Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರಕಾಶಿ ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರಿಗೆ ಆಹಾರ, ಖಿನ್ನತೆ ನಿವಾರಕ ಮಾತ್ರೆ ಪೂರೈಕೆ

ಉತ್ತರಕಾಶಿಯ ಮುಖ್ಯ ವೈದ್ಯಕೀಯ ಅಧಿಕಾರಿ (ಸಿಎಂಒ) ಡಾ ಆರ್‌ಸಿಎಸ್ ಪನ್ವಾರ್, “ನಾವು ಸುರಂಗದೊಳಗೆ ಸಿಕ್ಕಿಬಿದ್ದ ಕಾರ್ಮಿಕರಿಗೆ ಸಮಾಲೋಚನೆಗಾಗಿ ಮನೋವೈದ್ಯರು ಮತ್ತು ಹಿರಿಯ ವೈದ್ಯರನ್ನು ಕಳುಹಿಸುತ್ತಿದ್ದೇವೆ. ಅವರಲ್ಲಿ ಕೆಲವರು ಕೆಲವು ದಿನಗಳ ಹಿಂದೆ ವಾಂತಿ ಮತ್ತು ಹೊಟ್ಟೆ ತೊಳೆಸುವಿಕೆ ಬಗ್ಗೆ ದೂರು ನೀಡಿದ್ದರು. ಪೈಪ್ ಮೂಲಕ ಔಷಧಗಳನ್ನು ಪೂರೈಸಿದ್ದೇವೆ. ನಾವು ಅವರಿಗೆ ವಿಟಮಿನ್ ಸಿ ಮತ್ತು ಡಿ ಯಂತಹ ಅಗತ್ಯ ಪೂರಕಗಳನ್ನು ನೀಡುತ್ತಿದ್ದೇವೆ ಎಂದಿದ್ದಾರೆ.

ಉತ್ತರಕಾಶಿ ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರಿಗೆ ಆಹಾರ, ಖಿನ್ನತೆ ನಿವಾರಕ ಮಾತ್ರೆ ಪೂರೈಕೆ
ಉತ್ತರಕಾಶಿ ಸುರಂಗ
Follow us
ರಶ್ಮಿ ಕಲ್ಲಕಟ್ಟ
|

Updated on: Nov 18, 2023 | 8:41 PM

ಉತ್ತರಕಾಶಿ ನವೆಂಬರ್ 18: ಯಮುನೋತ್ರಿ ಹೆದ್ದಾರಿಯಲ್ಲಿ ನಿರ್ಮಾಣ ಹಂತದಲ್ಲಿರುವ ಸಿಲ್ಕ್ಯಾರಾ-ಬಾರ್ಕೋಟ್ ಸುರಂಗದಲ್ಲಿ (Silkyara-Barkot tunnel) ಭಾನುವಾರ ಬೆಳಗ್ಗೆಯಿಂದ ಸಿಲುಕಿರುವ 40 ಕಟ್ಟಡ ಕಾರ್ಮಿಕರಿಗೆ ಖಿನ್ನತೆ ನಿವಾರಕ ಮಾತ್ರೆಗಳನ್ನು(Anti-depression tablets) ನೀಡಲಾಗುತ್ತಿದೆ ಎಂದು ಉತ್ತರಾಖಂಡ (Uttarakhand )ಸರ್ಕಾರ ಶನಿವಾರ ತಿಳಿಸಿದೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ರಾಜ್ಯ ಸರ್ಕಾರ, ”ಆರೋಗ್ಯ ಇಲಾಖೆಯು ಸುರಂಗದ ಹೊರಗೆ ಕಟ್ಟಡದಲ್ಲಿ ಶಿಬಿರವನ್ನು ಸ್ಥಾಪಿಸಿದ್ದು, ಅಲ್ಲಿ ಆರು ಹಾಸಿಗೆಗಳನ್ನು ಅಗತ್ಯ ಔಷಧಿಗಳೊಂದಿಗೆ ವ್ಯವಸ್ಥೆ ಮಾಡಲಾಗಿದೆ. ಸುರಂಗದ ಹೊರಗೆ ಒಟ್ಟು 10 ಆಂಬ್ಯುಲೆನ್ಸ್‌ಗಳನ್ನು ನಿಯೋಜಿಸಲಾಗಿದೆ. ವೈದ್ಯರು ಮತ್ತು ಇತರ ಆರೋಗ್ಯ ಕಾರ್ಯಕರ್ತರು ಕೂಡ ಅಲ್ಲಿಯೇ ಠಿಕಾಣಿ ಹೂಡಿದ್ದಾರೆ. ಸಿಕ್ಕಿಬಿದ್ದ ಕಾರ್ಮಿಕರಿಗೆ ವಿಟಮಿನ್ ಸಿ, ಮತ್ತು ಡಿ, ಬಿಕೋಸಿಲ್ ಝಡ್, ಖಿನ್ನತೆ-ನಿರೋಧಕ ಮಾತ್ರೆಗಳನ್ನು ನೀಡಲಾಯಿತು.

