ಹೊಸ ಸಂಸತ್ ಭವನದ ಮಹಾದ್ವಾರದಲ್ಲಿ ಪ್ರಧಾನಿ ಮೋದಿಯವರ ಡಿಗ್ರಿ ಪ್ರದರ್ಶಿಸಿ: ಸಂಜಯ್ ರಾವುತ್
ಕೆಲವರು ಪ್ರಧಾನ ಮಂತ್ರಿಯವರ ಡಿಗ್ರಿಯನ್ನು ನಕಲಿ ಎಂದು ಕರೆಯುತ್ತಿದ್ದಾರೆ. ಸಂಪೂರ್ಣ ರಾಜಕೀಯ ವಿಜ್ಞಾನದ (Entire Political Science) ಪದವಿ ಎಂಬುದು ಐತಿಹಾಸಿಕ ಮತ್ತು ಕ್ರಾಂತಿಕಾರಿ ಎಂದು ನಾನು ಪ್ರಾಮಾಣಿಕವಾಗಿ ನಂಬುತ್ತೇನೆ. ಆದ್ದರಿಂದ ಅದನ್ನು ನಮ್ಮ ಹೊಸ ಸಂಸತ್ತಿನ ಮಹಾದ್ವಾರದಲ್ಲಿ ಪ್ರದರ್ಶಿಸಬೇಕು
ಹೊಸ ಸಂಸತ್ ಭವನದ ಮಹಾದ್ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಶೈಕ್ಷಣಿಕ ಪದವಿಯನ್ನು ಪ್ರದರ್ಶಿಸಬೇಕು ಎಂದು ಶಿವಸೇನಾ (UBT) ಹೇಳಿದೆ. ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವಸೇನಾ (ಯುಬಿಟಿ) ಸಂಸದ ಮತ್ತು ಮುಖ್ಯ ವಕ್ತಾರ ಸಂಜಯ್ ರಾವುತ್ (Sanjay Raut), ಜನರ ಮನಸ್ಸಿನಲ್ಲಿ ಅನುಮಾನಗಳನ್ನು ಸೃಷ್ಟಿಸುವ ಮೂಲಕ ಪ್ರಧಾನಿ ಪದವಿಯನ್ನು ‘ರಹಸ್ಯ’ ಎಂದು ಏಕೆ ಕಾಪಾಡಲಾಗುತ್ತಿದೆ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಕೆಲವರು ಪ್ರಧಾನ ಮಂತ್ರಿಯವರ ಡಿಗ್ರಿಯನ್ನು ನಕಲಿ ಎಂದು ಕರೆಯುತ್ತಿದ್ದಾರೆ. ಸಂಪೂರ್ಣ ರಾಜಕೀಯ ವಿಜ್ಞಾನದ (Entire Political Science) ಪದವಿ ಎಂಬುದು ಐತಿಹಾಸಿಕ ಮತ್ತು ಕ್ರಾಂತಿಕಾರಿ ಎಂದು ನಾನು ಪ್ರಾಮಾಣಿಕವಾಗಿ ನಂಬುತ್ತೇನೆ. ಆದ್ದರಿಂದ ಅದನ್ನು ನಮ್ಮ ಹೊಸ ಸಂಸತ್ತಿನ ಮಹಾದ್ವಾರದಲ್ಲಿ ಪ್ರದರ್ಶಿಸಬೇಕು. ಇದರಿಂದ ಜನರು ಅದರ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕುವುದನ್ನು ನಿಲ್ಲಿಸಬೇಕು ಎಂದಿದ್ದಾರೆ ರಾವುತ್.
