AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಖ್ಯಾತ ಹಾಲಿವುಡ್ ನಟ ಮೈಕಲ್ ಮ್ಯಾಡ್ಸನ್ ಹೃದಯಾಘಾತದಿಂದ ಸಾವು

Michael Madsen: ‘ಕಿಲ್ ಬಿಲ್’, ‘ರಿಸವರ್ಯರ್ ಡಾಗ್ಸ್’, ‘ಡೈ ಅನದರ್ ಡೇ’, ‘ಸ್ಕೇರಿ ಮೂವಿ’ ಸೇರಿದಂತೆ ಹಲವಾರು ಸೂಪರ್ ಹಿಟ್ ಹಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದ ಖ್ಯಾತ ನಟ ಮೈಕಲ್ ಮ್ಯಾಡ್ಸನ್ ನಿಧನ ಹೊಂದಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿತ್ತು. ಮೈಕಲ್ ಮ್ಯಾಡ್ಸನ್ ಅವರು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ ಎನ್ನಲಾಗುತ್ತಿದೆ.

ಖ್ಯಾತ ಹಾಲಿವುಡ್ ನಟ ಮೈಕಲ್ ಮ್ಯಾಡ್ಸನ್ ಹೃದಯಾಘಾತದಿಂದ ಸಾವು
Michel Madson
ಮಂಜುನಾಥ ಸಿ.
|

Updated on: Jul 05, 2025 | 8:29 PM

Share

‘ಕಿಲ್ ಬಿಲ್’, ‘ರಿಸವರ್ಯರ್ ಡಾಗ್ಸ್’, ‘ಡೈ ಅನದರ್ ಡೇ’, ‘ಸ್ಕೇರಿ ಮೂವಿ’ ಸೇರಿದಂತೆ ಹಲವಾರು ಸೂಪರ್ ಹಿಟ್ ಹಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದ ಖ್ಯಾತ ನಟ ಮೈಕಲ್ ಮ್ಯಾಡ್ಸನ್ ನಿಧನ ಹೊಂದಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿತ್ತು. ಮೈಕಲ್ ಮ್ಯಾಡ್ಸನ್ ಅವರು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ ಎನ್ನಲಾಗುತ್ತಿದೆ. ಮೈಕಲ್ ಅವರು ಅಮೆರಿಕದ ಕ್ಯಾಲಿಫೋರ್ನಿಯಾದ ಮ್ಯಾಡ್ಸನ್ ನಗರದಲ್ಲಿ ನೆಲೆಸಿದ್ದರು. ಮನೆಯಲ್ಲಿಯೇ ಅವರು ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

1957ರಲ್ಲಿ ಶಿಕಾಗೊನಲ್ಲಿ ಜನಿಸಿದ ಮೈಕಲ್ ಅವರ ತಾಯಿ ಸಿನಿಮಾಕರ್ಮಿಯಾಗಿದ್ದರು. ಅವರ ತಂದೆ ಅಗ್ನಿಶಾಮಕ ದಳದಲ್ಲಿ ಕೆಲಸ ಮಾಡುತ್ತಿದ್ದರು. ಮೈಕಲ್ ಅವರ ಸಹೋದರ ವರ್ಜಿನಿಯಾ ಮ್ಯಾಡ್ಸನ್ ಸಹ ಹಾಲಿವುಡ್​ನ ಒಳ್ಳೆಯ ನಟರಲ್ಲಿ ಒಬ್ಬರಾಗಿದ್ದು, ಒಮ್ಮೆ ಆಸ್ಕರ್​ಗೆ ನಾಮಿನೇಟ್ ಸಹ ಆಗಿದ್ದರು. ಸಣ್ಣ ಪುಟ್ಟ ಪಾತ್ರಗಳಿಂದ ಆರಂಭಿಸಿ ಸಿನಿಮಾಗಳಲ್ಲಿ ನಾಯಕನಾಗಿ, ವಿಲನ್ ಆಗಿ ನಟಿಸಿದ್ದಾರೆ ಮೈಕಲ್. ಅವರು ಟಿವಿ ಶೋ ಮತ್ತು ವಿಡಿಯೋ ಗೇಮ್ಸ್​ಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ:ಇತಿಹಾಸ ಬರೆದ ದೀಪಿಕಾ ಪಡುಕೋಣೆ, ಹಾಲಿವುಡ್ ವಾಕ್ ಆಫ್ ಫೇಮ್ ಪಡೆದ ನಟಿ

