Health Tips: ವಾತಾವರಣ ವೈಪರೀತ್ಯದಿಂದ ಮಕ್ಕಳಲ್ಲಿ ಹೆಚ್ಚುತ್ತಿದೆ ವೈರಲ್‌ ಸೋಂಕು

ಮಳೆ, ಬಿಸಿಲಿನ ಕಣ್ಣಾಮುಚ್ಚಾಲೆಯಿಂದಾಗಿ ಹವಾಮಾನ ಪ್ರತಿದಿನವೂ ಬದಲಾಗುತ್ತಲೇ ಇದೆ. ಹವಾಮಾನದ ಬದಲಾವಣೆಯಿಂದ ಮಕ್ಕಳಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಲೇ ಇವೆ. ಇದಕ್ಕೆ ಪರಿಹಾರವೇನು? ಮಕ್ಕಳನ್ನು ವೈರಲ್ ಸೋಂಕಿನಿಂದ ದೂರ ಇಡುವುದು ಹೇಗೆಂಬುದರ ಕುರಿತು ಮಾಹಿತಿ ಇಲ್ಲಿದೆ.

Health Tips: ವಾತಾವರಣ ವೈಪರೀತ್ಯದಿಂದ ಮಕ್ಕಳಲ್ಲಿ ಹೆಚ್ಚುತ್ತಿದೆ ವೈರಲ್‌ ಸೋಂಕು
ಸೋಂಕು
Follow us
ಸುಷ್ಮಾ ಚಕ್ರೆ
|

Updated on: Sep 25, 2024 | 10:02 PM

ಇತ್ತೀಚಿನ ದಿನಗಳಲ್ಲಿ ಹವಾಮಾನ ಬದಲಾವಣೆಯಿಂದಾಗಿ ಇನ್‌ಫ್ಲುಯೆನ್ಜಾದಂತಹ ವೈರಲ್‌ ಸೋಂಕುಗಳು ಸೇರಿದಂತೆ ವಿವಿಧ ಕಾಯಿಲೆಗಳು ಮಕ್ಕಳಲ್ಲಿ ಕಂಡುಬರುತ್ತಿವೆ. ಈ ಸೋಂಕುಗಳು ಶಾಲೆ, ಡೇಕೇರ್‌ಗಳಂತಹ ಪರಿಸರದಲ್ಲಿ ಬಹುಬೇಗನೆ ಹರಡುತ್ತಿರುವುದರಿಂದ ಪೋಷಕರು ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆ ಇದೆ. ಈ ಕುರಿತು ತಜ್ಞ ವೈದ್ಯರು ನೀಡಿರುವ ಕೆಲವು ಸಲಹೆಗಳು ಇಲ್ಲಿವೆ.

ಮಕ್ಕಳಲ್ಲಿ ಹಲವು ರೀತಿಯ ವೈರಲ್‌ ಸೋಂಕುಗಳು ಕಂಡುಬರುತ್ತಿದೆ. ಅವುಗಳೆಂದರೆ ಶೀತ, ಇನ್‌ಫ್ಲುಯೆನ್ಜಾ, ಗ್ಯಾಸ್ಟ್ರೋಎಂಟರೈಟಿಸ್ (ಸಾಮಾನ್ಯವಾಗಿ ಹೊಟ್ಟೆ ಜ್ವರ ಎಂದು ಕರೆಯಲಾಗುತ್ತದೆ), ಕೈ, ಕಾಲು ಮತ್ತು ಬಾಯಿ ರೋಗ ಮತ್ತು ರೆಸ್ಪಿರೇಟರಿ ಸಿನ್ಸಿಟಿಯಲ್ ವೈರಸ್ (RSV) ಸೇರಿದಂತೆ ವಿವಿಧ ವೈರಾಣುಗಳ ಸೋಂಕುಗಳಿಗೆ ಮಕ್ಕಳು ತುತ್ತಾಗುತ್ತಿದ್ದಾರೆ. ಈ ಸೋಂಕುಗಳು ಹೆಚ್ಚು ಸಾಂಕ್ರಾಮಿಕವಾಗಿದ್ದು, ಉಸಿರಾಟದ ಗಾಳಿ, ವೈಯಕ್ತಿಕ ಸಂಪರ್ಕ ಅಥವಾ ಕಲುಷಿತ ಜಾಗವನ್ನು ಸ್ಪರ್ಶಿಸುವ ಮೂಲಕವೂ ವೇಗವಾಗಿ ಹರಡುತ್ತದೆ ಎಂದು ಬೆಂಗಳೂರಿನ ವಾಸವಿ ಆಸ್ಪತ್ರೆಯ ಮಕ್ಕಳ ತಜ್ಞರಾದ ಡಾ. ಎಂ. ಅಶೋಕ್ ಹೇಳಿದ್ದಾರೆ.

