AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇತಿಹಾಸ ಬರೆದ ದೀಪಿಕಾ ಪಡುಕೋಣೆ, ಹಾಲಿವುಡ್ ವಾಕ್ ಆಫ್ ಫೇಮ್ ಪಡೆದ ನಟಿ

Deepika Padukone: ನಟಿ ದೀಪಿಕಾ ಪಡುಕೋಣೆ ಅಪರೂಪದ ಗೌರವಕ್ಕೆ ಪಾತ್ರವಾಗಿದ್ದಾರೆ. ದೀಪಿಕಾ ಪಡುಕೋಣೆ, ವಾಕ್ ಆಫ್ ಫೇಮ್​​ನಲ್ಲಿ ಸ್ಥಾನ ಪಡೆದ ಮೊದಲ ಭಾರತೀಯರು ಎನಿಸಿಕೊಂಡಿದ್ದಾರೆ. ಅಮೆರಿಕದ ಲಾಸ್ ಏಂಜಲೀಸ್‌ನ ಹಾಲಿವುಡ್ ಬೌಲೆವಾರ್ಡ್‌ನಲ್ಲಿ ಹಾಲಿವುಡ್‌ನ ವಾಕ್ ಆಫ್ ಫೇಮ್ ಇದೆ. ಇಲ್ಲಿ ನೆಲದ ಮೇಲೆ ಸ್ಟಾರ್ ರೀತಿ ಆಕೃತಿಯನ್ನು ನಿರ್ಮಿಸಿ ಅದರಲ್ಲಿ ನಟ-ನಟಿಯರ ಹೆಸರುಗಳನ್ನು ಬರೆದಿರಲಾಗುತ್ತದೆ.

ಇತಿಹಾಸ ಬರೆದ ದೀಪಿಕಾ ಪಡುಕೋಣೆ, ಹಾಲಿವುಡ್ ವಾಕ್ ಆಫ್ ಫೇಮ್ ಪಡೆದ ನಟಿ
Deepika Padukone
ಮಂಜುನಾಥ ಸಿ.
|

Updated on: Jul 04, 2025 | 8:42 AM

Share

ನಟಿ ದೀಪಿಕಾ ಪಡುಕೋಣೆ (Deepika Padukone) ಭಾರತದ ಮಟ್ಟಿಗೆ ಹೊಸ ದಾಖಲೆ ಬರೆದಿದ್ದಾರೆ. ಹಾಲಿವುಡ್​ನ ವಾಕ್ ಆಫ್ ಫೇಮ್​​ನಲ್ಲಿ ಸ್ಥಾನ ಪಡೆದ ಮೊದಲ ಭಾರತದ ನಟಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಅಮೆರಿಕದ ಲಾಸ್ ಏಂಜಲೀಸ್‌ನ ಹಾಲಿವುಡ್ ಬೌಲೆವಾರ್ಡ್‌ನಲ್ಲಿ ಹಾಲಿವುಡ್‌ನ ವಾಕ್ ಆಫ್ ಫೇಮ್ ಇದೆ. ಇಲ್ಲಿ ನೆಲದ ಮೇಲೆ ಸ್ಟಾರ್ ರೀತಿ ಆಕೃತಿಯನ್ನು ನಿರ್ಮಿಸಿ ಅದರಲ್ಲಿ ನಟ-ನಟಿಯರ ಹೆಸರುಗಳನ್ನು ಬರೆದಿರಲಾಗುತ್ತದೆ. ಇದನ್ನೇ ವಾಕ್ ಆಫ್ ಫೇಮ್ ಎಂದು ಕರೆಯುತ್ತಾರೆ. ಈ ರಸ್ತೆಯಲ್ಲಿ ಈಗ ದೀಪಿಕಾ ಪಡುಕೋಣೆ ಹೆಸರು ಸಹ ನಕ್ಷತ್ರದಾಕೃತಿಯ ಒಳಗೆ ಸೇರಿಕೊಳ್ಳಲಿದೆ.

