ಉತ್ತರಕಾಶಿ ಸುರಂಗ ಕುಸಿತ: ಕಾರ್ಮಿಕರ ರಕ್ಷಣೆಗೆ ಇನ್ನೂ 4-5 ದಿನಗಳು ಬೇಕೆಂದ ಅಧಿಕಾರಿಗಳು, ಸಂಬಂಧಿಕರ ಸಹನೆಯ ಕಟ್ಟೆ ಒಡೆದಿದೆ
ಉತ್ತರಕಾಶಿ ಸುರಂಗ ಕುಸಿತ ಉತ್ತರಾಖಂಡದ ಉತ್ತರಕಾಶಿಯಲ್ಲಿ ಏಳು ದಿನಗಳಿಂದ ಸಿಲುಕಿದ್ದ 41 ಕಾರ್ಮಿಕರನ್ನು ರಕ್ಷಿಸುವ ಯೋಜನೆಗೆ ಹಿನ್ನಡೆಯಾಗಿದೆ. ಸುರಂಗಕ್ಕೆ 900 ಎಂಎಂ ಉಕ್ಕಿನ ಪೈಪ್‌ಗಳನ್ನು ಹಾಕಲು ಡ್ರಿಲ್ಲಿಂಗ್ ಮೆಷಿನ್ ಚಾಲನೆಗೊಂಡಿದ್ದರಿಂದ ಶುಕ್ರವಾರ ಈ ಪ್ರದೇಶವು ಅಪಾಯದ ವಲಯವಾಗಿ ಮಾರ್ಪಟ್ಟಿತ್ತು. ಪ್ರಧಾನ ಮಂತ್ರಿ ಕಚೇರಿ (ಪಿಎಂಒ) ತಂಡ ಶನಿವಾರ ಸಿಲ್ಕ್ಯಾರಾ ತಲುಪಿ ರಕ್ಷಣಾ ಕಾರ್ಯಾಚರಣೆಯ ನೇತೃತ್ವ ವಹಿಸಿದೆ.
ಉತ್ತರಕಾಶಿ ಸುರಂಗ ಕುಸಿತ(Uttarkashi Tunnel Collapse) ಉತ್ತರಾಖಂಡದ ಉತ್ತರಕಾಶಿಯಲ್ಲಿ ಏಳು ದಿನಗಳಿಂದ ಸಿಲುಕಿದ್ದ 41 ಕಾರ್ಮಿಕರನ್ನು ರಕ್ಷಿಸುವ ಯೋಜನೆಗೆ ಹಿನ್ನಡೆಯಾಗಿದೆ. ಸುರಂಗಕ್ಕೆ 900 ಎಂಎಂ ಉಕ್ಕಿನ ಪೈಪ್‌ಗಳನ್ನು ಹಾಕಲು ಡ್ರಿಲ್ಲಿಂಗ್ ಮೆಷಿನ್ ಚಾಲನೆಗೊಂಡಿದ್ದರಿಂದ ಶುಕ್ರವಾರ ಈ ಪ್ರದೇಶವು ಅಪಾಯದ ವಲಯವಾಗಿ ಮಾರ್ಪಟ್ಟಿತ್ತು. ಪ್ರಧಾನ ಮಂತ್ರಿ ಕಚೇರಿ (ಪಿಎಂಒ) ತಂಡ ಶನಿವಾರ ಸಿಲ್ಕ್ಯಾರಾ ತಲುಪಿ ರಕ್ಷಣಾ ಕಾರ್ಯಾಚರಣೆಯ ನೇತೃತ್ವ ವಹಿಸಿದೆ.
ಇಂತಹ ಪರಿಸ್ಥಿತಿಯಲ್ಲಿ ಕಾರ್ಮಿಕರನ್ನು ಸ್ಥಳಾಂತರಿಸುವ ಕಾರ್ಯತಂತ್ರವನ್ನು ಬದಲಿಸಿ ಲಂಬ ಮತ್ತು ಅಡ್ಡ ಬೋರಿಂಗ್ ಮೂಲಕ ಸುರಂಗದ ಒಳಗೆ ತಲುಪಲು ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. ಇದಕ್ಕಾಗಿ ಐದು ಸ್ಥಳಗಳನ್ನು ಗುರುತಿಸಲಾಗಿದೆ. ಈ ಪೈಕಿ ಎರಡು ಕಡೆ ಕಾಮಗಾರಿಯೂ ಆರಂಭವಾಗಿದೆ.
ಡೆಹ್ರಾಡೂನ್‌ನಲ್ಲಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ಪರಿಶೀಲಿಸಿದರು. ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರೀಯ ಸಂಸ್ಥೆಗಳೊಂದಿಗೆ ಸಮನ್ವಯಕ್ಕಾಗಿ ಹಿರಿಯ ಐಎಎಸ್ ಡಾ.ನೀರಜ್ ಖೈರ್ವಾಲ್ ಅವರನ್ನು ನೋಡಲ್ ಅಧಿಕಾರಿಯಾಗಿ ಸರ್ಕಾರ ನೇಮಿಸಿದೆ. ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರನ್ನು ಹೊರ ತೆಗೆಯಲು ವಿಳಂಬವಾಗುತ್ತಿರುವುದರಿಂದ ಅವರ ಸಂಬಂಧಿಕರು ಹಾಗೂ ಇತರೆ ಕಾರ್ಮಿಕರ ಸಹನೆ ಕಟ್ಟೆಯೊಡೆದಿದೆ.
