ಶ್ರೀ ಸದಾಶಿವ ಕ್ಯಾಂಪಸ್‌ನಲ್ಲಿರುವ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಶೈಕ್ಷಣಿಕ ಆಡಳಿತ ಕಟ್ಟಡಗಳಿಗೆ ಧರ್ಮೇಂದ್ರ ಪ್ರಧಾನ್ ಶಂಕುಸ್ಥಾಪನೆ

ಲಕ್ಷ್ಮೀ ಪುರಾಣದ ಮಹತ್ವದ ಕುರಿತು ಮಾತನಾಡುತ್ತಾ, ವೇದಗಳ ಜ್ಞಾನ, ಮೌಲ್ಯಗಳು ಮತ್ತು ಸಂದೇಶವನ್ನು ಮೈಗೂಡಿಸಿಕೊಳ್ಳುವ ಮೂಲಕ ನಾವು ಸಾಮಾಜಿಕ ನ್ಯಾಯ, ಮಹಿಳಾ ಸಬಲೀಕರಣ ಮತ್ತು ಮಹಿಳಾ ನೇತೃತ್ವದ ಅಭಿವೃದ್ಧಿಯತ್ತ ಹೇಗೆ ಸಾಗಬಹುದು ಎಂಬುದನ್ನು ಪ್ರಧಾನ್ ಹೇಳಿದ್ದಾರೆ. ಸಂಸ್ಕೃತ ಸೇರಿದಂತೆ ಭಾರತೀಯ ಭಾಷೆಗಳು, ಸಾಹಿತ್ಯ ಮತ್ತು ಪರಂಪರೆಯೊಂದಿಗೆ ಹೊಸ ತಲೆಮಾರುಗಳನ್ನು ಸಂಪರ್ಕಿಸಲು ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯವು ಕೆಲಸ ಮಾಡಲಿ ಎಂದು ಅವರು ಆಶಿಸಿದ್ದಾರೆ.

ಶ್ರೀ ಸದಾಶಿವ ಕ್ಯಾಂಪಸ್‌ನಲ್ಲಿರುವ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಶೈಕ್ಷಣಿಕ ಆಡಳಿತ ಕಟ್ಟಡಗಳಿಗೆ ಧರ್ಮೇಂದ್ರ ಪ್ರಧಾನ್ ಶಂಕುಸ್ಥಾಪನೆ
ಧರ್ಮೇಂದ್ರ ಪ್ರಧಾನ್
Follow us
| Edited By: Rashmi Kallakatta

Updated on: Nov 18, 2023 | 9:04 PM

ಪುರಿ  ನವೆಂಬರ್ 18:   ಕೇಂದ್ರ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವರಾದ ಧರ್ಮೇಂದ್ರ ಪ್ರಧಾನ್ (Dharmendra Pradhan) ಅವರು ಒಡಿಶಾದ (Odisha) ಪುರಿಯಲ್ಲಿರುವ ಶ್ರೀ ಸದಾಶಿವ ಕ್ಯಾಂಪಸ್‌ನಲ್ಲಿರುವ (Shree Sadashiva Campus) ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಶೈಕ್ಷಣಿಕ ಆಡಳಿತ ಕಟ್ಟಡ ಮತ್ತು ಬಾಲಕಿಯರ ಮತ್ತು ಬಾಲಕರ ಹಾಸ್ಟೆಲ್ ಕಟ್ಟಡ, ಕ್ವಾರ್ಟರ್ಸ್ ಮತ್ತು ಕ್ರೀಡಾ ಸೌಲಭ್ಯಗಳಿಗೆ ಶಂಕುಸ್ಥಾಪನೆ ಮಾಡಿದ್ದಾರೆ . ಕ್ಯಾಂಪಸ್‌ನಲ್ಲಿ ನಡೆದ ಮೂರು ದಿನಗಳ ಅಂತರರಾಷ್ಟ್ರೀಯ ವಿಚಾರ ಸಂಕಿರಣ ‘ಬಲರಾಮ್ ದಾಸ್ ಅವರ ಲಕ್ಷ್ಮೀ ಪುರಾಣ: ಸಮಾನತೆ, ಸಬಲೀಕರಣ ಮತ್ತು ವಿಮೋಚನೆಯ ಕುರಿತು ಹೊಸ ಪ್ರವಚನ’ವನ್ನು ಉದ್ಘಾಟಿಸಿದ್ದಾರೆ. ಸಮಾರಂಭದಲ್ಲಿ ಲಕ್ಷ್ಮೀ ಪುರಾಣದ ಸಂಸ್ಕೃತ ಅನುವಾದವನ್ನು ಬಿಡುಗಡೆ ಮಾಡಲಾಯಿತು.