ಉತ್ತರಕಾಶಿಯ ಮುಖ್ಯ ವೈದ್ಯಕೀಯ ಅಧಿಕಾರಿ (ಸಿಎಂಒ) ಡಾ ಆರ್‌ಸಿಎಸ್ ಪನ್ವಾರ್, “ನಾವು ಸುರಂಗದೊಳಗೆ ಸಿಕ್ಕಿಬಿದ್ದ ಕಾರ್ಮಿಕರಿಗೆ ಸಮಾಲೋಚನೆಗಾಗಿ ಮನೋವೈದ್ಯರು ಮತ್ತು ಹಿರಿಯ ವೈದ್ಯರನ್ನು ಕಳುಹಿಸುತ್ತಿದ್ದೇವೆ. ಅವರಲ್ಲಿ ಕೆಲವರು ಕೆಲವು ದಿನಗಳ ಹಿಂದೆ ವಾಂತಿ ಮತ್ತು ಹೊಟ್ಟೆ ತೊಳೆಸುವಿಕೆ ಬಗ್ಗೆ ದೂರು ನೀಡಿದ್ದರು. ಪೈಪ್ ಮೂಲಕ ಔಷಧಗಳನ್ನು ಪೂರೈಸಿದ್ದೇವೆ. ನಾವು ಅವರಿಗೆ ವಿಟಮಿನ್ ಸಿ ಮತ್ತು ಡಿ ಯಂತಹ ಅಗತ್ಯ ಪೂರಕಗಳನ್ನು ನೀಡುತ್ತಿದ್ದೇವೆ. 150 ಗಂಟೆಗಳಿಗೂ ಹೆಚ್ಚು ಕಾಲ ಸುರಂಗದಲ್ಲಿ ಬಂಧಿಸಲ್ಪಟ್ಟಿದ್ದರೂ ಸಿಕ್ಕಿಬಿದ್ದ ಕಾರ್ಮಿಕರು ಯಾವುದೇ ಗಂಭೀರ ಅನಾರೋಗ್ಯದ ಬಗ್ಗೆ ದೂರು ನೀಡಿಲ್ಲ ಎಂದು ಸಿಎಂಒ ಹೇಳಿದರು.

ಅವರ ಪೌಷ್ಠಿಕಾಂಶದ ಬಗ್ಗೆಯೂ ನಾವು ಕಾಳಜಿ ವಹಿಸಿದ್ದೇವೆ. ಅವರಿಗೆ ಕಡಲೆ, ಹುರಿಯಕ್ಕಿ ಆಹಾರವನ್ನು ಪೂರೈಸುತ್ತಿದ್ದೇವೆ ಎಂದು ಅವರು ಹೇಳಿದರು. ಸ್ಥಗಿತಗೊಂಡ ರಕ್ಷಣಾ ಕಾರ್ಯಾಚರಣೆಯಿಂದಾಗಿ ಶುಕ್ರವಾರ ಸಿಕ್ಕಿಬಿದ್ದ ಕಾರ್ಮಿಕರೊಂದಿಗೆ ಮಾತನಾಡಲು ಅವರ ವೈದ್ಯರಿಗೆ ಸಾಧ್ಯವಾಗಲಿಲ್ಲ ಎಂದು ಆರೋಗ್ಯ ಅಧಿಕಾರಿ ತಿಳಿಸಿದ್ದಾರೆ.

ಹೆಸರು ಹೇಳಲು ಇಚ್ಛಿಸದ ಸುರಂಗ ನಿರ್ಮಾಣ ಕಂಪನಿಯ ಸಹೋದ್ಯೋಗಿಯೊಬ್ಬರು “ರಕ್ಷಣಾ ಕಾರ್ಯಕರ್ತರು ಮತ್ತು ಒಳಗೊಂಡಿರುವ ಅಧಿಕಾರಿಗಳು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದಾಗಿ ಹೇಳುತ್ತಿದ್ದರೂ ಆರು ದಿನ ಅದರೊಳಗೆ ಬದುಕುವುದು ಎಷ್ಟು ಕಷ್ಟ ಎಂಬುದು ಎಲ್ಲರಿಗೂ ತಿಳಿದಿದೆ. ಅವರ ಆರೋಗ್ಯ ಹದಗೆಡುವ ಮೊದಲು ಅವರನ್ನು ಸುರಂಗದಿಂದ ಹೊರಗೆ ತರಬೇಕು. ಯಾವುದೇ ಅಹಿತಕರ ಘಟನೆ ಸಂಭವಿಸಲು ಅಧಿಕಾರಿಗಳು ಏಕೆ ಕಾಯುತ್ತಿದ್ದಾರೆ?” ಎಂದು ಕೇಳಿದ್ದಾರೆ

