AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿ H3N2 ವೈರಸ್, ಇದರಿಂದ ಉಂಟಾಗುವ ದೀರ್ಘಕಾಲದ ಪರಿಣಾಮಗಳು ಯಾವುವು? ಇಲ್ಲಿವೆ ಸಲಹೆಗಳು

ಕೋವಿಡ್-19 ನಂತೆಯೇ, ಎಚ್3ಎನ್2 (H3N2) ಸೋಂಕಿಗೆ ಒಳಗಾದ ರೋಗಿಗಳು ಅದರಿಂದ ಹಲವು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಅವು ಯಾವುದು?ಮುಂದೆ ಹೆಚ್ಚಿನ ಚೇತರಿಕೆಗೆ ವೇಗಕ್ಕೆ ಏನು ಮಾಡಬಹುದು ಎಂಬುದಕ್ಕೆ ಕೆಲವು ಸಲಹೆ ಇಲ್ಲಿದೆ.

ಭಾರತದಲ್ಲಿ H3N2 ವೈರಸ್, ಇದರಿಂದ ಉಂಟಾಗುವ ದೀರ್ಘಕಾಲದ ಪರಿಣಾಮಗಳು ಯಾವುವು? ಇಲ್ಲಿವೆ ಸಲಹೆಗಳು
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on:Apr 03, 2023 | 4:36 PM

Share

ಇತ್ತೀಚಿನ ದಿನಗಳಲ್ಲಿ ಎಚ್3ಎನ್2 (H3N2) ವೈರಸ್ ಹರಡುವಿಕೆಯು ಹೆಚ್ಚಾಗಿದ್ದು ದೀರ್ಘಕಾಲದ ವರೆಗೆ ಇರುವ ರೋಗಲಕ್ಷಣಗಳಿಂದಾಗಿ ಜನರು ಕೋವಿಡ್ ಇರಬಹುದಾ ಎಂದು ಗೊಂದಲಕ್ಕೊಳಗಾಗಿದ್ದಾರೆ. ಎಚ್3ಎನ್2 ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಇದರೊಂದಿಗೆ, COVID-19 ಪ್ರಕರಣಗಳು ಸಹ ಹೆಚ್ಚುತ್ತಿವೆ ಮತ್ತು ಕೇಂದ್ರ-ರಾಜ್ಯ ಸರ್ಕಾರಗಳು ಸಮಾನವಾಗಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿವೆ. ಈ ಬಾರಿಯ ಹವಾಮಾನ ಬದಲಾವಣೆಯಿಂದಾಗಿ ಒಂದು ದಿನ ಚಳಿ, ಒಂದು ದಿನ ಬಿಸಿಲು. ಈ ಬದಲಾವಣೆಯಿಂದಾಗಿ ಜ್ವರ, ಸೋಂಕಿನ ಪ್ರಕರಣಗ ಳು ಆರಂಭವಾಗಿದೆ. ಈ ಜ್ವರ ಮೂಲತಃ ಇನ್ಫ್ಲುಯೆನ್ಸ ವೈರಸ್‌ನಿಂದ ಉಂಟಾಗುವ ಉಸಿರಾಟದ ಕಾಯಿಲೆಯಾಗಿದೆ. ಸಾಮಾನ್ಯವಾಗಿ, ಟೈಪ್ ಎ ಮತ್ತು ಬಿ ಕಾಲೋಚಿತ ಸಾಂಕ್ರಾಮಿಕ ರೋಗ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತವೆ. ಅಲ್ಲದೆ ಕೆಲವು ರೋಗಿಗಳು H3N2 ವೈರಸ್ ಸೋಂಕಿಗೆ ಒಳಗಾಗಿ ಆ ಬಳಿಕ ಕಾಣಸಿಗುವ ಪರಿಣಾಮಗಳನ್ನು ವರದಿ ಮಾಡಲು ಪ್ರಾರಂಭಿಸಿದ್ದಾರೆ.

ಸಾಮಾನ್ಯವಾಗಿ ಎಚ್3ಎನ್2 ವೈರಸ್‌ನಗೆ ಇಂತಿಷ್ಟೇ ಅವಧಿ ಎಂದು ಇಲ್ಲ. ಆದರೆ ವೈದ್ಯರ ಪ್ರಕಾರ, ಇದು ಹೆಚ್ಚಾಗಿ 5 ರಿಂದ 15 ದಿನಗಳವರೆಗೆ ಇರುತ್ತದೆ. ಹಾಗಾಗಿ ವೈರಸ್‌ನ ಪರಿಣಾಮವು ವ್ಯಕ್ತಿಯ ಮೇಲೆ ಅವಲಂಬಿತವಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ದೇಹದಲ್ಲಿ ಯಾವ ಪ್ರಮಾಣದಲ್ಲಿ ರಕ್ಷಣಾ ಸಾಮರ್ಥ್ಯವಿದೇ ಎನ್ನುವುದು ಮುಖ್ಯವಾಗಿರುತ್ತದೆ. ಜ್ವರವು ಮೂರು ದಿನಗಳ ನಂತರ ಹೋಗಬಹುದು. ಆದರೆ ಕೆಮ್ಮು ಮೂರು ವಾರಗಳವರೆಗೆ ಇರುತ್ತದೆ ಎಂದು IMAಯ ಆಂಟಿಮೈಕ್ರೊಬಿಯಲ್ ರೆಸಿಸ್ಟೆನ್ಸ್ ಸ್ಥಾಯಿ ಸಮಿತಿ ಹೇಳಿದೆ.

