ಬೆಂಗಳೂರಿನಲ್ಲಿ ಕಸ ವಿಲೇವಾರಿ ಸಮಸ್ಯೆ ಒಪ್ಪಿಕೊಂಡ ಬಿಬಿಎಂಪಿ ಕಮಿಷನರ್: ಅಷ್ಟಕ್ಕೂ ಆಗಿದ್ದೇನು?
ಮಿಟ್ಟಗಾನಹಳ್ಳಿ ಬಳಿ ಕಸ ವಿಲೇವಾರಿಗೆ ತಾತ್ಕಾಲಿಕ ತಡೆ ಉಂಟಾಗಿತ್ತು. ಬಿಬಿಎಂಪಿ ಆಯುಕ್ತರು ಈ ಸಮಸ್ಯೆಗೆ ಪ್ರತಿಕ್ರಿಯಿಸಿದ್ದು, ಕಸ ವಿಲೇವಾರಿಯನ್ನು ಪುನರಾರಂಭಿಸಲಾಗಿದೆ ಎಂದು ಹೇಳಿದ್ದಾರೆ. ಆದರೆ, 3 ಕೋಟಿ ಲೀಟರ್‌ಗೂ ಅಧಿಕ ಲೀಚೇಟ್ ಸೋರಿಕೆಯಿಂದ ಪರಿಸರ ಮಾಲಿನ್ಯ ಉಂಟಾಗಿದೆ ಲೀಚೇಟ್ ತೆರವುಗೊಳಿಸಲು ಟೆಂಡರ್ ಕರೆಯಲಾಗುವುದು ಎಂದು ತಿಳಿಸಿದ್ದಾರೆ.
ಬೆಂಗಳೂರು, ಮಾರ್ಚ್ 15: ಕಸ (Garbage) ಡಂಪಿಂಗ್ ಯಾರ್ಡ್ ಬಂದ್ ಹಿನ್ನೆಲೆ ನಗರ ಗಬ್ಬು ವಾಸನೆ ಬರ್ತಿದೆ. ಜನ ಪ್ರತಿಭಟನೆ ಮಾಡಿದ್ದಾರೆ. ಮಿಟ್ಟಗಾನಹಳ್ಳಿ ಬಳಿ ಕಸ ವಿಲೇವಾರಿಗೆ ತಡೆ ವಿಚಾರವಾಗಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಪ್ರತಿಕ್ರಿಯೆ ನೀಡಿದ್ದು, ಕಸ ವಿಲೇವಾರಿಗೆ ಒಂದೆರಡು ದಿನದಿಂದ ತಡೆಯಾಗಿತ್ತು. ನಿನ್ನೆ ರಾತ್ರಿಯಿಂದ ಚರ್ಚೆ ನಡೆಸಿ ವಿಲೇವಾರಿ ಮಾಡ್ತಿದ್ದೇವೆ. ಕಸ ಸಂಗ್ರಹ ಆಗಿರುವ ಕಡೆ ಲಿಚರ್ಟ್ ಪ್ರಾಬ್ಲಮ್ ಇದೆ. ಅದರಿಂದ ಅಕ್ಕಪಕ್ಕದ ನೀರಿನ ಮೂಲ ಕಲುಷಿತವಾಗಿದೆ. ಅದನ್ನ ಕ್ಲಿಯರ್ ಮಾಡೋಕೆ ಟೆಂಡರ್ ಕರೆಯುತ್ತಿದ್ದೇವೆ. ಲಿಚರ್ಟ್ ತೆರವಿಗೆ ಶೀಘ್ರದಲ್ಲೇ ಟೆಂಡರ್ ಕರೆಯುತ್ತೇವೆ. ಸದ್ಯ ಕಸ ವಿಲೇವಾರಿಯ ಸಮಸ್ಯೆಯನ್ನ ನಿವಾರಿಸಿದ್ದೇವೆ ಎಂದು ಹೇಳಿದ್ದಾರೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.