚ್ಚು ಕೊರೊನಾ ಸೋಂಕಿನ ಪ್ರಕರಣಗಳು ಕಂಡು ಬಂದ ಪ್ರದೇಶಗಳಲ್ಲಿ ಚೆನ್ನೈ ಕೂಡ ಒಂದು. ಮೇ ತಿಂಗಳ ಪ್ರಾರಂಭದಲ್ಲಿ ಚೆನ್ನೈನಲ್ಲಿ ಪ್ರತಿದಿನ ಸರಾಸರಿ 6000 ಪ್ರಕರಣಗಳು ವರದಿಯಾಗುತ್ತಿದ್ದವು. ಅದು 2020ರ ಅಕ್ಟೋಬರ್​-ನವೆಂಬರ್​ (ಮೊದಲ ಅಲೆ)ಗೆ ಹೋಲಿಸಿದರೆ ಶೇ.45ರಷ್ಟು ಹೆಚ್ಚಾಗಿತ್ತು. ಕೊರೊನಾ ಪ್ರಮಾಣ ಜಾಸ್ತಿ ಇರುವ ಮೂರು ಪ್ರದೇಶಗಳಿಂದಲೇ ಅಧ್ಯಯನಕ್ಕಾಗಿ ರೋಗಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ರಾಷ್ಟ್ರೀಯ ಸಾಂಕ್ರಾಮಿಕ ರೋಗಶಾಸ್ತ್ರ ಸಂಸ್ಥೆಯ ವಿಜ್ಞಾನಿ ಜೆರೋಮಿ ತಂಗರಾಜ್ ತಂಡ ಈ ಅಧ್ಯಯನ ನಡೆಸಿತ್ತು.

ಇದನ್ನೂ ಓದಿ: Paytm: ಪೇಟಿಎಂ ಮೂಲಕ ವಿದ್ಯುತ್​ ಬಿಲ್ ಪಾವತಿಸಿ 10,000 ತನಕ ಕ್ಯಾಶ್‌ಬ್ಯಾಕ್ ಪಾಯಿಂಟ್‌ ಗೆಲ್ಲುವ ಅವಕಾಶ

16 Years of Jogi: ದಾಖಲೆ ಮೇಲೆ ದಾಖಲೆ ಬರೆದ ‘ಜೋಗಿ’ ಜಾತ್ರೆಗೆ 16 ವರ್ಷಗಳ ಸಂಭ್ರಮ

(Delta variant infects both vaccinated and unvaccinated says ICMR Study)