ಸಿಎಸ್‌ಯುನ ಕುಲಪತಿಯಾಗಿ ಪ್ರಧಾನ ಭಾಷಣ ಮಾಡಿದ ಪ್ರಧಾನ್ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ, ಪುರಿ, ಸಂಸ್ಕೃತ ಭಾಷೆಯನ್ನು ಉತ್ತೇಜಿಸುವಲ್ಲಿ ತನ್ನದೇ ಆದ ಗುರುತನ್ನು ಹೇಗೆ ಸೃಷ್ಟಿಸಿದೆ ಎಂಬುದನ್ನು ಪ್ರಸ್ತಾಪಿಸಿದರು. ಸಂಸ್ಕೃತದ ಜೊತೆಗೆ ಎಲ್ಲಾ ಭಾರತೀಯ ಭಾಷೆಗಳಿಗೆ ಆದ್ಯತೆ ಮತ್ತು ರಾಷ್ಟ್ರೀಯ ಭಾಷಾ ಸ್ಥಾನಮಾನವನ್ನು ನೀಡುವ ಮೂಲಕ ಹೊಸ ಅಭ್ಯಾಸವನ್ನು ಪ್ರಾರಂಭಿಸಿದ್ದಕ್ಕಾಗಿ ಪ್ರಧಾನಮಂತ್ರಿ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಇಂದು ಪ್ರಾರಂಭಿಸಲಾಗುತ್ತಿರುವ 100 ಕೋಟಿ ರೂಪಾಯಿಗಳ ಯೋಜನೆಗಳನ್ನು ಆಧುನಿಕ ಶಿಕ್ಷಣ ವ್ಯವಸ್ಥೆಯೊಂದಿಗೆ ಭಾರತೀಯ ಭಾಷೆಗಳು ಮತ್ತು ವೇದಗಳನ್ನು ಸಂಪರ್ಕಿಸಲು ಬಳಸಿಕೊಳ್ಳಲಾಗುವುದು ಎಂದಿದ್ದಾರೆ ಪ್ರಧಾನ್.

ಭಾರತವು ಸಂಸ್ಕೃತ ಮತ್ತು ತಮಿಳು ಮುಂತಾದ ಪ್ರಾಚೀನ ಭಾಷೆಗಳ ಜೊತೆಗೆ ಅನೇಕ ಶ್ರೀಮಂತ ಭಾಷೆಗಳ ದೇಶವಾಗಿದೆ. ಸಮಕಾಲೀನ ಕಾಲದಲ್ಲಿ, ಸನಾತನ ಭಾರತೀಯ ಜ್ಞಾನ ಪರಂಪರೆ ಮತ್ತು ವೈದಿಕ ಸಾಹಿತ್ಯದ ಪ್ರಸ್ತುತತೆ ಇನ್ನೂ ಹೆಚ್ಚಿನದಾಗಿದೆ ಎಂದಿದ್ದಾರೆ ಅವರು

ಲಕ್ಷ್ಮೀ ಪುರಾಣದ ಮಹತ್ವದ ಕುರಿತು ಮಾತನಾಡುತ್ತಾ, ವೇದಗಳ ಜ್ಞಾನ, ಮೌಲ್ಯಗಳು ಮತ್ತು ಸಂದೇಶವನ್ನು ಮೈಗೂಡಿಸಿಕೊಳ್ಳುವ ಮೂಲಕ ನಾವು ಸಾಮಾಜಿಕ ನ್ಯಾಯ, ಮಹಿಳಾ ಸಬಲೀಕರಣ ಮತ್ತು ಮಹಿಳಾ ನೇತೃತ್ವದ ಅಭಿವೃದ್ಧಿಯತ್ತ ಹೇಗೆ ಸಾಗಬಹುದು ಎಂಬುದನ್ನು ಪ್ರಧಾನ್ ಹೇಳಿದ್ದಾರೆ. ಸಂಸ್ಕೃತ ಸೇರಿದಂತೆ ಭಾರತೀಯ ಭಾಷೆಗಳು, ಸಾಹಿತ್ಯ ಮತ್ತು ಪರಂಪರೆಯೊಂದಿಗೆ ಹೊಸ ತಲೆಮಾರುಗಳನ್ನು ಸಂಪರ್ಕಿಸಲು ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯವು ಕೆಲಸ ಮಾಡಲಿ ಎಂದು ಅವರು ಆಶಿಸಿದ್ದಾರೆ.

