ಕೊರೊನಾ ಬಿಕ್ಕಟ್ಟಿನ ಮಧ್ಯೆ ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಗಿಫ್ಟ್
ದೆಹಲಿ: ದೇಶದಲ್ಲಿ ಕೊರೊನಾ ಬಿಕ್ಕಟ್ಟಿನಿಂದ ಆರ್ಥಿಕ ಪರಿಸ್ಥಿತಿ ದಿವಾಳಿಯತ್ತ ಸಾಗುತ್ತಿದೆ. ಕುಸಿದಿರುವ ಆರ್ಥಿಕತೆಗೆ ಚೇತರಿಕೆ ನೀಡಲು ಕೇಂದ್ರ ಸರಕಾರ ಪ್ಲಾನ್ ಮಾಡಿದ್ದು, 30ಲಕ್ಷ ಸರಕಾರಿ ನೌಕರರಿಗೆ ಬೋನಸ್ ನೀಡಲು ಅನುಮೋದನೆ ನೀಡಿದೆ. ಇದರಿಂದ ಆರ್ಥಿಕತೆಗೆ ಉತ್ತೇಜನ ಸಿಗುವ ನಿರೀಕ್ಷೆ ಮಾಡಲಾಗಿದೆ. ಕೊರೊನಾ ಬಿಕ್ಕಟ್ಟಿನ ಮಧ್ಯೆ ಬೋನಸ್ ನೀಡಿದ ಕೇಂದ್ರ ಡೆಡ್ಲಿ ವೈರಸ್ ಕೊರೊನಾದಿಂದಾಗಿ ದೇಶದ ಆರ್ಥಿಕತೆಯೇ ಬುಡಮೇಲಾಗಿದೆ. ಏಷ್ಯಾ ಖಂಡದಲ್ಲೇ ಕಳಪೆ ಮಟ್ಟಕ್ಕೆ ಭಾರತದ ಆರ್ಥಿಕತೆ ಕುಸಿದಿದೆ. ಕೊರೊನಾ ಹೊಡೆತದಿಂದ ಉತ್ಪಾದನಾ, ಸೇವಾ ವಲಯಗಳೆರಡು ಪೆಟ್ಟು ತಿಂದಿವೆ. […]
ದೆಹಲಿ: ದೇಶದಲ್ಲಿ ಕೊರೊನಾ ಬಿಕ್ಕಟ್ಟಿನಿಂದ ಆರ್ಥಿಕ ಪರಿಸ್ಥಿತಿ ದಿವಾಳಿಯತ್ತ ಸಾಗುತ್ತಿದೆ. ಕುಸಿದಿರುವ ಆರ್ಥಿಕತೆಗೆ ಚೇತರಿಕೆ ನೀಡಲು ಕೇಂದ್ರ ಸರಕಾರ ಪ್ಲಾನ್ ಮಾಡಿದ್ದು, 30ಲಕ್ಷ ಸರಕಾರಿ ನೌಕರರಿಗೆ ಬೋನಸ್ ನೀಡಲು ಅನುಮೋದನೆ ನೀಡಿದೆ. ಇದರಿಂದ ಆರ್ಥಿಕತೆಗೆ ಉತ್ತೇಜನ ಸಿಗುವ ನಿರೀಕ್ಷೆ ಮಾಡಲಾಗಿದೆ.
ಕೊರೊನಾ ಬಿಕ್ಕಟ್ಟಿನ ಮಧ್ಯೆ ಬೋನಸ್ ನೀಡಿದ ಕೇಂದ್ರ ಡೆಡ್ಲಿ ವೈರಸ್ ಕೊರೊನಾದಿಂದಾಗಿ ದೇಶದ ಆರ್ಥಿಕತೆಯೇ ಬುಡಮೇಲಾಗಿದೆ. ಏಷ್ಯಾ ಖಂಡದಲ್ಲೇ ಕಳಪೆ ಮಟ್ಟಕ್ಕೆ ಭಾರತದ ಆರ್ಥಿಕತೆ ಕುಸಿದಿದೆ. ಕೊರೊನಾ ಹೊಡೆತದಿಂದ ಉತ್ಪಾದನಾ, ಸೇವಾ ವಲಯಗಳೆರಡು ಪೆಟ್ಟು ತಿಂದಿವೆ. ಜನರಿಗೆ ಕೊಳ್ಳುವ ಸಾಮರ್ಥ್ಯವೇ ಕಡಿಮೆ ಆಗಿದೆ. ಈ ಸಂಕಷ್ಟದಲ್ಲೂ ಕೇಂದ್ರ ಸರಕಾರ ಸರಕಾರಿ ಉದ್ಯೋಗಿಗಳಿಗೆ ಬೋನಸ್ ಘೋಷಣೆ ಮಾಡಿದ್ದು ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದೆ.
