AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುಣಮಟ್ಟದ ಪರೀಕ್ಷೆಯಲ್ಲಿ ಪ್ಯಾರಸಿಟಮಾಲ್ ಸೇರಿ 53 ಔಷಧಿಗಳು ವಿಫಲ

ಮಾಸಿಕ ಔಷಧ ಅಲರ್ಟ್ ಪಟ್ಟಿಯನ್ನು ಪ್ರಕಟಿಸಿರುವ ಡ್ರಗ್ಸ್ ಸ್ಟ್ಯಾಂಡರ್ಡ್ಸ್ ಕಂಟ್ರೋಲ್ ಆರ್ಗನೈಸೇಶನ್ (CDSCO) 53 ಔಷಧಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿವೆ ಎಂದು ಘೋಷಿಸಿದೆ. ಬಹುತೇಕ ಜನರು ಹೆಚ್ಚಾಗಿ ಬಳಕೆ ಮಾಡುವ ಪ್ಯಾರಸಿಟಮಾಲ್, ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ3 ಸೇರಿದಂತೆ ಹಲವು ಔಷಧಿಗಳು ಗುಣಮಟ್ಟದ ಪರೀಕ್ಷೆಯಲ್ಲಿ ವಿಫಲವಾಗಿದೆ. ಹೀಗಾಗಿ, ಮಾತ್ರೆ ನುಂಗುವ ಮುನ್ನ ಎಚ್ಚರ ವಹಿಸುವುದು ಅತ್ಯಗತ್ಯ.

ಗುಣಮಟ್ಟದ ಪರೀಕ್ಷೆಯಲ್ಲಿ ಪ್ಯಾರಸಿಟಮಾಲ್ ಸೇರಿ 53 ಔಷಧಿಗಳು ವಿಫಲ
ಪ್ಯಾರಸಿಟಮಾಲ್
ಸುಷ್ಮಾ ಚಕ್ರೆ
|

Updated on: Sep 25, 2024 | 10:17 PM

Share

ನವದೆಹಲಿ: ಮೊದಲೆಲ್ಲ ಬಹುತೇಕ ಆರೋಗ್ಯ ಸಮಸ್ಯೆಗಳಿಗೆ ಗಿಡಮೂಲಿಕೆಗಳು, ಆಯುರ್ವೇದಿಕ್ ಔಷಧಗಳನ್ನು ಅವಲಂಬಿಸಿದ್ದರು. ಆದರೆ, ಈಗ ಪ್ರತಿಯೊಂದಕ್ಕೂ ಮಾತ್ರೆಗಳನ್ನು ನುಂಗುವವರ ಸಂಖ್ಯೆ ಹೆಚ್ಚಾಗಿದೆ. ಇದೀಗ ಮಧುಮೇಹ ಔಷಧಗಳು, ಅಧಿಕ ರಕ್ತದೊತ್ತಡದ ನಿವಾರಕ ಔಷಧಿಗಳು, ಪ್ಯಾರಸಿಟಮಾಲ್ ಸೇರಿದಂತೆ ಒಟ್ಟು 53 ಔಷಧಿಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿದೆ ಎಂಬುದು ಆತಂಕಕ್ಕೆ ಕಾರಣವಾಗಿದೆ.

ಇತ್ತೀಚಿನ ಮಾಸಿಕ ಔಷಧ ಎಚ್ಚರಿಕೆಯ ಪಟ್ಟಿಯಲ್ಲಿ, ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ಸ್ ಕಂಟ್ರೋಲ್ ಆರ್ಗನೈಸೇಶನ್ (CDSCO) ಪ್ಯಾರಸಿಟಮಾಲ್ ಸೇರಿದಂತೆ 53 ಔಷಧಗಳನ್ನು “ನಾಟ್ ಆಫ್ ಸ್ಟ್ಯಾಂಡರ್ಡ್ ಕ್ವಾಲಿಟಿ (NSQ)” ಎಂದು ಘೋಷಿಸಿದೆ. ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ3 ಪೂರಕಗಳು, ಮಧುಮೇಹದ ಮಾತ್ರೆಗಳು ಮತ್ತು ಅಧಿಕ ರಕ್ತದೊತ್ತಡದ ಔಷಧಿಗಳು ಸೇರಿದಂತೆ 50ಕ್ಕೂ ಹೆಚ್ಚು ಔಷಧಗಳು ಭಾರತದ ಔಷಧ ನಿಯಂತ್ರಕದಿಂದ ಗುಣಮಟ್ಟದ ಪರೀಕ್ಷೆಗಳಲ್ಲಿ ವಿಫಲವಾಗಿವೆ.

