ಮಾರ್ಚ್ 2026ರೊಳಗೆ ಭಾರತದಿಂದ ನಕ್ಸಲಿಸಂ ನಿರ್ಮೂಲನೆ; ಛತ್ತೀಸ್‌ಗಢದಲ್ಲಿ ನಕ್ಸಲ್ ದಾಳಿ ಬಳಿಕ ಅಮಿತ್ ಶಾ ಭರವಸೆ
ಛತ್ತೀಸ್‌ಗಢದಲ್ಲಿ ಇಂದು ನಡೆದ ನಕ್ಸಲ್ ದಾಳಿಯ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ನಕ್ಸಲರ ದಾಳಿಯಿಂದ ಹುತಾತ್ಮರಾದ ವೀರ ಸೈನಿಕರ ಕುಟುಂಬಗಳಿಗೆ ನಾನು ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಈ ದುಃಖವನ್ನು ಪದಗಳಲ್ಲಿ ವ್ಯಕ್ತಪಡಿಸಲು ಅಸಾಧ್ಯ. ಆದರೆ, ನಮ್ಮ ಸೈನಿಕರ ಸಾವಿಗೆ ನ್ಯಾಯ ಕೊಡಿಸುತ್ತೇವೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ ಎಂದು ಹೇಳಿದ್ದಾರೆ.
ನವದೆಹಲಿ: ಛತ್ತೀಸ್‌ಗಢದಲ್ಲಿ ನಕ್ಸಲರು ನಡೆಸಿದ ಐಇಡಿ ಸ್ಫೋಟದಲ್ಲಿ ಜಿಲ್ಲಾ ರಿಸರ್ವ್ ಗಾರ್ಡ್‌ನ (ಡಿಆರ್‌ಜಿ) 8 ಯೋಧರು ಮತ್ತು ಓರ್ವ ಚಾಲಕ ಸಾವನ್ನಪ್ಪಿದ್ದರು. ಈ ಹತ್ಯೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು ಮಾರ್ಚ್ 2026ರೊಳಗೆ ಕೇಂದ್ರ ಸರ್ಕಾರವು ಭಾರತದಿಂದ ನಕ್ಸಲಿಸಂ ಅನ್ನು ತೊಡೆದುಹಾಕುತ್ತದೆ ಎಂದು ಭರವಸೆ ನೀಡುತ್ತೇವೆ. ಸೈನಿಕರ ಪ್ರಾಣ ತ್ಯಾಗ ವ್ಯರ್ಥವಾಗಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಛತ್ತೀಸ್‌ಗಢದ ಬಿಜಾಪುರದಲ್ಲಿ ಐಇಡಿ ಸ್ಫೋಟದಲ್ಲಿ ಡಿಆರ್‌ಜಿ ಯೋಧರನ್ನು ಕಳೆದುಕೊಂಡ ಸುದ್ದಿಯಿಂದ ನಾನು ತೀವ್ರ ದುಃಖಿತನಾಗಿದ್ದೇನೆ. ವೀರ ಯೋಧರ ಕುಟುಂಬಗಳಿಗೆ ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಈ ದುಃಖವನ್ನು ಪದಗಳಲ್ಲಿ ವ್ಯಕ್ತಪಡಿಸುವುದು ಅಸಾಧ್ಯ. ಆದರೆ, ನಮ್ಮ ಸೈನಿಕರ ತ್ಯಾಗ ವ್ಯರ್ಥವಾಗುವುದಿಲ್ಲ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ನಾವು ಮಾರ್ಚ್ 2026ರೊಳಗೆ ನಕ್ಸಲಿಸಂ ಅನ್ನು ಭಾರತದಲ್ಲಿ ಕೊನೆಗೊಳಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Naxal Attack: ಛತ್ತೀಸ್‌ಗಢದಲ್ಲಿ ಸೈನಿಕರ ವಾಹನದ ಮೇಲೆ ನಕ್ಸಲರಿಂದ ಐಇಡಿ ಸ್ಫೋಟ; 9 ಜನ ಸಾವು
ಇಂದು ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ನಕ್ಸಲರು ಸೈನಿಕರಿದ್ದ ವಾಹನವನ್ನು ಐಇಡಿಯಿಂದ ಸ್ಫೋಟಿಸಿದ ನಂತರ ಜಿಲ್ಲಾ ರಿಸರ್ವ್ ಗಾರ್ಡ್ (ಡಿಆರ್‌ಜಿ)ನ 8 ಸೈನಿಕರು ಮತ್ತು ಓರ್ವ ಚಾಲಕ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದು ಕಳೆದ 2 ವರ್ಷಗಳಲ್ಲಿ ರಾಜ್ಯದಲ್ಲಿ ಭದ್ರತಾ ಪಡೆಗಳ ಮೇಲೆ ನಕ್ಸಲರು ನಡೆಸಿದ ಅತಿದೊಡ್ಡ ದಾಳಿ ಮತ್ತು 2025ರಲ್ಲಿ ನಡೆದ ನಕ್ಸಲರ ಮೊದಲ ದಾಳಿಯಾಗಿದೆ.