ಕೆಲವು ರೋಗಿಗಳು ಹೆಚ್ಚಿನ ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದು ವರದಿಯಾಗಿದ್ದು, ಅವುಗಳಲ್ಲಿ ಮುಖ್ಯವಾಗಿ ಉಸಿರಾಟದ ಸಮಸ್ಯೆ ಹೆಚ್ಚಾಗಿವೆ. ಅದರ ಹೊರತಾಗಿ ಇನ್ನು ಕೆಲವು ಸಮಸ್ಯೆ ಕಂಡುಬಂದಿದೆ. ಅವು ಯಾವುದೆಂದರೆ,

-ಉಸಿರಾಟದ ತೊಂದರೆ

-ಕೀಲು ನೋವು

-ಅತಿಯಾದ ಕೆಮ್ಮು

-ಆಯಾಸ

-ಮಲಗಲು ತೊಂದರೆಯಾಗುವುದು

-ಆಸ್ತಮಾ ಮತ್ತು ಬ್ರಾಂಕೈಟಿಸ್ ಇರುವ ಜನರು ಅಲರ್ಜಿನ್‌ಗಳಿಂದ ಹೆಚ್ಚು ಬಳಲುತ್ತಿದ್ದಾರೆ.

ಇದನ್ನೂ ಓದಿ: H3N2 In India: ಇನ್ಫ್ಲುಯೆನ್ಸ ಎ ವೈರಸ್ ಮಾರಕವೇ? ಸೋಂಕಿನ ಬಗೆಗಿನ ಸತ್ಯ ಮತ್ತು ಮಿಥ್ಯ

H3N2 ವೈರಸ್: ರೋಗಲಕ್ಷಣಗಳು

-ಚಳಿ

-ಕೆಮ್ಮುವುದು

-ಜ್ವರ

-ವಾಕರಿಕೆ

-ವಾಂತಿ

-ಗಂಟಲು ನೋವು

-ಸ್ನಾಯುಗಳು ಮತ್ತು ದೇಹದಲ್ಲಿ ನೋವು

-ಅತಿಸಾರ

-ಸೀನುವಿಕೆ

ಭಾರತದಲ್ಲಿ H3N2 ವೈರಸ್ನ ಚೇತರಿಕೆಗೆ ಸಲಹೆಗಳು:

-ಆದಷ್ಟು ವಿಶ್ರಾಂತಿ ತೆಗೆದುಕೊಳ್ಳಿ ಏಕೆಂದರೆ ಇದು ದೇಹಕ್ಕೆ ಸೋಂಕಿನ ವಿರುದ್ಧ ಹೋರಾಡುವ ಶಕ್ತಿಯನ್ನು ನೀಡುತ್ತದೆ.

– ಹೆಚ್ಚು ಹೆಚ್ಚು  ನೀರು ಕುಡಿಯಿರಿ

-ಆರೋಗ್ಯಕರ ಆಹಾರವನ್ನು ಸೇವಿಸಿ – ಜೀವಸತ್ವಗಳು ಮತ್ತು ಖನಿಜಗಳು, ಪ್ರೋಟೀನ್ಗಳು ಸಮೃದ್ಧವಾಗಿರುವ ಆಹಾರವನ್ನು ತೆಗೆದುಕೊಳ್ಳಿ.

-ಸಂಸ್ಕರಿಸಿದ ಮತ್ತು ಸಕ್ಕರೆಯ ಉತ್ಪನ್ನಗಳನ್ನು ಆದಷ್ಟು ತಪ್ಪಿಸಿ ಏಕೆಂದರೆ ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚು ದುರ್ಬಲಗೊಳಿಸುತ್ತದೆ.

-ಆಯಾಸವು ರೋಗಲಕ್ಷಣಗಳನ್ನು ಇನ್ನಷ್ಟು ಉಲ್ಬಣಗೊಳಿಸಬಹುದಾದ್ದರಿಂದ ಯಾವುದೇ ಕೆಲಸದಲ್ಲಿ ತೊಡಗಿಸಿಕೊಳ್ಳುವುದನ್ನು ತಪ್ಪಿಸಿ.