ಇದನ್ನೂ ಓದಿ: Health Tips: ವಾತಾವರಣ ವೈಪರೀತ್ಯದಿಂದ ಮಕ್ಕಳಲ್ಲಿ ಹೆಚ್ಚುತ್ತಿದೆ ವೈರಲ್‌ ಸೋಂಕು

ವಿಟಮಿನ್ ಸಿ ಮತ್ತು ಡಿ 3 ಮಾತ್ರೆಗಳು ಶೆಲ್ಕಾಲ್, ವಿಟಮಿನ್ ಬಿ ಕಾಂಪ್ಲೆಕ್ಸ್ ಮತ್ತು ವಿಟಮಿನ್ ಸಿ ಸಾಫ್ಟ್‌ಜೆಲ್‌ಗಳು, ಆಂಟಿಆಸಿಡ್ ಪ್ಯಾನ್-ಡಿ, ಪ್ಯಾರೆಸಿಟಮಾಲ್ ಮಾತ್ರೆಗಳು ಐಪಿ 500 ಮಿಗ್ರಾಂ, ಮಧುಮೇಹ ವಿರೋಧಿ ಔಷಧ ಗ್ಲಿಮೆಪಿರೈಡ್, ಅಧಿಕ ರಕ್ತದೊತ್ತಡ ಔಷಧ ಟೆಲ್ಮಿಸಾರ್ಟನ್ ಮುಂತಾದ ಅಧಿಕ ಮಾರಾಟವಾಗುವ 53 ಔಷಧಿಗಳು ಈ ಪಟ್ಟಿಯಲ್ಲಿ ಸೇರಿವೆ. ಇವು ಔಷಧ ನಿಯಂತ್ರಕರಿಂದ ಗುಣಮಟ್ಟದ ತಪಾಸಣೆ ವಿಫಲವಾಗಿದೆ.

ಈ ಔಷಧಿಗಳನ್ನು ಹೆಟೆರೊ ಡ್ರಗ್ಸ್, ಅಲ್ಕೆಮ್ ಲ್ಯಾಬೊರೇಟರೀಸ್, ಹಿಂದೂಸ್ತಾನ್ ಆಂಟಿಬಯೋಟಿಕ್ಸ್ ಲಿಮಿಟೆಡ್ (ಎಚ್‌ಎಎಲ್), ಕರ್ನಾಟಕ ಆಂಟಿಬಯೋಟಿಕ್ಸ್ ಆ್ಯಂಡ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್, ಮೆಗ್ ಲೈಫ್ ಸೈನ್ಸಸ್, ಪ್ಯೂರ್ ಆ್ಯಂಡ್ ಕ್ಯೂರ್ ಹೆಲ್ತ್‌ಕೇರ್ ಮತ್ತು ಹೆಚ್ಚಿನವುಗಳಿಂದ ತಯಾರಿಸಲಾಗುತ್ತದೆ.

ಇದನ್ನೂ ಓದಿ: ನೀವು ಕಾಫಿ ಪ್ರಿಯರೇ? ದಿನಕ್ಕೆ 2- 3 ಕಪ್ ಕುಡಿದರೆ ಹೃದಯದ ಆರೋಗ್ಯ ಹೆಚ್ಚಾಗುತ್ತೆ ಎಂದಿದೆ ಅಧ್ಯಯನ

ಹೊಟ್ಟೆಯ ಸೋಂಕುಗಳಿಗೆ ಚಿಕಿತ್ಸೆ ನೀಡಲು ವ್ಯಾಪಕವಾಗಿ ಬಳಸಲಾಗುವ ಔಷಧವಾದ ಮೆಟ್ರೋನಿಡಜೋಲ್ ಅನ್ನು ಪಿಎಸ್‌ಯು ಹಿಂದೂಸ್ತಾನ್ ಆಂಟಿಬಯೋಟಿಕ್ ಲಿಮಿಟೆಡ್ (ಎಚ್‌ಎಎಲ್) ಉತ್ಪಾದಿಸುತ್ತದೆ. ಅದು ಗುಣಮಟ್ಟದ ಪರೀಕ್ಷೆಗಳಲ್ಲಿ ವಿಫಲವಾಗಿದೆ. ಅದೇ ರೀತಿ, ಟೊರೆಂಟ್ ಫಾರ್ಮಾಸ್ಯುಟಿಕಲ್ಸ್ ವಿತರಿಸಿದ ಮತ್ತು ಉತ್ತರಾಖಂಡ ಮೂಲದ ಪ್ಯೂರ್ ಆ್ಯಂಡ್ ಕ್ಯೂರ್ ಹೆಲ್ತ್‌ಕೇರ್ ತಯಾರಿಸಿದ ಶೆಲ್ಕಾಲ್ ಕೂಡ ಪರೀಕ್ಷೆಯಲ್ಲಿ ಪಾಸ್ ಆಗಿಲ್ಲ. ಕರ್ನಾಟಕ ಆಂಟಿಬಯೋಟಿಕ್ಸ್ ಮತ್ತು ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್‌ನ ಪ್ಯಾರೆಸಿಟಮಾಲ್ ಮಾತ್ರೆಗಳು ಕೂಡ ಗುಣಮಟ್ಟದಲ್ಲಿ ಪಾಸ್ ಆಗಿಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