ಬೋನಸ್ ನೀಡಲು ಕೇಂದ್ರ ಸಚಿವ ಸಂಪುಟ ಗ್ರೀನ್ ಸಿಗ್ನಲ್ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದ್ದು , ಕೇಂದ್ರ ಸರ್ಕಾರಿ ನೌಕರರಿಗೆ 2019-2020ರ ಬೋನಸ್ ನೀಡುವುದಕ್ಕೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಗಿಫ್ಟ್ ಕನಿಷ್ಠ 30 ಲಕ್ಷ ಗೆಜೆಟೆಡ್ ಅಲ್ಲದ ಕೇಂದ್ರ ಸರ್ಕಾರಿ ನೌಕರರು ಬೋನಸ್ ಪ್ರಯೋಜನ ಪಡೆಯಲಿದ್ದಾರೆ. ವಿಜಯದಶಮಿಗೆ ಮುಂಚಿತವಾಗಿ ನೇರ ಲಾಭ ವರ್ಗಾವಣೆಯ ಮೂಲಕ ಬೋನಸ್ ಅನ್ನು ಒಂದೇ ಕಂತಿನಲ್ಲಿ ನೀಡಲು ಕೇಂದ್ರ ನಿರ್ಧರಿಸಿದೆ. ಇದರಿಂದ ಸರ್ಕಾರಕ್ಕೆ ಒಟ್ಟು 3,737 ಕೋಟಿ ರೂಪಾಯಿ ವೆಚ್ಚವಾಗಲಿದ್ದು, 30ಲಕ್ಷ ಉದ್ಯೋಗಿಗಳಿಗೆ ಅನುಕೂಲವಾಗಲಿದೆ. ಹಬ್ಬಕ್ಕಿಂತ ಮುಂಚಿತವಾಗಿ ಸರ್ಕಾರಿ ನೌಕರರನ್ನು ಹುರಿದುಂಬಿಸಲು ಇದು ಸಹಕಾರಿಯಾಗಲಿದೆ. ಇದರಿಂದ ಖರೀದಿ ಹೆಚ್ಚಾಗಿ, ಆರ್ಥಿಕತೆಗೆ ಉತ್ತೇಜನ ಸಿಗಲಿದೆ.
ಆರ್ಥಿಕತೆಯು ಕುಸಿತದ ಹಾದಿಯಲ್ಲಿದೆ. ಜಿಡಿಪಿಯು ಕುಸಿಯುತ್ತಿದೆ. ಕೈಗಾರಿಕಾ ಉತ್ಪಾದನೆಯು ಕುಸಿಯುತ್ತಿದೆ. ಹೀಗೆ ಪರಿಸ್ಥಿತಿ ಮುಂದುವರಿದರೇ, ಉದ್ಯೋಗ ನಷ್ಟ ಮತ್ತಷ್ಟು ಹೆಚ್ಚಾಗುತ್ತೆ. ಹೀಗಾಗಿ ಉದ್ಯೋಗ ನಷ್ಟವನ್ನು ತಪ್ಪಿಸಬೇಕಾದರೇ, ಬೇಡಿಕೆ ಹೆಚ್ಚಾಗುವಂತೆ ಮಾಡಬೇಕು. ಜನರಿಗೆ ಕೊಳ್ಳುವ ಸಾಮರ್ಥ್ಯ ಹೆಚ್ಚಾಗುವಂತೆ ಮಾಡಬೇಕು. ಹೀಗಾಗಿ ಕೇಂದ್ರ ಸರಕಾರ ನೌಕರಿಗೆ ಬೋನಸ್ ನೀಡಿರುವುದು ಆರ್ಥಿಕತೆಗೆ ಚೇತರಿಕೆ ನೀಡಲು ಸಹಕಾರಿಯಾಗಲಿದೆ ಅಂತಾ ವಿಶ್ಲೇಷಣೆ ಮಾಡಲಾಗುತ್ತಿದೆ.
ಒಟ್ನಲ್ಲಿ ಕೊರೊನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಬೋನಸ್ ನೀಡುವುದು ಅನುಮಾನವಾಗಿತ್ತು. ಆರಂಭದಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಾಗ ಈ ವರ್ಷದ ಆರಂಭದಲ್ಲಿ ಕೇಂದ್ರ ಸರಕಾರಿ ನೌಕರರ ತುಟ್ಟಿ ಭತ್ಯೆಯನ್ನು ರದ್ದುಗೊಳಿಸಲಾಗಿತ್ತು. ಹಲವು ರಾಜ್ಯಗಳಲ್ಲಿ ನೌಕರರ ಸಂಬಳವನ್ನೂ ಕಡಿತಗೊಳಿಸಲಾಗಿತ್ತು. ಆದ್ರೆ ಉತ್ಪಾದಕತೆ ಆಧರಿಸಿದ 2019-20ನೇ ಸಾಲಿನ ಬೋನಸ್‌ಗೆ ರೈಲ್ವೆ, ಪೋಸ್ಟ್, ಸೇನೆ, ಇಪಿಎಫ್‌ಒ, ಇಎಸ್‌ಐಸಿ ಮೊದಲಾದ ಸರಕಾರಿ ಸಂಸ್ಥೆಗಳ ಗೆಜೆಟೆಡ್ ಅಲ್ಲದ ಒಟ್ಟು 30ಲಕ್ಷ ಉದ್ಯೋಗಿಗಳಿಗೆ ಇದರ ಲಾಭ ಸಿಗಲಿದೆ.