ಮತ್ತಷ್ಟು ಓದಿ: ಉತ್ತರಕಾಶಿ ಸುರಂಗ ಕುಸಿತ: 6 ದಿನಗಳ ನಂತರ 40 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿ
ಶುಕ್ರವಾರದ ವೇಳೆಗೆ, ಸುಮಾರು 30 ಮೀಟರ್ ಸುರಂಗವನ್ನು ಸಿದ್ಧಪಡಿಸಲಾಗಿತ್ತು, ಆದರೆ ಮಧ್ಯಾಹ್ನದ ವೇಳೆಗೆ ಗುಡ್ಡ ಬಿರುಕು ಬಿಟ್ಟಿರುವ ದೊಡ್ಡ ಶಬ್ದ ಬಂದಾಗ ಕಾರ್ಯಾಚರಣೆಗೆ ಭಾರಿ ಹಿನ್ನಡೆಯಾಯಿತು. ಇದು ರಕ್ಷಣಾ ಕಾರ್ಯದಲ್ಲಿ ತೊಡಗಿರುವ ತಂಡಗಳಲ್ಲಿ ಭೀತಿ ಮೂಡಿಸಿದ್ದು, ರಕ್ಷಣಾ ಕಾರ್ಯಾಚರಣೆಯನ್ನು ತಕ್ಷಣವೇ ನಿಲ್ಲಿಸಬೇಕಾಯಿತು. ಇದಾದ ನಂತರ ಸುರಂಗದ ಮುಖಭಾಗದಿಂದ 150 ಮೀಟರ್‌ನಿಂದ 203 ಮೀಟರ್‌ವರೆಗಿನ ಭಾಗವನ್ನು ಅಪಾಯದ ವಲಯ ಎಂದು ಪರಿಗಣಿಸಿ ಕಾಮಗಾರಿ ಸ್ಥಗಿತಗೊಳಿಸಲಾಗಿತ್ತು.
ಒಂದು ಸ್ಥಳವು ಸುರಂಗದ ಬಾಯಿಯಿಂದ ಸಿಲ್ಕ್ಯಾರಾ ಕಡೆಗೆ ಸುಮಾರು 500 ಮೀಟರ್ ದೂರದಲ್ಲಿದೆ. ಇಲ್ಲಿಂದ ಕಾರ್ಮಿಕರನ್ನು ತಲುಪಲು ಸುಮಾರು 103 ಮೀಟರ್ ವರ್ಟಿಕಲ್ ಬೋರಿಂಗ್ ಮಾಡಬೇಕು. ಇದಕ್ಕಾಗಿ ಮೊದಲು ಕಿಲೋಮೀಟರ್ ಉದ್ದದ ರಸ್ತೆ ನಿರ್ಮಿಸಲಾಗುತ್ತಿದ್ದು, ಅದರ ಮೂಲಕ ಕೊರೆಯುವ ಯಂತ್ರವನ್ನು ಬೋರಿಂಗ್ ಮಾಡಲು ಗುರುತಿಸಿದ ಸ್ಥಳಕ್ಕೆ ಕೊಂಡೊಯ್ಯಲಾಗುವುದು.
ಎರಡನೇ ಸ್ಥಾನವು ಸಿಲ್ಕ್ಯಾರಾದಿಂದ ಪೋಲ್ಗಾಂವ್ (ಬಾರ್ಕೋಟ್) ಕಡೆಗೆ ಸುಮಾರು 2500 ಮೀಟರ್ ಮುಂದಿದೆ. ಈ ಭಾಗದ ಸುರಂಗ ನಿರ್ಮಾಣ ಕಾಮಗಾರಿ ಇನ್ನೂ ಬಾಕಿ ಇದೆ. ಇಲ್ಲಿಂದ ಕಾರ್ಮಿಕರನ್ನು ತಲುಪಲು 500 ಮೀಟರ್ ಅಡ್ಡಲಾಗಿ ಬೋರಿಂಗ್ ಮಾಡಬೇಕು. ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರನ್ನು ಸುರಕ್ಷಿತವಾಗಿ ರಕ್ಷಿಸಲು ಕನಿಷ್ಠ ಐದು ದಿನಗಳು ಬೇಕಾಗುತ್ತದೆ ಎಂದು ಪ್ರಧಾನಿ ಮೋದಿ ಅವರ ಮಾಜಿ ಸಲಹೆಗಾರ ಭಾಸ್ಕರ್ ಖುಲ್ಬೆ ಹೇಳಿದ್ದಾರೆ.
ಸುರಂಗದ ಒಳಗಿನ ಭೂಕುಸಿತ ಪ್ರದೇಶದಲ್ಲಿ ಅಪಾಯದ ವಲಯ ರಚನೆಯಾದ ನಂತರ ಹ್ಯೂಮ್ ಪೈಪ್‌ಗಳನ್ನು ಹಾಕಲಾಗಿದೆ. ಆದ್ದರಿಂದ ತಂಡಗಳು ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರೊಂದಿಗೆ ಸಂವಹನವನ್ನು ನಿರ್ವಹಿಸಬಹುದು ಮತ್ತು ಅವರಿಗೆ ಆಹಾರ, ಆಮ್ಲಜನಕ ಮತ್ತು ಔಷಧಿಗಳನ್ನು ಪೂರೈಸಬಹುದಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