ತಿರುಮಲಕ್ಕೆ ಭಕ್ತರ ದಂಡೇ (Devotees Rush) ಹರಿದು ಬರುತ್ತಿದೆ. ದರ್ಶನಕ್ಕೆ ಎರಡು ದಿನ ಬೇಕಾಗುವುದರಿಂದ ಟ್ರಾಫಿಕ್ ಅನ್ನು ಗಮನದಲ್ಲಿಟ್ಟುಕೊಂಡು ಭಕ್ತರು ತಮ್ಮ ಪ್ರವಾಸವನ್ನು ಯೋಜಿಸಲು ತಿರುಮಲ ತಿರುಪತಿ ದೇವಸ್ಥಾನ ಆಡಳಿತ ಮಂಡಳಿ (ಟಿಟಿಡಿ-TTD -Tirumala Tirupati Devasthanams) ಕೋರಿದೆ. ತಿರುಮಲ ಶ್ರೀವಾರಿ ದರ್ಶನಕ್ಕೆ ಭಕ್ತಕೋಟಿ ಸಾಲುಗಟ್ಟಿ ನಿಂತಿದೆ (Sarva Darshan Queue). ಸತತ ರಜೆ ಇರುವ ಕಾರಣ ಭಕ್ತರ ದಂಡು ತಿರುಮಲದತ್ತ ನುಗ್ಗಿಬರುತ್ತಿದೆ. ಅದರಲ್ಲಿಯೂ… ಉದ್ಯೋಗಿಗಳಿಗೆ ಸತತ ರಜೆ ಇರುವುದರಿಂದ ತಿರುಮಲ ತಿಮ್ಮಪ್ಪನ (Tirupati) ಭಕ್ತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಿದೆ. ಜನರು ತಮ್ಮ ಪ್ರಾರ್ಥನೆಯನ್ನು ಸಲ್ಲಿಸಲು ದೂರದ ಊರುಗಳಿಂದ ತಿರುಮಲಕ್ಕೆ ಬರುತ್ತಿದ್ದಾರೆ. ಅಪಾರ ಸಂಖ್ಯೆಯಲ್ಲಿ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯುತ್ತಿದ್ದಾರೆ. ಸಾರ್ವಜನಿಕ ದರ್ಶನದ ಕ್ಯೂ ಲೈನ್ ಗೋ ಗರ್ಭ ಅಣೆಕಟ್ಟು ದಾಟಿ ಸಾಗಿದೆ.
ಈ ವಾರಾಂತ್ಯದಲ್ಲಿ ಬರೋಬ್ಬರಿ ನಾಲ್ಕು ದಿನಗಳ ರಜೆ ಇರುವುದರಿಂದ ವೆಂಕಟರಮಣಸ್ವಾಮಿ ಭಕ್ತರು ವಿಶೇಷವಾಗಿ ತಿರುಮಲಕ್ಕೆ ಆಗಮಿಸುತ್ತಿದ್ದಾರೆ. ಸದ್ಯ ತಿಮ್ಮಪ್ಪನ ದರ್ಶನಕ್ಕೆ 48 ಗಂಟೆ ಕಾಲಾವಧಿ ಬೇಕಾಗಿದೆ. ಮನೆಯಲ್ಲಿ ಅಪ್ಪ ಅಮ್ಮನಿಗೆ ಸತತ ರಜಾ ದಿನಗಳು, ಹಾಗೂ ಮಕ್ಕಳಿಗೆ ಪರೀಕ್ಷೆಗಳು ಮುಗಿದು ರಜಾ ಕಾಲ ಬಂದಿರುವುದರಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ತಿರುಮಲಕ್ಕೆ ಆಗಮಿಸುತ್ತಿದ್ದಾರೆ. ಇದರೊಂದಿಗೆ ತಿರುಮಲ ಬೆಟ್ಟದಲ್ಲಿ ಭಕ್ತ ಸಾಗರ ಪ್ರವಾಹೋಪಾದಿಯಲ್ಲಿದೆ.
ಇದೇ ವೇಳೆ ಸರ್ವ ದರ್ಶನ ಸರತಿ ಸಾಲಿನಲ್ಲಿ ಟೋಕನ್ ರಹಿತ ಭಕ್ತರು ಸಂಯಮದಿಂದ ಇರುವಂತೆ ಟಿಟಿಡಿ ಅಧಿಕಾರಿಗಳು ಪದೇ ಪದೇ ಮನವಿ ಮಾಡುತ್ತಿದ್ದಾರೆ. ತಿರುಮಲದಲ್ಲಿ ಭಕ್ತರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ತಿರುಮಲ ಯಾತ್ರೆಯನ್ನು ಯೋಜಿಸುವಂತೆ ಟಿಟಿಡಿ ಅಧಿಕಾರಿಗಳು ಭಕ್ತರಿಗೆ ಮನವಿ ಮಾಡಿದ್ದಾರೆ.