ಮೋಷನ್ ಪಿಕ್ಚರ್ ವಿಭಾಗದಲ್ಲಿ ದೀಪಿಕಾ ಪಡುಕೋಣೆ ಹೆಸರನ್ನು ವಾಕ್ ಆಫ್ ಫೇಮ್​ಗೆ ಆಯ್ಕೆ ಮಾಡಿದ್ದು, 2026ನೇ ಸಾಲಿನಲ್ಲಿ ಅವರ ಹೆಸರನ್ನು ನಮೂದಿಸಲಾಗುತ್ತದೆ. ಈ ಗೌರವ ಪಡೆದ ಮೊದಲ ಭಾರತೀಯ ಎನಿಸಿಕೊಂಡಿದ್ದಾರೆ ದೀಪಿಕಾ ಪಡುಕೋಣೆ. ಈ ಬಾರಿ ದೀಪಿಕಾ ಜೊತೆಗೆ ಖ್ಯಾತ ನಟಿ ಎಮಿಲಿ ಬ್ಲಂಟ್ ಸೇರಿದಂತೆ ಇನ್ನೂ ಕೆಲವು ಕಲಾವಿದರು ವಾಕ್ ಆಫ್ ಫೇಮ್ ಗೌರವ ಪಡೆದುಕೊಂಡಿದ್ದಾರೆ. ಪ್ರತಿ ವರ್ಷ ಹಾಲಿವುಡ್ ಚೇಂಬರ್ ಆಫ್ ಕಾಮರ್ಸ್​ಗೆ ನೂರಾರು ನಾಮಿನೇಷನ್​​ಗಳು ಹಾಲ್ ಆಫ್ ಫೇಮ್​ಗೆ ಬರುತ್ತವೆ. ಅವುಗಳಲ್ಲಿ ಕೇವಲ 20 ರಿಂದ 24 ಅಷ್ಟೆ ಆಯ್ಕೆ ಆಗುತ್ತದೆ. ಈ ಬಾರಿ ಆಯ್ಕೆ ಆದವರಲ್ಲಿ ದೀಪಿಕಾ ಪಡುಕೋಣೆ ಹೆಸರು ಸಹ ಇದೆ.

ಇದನ್ನೂ ಓದಿ:ತಂದೆ ಬರ್ತ್​ಡೇಗೆ ಹೊಸ ಬ್ಯಾಡ್ಮಿಂಟನ್ ಸ್ಕೂಲ್ ಆರಂಭಿಸಿದ ನಟಿ ದೀಪಿಕಾ ಪಡುಕೋಣೆ

ದೀಪಿಕಾ ಪಡುಕೋಣೆ ಹೆಸರನ್ನು ನಕ್ಷತ್ರದಲ್ಲಿ ಮಾಡಿ ಅದನ್ನು ರಸ್ತೆಗೆ ಅಳವಡಿಸಲಾಗುತ್ತದೆ. ಇದಕ್ಕಾಗಿ ಹಾಲಿವುಡ್ ಚೇಂಬರ್ ಆಫ್ ಕಾಮರ್ಸ್​ಗೆ ದೊಡ್ಡ ಮೊತ್ತದ ಹಣವನ್ನು ಸಹ ನೀಡಬೇಕಿದೆ. ಇನ್​ಸ್ಟಾಲೇಷನ್ ಮತ್ತು ಮೇಂಟೇನೆನ್ಸ್​ಗೆ 85 ಸಾವಿರ ಡಾಲರ್ ಅಂದರೆ ಸುಮಾರು 75 ಲಕ್ಷ ರೂಪಾಯಿಗಳನ್ನು ಯಾರು ನಾಮಿನೇಟ್ ಮಾಡಿರುತ್ತಾರೋ ಅವರು ನೀಡಬೇಕಿರುತ್ತದೆ. ಈಗ ದೀಪಿಕಾ ಪಡುಕೋಣೆ ಹೆಸರನ್ನು ಯಾರು ನಾಮಿನೇಟ್ ಮಾಡಿದ್ದರೊ ಅವರು ಈ ಹಣವನ್ನು ತೆರಬೇಕಿದೆ.

ತಾಯಿ ಆಗಿರುವ ದೀಪಿಕಾ ಪಡುಕೋಣೆ ಚಿತ್ರರಂಗದಿಂದ ಬ್ರೇಕ್ ಪಡೆದುಕೊಂಡಿದ್ದರು. ಇದೀಗ ಅಟ್ಲಿ ನಿರ್ದೇಶನದ ಫ್ಯಾಂಟಸಿ ಸಿನಿಮಾ ಮೂಲಕ ಮತ್ತೆ ಚಿತ್ರೀಕರಣಕ್ಕೆ ಬಂದಿದ್ದಾರೆ. ಅಟ್ಲಿ ನಿರ್ದೇಶನದ ಸಿನಿಮಾನಲ್ಲಿ ಅಲ್ಲು ಅರ್ಜುನ್ ಜೊತೆಗೆ ದೀಪಿಕಾ ಪಡುಕೋಣೆ ನಟಿಸಲಿದ್ದಾರೆ. ಅದರ ಜೊತೆಗೆ ಶಾರುಖ್ ಖಾನ್ ನಟನೆಯ ‘ಕಿಂಗ್’ ಸಿನಿಮಾನಲ್ಲಿ ದೀಪಿಕಾ ಪಡುಕೋಣೆ ನಾಯಕಿಯಾಗಿ ನಟಿಸಲಿದ್ದಾರೆ. ಅದಾದ ಬಳಿಕ ‘ಕಲ್ಕಿ 2898 ಎಡಿ’ ಸಿನಿಮಾದ ಎರಡನೇ ಭಾಗದಲ್ಲಿ ದೀಪಿಕಾ ಪಡುಕೋಣೆ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