ಉತ್ತರಕಾಶಿ ಜಿಲ್ಲಾ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯ ಡಾ ಬಿ ಎಸ್ ಪೊಕ್ರಿಯಾಲ್ ಅವರು ನವೆಂಬರ್ 14 ರಂದು ಸಿಕ್ಕಿಬಿದ್ದ ಕಾರ್ಮಿಕರೊಂದಿಗೆ ಮಾತನಾಡಲು ಸುರಂಗಕ್ಕೆ ಹೋಗಿದ್ದರು.

“ನಾನು ಅವರ ಯೋಗಕ್ಷೇಮ ಮತ್ತು ಆರೋಗ್ಯದ ಬಗ್ಗೆ (ಸಿಕ್ಕಿ ಬಿದ್ದ ಕಾರ್ಮಿಕರು) ಕೇಳಿದೆ. ನಾನು ಮಾತನಾಡಿದ ಕಾರ್ಮಿಕರಲ್ಲಿ ಒಬ್ಬರು ಸ್ವಲ್ಪ ತಲೆನೋವಿನ ಬಗ್ಗೆ ದೂರು ನೀಡಿದರು. ನಾವು ಅಗತ್ಯ ಔಷಧಗಳು ಮತ್ತು ಮಲ್ಟಿವಿಟಮಿನ್‌ಗಳನ್ನು ಪೂರೈಸುತ್ತಿದ್ದೇವೆ.

ಇದನ್ನೂ ಓದಿ: ಉತ್ತರಕಾಶಿ ಸುರಂಗ ಕುಸಿತ: 6 ದಿನಗಳ ನಂತರ 40 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿ

ಈ ಹಿಂದೆ ಹಿಂದೂಸ್ತಾನ್ ಟೈಮ್ಸ್ ಜತೆ ಮಾತನಾಡಿದ ಏಮ್ಸ್ ರಿಷಿಕೇಶ್‌ನ ಮನೋವೈದ್ಯಶಾಸ್ತ್ರದ ಹೆಚ್ಚುವರಿ ಪ್ರಾಧ್ಯಾಪಕ ಡಾ.ಅನಿಂಧ್ಯಾ ದಾಸ್, ನಾಲ್ಕು ದಿನಗಳವರೆಗೆ ಸುರಂಗದಲ್ಲಿ ಸಿಕ್ಕಿಹಾಕಿಕೊಳ್ಳುವ ಪರಿಸ್ಥಿತಿಯು ಕಾರ್ಮಿಕರಿಗೆ ಅತ್ಯಂತ ಆಘಾತಕಾರಿ ಮತ್ತು ಒತ್ತಡವನ್ನುಂಟುಮಾಡುತ್ತದೆ. “ಭಯ ಮತ್ತು ಆತಂಕದ ಭಾವನೆ ಇರುತ್ತದೆ. ಹಲವರು ಪ್ಯಾನಿಕ್ ಅಟ್ಯಾಕ್ ಮತ್ತು ತೀವ್ರ ಅಸಹಾಯಕತೆಯ ಭಾವನೆಯನ್ನು ಹೊಂದಿರಬಹುದು. ಕ್ಲಾಸ್ಟ್ರೋಫೋಬಿಯಾದಂತಹ ಪರಿಸ್ಥಿತಿಗಳು ಕೆಲವರಲ್ಲಿ ಉಲ್ಬಣಗೊಳ್ಳಬಹುದು ಮತ್ತು ಒಮ್ಮೆ ಪಾರುಮಾಡಿದರೆ, ಕೆಲವು ಕಾರ್ಮಿಕರಲ್ಲಿ ಪೋಸ್ಟ್ ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್ (PTSD) ಲಕ್ಷಣಗಳು ಬೆಳೆಯಬಹುದು, ಅವರಿಗೆ ಮಾನಸಿಕವಾಗಿ ಮೌಲ್ಯಮಾಪನ ಮತ್ತು ಸಲಹೆ ನೀಡಬೇಕಾಗುತ್ತದೆ. ಅವರಲ್ಲಿ ಹೆಚ್ಚಿನವರು ಮತ್ತೆ ಇದೇ ರೀತಿಯ ವಾತಾವರಣದಲ್ಲಿ ಕೆಲಸ ಮಾಡಲು ಮಾನಸಿಕ ಸ್ಥಿತಿಯಲ್ಲಿ ಇಲ್ಲದಿರುವ ಕಾರಣ ಮೌಲ್ಯಮಾಪನವು ಕಡ್ಡಾಯವಾಗಿದೆ ಎಂದಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