ಇದನ್ನೂ ಓದಿ: ರಾಜಸ್ಥಾನದಲ್ಲಿ ಕಾಂಗ್ರೆಸ್ ನಾಯಕರು ಅರೆಮನಸ್ಸಿನಿಂದ ಜತೆಯಾಗಿದ್ದಾರೆ: ಮೋದಿ

15.28 ಎಕರೆಗಳಲ್ಲಿ ವ್ಯಾಪಿಸಿರುವ ಶ್ರೀ ಸದಾಶಿವ ಕ್ಯಾಂಪಸ್, ಪುರಿ, ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾನಿಲಯದ ಅತಿದೊಡ್ಡ ಮತ್ತು ಪ್ರಮುಖ ಕ್ಯಾಂಪಸ್‌ಗಳಲ್ಲಿ ಒಂದಾಗಿದೆ. ಇದು ಇದು ಶೈಕ್ಷಣಿಕ ಮತ್ತು ವಸತಿ ಸಂಕೀರ್ಣವನ್ನು ಹೊಂದಿದೆ. ಸಂಸ್ಕೃತದ ಅಭಿವೃದ್ಧಿಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 100 ಕೋಟಿ ರೂ. ಅನುದಾನವನ್ನೂ ನೀಡಿದ್ದಾರೆ.