-ಆಗಾಗ ಕೈಗಳನ್ನು ತೊಳೆಯುತ್ತಲೇ ಇರಿ. ಆದಷ್ಟು ಶುಚಿತ್ವ ಕಾಪಾಡಿಕೊಳ್ಳಿ. ಆರೋಗ್ಯವಾಗಿರಿ, ಸುರಕ್ಷಿತವಾಗಿರಿ

Published On - 4:17 pm, Mon, 3 April 23

Follow Us
ಸರ್ಕಾರದ 100 ದಿನದ ಕಾರ್ಯಕ್ರಮಕ್ಕೆ ಬಂದ ಸಿದ್ದರಾಮಯ್ಯಗೆ ವಿಶೇಷ ಸ್ವಾಗತ
ಸರ್ಕಾರದ 100 ದಿನದ ಕಾರ್ಯಕ್ರಮಕ್ಕೆ ಬಂದ ಸಿದ್ದರಾಮಯ್ಯಗೆ ವಿಶೇಷ ಸ್ವಾಗತ
KSRTC ಬಸ್‌ನ ಸ್ಟೇರಿಂಗ್ ಕಟ್ ಆಗಿ ಪಲ್ಟಿ
KSRTC ಬಸ್‌ನ ಸ್ಟೇರಿಂಗ್ ಕಟ್ ಆಗಿ ಪಲ್ಟಿ
ಮುಂಗಾರಿನಲ್ಲೇ ಹೀಟ್ ವೇವ್! ಬೆಂಗಳೂರಿನಲ್ಲಿ ದಿನೇದಿನೆ ಹೆಚ್ಚಾಗುತ್ತಿದೆ ತಾಪ
ಮುಂಗಾರಿನಲ್ಲೇ ಹೀಟ್ ವೇವ್! ಬೆಂಗಳೂರಿನಲ್ಲಿ ದಿನೇದಿನೆ ಹೆಚ್ಚಾಗುತ್ತಿದೆ ತಾಪ
ಕಲಬುರಗಿ ಕೇಂದ್ರ ಕಾರಾಗೃಹದ ಮೇಲೆ ಪೊಲೀಸರ ದಾಳಿ: ಕೈದಿಯಿಂದ ಮೊಬೈಲ್​​ ವಶ
ಕಲಬುರಗಿ ಕೇಂದ್ರ ಕಾರಾಗೃಹದ ಮೇಲೆ ಪೊಲೀಸರ ದಾಳಿ: ಕೈದಿಯಿಂದ ಮೊಬೈಲ್​​ ವಶ
ಮಂಡ್ಯದ ವಸತಿಶಾಲೆಯಲ್ಲಿ ಮಕ್ಕಳಿಗೆ ಫುಡ್ ಪಾಯಿಸನ್
ಮಂಡ್ಯದ ವಸತಿಶಾಲೆಯಲ್ಲಿ ಮಕ್ಕಳಿಗೆ ಫುಡ್ ಪಾಯಿಸನ್
‘ಜೈಲಿನಲ್ಲಿ ಖುದ್ದು ಹಾಜರಿ ಬೇಕು’; ಹೈಕೋರ್ಟ್​​ನಲ್ಲಿ ದರ್ಶನ್ ಅರ್ಜಿ
‘ಜೈಲಿನಲ್ಲಿ ಖುದ್ದು ಹಾಜರಿ ಬೇಕು’; ಹೈಕೋರ್ಟ್​​ನಲ್ಲಿ ದರ್ಶನ್ ಅರ್ಜಿ
ಅಸಲಿ ಮುಖ ತೋರಿಸೋಕೆ ಆರಂಭಿಸಿದ ಸೌಂದರ್ಯಾ ಶೆಟ್ಟಿ; ಅಣಕಿಸಿದ ವಿಡಿಯೋ ವೈರಲ್
ಅಸಲಿ ಮುಖ ತೋರಿಸೋಕೆ ಆರಂಭಿಸಿದ ಸೌಂದರ್ಯಾ ಶೆಟ್ಟಿ; ಅಣಕಿಸಿದ ವಿಡಿಯೋ ವೈರಲ್
ಡಿಕೆಶಿ ಸರ್ಕಾರಕ್ಕೆ 100 ದಿನ: ಕೆಆರ್​ಎಸ್ ಡ್ಯಾಂಗೆ ಕಲರ್​ಫುಲ್​ ​ಲೈಟಿಂಗ್
ಡಿಕೆಶಿ ಸರ್ಕಾರಕ್ಕೆ 100 ದಿನ: ಕೆಆರ್​ಎಸ್ ಡ್ಯಾಂಗೆ ಕಲರ್​ಫುಲ್​ ​ಲೈಟಿಂಗ್
ಸತೀಶ್ ಜಾರಕಿಹೊಳಿ ನಿವಾಸದಲ್ಲಿ ತಡರಾತ್ರಿ 2 ಗಂಟೆವರೆಗೆ ಇಡಿ ಶೋಧ
ಸತೀಶ್ ಜಾರಕಿಹೊಳಿ ನಿವಾಸದಲ್ಲಿ ತಡರಾತ್ರಿ 2 ಗಂಟೆವರೆಗೆ ಇಡಿ ಶೋಧ
ಗುರುಗಳ ಲಹರಿ ಇರುವ ಶುಭ ದಿನ: ಸೆಪ್ಟೆಂಬರ್ 10 ರ ರಾಶಿ ಭವಿಷ್ಯ
ಗುರುಗಳ ಲಹರಿ ಇರುವ ಶುಭ ದಿನ: ಸೆಪ್ಟೆಂಬರ್ 10 ರ ರಾಶಿ ಭವಿಷ್ಯ