ಭಾರತದಲ್ಲಿಯೂ ಹರಡಲಿದೆ ಸ್ವದೇಶಿ ಇಂಗು ಕೃಷಿ ಪರಿಮಳ!
ದೆಹಲಿ: ದೇಶದ ಪ್ರತಿಯೊಂದು ಕುಟುಂಬದ ಅಡುಗೆ ಮನೆಯಲ್ಲಿ ಕಾಣಸಿಗುವ ಸಾಂಬಾರ್ ಪದಾರ್ಥಗಳಲ್ಲಿ ಇಂಗು ಸಹ ಒಂದು. ಯಾವುದೇ ಅಡುಗೆ ಶೈಲಿಯಿರಲಿ ಅದರಲ್ಲಿ ಇಂಗು ಬಳಕೆ ಸರ್ವೇಸಾಮಾನ್ಯ. ಆಹಾರದ ರುಚಿಯನ್ನು ಹೆಚ್ಚಿಸುವ ಜೊತೆಗೆ ಇದರಲ್ಲಿ ಹಲವಾರು ಔಷಧೀಯ ಗುಣಗಳು ಸಹ ಇವೆ. ರಕ್ತದ ಒತ್ತಡವನ್ನು ನಿಯಂತ್ರಿಸುವುದು ಸೇರಿದಂತೆ ಇನ್ನೂ ಅನೇಕ ಪ್ರಯೋಜನಗಳೂ ಸಹ ಇವೆ. ಹಾಗಾಗಿ, ಇಡೀ ಜಗತ್ತಿನಲ್ಲಿ ಉತ್ಪಾದಿಸಲಾಗುವ ಇಂಗಿನ ಶೇಕಡಾ 40ರಷ್ಟು ಪಾಲು ಭಾರತಕ್ಕೆ ರಫ್ತು ಆಗುತ್ತಿದೆ! ಆದರೆ ಅಚ್ಚರಿಯ ಸಂಗತಿಯೆಂದರೆ, ದೇಶದಲ್ಲಿ ಇಂಗಿನ ಬಳಕೆ […]
ದೆಹಲಿ: ದೇಶದ ಪ್ರತಿಯೊಂದು ಕುಟುಂಬದ ಅಡುಗೆ ಮನೆಯಲ್ಲಿ ಕಾಣಸಿಗುವ ಸಾಂಬಾರ್ ಪದಾರ್ಥಗಳಲ್ಲಿ ಇಂಗು ಸಹ ಒಂದು. ಯಾವುದೇ ಅಡುಗೆ ಶೈಲಿಯಿರಲಿ ಅದರಲ್ಲಿ ಇಂಗು ಬಳಕೆ ಸರ್ವೇಸಾಮಾನ್ಯ. ಆಹಾರದ ರುಚಿಯನ್ನು ಹೆಚ್ಚಿಸುವ ಜೊತೆಗೆ ಇದರಲ್ಲಿ ಹಲವಾರು ಔಷಧೀಯ ಗುಣಗಳು ಸಹ ಇವೆ. ರಕ್ತದ ಒತ್ತಡವನ್ನು ನಿಯಂತ್ರಿಸುವುದು ಸೇರಿದಂತೆ ಇನ್ನೂ ಅನೇಕ ಪ್ರಯೋಜನಗಳೂ ಸಹ ಇವೆ. ಹಾಗಾಗಿ, ಇಡೀ ಜಗತ್ತಿನಲ್ಲಿ ಉತ್ಪಾದಿಸಲಾಗುವ ಇಂಗಿನ ಶೇಕಡಾ 40ರಷ್ಟು ಪಾಲು ಭಾರತಕ್ಕೆ ರಫ್ತು ಆಗುತ್ತಿದೆ!
ಆದರೆ ಅಚ್ಚರಿಯ ಸಂಗತಿಯೆಂದರೆ, ದೇಶದಲ್ಲಿ ಇಂಗಿನ ಬಳಕೆ ಇಷ್ಟು ಪ್ರಮಾಣದಲ್ಲಿದ್ದರೂ ಇಂಗು ಉತ್ಪಾದನೆಯಲ್ಲಿ ಭಾರತ ತೀರಾ ಹಿಂದೆ. ಇದಕ್ಕೆ ಮುಖ್ಯ ಕಾರಣ ಇದರ ಬೇಸಾಯಕ್ಕೆ ಬೇಕಾದ ಅನುಕೂಲಕರ ವಾತಾವರಣ ದೇಶದಲ್ಲಿ ಲಭ್ಯವಿಲ್ಲ. ಆದ್ದರಿಂದ, ಸಾಕಷ್ಟು ಪ್ರಮಾಣದ ಇಂಗನ್ನು ವಿದೇಶದಿಂದ ಆಮದು ಮಾಡಿಕೊಳ್ಳಲಾಗುತ್ತದೆ.
ಆದರೆ ಈಗ, ಇಂಗನ್ನು ದೇಶದಲ್ಲೇ ಉತ್ಪಾದಿಸುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಿದೆ. ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (CSIR) ಮತ್ತು ಹಿಮಾಲಯನ್ ಬಯೋರಿಸೋರ್ಸ್ ತಂತ್ರಜ್ಞಾನ ಸಂಸ್ಥೆ ಕೈಜೋಡಿಸಿ ದೇಶದಲ್ಲಿ ಇಂಗು ಕೃಷಿಗೆ ನಾಂದಿ ಹಾಡಿದೆ.
ಹಿಮಾಚಲ ಪ್ರದೇಶದ ಲಹೌಲ್ ಕಣಿವೆಯ ಕ್ವಾರಿಂಗ್ ಗ್ರಾಮದಲ್ಲಿ ಸರಿಸುಮಾರು 5 ಹೆಕ್ಟೇರ್ ವಿಸ್ತೀರ್ಣದಲ್ಲಿ ಇಂಗು ಸಸಿಗಳನ್ನು ನೆಡಲಾಗಿದೆ. ಮುಂಬರುವ ದಿನಗಳಲ್ಲಿ ಇದರ ವಿಸ್ತೀರ್ಣವನ್ನು ಮತ್ತಷ್ಟು ವೃದ್ಧಿಸಲಾಗುವುದು ಎಂದು ಹೇಳಲಾಗಿದೆ.
ಪ್ರತಿ ಹೆಕ್ಟೇರ್ಗೆ ಸುಮಾರು 5 ವರ್ಷಗಳ ಕಾಲ 3 ಲಕ್ಷ ರೂಪಾಯಿಯಷ್ಟು ಖರ್ಚು ತಗುಲಲಿದ್ದು ಐದು ವರ್ಷಗಳ ಬಳಿಕ ರೈತರಿಗೆ ಸುಮಾರು 10 ಲಕ್ಷ ರೂಪಾಯಿ ಆದಾಯ ಸಿಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.