ಮಹಾನ್ ಸಂತ ಕವಿ ಬಲರಾಮ್ ದಾಸ್ ಅವರು ರಚಿಸಿದ ಲಕ್ಷ್ಮಿ ಪುರಾಣವು ಭಕ್ತಿ ಸಾಹಿತ್ಯದ ಕಾವ್ಯವಾಗಿದೆ, ಇದು ಕ್ರಿಸ್ತಶಕ 15 ನೇ ಶತಮಾನದಲ್ಲಿ ಒಡಿಶಾದ ಪುರಿಯಲ್ಲಿ ಕಾಣಿಸಿಕೊಂಡಿತು. ಬಲರಾಮ್ ದಾಸ್ ಅವರನ್ನು ಒಡಿಶಾದ “ಬಾಲ್ಮೀಕಿ” ಎಂದು ಕರೆಯಲಾಗುತ್ತದೆ. ಮಹಿಳಾ ಸಬಲೀಕರಣ, ಮಹಿಳಾ ನೇತೃತ್ವದ ಅಭಿವೃದ್ಧಿ, ಜಾತಿ ತಾರತಮ್ಯವನ್ನು ತೊಡೆದುಹಾಕುವ ಹೊಸ ಸಾಮಾಜಿಕ ವ್ಯವಸ್ಥೆ. ಒಡಿಯ ಸಂಸ್ಕೃತಿ ಮತ್ತು ಸಾಹಿತ್ಯದ ಮೇಲೆ ಲಕ್ಷ್ಮೀ ಪುರಾಣದ ಪ್ರಭಾವ, ಲಕ್ಷ್ಮಿ ಪುರಾಣದಿಂದ ವ್ಯಾಖ್ಯಾನಿಸಲಾದ ಜಗನ್ನಾಥ ಸಂಸ್ಕೃತಿ, ಭಗವಂತ ಮತ್ತು ರಾಷ್ಟ್ರಕ್ಕೆ ಕರ್ತವ್ಯ ಮತ್ತು ಭಕ್ತಿ; ಸರ್ವೋಚ್ಚ ಸ್ವಭಾವದ ಶಕ್ತಿ: ದೇವರ ಶರಣಾಗತಿ ಸೇರಿದಂತೆ ಭಾರತೀಯ ಮಹಾಕಾವ್ಯಗಳನ್ನು ಮರುಪರಿಶೀಲಿಸುವ ಬಗ್ಗೆ ಸೆಮಿನಾರ್‌ನಲ್ಲಿ ಚರ್ಚಿಸಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಡಿಎ ಪ್ರಕರಣ; ನ್ಯಾಯಾಲಯದಲ್ಲಿ ಶಿವಕುಮಾರ್​ಗೆ ಜಯ ಸಿಗಲ್ಲ: ಬಿವೈ ವಿಜಯೇಂದ್ರ
ಡಿಎ ಪ್ರಕರಣ; ನ್ಯಾಯಾಲಯದಲ್ಲಿ ಶಿವಕುಮಾರ್​ಗೆ ಜಯ ಸಿಗಲ್ಲ: ಬಿವೈ ವಿಜಯೇಂದ್ರ
ಸಿಎಂಗೆ ಪ್ರಶ್ನೆ ಕೇಳುವ ಮುನ್ನ ಅಶೋಕ ಹೋಮ್​ವರ್ಕ್ ಮಾಡಿರಬೇಕು: ಲಕ್ಷ್ಮಣ್
ಸಿಎಂಗೆ ಪ್ರಶ್ನೆ ಕೇಳುವ ಮುನ್ನ ಅಶೋಕ ಹೋಮ್​ವರ್ಕ್ ಮಾಡಿರಬೇಕು: ಲಕ್ಷ್ಮಣ್
ಕೇಂದ್ರ ಸರ್ಕಾರದಿಂದ ಬರ ಪರಿಹಾರ ನಿಧಿ ಬಿಡುಗಡೆ ಆಗಿಲ್ಲ: ಸಿದ್ದರಾಮಯ್ಯ
ಕೇಂದ್ರ ಸರ್ಕಾರದಿಂದ ಬರ ಪರಿಹಾರ ನಿಧಿ ಬಿಡುಗಡೆ ಆಗಿಲ್ಲ: ಸಿದ್ದರಾಮಯ್ಯ
ರಾಕ್ಷಸರ ರೀತಿ ಮೈ ಮೇಲೆ ಬಿದ್ದ ಬಿಗ್​ ಬಾಸ್​ ಸ್ಪರ್ಧಿಗಳು: ಸಿರಿ ಕಣ್ಣೀರು
ರಾಕ್ಷಸರ ರೀತಿ ಮೈ ಮೇಲೆ ಬಿದ್ದ ಬಿಗ್​ ಬಾಸ್​ ಸ್ಪರ್ಧಿಗಳು: ಸಿರಿ ಕಣ್ಣೀರು
ವಕೀಲರು ಮಾಹಿತಿ ನೀಡದ ಹೊರತು ಯಾವುದೇ ಪ್ರತಿಕ್ರಿಯೆ ನೀಡೋದಿಲ್ಲ: ಶಿವಕುಮಾರ್​
ವಕೀಲರು ಮಾಹಿತಿ ನೀಡದ ಹೊರತು ಯಾವುದೇ ಪ್ರತಿಕ್ರಿಯೆ ನೀಡೋದಿಲ್ಲ: ಶಿವಕುಮಾರ್​
ಗಾಯಗೊಂಡ ಕಾಗೆಯ  ಆರೈಕೆ ಮಾಡುತ್ತಿರುವ ಕೊಪ್ಳಳದ ಶ್ರೀನಿವಾಸ ರೆಡ್ಡಿ ದಯಾಮಯಿ
ಗಾಯಗೊಂಡ ಕಾಗೆಯ  ಆರೈಕೆ ಮಾಡುತ್ತಿರುವ ಕೊಪ್ಳಳದ ಶ್ರೀನಿವಾಸ ರೆಡ್ಡಿ ದಯಾಮಯಿ
ಬಿಆರ್ ಪಾಟೀಲ್ ಜೊತೆ ಮಾತಾಡಿ ಬಂದು ಕಾಣುವಂತೆ ಹೇಳಿದ್ದೇನೆ: ಸಿದ್ದರಾಮಯ್ಯ
ಬಿಆರ್ ಪಾಟೀಲ್ ಜೊತೆ ಮಾತಾಡಿ ಬಂದು ಕಾಣುವಂತೆ ಹೇಳಿದ್ದೇನೆ: ಸಿದ್ದರಾಮಯ್ಯ
ಉತ್ತರಕಾಶಿ: ಸಾವು ಗೆದ್ದು ಬಂದ ಕಾರ್ಮಿಕರನ್ನು ಅಭಿನಂದಿಸಿದ ಪ್ರಧಾನಿ ಮೋದಿ
ಉತ್ತರಕಾಶಿ: ಸಾವು ಗೆದ್ದು ಬಂದ ಕಾರ್ಮಿಕರನ್ನು ಅಭಿನಂದಿಸಿದ ಪ್ರಧಾನಿ ಮೋದಿ
ಆರೋಪ ಮುಕ್ತನಾಗದ ಹೊರತು ಸದನಕ್ಕೆ ಕಾಲಿಡಲ್ಲ, ಸಾಬೀತಾದರೆ ರಾಜೀನಾಮೆ: ಪಾಟೀಲ್
ಆರೋಪ ಮುಕ್ತನಾಗದ ಹೊರತು ಸದನಕ್ಕೆ ಕಾಲಿಡಲ್ಲ, ಸಾಬೀತಾದರೆ ರಾಜೀನಾಮೆ: ಪಾಟೀಲ್
ಕಷ್ಟಪಟ್ಟು ಕನ್ನಡ ಓದಿದ ಮೈಕಲ್ ಅಜಯ್; ಇಲ್ಲಿದೆ ವಿಡಿಯೋ
ಕಷ್ಟಪಟ್ಟು ಕನ್ನಡ ಓದಿದ ಮೈಕಲ್ ಅಜಯ್; ಇಲ್ಲಿದೆ ವಿಡಿಯೋ