ಪಿಂಚಣಿಗಾಗಿ 2 ಕಿ.ಮೀ ತೆವಳುತ್ತಾ ಪಂಚಾಯತ್ ಕಚೇರಿಗೆ ಬಂದ 70 ವರ್ಷದ ದಿವ್ಯಾಂಗ ಮಹಿಳೆ
ಪಿಂಚಣಿಗಾಗಿ 70 ವರ್ಷದ ಮಹಿಳೆಯೊಬ್ಬರು ಪಂಚಾಯತ್ ಕಚೇರಿಗೆ ತೆವಳುತ್ತಾ ಬಂದಿರುವ ವಿಡಿಯೋ ಎಲ್ಲೆಡೆ ವೈರ್ಲ ಆಗಿದೆ. ಒಡಿಶಾದಲ್ಲಿ ಘಟನೆ ನಡೆದಿದೆ. ಮಹಿಳೆ ಅಪಘಾತವೊಂದರಲ್ಲಿ ಕಾಲಿನ ಸ್ವಾಧೀನ ಕಳೆದುಕೊಂಡಿದ್ದು ನಿಂತುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ, ಮನೆಯಿಂದ 2ಕಿ.ಮೀ ದೂರದಲ್ಲಿರುವ ಪಂಚಾಯತ್ ಕಚೇರಿಗೆ ತೆವಳಿಕೊಂಡೇ ಹೋಗಿದ್ದಾರೆ
ವೃದ್ಧಾಪ್ಯವೇತನಕ್ಕಾಗಿ 70 ವರ್ಷದ ದಿವ್ಯಾಂಗ ಮಹಿಳೆಯೊಬ್ಬರು ತೆವಳುತ್ತಾ 2ಕಿ.ಮೀ ದೂರವಿರುವ ಪಂಚಾಯತ್ ಕಚೇರಿಗೆ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು ಕಣ್ಣೀರು ತರಿಸುವಂತಿದೆ. ಒಡಿಶಾದ ಕಿಯೋಂಜಾರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಮಹಿಳೆ ನೋವಿನಿಂದ ತೆವಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಟೀಕೆಗಳು ವ್ಯಕ್ತವಾಗಿವೆ.
ಪಥೂರಿ ದೆಹುರಿ ಎಂಬ ಹಿರಿಯ ಮಹಿಳೆ ಜೀವನೋಪಾಯಕ್ಕಾಗಿ ಪಿಂಚಣಿಯನ್ನೇ ಅವಲಂಬಿಸಿದ್ದಾರೆ ಮತ್ತು ಅವರ ಸಹಾಯಕ್ಕೆ ಯಾರೂ ಇಲ್ಲ. ಪಥೂರಿ ಅವರ ವಯಸ್ಸು ಮತ್ತು ಹಿಂದಿನ ಅಪಘಾತದಿಂದ ನಡೆಯಲು ಸಾಧ್ಯವಿಲ್ಲ.
ಸರ್ಕಾರವು ಫಲಾನುಭವಿಗಳ ಬಾಗಿಲಿಗೇ ಕಲ್ಯಾಣ ಪಿಂಚಣಿಗಳನ್ನು ತಲುಪಿಸಬೇಕೆಂಬ ನಿಯಮವಿದ್ದರೂ ಈ ಮಹಿಳೆ ಪಂಚಾಯತ್ ಕಚೇರಿಗೆ ಅಲೆಯುವಂತಾಗಿದೆ. ಇದು ಆಕೆಯ ಕೈ ಹಾಗೂ ಕಾಲಿನಲ್ಲಿ ಗುಳ್ಳೆಗಳು ಬರುವಂತೆ ಮಾಡಿದೆ. ಪಂಚಾಯತ್ನ ಕಾರ್ಯನಿರ್ವಾಹಕ ಅಧಿಕಾರಿ ಪಿಂಚಣಿ ಪಡೆಯಲು ಕಚೇರಿಗೆ ಬರುವಂತೆ ಹೇಳಿದ್ದರು. ಬೇರೆ ದಾರಿ ಇಲ್ಲದೆ ಸಹಾಯ ಮಾಡುವವರು ಯಾರೂ ಇಲ್ಲದೆ 2 ಕಿ.ಮೀ ದೂರ ತೆವಳುತ್ತಾ ಬಂದಿದ್ದಾರೆ.
ಮತ್ತಷ್ಟು ಓದಿ: Dani Tribe: ವಿಚಿತ್ರ ಸಂಪ್ರದಾಯ; ಸಂಬಂಧಿ ಸತ್ತರೆ, ಆ ಕುಟುಂಬದ ಮಹಿಳೆ ತನ್ನ ಬೆರಳನ್ನು ಕತ್ತರಿಸಬೇಕು
ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಯನ್ನು ಪ್ರಶ್ನಿಸಿದಾಗ ಘಟನೆಯನ್ನು ಒಪ್ಪಿಕೊಂಡರೂ ಮಹಿಳೆಯ ಕಷ್ಟದ ಬಗ್ಗೆ ತನಗೆ ತಿಳಿದಿರಲಿಲ್ಲ ಎಂದು ಹೇಳಿದರು. ಈ ಹಿಂದೆ ಪಿಂಚಣಿ ಪಡೆಯಲು ಕಚೇರಿಗೆ ನಡೆದುಕೊಂಡು ಹೋಗುತ್ತಿದ್ದರು, ಆದರೆ ಅಪಘಾತದಲ್ಲಿ ಆಕೆಯ ಕಾಲಿಗೆ ಹಾನಿಯಾದ ನಂತರ ಅವರ ಮನೆಯವರು ಅಥವಾ ನಮ್ಮ ಕಚೇರಿಯ ಪ್ಯೂನ್ ಅವರ ಪಿಂಚಣಿಯನ್ನು ಅವರ ಮನೆಗೆ ತಲುಪಿಸುತ್ತಿದ್ದರು ಎಂದು ಅಧಿಕಾರಿ ಹೇಳಿದರು.
80-year-old woman was forced to crawl nearly 2 km to panchayat office in Telkoi block of Odisha’s Keonjhar to collect her old-age pension, despite a government directive to deliver the allowances to homes of elderly and disabled beneficiaries.@CMO_Odisha @BJP4Odisha… pic.twitter.com/DbtXXIrU74
— Siddhant Anand (@JournoSiddhant) September 24, 2024
ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುತ್ತೇವೆ, ಮುಂದಿನ ತಿಂಗಳಿನಿಂದ ಆಕೆಗೆ ಅಗತ್ಯವಿರುವ ಎಲ್ಲಾ ಸಹಾಯವನ್ನು ಮಾಡುತ್ತೇವೆ ಎಂದು ಪಂಚಾಯಿತಿ ಅಧ್ಯಕ್ಷ ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