ಪತ್ನಿ, ಸಹೋದರಿ ಮತ್ತು ನಾಲ್ಕು ಮಕ್ಕಳನ್ನು ಮೈಕಲ್ ಮ್ಯಾಡ್ಸನ್ ಹೊಂದಿದ್ದರು. ಅವರ ಮೊದಲ ಮಗ 2022 ರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ. ಆ ಘಟನೆಯ ಬಳಿಕ ಮೈಕಲ್ ಖಿನ್ನತೆಗೆ ಒಳಗಾಗಿದ್ದರು. ಅವರ ಈಗಿನ ಹೃದಯಾಘಾತಕ್ಕೂ ಅದುವೇ ಕಾರಣ ಎನ್ನಲಾಗುತ್ತಿದೆ. ಮೈಕಲ್ ನಿಧನ ಹೊಂದಿದ ಸುದ್ದಿಯನ್ನು ಅವರ ಸಹೋದರಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಮೈಕಲ್ ಮ್ಯಾಡ್ಸನ್ ಅವರು 40 ವರ್ಷಗಳಿಂದಲೂ ಸಿನಿಮಾಗಳಲ್ಲಿ ನಟಿಸುತ್ತಿದ್ದು, ಈ ವರೆಗೆ 60ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಕಿಲ್ ಬಿಲ್’, ‘ಕಿಲ್ ಬಿಲ್ 2’, ‘ರಿಸವರ್ಯರ್ಸ್ ಡಾಗ್’, ‘ಸಿನ್ ಸಿಟಿ’, ‘ಸ್ಕೇರಿ ಮೂವಿ 4’, ‘ಗ್ರೀನ್ ಲ್ಯಾಂಟರ್ನ್’, ‘ದಿ ಹೇಟ್​ಫುಲ್ ಏಟ್’, ‘ಒನ್ಸ್ ಅಪಾನ್ ಎ ಟೈಮ್ ಇನ್ ಹಾಲಿವುಡ್’, ‘ಎವರಿ ಲಾಸ್ಟ್ ಒನ್ ಆಫ್ ದೆಮ್’ ಇನ್ನೂ ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದರು. ಖ್ಯಾತ ನಿರ್ದೇಶಕ ಕ್ವಿಂಟಲ್ ಟ್ಯಾರೆಂಟಿನೊ ಅವರ ಮೆಚ್ಚಿನ ನಟರಲ್ಲಿ ಒಬ್ಬರಾಗಿದ್ದರು ಮೈಕಲ್ ಮ್ಯಾಡ್ಸನ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸಿರಿಯಾ ಮೇಲೆ ಇಸ್ರೇಲ್ ದಾಳಿ; ಲೈವ್ ಮಧ್ಯದಲ್ಲೇ ಓಡಿಹೋದ ಟಿವಿ ನಿರೂಪಕಿ
ಸಿರಿಯಾ ಮೇಲೆ ಇಸ್ರೇಲ್ ದಾಳಿ; ಲೈವ್ ಮಧ್ಯದಲ್ಲೇ ಓಡಿಹೋದ ಟಿವಿ ನಿರೂಪಕಿ
ಸಂಧಾನದ ಮಾತು ನಡೆಯುವ ಬಗ್ಗೆ ನಿನ್ನೆ ವಿಜಯೇಂದ್ರ ಸುಳಿವು ನೀಡಿದ್ದರು