Published On - 6:15 pm, Thu, 19 August 21

ರಾಹುಲ್ ಗಾಂಧಿಯನ್ನು ವಶಕ್ಕೆ ಪಡೆದ ಪೊಲೀಸರು
ರಾಹುಲ್ ಗಾಂಧಿಯನ್ನು ವಶಕ್ಕೆ ಪಡೆದ ಪೊಲೀಸರು
ಬಿಜೆಪಿ ಸಂಸದರಿಗೆ ಖಾಲಿ ಡಬ್ಬಗಳಂತೆ ಸದ್ದು ಮಾಡೋದು ಮಾತ್ರ ಗೊತ್ತು: ಡಿಕೆಎಸ್
ಬಿಜೆಪಿ ಸಂಸದರಿಗೆ ಖಾಲಿ ಡಬ್ಬಗಳಂತೆ ಸದ್ದು ಮಾಡೋದು ಮಾತ್ರ ಗೊತ್ತು: ಡಿಕೆಎಸ್
ಧರ್ಮಸ್ಥಳ ಪ್ರಕರಣದ ಹಿಂದೆ ಮತಾಂತರ ಮಾಫಿಯಾ, ನಗರ ನಕ್ಸಲರು: ಸಿಟಿ ರವಿ ಆರೋಪ
ಧರ್ಮಸ್ಥಳ ಪ್ರಕರಣದ ಹಿಂದೆ ಮತಾಂತರ ಮಾಫಿಯಾ, ನಗರ ನಕ್ಸಲರು: ಸಿಟಿ ರವಿ ಆರೋಪ
ಕೊಪ್ಪಳದಲ್ಲಿ ಯೂರಿಯಾಗಾಗಿ ಒಂದು ಕಿಮೀ ವರೆಗೂ ಸರತಿ ಸಾಲಿನಲ್ಲಿ ನಿಂತ ರೈತರು‌
ಕೊಪ್ಪಳದಲ್ಲಿ ಯೂರಿಯಾಗಾಗಿ ಒಂದು ಕಿಮೀ ವರೆಗೂ ಸರತಿ ಸಾಲಿನಲ್ಲಿ ನಿಂತ ರೈತರು‌
VIDEO: ಬರೋಬ್ಬರಿ 109 ಮೀಟರ್ ಸಿಕ್ಸ್​ ಸಿಡಿಸಿದ ಟಿಮ್ ಡೇವಿಡ್
VIDEO: ಬರೋಬ್ಬರಿ 109 ಮೀಟರ್ ಸಿಕ್ಸ್​ ಸಿಡಿಸಿದ ಟಿಮ್ ಡೇವಿಡ್
Assembly Session Live: ವಿಧಾನಸಭೆ ಅಧಿವೇಶನ ನೇರಪ್ರಸಾರ
Assembly Session Live: ವಿಧಾನಸಭೆ ಅಧಿವೇಶನ ನೇರಪ್ರಸಾರ
ಭೀಮ ಹೆಸರಿಗೆ ತಕ್ಕಂತೆ ಗಜಪಡೆಯಲ್ಲಿ ಎಲ್ಲರಿಗಿಂತ ಹೆಚ್ಚು ತೂಕದ ಆನೆ
ಭೀಮ ಹೆಸರಿಗೆ ತಕ್ಕಂತೆ ಗಜಪಡೆಯಲ್ಲಿ ಎಲ್ಲರಿಗಿಂತ ಹೆಚ್ಚು ತೂಕದ ಆನೆ
‘ನನ್ನ ಅಮೂಲ್ಯ 8 ವರ್ಷ ವ್ಯರ್ಥವಾಗಿದೆ’; ಧ್ರುವ ಬಗ್ಗೆ ರಾಘವೇಂದ್ರ ಹೊಸ ಆರೋಪ
‘ನನ್ನ ಅಮೂಲ್ಯ 8 ವರ್ಷ ವ್ಯರ್ಥವಾಗಿದೆ’; ಧ್ರುವ ಬಗ್ಗೆ ರಾಘವೇಂದ್ರ ಹೊಸ ಆರೋಪ
ಕೊನೆಯ ಓವರ್​ನಲ್ಲಿ 7 ರನ್​ಗಳ​ ಗುರಿ ನಿಯಂತ್ರಿಸಿ ಪಂದ್ಯ ಗೆಲ್ಲಿಸಿದ ಆಶಿಶ್
ಕೊನೆಯ ಓವರ್​ನಲ್ಲಿ 7 ರನ್​ಗಳ​ ಗುರಿ ನಿಯಂತ್ರಿಸಿ ಪಂದ್ಯ ಗೆಲ್ಲಿಸಿದ ಆಶಿಶ್
ಸೆಲ್ಫೀಗೆ ಮುಂದಾದವನ ಅಟ್ಟಾಡಿಸಿ ಮೆಟ್ಟಿದ ಕಾಡಾನೆ, ಆಮೇಲೇನಾಯ್ತು ನೋಡಿ
ಸೆಲ್ಫೀಗೆ ಮುಂದಾದವನ ಅಟ್ಟಾಡಿಸಿ ಮೆಟ್ಟಿದ ಕಾಡಾನೆ, ಆಮೇಲೇನಾಯ್ತು ನೋಡಿ