ರೋಗಲಕ್ಷಣಗಳು ಯಾವುವು?:

ವೈರಲ್‌ ಸೋಂಕಿನ ಲಕ್ಷಣಗಳು ವಿಭಿನ್ನವಾಗಿರುತ್ತವೆ. ಆದರೆ ಜ್ವರ, ಆಯಾಸ, ಸೋರುವ ಅಥವಾ ಉಸಿರುಕಟ್ಟಿಕೊಳ್ಳುವ ಮೂಗು, ಕೆಮ್ಮು, ನೋಯುತ್ತಿರುವ ಗಂಟಲು, ಅತಿಸಾರ, ವಾಂತಿ ಮತ್ತು ಕೆಲವೊಮ್ಮೆ ಚರ್ಮದ ದದ್ದುಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ. ಈ ರೋಗಲಕ್ಷಣಗಳು ಸಾಮಾನ್ಯವಾದುದು. ಆದರೆ, ಈ ಬಗ್ಗೆ ಪೋಷಕರು ನಿರ್ಲಕ್ಷ್ಯ ವಹಿಸುವುದು ಒಳ್ಳೆಯದಲ್ಲ. ಅದರ ಬದಲಾಗಿ ಮಕ್ಕಳನ್ನು ಸೂಕ್ಷ್ಮವಾಗಿ ಗಮನಿಸುತ್ತಿಬೇಕು. ಒಂದು ವೇಳೆ ಜ್ವರ ಅಥವಾ ಮಗುವಿನ ದೇಹವು ಡೀಹೈಡ್ರೇಟ್‌ ಆಗಿರುವುದು ಕಂಡುಬಂದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಒಳಿತು ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ನೀವು ಕಾಫಿ ಪ್ರಿಯರೇ? ದಿನಕ್ಕೆ 2- 3 ಕಪ್ ಕುಡಿದರೆ ಹೃದಯದ ಆರೋಗ್ಯ ಹೆಚ್ಚಾಗುತ್ತೆ ಎಂದಿದೆ ಅಧ್ಯಯನ

ಚಿಕಿತ್ಸೆ ಮತ್ತು ಆರೈಕೆ ಹೇಗಿರಬೇಕು?:

ಅನೇಕ ಸಂದರ್ಭಗಳಲ್ಲಿ ಮಕ್ಕಳಲ್ಲಿ ವೈರಲ್‌ ಸೋಂಕುಗಳು ಕಂಡುಬಂದಾಗ ಉತ್ತಮ ಆರೈಕೆ ನೀಡಿದರೆ ಬಹುಬೇಗ ಗುಣಮುಖರಾಗುತ್ತಾರೆ. ಆದರೆ ಈ ವೇಳೆ ಮಕ್ಕಳಿಗೆ ವಿಶ್ರಾಂತಿ ಮತ್ತು ದೇಹವು ಹೈಡ್ರೇಟ್‌ ಆಗಿರುವುದು ಬಹಳ ಮುಖ್ಯವಾಗಿರುತ್ತದೆ. ಹೀಗಾಗಿ ಮಕ್ಕಳು ಹೆಚ್ಚು ಹೈಡ್ರೇಟ್‌ ಆಗಿರುವಂತೆ ನೋಡಿಕೊಳ್ಳುವುದು ಅಗತ್ಯ.

ಔಷಧಿಗಳನ್ನು ನೀಡುವುದರ ಬಗೆಗೆ ಪೋಷಕರು ಹೆಚ್ಚು ಕಾಳಜಿವಹಿಸಬೇಕು. ಸೋಂಕಿಗೆ ತುತ್ತಾದ ಮಕ್ಕಳ ಮೂಗಿಗೆ ಡ್ರಾಪ್‌ಗಳನ್ನು ಹಾಕುವುದರಿಂದ ಸರಾಗವಾಗಿ ಉಸಿರಾಡಲು ನೆರವಾಗಲಿದೆ. ಎಲ್ಲಕ್ಕಿಂತ ಮುಖ್ಯವಾಗಿ ಸುತ್ತಲಿನ ವಾತಾವರಣ ಆರೋಗ್ಯಕರವಾಗಿರುವಂತೆ ನೋಡಿಕೊಳ್ಳಬೇಕು. ಮಕ್ಕಳಲ್ಲಿ ರೋಗಲಕ್ಷಣಗಳು ಮುಂದುವರೆದರೆ ಕೂಡಲೇ ತಜ್ಞರನ್ನು ಸಂಪರ್ಕಿಸುವುದು ಉತ್ತಮ ಎನ್ನುತ್ತಾರೆ ವೈದ್ಯರು.