बीजापुर (छत्तीसगढ़) में IED ब्लास्ट में DRG के जवानों को खोने की सूचना से अत्यंत दु:खी हूँ। वीर जवानों के परिजनों के प्रति गहरी संवेदनाएँ व्यक्त करता हूँ। इस दुःख को शब्दों में व्यक्त कर पाना असंभव है, लेकिन मैं विश्वास दिलाता हूँ कि हमारे जवानों का बलिदान व्यर्थ नहीं जाएगा। हम…
— Amit Shah (@AmitShah) January 6, 2025
ದಾಂತೇವಾಡ ಜಿಲ್ಲಾ ಮೀಸಲು ಪಡೆಯ 8 ಯೋಧರು, ಓರ್ವ ಚಾಲಕ ಹುತಾತ್ಮರಾಗಿದ್ದಾರೆ. ಈ ಸ್ಫೋಟದಲ್ಲಿ ಕೆಲವು ಯೋಧರಿಗೆ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಿಜಾಪುರ ಜಿಲ್ಲೆಯ ಬೇದ್ರೆ-ಕುಟ್ರು ರಸ್ತೆಯಲ್ಲಿ ಸ್ಫೋಟ ಸಂಭವಿಸಿದೆ. ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಮಾವೋವಾದಿಗಳು ತಮ್ಮ ವಾಹನವನ್ನು ಸ್ಫೋಟಿಸಲು ಸುಧಾರಿತ ಸ್ಫೋಟಕ ಸಾಧನವನ್ನು (ಐಇಡಿ) ಬಳಸಿದಾಗ 8 ಸೈನಿಕರು ಮತ್ತು ಚಾಲಕ ಸಾವನ್ನಪ್ಪಿದ್ದಾರೆ. ಬಸ್ತಾರ್ ಪ್ರದೇಶದ ಕುಟ್ರುನಲ್ಲಿ ಇಂದು ಮಧ್ಯಾಹ್ನ 2.15ರ ಸುಮಾರಿಗೆ ಐಇಡಿ ಸ್ಕಾರ್ಪಿಯೋ ಎಸ್‌ಯುವಿಯನ್ನು ಸ್ಫೋಟಿಸಲಾಗಿದೆ.
ಇದನ್ನೂ ಓದಿ: ಕುದುರೆಮುಖ ಅರಣ್ಯದಲ್ಲಿ ನಕ್ಸಲ್ ನಾಯಕಿ ಸುಂದರಿ ವಾಸ: ಶರಣಾಗಿ ಮನೆಗೆ ಬಾ ಎಂದ ಸಹೋದರ
ಈ ಸೇನಾ ವಾಹನದಲ್ಲಿ 20 ಡಿಆರ್‌ಜಿ ಯೋಧರು ಪ್ರಯಾಣಿಸುತ್ತಿದ್ದರು. ಜಂಟಿ ಕಾರ್ಯಾಚರಣೆ ಬಳಿಕ ವಾಪಸಾಗುತ್ತಿದ್ದಾಗ ಐಇಡಿ ಸ್ಫೋಟ ಸಂಭವಿಸಿದೆ. ದಾಂತೇವಾಡ, ನಾರಾಯಣಪುರ್, ಬಿಜಾಪುರ್ ಜಿಲ್ಲೆಗಳಲ್ಲಿ ಮಾವೋವಾದಿ ನಕ್ಸಲರ ವಿರುದ್ಧ ನಡೆದಿದ್ದ ಜಂಟಿ ಕಾರ್ಯಾಚರಣೆ ನಡೆಯುತ್ತಿದೆ. ಇಂದು ಮುಂಜಾನೆ ಛತ್ತೀಸ್‌ಗಢದ ಅಬುಜ್ಮದ್ ಪ್ರದೇಶದಲ್ಲಿ ಭದ್ರತಾ ಪಡೆಗಳು ಮಾವೋವಾದಿಗಳ ಮೇಲೆ ದಾಳಿ ಮಾಡಿ ಇಬ್ಬರು ಮಹಿಳೆಯರು ಸೇರಿದಂತೆ ಐವರು ಬಂಡುಕೋರರನ್ನು ಹತ್ಯೆಗೈದಿದ್ದಾರೆ. ಸ್ವಯಂಚಾಲಿತ ಶಸ್ತ್ರಾಸ್ತ್ರಗಳಾದ ಎಕೆ 47 ಮತ್ತು ಸೆಲ್ಫ್ ಲೋಡ್ ರೈಫಲ್ಸ್ ವಶಪಡಿಸಿಕೊಳ್ಳಲಾಗಿದೆ. ಬಂಡುಕೋರರು ಅವರನ್ನು ಗುರಿಯಾಗಿಸಿಕೊಂಡಾಗ ಯೋಧರು ಇದೇ ಕಾರ್ಯಾಚರಣೆ ಮುಗಿಸಿ ಹಿಂತಿರುಗುತ್ತಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