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಪ್ರಧಾನಿ ಪದವಿಯ ಬಗ್ಗೆ ವಿವರಗಳನ್ನು ಕೇಳಿದಾಗ, ಅವರು ಅದನ್ನು ನಿರಾಕರಿಸಿದ್ದು ರೂ 25,000 ದಂಡವನ್ನು ಸಹ ವಿಧಿಸಿದರು ಎಂದು ಸೇನಾ (ಯುಬಿಟಿ) ನಾಯಕ ಹೇಳಿದರು. ಪ್ರಧಾನಿಯವರ ಡಿಗ್ರಿ ಕೇಳುವಾಗ ಮುಚ್ಚಿಡಲು ಏನಿದೆ? ಈಗ ಮೋದಿ ಅವರೇ ಮುಂದೆ ಬಂದು ಅವರ ಶೈಕ್ಷಣಿಕ ಪದವಿಯ ಊಹಾಪೋಹಗಳನ್ನು ತೆರವುಗೊಳಿಸಬೇಕು ಎಂದಿದ್ದಾರೆ ರಾವುತ್. ಪ್ರಧಾನಿ ಡಿಗ್ರಿ ‘ನಕಲಿ’ ಎಂದು ಪ್ರತಿಪಾದಿಸಿರುವ ಪಕ್ಷದ ಪತ್ರಿಕೆಗಳು, ಸಾಮ್ನಾ ಮತ್ತು ದೋಪಹರ್ ಕಾ ಸಾಮ್ನಾ ಸಂಪಾದಕೀಯವಾಗಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದು, ರಾಜಕೀಯ ವಲಯದಲ್ಲಿ ಡಿಗ್ರಿವಿಷಯ ಮತ್ತೊಮ್ಮೆ ಪ್ರಸ್ತಾಪವಾಗುತ್ತಿದೆ.
ಭಾನುವಾರ ರಾತ್ರಿ ಶಿವಸೇನಾ (ಯುಬಿಟಿ) ಅಧ್ಯಕ್ಷ ಮತ್ತು ಮಾಜಿ ಸಿಎಂ ಉದ್ಧವ್ ಠಾಕ್ರೆ ಅವರು ಛತ್ರಪತಿ ಸಂಭಾಜಿನಗರದ ಮಹಾ ವಿಕಾಸ್ ಅಘಾಡಿಯಲ್ಲಿ (ಎಂವಿಎ) ವಿರುದ್ಧ ಗುಡುಗಿದ್ದು ರಾಜ್ಯ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರಿಗೆ ಇತ್ತೀಚೆಗೆ ನೀಡಲಾದ ಡಾಕ್ಟರೇಟ್ ವಿಚಾರವನ್ನೂ ಎತ್ತಿದ್ದಾರೆ.
ಇದನ್ನೂ ಓದಿ: Rahul Gandhi: ಮೋದಿ ಉಪನಾಮ ಹೇಳಿಕೆ; ರಾಹುಲ್ ಗಾಂಧಿ ಮೇಲ್ಮನವಿ ವಿಚಾರಣೆಗೆ ಸಮ್ಮತಿ, ಜಾಮೀನು ವಿಸ್ತರಣೆ
ಕೆಲವರು ಪದವಿಗಳನ್ನು ಪಡೆಯುತ್ತಾರೆ, ಇತರರು ಅದನ್ನು ಗಳಿಸುತ್ತಾರೆ. ಈಗ ಪಿಎಚ್‌ಡಿಗಳು ಸಹ ಮಾರಾಟಕ್ಕೆ ಬಂದಿವೆ ಎಂದು ತೋರುತ್ತದೆ.ಅದನ್ನು ಅಬ್ಬರಿಸುತ್ತಿರುವವರು ಮತ್ತು ಅದನ್ನು ಮರೆಮಾಡುವವರು ಇನ್ನೊಬ್ಬರು ಮರೆಮಾಚಲು ಏನಿದೆ, ಪದವಿಯನ್ನು ನೀಡುವ ಕಾಲೇಜು ತಮ್ಮ ಗೌರವಾನ್ವಿತ ಹಳೆಯ ವಿದ್ಯಾರ್ಥಿಗಳ ಬಗ್ಗೆ ಹೆಮ್ಮೆ ಪಡಬೇಕು ಆದರೆ ಬದಲಿಗೆ, ಪ್ರಶ್ನಿಸುವವರಿಗೆ (ಪ್ರಧಾನಿ ಪದವಿ) ಮತ್ತು ಅದನ್ನು ನೋಡಲು ಕೇಳುವವರಿಗೆ ದಂಡ ವಿಧಿಸಲಾಗುತ್ತದೆ ಎಂದು ಠಾಕ್ರೆ ಹೇಳಿದರು. ಬಿಜೆಪಿಯ ಎಷ್ಟು ನಾಯಕರು ಸಹ ಇಂಥಾ ಸಂಶಯಾಸ್ಪದ ಪದವಿಗಳನ್ನು ಪಡೆದುಕೊಂಡಿದ್ದಾರೆ ಎಂದು ಪ್ರಶ್ನಿಸಿದ ರಾವುತ್,ದೇಶಕ್ಕೆ ಗಂಭೀರ ಕಾಳಜಿಯ ವಿಷಯ ಎಂದಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