ಸಂಧಾನದ ಮಾತು ನಡೆಯುವ ಬಗ್ಗೆ ನಿನ್ನೆ ವಿಜಯೇಂದ್ರ ಸುಳಿವು ನೀಡಿದ್ದರು
ಸಿಗಂದೂರು ತೂಗು ಸೇತುವೆ ಮೇಲೆ ಸಂಚರಿಸುವುದೇ ಏನೋ ಒಂಥರಾ ಸಂತೋಷ, ಉಲ್ಲಾಸ
ಸಿಗಂದೂರು ತೂಗು ಸೇತುವೆ ಮೇಲೆ ಸಂಚರಿಸುವುದೇ ಏನೋ ಒಂಥರಾ ಸಂತೋಷ, ಉಲ್ಲಾಸ
ಸಾರಿಗೆ ನೌಕರರಿಗೆ 38 ತಿಂಗಳುಗಳ ಹಿಂಬಾಕಿ ಸರ್ಕಾರ ಕೊಡಬೇಕಿದೆ: ಸುಬ್ಬಾರಾವ್
ಸಾರಿಗೆ ನೌಕರರಿಗೆ 38 ತಿಂಗಳುಗಳ ಹಿಂಬಾಕಿ ಸರ್ಕಾರ ಕೊಡಬೇಕಿದೆ: ಸುಬ್ಬಾರಾವ್
ನಿಗಮಗಳಿಗೆ ಸದಸ್ಯರ ನೇಮಕಾತಿ ಶೀಘ್ರದಲ್ಲಿ ನಡೆಯಲಿದೆ: ಪರಮೇಶ್ವರ್
ನಿಗಮಗಳಿಗೆ ಸದಸ್ಯರ ನೇಮಕಾತಿ ಶೀಘ್ರದಲ್ಲಿ ನಡೆಯಲಿದೆ: ಪರಮೇಶ್ವರ್
ಚಾಮುಂಡಿ ತಾಯಿ ಆಶೀರ್ವಾದ ಪಡೆದ ದೊಡ್ಮನೆ ಹುಡುಗ್ರು
ಚಾಮುಂಡಿ ತಾಯಿ ಆಶೀರ್ವಾದ ಪಡೆದ ದೊಡ್ಮನೆ ಹುಡುಗ್ರು
ನಾನು ನೀಡಿದ ಚೆಕ್​ಗಳು ಬೌನ್ಸ್ ಆಗುವ ಚಾನ್ಸೇ ಇಲ್ಲ ಎಂದ ಕೆಜಿಎಫ್ ಬಾಬು
ನಾನು ನೀಡಿದ ಚೆಕ್​ಗಳು ಬೌನ್ಸ್ ಆಗುವ ಚಾನ್ಸೇ ಇಲ್ಲ ಎಂದ ಕೆಜಿಎಫ್ ಬಾಬು
ಬಾಲಸೋರ್​​ನಲ್ಲಿ ಬೃಹತ್ ಪ್ರತಿಭಟನೆ; ಪೊಲೀಸರಿಂದ ಜಲಫಿರಂಗಿ ಪ್ರಯೋಗ
ಬಾಲಸೋರ್​​ನಲ್ಲಿ ಬೃಹತ್ ಪ್ರತಿಭಟನೆ; ಪೊಲೀಸರಿಂದ ಜಲಫಿರಂಗಿ ಪ್ರಯೋಗ
ಮುಂಬೈನಲ್ಲಿ ಟೆಸ್ಲಾ ಕಾರು ಚಲಾಯಿಸಿದ ಡಿಸಿಎಂ ಏಕನಾಥ್ ಶಿಂಧೆ
ಮುಂಬೈನಲ್ಲಿ ಟೆಸ್ಲಾ ಕಾರು ಚಲಾಯಿಸಿದ ಡಿಸಿಎಂ ಏಕನಾಥ್ ಶಿಂಧೆ
ಏರೋಸ್ಪೇಸ್ ಯೋಜನೆ ಬಗ್ಗೆ ಸಿಎಂ ಹೇಳಿಕೆ ಗೊಂದಲಮಯ: ವಿಜಯೇಂದ್ರ
ಏರೋಸ್ಪೇಸ್ ಯೋಜನೆ ಬಗ್ಗೆ ಸಿಎಂ ಹೇಳಿಕೆ ಗೊಂದಲಮಯ: ವಿಜಯೇಂದ್ರ