ವೈರಲ್‌ ಸೋಂಕಿನ ಸಮಸ್ಯೆಗಳನ್ನು ತಡೆಗಟ್ಟುವುದು ಹೇಗೆ?:

ವಿವಿಧ ರೀತಿಯ ವೈರಲ್‌ ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಕೆಲವು ಕ್ರಮಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯ. ಅವುಗಳಲ್ಲಿ ನಿಯಮಿತವಾಗಿ ಕೈ ತೊಳೆಯುವುದು, ಮಕ್ಕಳು ಕೆಮ್ಮುವಾಗ ಅಥವಾ ಸೀನುವಾಗ ಮುಖಕ್ಕೆ ಬಟ್ಟೆ ಅಡ್ಡ ಇಟ್ಟುಕೊಳ್ಳುವುದನ್ನು ಕಲಿಸುವುದು, ಒಂದು ವೇಳೆ ಮಕ್ಕಳಲ್ಲಿ ಅನಾರೋಗ್ಯ ಕಂಡುಬಂದರೆ ಮನೆಯಲ್ಲಿ ಇರಿಸುವುದು ಮತ್ತು ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವತ್ತ ಗಮನಹರಿಸುವುದರ ಜೊತೆಗೆ ಮುಂಜಾಗ್ರತಾ ಕ್ರಮವಾಗಿ ಅಗತ್ಯ ಚುಚ್ಚುಮದ್ದುಗಳನ್ನು ಮಕ್ಕಳಿಗೆ ನೀಡುವುದರಿಂದ ಸೋಂಕಿನ ಅಪಾಯವನ್ನು ಕಡಿಮೆ ಮಾಡಬಹುದು ಎಂಬುದು ಡಾ. ಅಶೋಕ್‌ ಅವರ ಅಭಿಪ್ರಾಯ.

ಇದನ್ನೂ ಓದಿ: ಕೇರಳದ ಮಲಪ್ಪುರಂನಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗೆ ಎಂಪಾಕ್ಸ್ ಸೋಂಕು ದೃಢ

ಈ ವೈರಲ್‌ ಸೋಂಕುಗಳು ಹರಡುವಿಕೆಗೆ ಕಾರಣವಾಗುತ್ತವೆ. ಹೀಗಾಗಿ ಮಕ್ಕಳಲ್ಲಿ ಸೋಂಕುಗಳು ಕಂಡುಬಂದಾಗ ಪೋಷಕರು ಹೆಚ್ಚು ಜಾಗರೂಕರಾಗಬೇಕು. ಮಕ್ಕಳಿಗೆ ಅಗತ್ಯ ಕಾಳಜಿ, ಅಗತ್ಯವಾದ ವಿಶ್ರಾಂತಿ ಮತ್ತು ಮಕ್ಕಳನ್ನು ಉತ್ತಮ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪೋಷಕರು ನೋಡಿಕೊಳ್ಳಬೇಕು. ಮಕ್ಕಳು ಅನಾರೋಗ್ಯದಿಂದ ಚೇತರಿಸಿಕೊಳ್ಳಲು ಉತ್ತಮ ಆಹಾರ ಮುಖ್ಯವಾಗುತ್ತದೆ. ಹೀಗಾಗಿ ಮಕ್ಕಳಿಗೆ ಉತ್ತಮ ಆಹಾರವನ್ನು ನೀಡಬೇಕು. ಒಂದು ವೇಳೆ ಮಕ್ಕಳಲ್ಲಿ ದೀರ್ಘಕಾಲದ ಜ್ವರ, ಉಸಿರಾಟದ ತೊಂದರೆ, ಡೀಹೈಡ್ರೇಟ್‌ ಆಗುವುದು ಕಂಡುಬಂದಲ್ಲಿ ಪೋಷಕರು ಕೂಡಲೇ ಮಕ್ಕಳನ್ನು ವೈದ್ಯರ ಬಳಿ ಕರೆದುಕೊಂಡು ಹೋಗಬೇಕು. ವಾತಾವರಣದಲ್ಲಿ ಬದಲಾವಣೆ ಕಂಡುಬಂದಾಗ ಪೋಷಕರು ಈ ಸೂಚನೆಗಳನ್ನು ಅನುಸರಿಸುವ ಮೂಲಕ ಸೋಂಕಿಗೆ ಒಳಗಾದ ತಮ್ಮ ಮಕ್ಕಳಲ್ಲಿ ಬಹುಬೇಗ ಚೇತರಿಕೆಯನ್ನು ಕಾಣಬಹುದು. ಹಾಗೇ, ಸೋಂಕುಗಳು ಇತರರಿಗೆ ಹರಡುವುದನ್ನು ತಪ್ಪಿಸಬಹುದು.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