ಕೊರೊನಾ ಲಸಿಕೆಗೆ ಡಿಜಿಟಲ್ ಹೆಲ್ತ್ ಐಡಿ ಕಡ್ಡಾಯವಲ್ಲ -ಆರೋಗ್ಯ ಇಲಾಖೆ ಸ್ಪಷ್ಟನೆ
ದೆಹಲಿ: ಭಾರತವು ತನ್ನ ಅಸ್ತಿತ್ವದಲ್ಲಿರುವ ಡಿಜಿಟಲ್ ನೆಟ್‌ವರ್ಕ್ ಮತ್ತು ಹೊಸ ಡಿಜಿಟಲ್ ಹೆಲ್ತ್ ಐಡಿ ಮೂಲಕ ವೇಗವಾಗಿ ಲಸಿಕೆ ವಿತರಣೆಯನ್ನು ಖಚಿತಪಡಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ ನಂತರ, ಕೊರೊನಾ ಲಸಿಕೆಗೆ ಡಿಜಿಟಲ್ ಹೆಲ್ತ್ ಐಡಿ ಕಡ್ಡಾಯವಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. ನ್ಯಾಷನಲ್ ಡಿಜಿಟಲ್ ಹೆಲ್ತ್ ಮಿಷನ್ (ಎನ್‌ಡಿಎಚ್‌ಎಂ) ಅಡಿಯಲ್ಲಿ ಪ್ರತಿಯೊಬ್ಬರಿಗೂ ಡಿಜಿಟಲ್ ಹೆಲ್ತ್ ಐಡಿ ನೀಡುವ ಬಗ್ಗೆ ಕೇಂದ್ರ ಸರ್ಕಾರ ನಿರ್ಧರಿಸಿತ್ತು. ಆಧಾರ್ ಕಾರ್ಡ್ ಸಂಖ್ಯೆ, ಫೋನ್ ನಂಬರ್ ಬಳಸಿ ಡಿಜಿಟಲ್ […]
ದೆಹಲಿ: ಭಾರತವು ತನ್ನ ಅಸ್ತಿತ್ವದಲ್ಲಿರುವ ಡಿಜಿಟಲ್ ನೆಟ್‌ವರ್ಕ್ ಮತ್ತು ಹೊಸ ಡಿಜಿಟಲ್ ಹೆಲ್ತ್ ಐಡಿ ಮೂಲಕ ವೇಗವಾಗಿ ಲಸಿಕೆ ವಿತರಣೆಯನ್ನು ಖಚಿತಪಡಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ ನಂತರ, ಕೊರೊನಾ ಲಸಿಕೆಗೆ ಡಿಜಿಟಲ್ ಹೆಲ್ತ್ ಐಡಿ ಕಡ್ಡಾಯವಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.
ನ್ಯಾಷನಲ್ ಡಿಜಿಟಲ್ ಹೆಲ್ತ್ ಮಿಷನ್ (ಎನ್‌ಡಿಎಚ್‌ಎಂ) ಅಡಿಯಲ್ಲಿ ಪ್ರತಿಯೊಬ್ಬರಿಗೂ ಡಿಜಿಟಲ್ ಹೆಲ್ತ್ ಐಡಿ ನೀಡುವ ಬಗ್ಗೆ ಕೇಂದ್ರ ಸರ್ಕಾರ ನಿರ್ಧರಿಸಿತ್ತು. ಆಧಾರ್ ಕಾರ್ಡ್ ಸಂಖ್ಯೆ, ಫೋನ್ ನಂಬರ್ ಬಳಸಿ ಡಿಜಿಟಲ್ ಹೆಲ್ತ್ ಐಡಿ ಪಡೆಯಬಹುದು.
ಸದ್ಯ ಕೇಂದ್ರಾಡಳಿತ ಪ್ರದೇಶಗಳಲ್ಲಿ ನ್ಯಾಷನಲ್ ಡಿಜಿಟಲ್ ಹೆಲ್ತ್ ಮಿಷನ್ ಜಾರಿ ಬಳಿಕ ಕೇಂದ್ರ ಸರ್ಕಾರ ದೇಶಾದ್ಯಂತ ಜಾರಿ ಮಾಡಲಿದೆ. ಈ ಬಗ್ಗೆ ಪ್ರಧಾನಿ ಮೋದಿ ಆಗಸ್ಟ್ 15ರಂದು ತಿಳಿಸಿದ್ದರು. ಎಲ್ಲರೂ ಹೆಲ್ತ್ ಕಾರ್ಡ್ ಐಡಿ ಪಡೆದುಕೊಳ್ಳಿ ಇದರಿಂದ ವೈದ್ಯಕೀಯ ಸೇವೆಯನ್ನು ಸುಲಭವಾಗಿ ಪಡೆಯಬಹುದೆಂದು ತಿಳಿಸಿದ್ದರು. ಆದರೆ ಈಗ ಕೊರೊನಾ ಲಸಿಕೆಗೆ ಡಿಜಿಟಲ್ ಐಡಿ ಕಡ್ಡಾಯವಲ್ಲ ಮತ್ತು ಭವಿಷ್ಯದಲ್ಲಿ ಅದು ಆಗುವುದಿಲ್ಲ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿದ್ದಾರೆ.