ಇಡಿ ವಿಚಾರಣೆ ವೇಳೆ ಡಿಕೆ ಶಿವಕುಮಾರ್‌ಗೆ ಕೈಕೊಟ್ಟ ಆರೋಗ್ಯ, ವೈದ್ಯರ ನೆರವು
ದೆಹಲಿಯ ED ಕಚೇರಿಯಲ್ಲಿ ವಿಚಾರಣೆ ಎದುರಿಸಲು ಬಂದಿದ್ದ ಡಿಕೆ ಶಿವಕುಮಾರ್ ಅವರಿಗೆ ಅನಾರೋಗ್ಯ ಸಮಸ್ಯೆ ಎದುರಾಗಿದೆ. ಈ ಹಿನ್ನೆಲೆ ಡಿಕೆ ಶಿವಕುಮಾರ್ ವಿಚಾರಣೆ ವೇಳೆ ವೈದ್ಯರ ನೆರವು ಕೋರಿದ್ದಾರೆ.
ದೆಹಲಿ: ಅಕ್ರಮ ಹಣ ವರ್ಗಾವಣೆ ವಿಚಾರವಾಗಿ ಸಮನ್ಸ್ ನೀಡಿದ್ದ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್(DK Shivakumar) ಇಡಿ ವಿಚಾರಣೆಗೆ ಹಾಜರಾಗಿದ್ದಾರೆ. ದೆಹಲಿಯ ವಿದ್ಯುತ್ ಲೇನ್ನಲ್ಲಿರುವ ED ಕಚೇರಿಗೆ ಡಿಕೆ ಶಿವಕುಮಾರ್ ಆಗಮಿಸಿದ್ದು ಅವರಿಗೆ ಆರೋಗ್ಯ ಸಮಸ್ಯೆ ಕಾಡಿದೆ.
ದೆಹಲಿಯ ED ಕಚೇರಿಯಲ್ಲಿ ವಿಚಾರಣೆ ಎದುರಿಸಲು ಬಂದಿದ್ದ ಡಿಕೆ ಶಿವಕುಮಾರ್ ಅವರಿಗೆ ಅನಾರೋಗ್ಯ ಸಮಸ್ಯೆ ಎದುರಾಗಿದೆ. ಈ ಹಿನ್ನೆಲೆ ಡಿಕೆ ಶಿವಕುಮಾರ್ ವಿಚಾರಣೆ ವೇಳೆ ವೈದ್ಯರ ನೆರವು ಕೋರಿದ್ದಾರೆ. ಅಲ್ಲದೆ ವಿಚಾರಣೆ ವೇಳೆಯೂ ಡಿಕೆಶಿ ಸಂಬಂಧಿ, ಕುಣಿಗಲ್ ಶಾಸಕ ಡಾ.ರಂಗನಾಥ್ ಜೊತೆ ಇದ್ದರು.
#WATCH | Karnataka Congress chief DK Shivakumar reaches ED office in Delhi
He had tweeted on September 15th that he has been summoned by ED in Delhi even as the Assembly session is underway in Karnataka. pic.twitter.com/GaJu2jE4Ao
— ANI (@ANI) September 19, 2022
‘ಭಾರತ್ ಜೋಡೊ ಯಾತ್ರೆ’ ತಯಾರಿಯಲ್ಲಿರುವ ಡಿಕೆಶಿಗೆ ಇಡಿ ಶಾಕ್ ಕೊಟ್ಟಿದೆ. ವಿಧಾನಸಭೆ ಚುನಾವಣೆ ಸನಿಹವಾಗುತ್ತಿರುವ ಹೊತ್ತಲ್ಲೆ ಇಡಿ ಸಮನ್ಸ್ ನೀಡಿದೆ. ಅಕ್ರಮ ಹಣ ವರ್ಗಾವಣೆ ವಿಚಾರವಾಗಿ ಡಿಕೆ ಶಿವಕುಮಾರ್‌ಗೆ ಇಡಿ ಸಮನ್ಸ್ ಜಾರಿ ಮಾಡಲಾಗಿದ್ದು ಇಂದು ವಿಚಾರಣೆಗೆ ಡಿಕೆಶಿ ಹಾಜರಾಗಿದ್ದಾರೆ. ದೆಹಲಿಯ ವಿದ್ಯುತ್ ಲೇನ್ ನಲ್ಲಿರುವ ಇಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ.
ಈಗಾಗಲೇ ಒಂದು ಪ್ರಕರಣ ಇಡಿ ತನಿಖೆ ನಡೆಸಿದ್ದು ಅಧಿಕಾರಿಗಳು ಇಡಿ ವಿಶೇಷ ನ್ಯಾಯಲಯಕ್ಕೆ ಜಾರ್ಜ್ ಶೀಟ್ ಸಲ್ಲಿಸಿದ್ದಾರೆ. ಈ ಜಾರ್ಜ್ ಶೀಟ್ ಬೆನ್ನಲೆ ಡಿಕೆಶಿ ರೆಗ್ಯೂಲರ್ ಬೆಲ್ ಪಡೆದುಕೊಂಡಿದ್ದಾರೆ. ಈ ನಡುವೆ ಮತ್ತೊಮ್ಮೆ ಅಧಿಕಾರಿಗಳಿಂದ ಬುಲಾವ್ ಬಂದಿರುವುದರಿಂದ ಯಾವ ಪ್ರಕರಣಕ್ಕೆ ಸಮನ್ಸ್ ನೀಡಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ.
ಕಾಂಗ್ರೆಸ್ ಕಟ್ಟಿಹಾಕಲು ಪ್ರಯತ್ನ ಆಗ್ತಿದೆ, ಅದು ಸಾಧ್ಯವಾಗಲ್ಲ
ಇಡಿ ಅಧಿಕಾರಿಗಳಿಂದ ಡಿಕೆ ಶಿವಕುಮಾರ್ ವಿಚಾರಣೆ ವಿಚಾರಕ್ಕೆ ಸಂಬಂಧಿಸಿ ನವದೆಹಲಿಯಲ್ಲಿ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಪ್ರತಿಕ್ರಿಯೆ ನೀಡಿದ್ರು. ಕಳೆದ 2 ವರ್ಷದ ಹಿಂದೆ ಸಂಪೂರ್ಣ ಆಸ್ತಿ ವಿವರ ನೀಡಲಾಗಿದೆ. ಡಿಕೆಶಿ ಕುಟುಂಬದ ಎಲ್ಲ ಸದಸ್ಯರ ಮಾಹಿತಿ ನೀಡಲಾಗಿದೆ. ಇದು ರಾಜಕೀಯ ಪ್ರಚೋದನೆಯಿಂದ ದಾಖಲಿಸಿದ ದೂರು. ಮತ್ತೊಮ್ಮೆ ದಾಖಲೆ ಕೇಳಿದ್ದಾರೆ, ನೀಡಲಿದ್ದೇವೆ. ಕೇಂದ್ರದಿಂದ ಸಾಂವಿಧಾನಿಕ ಸಂಸ್ಥೆಗಳ ದುರ್ಬಳಕೆಯಾಗುತ್ತಿದೆ. ಕಾಂಗ್ರೆಸ್ ಕಟ್ಟಿಹಾಕಲು ಪ್ರಯತ್ನ ಆಗ್ತಿದೆ, ಅದು ಸಾಧ್ಯವಾಗಲ್ಲ. ಅರೆಸ್ಟ್ ಮಾಡಲಿ, ಜೈಲಿಗೆ ಹಾಕಲಿ, ನಾವು ಹೆದರಲ್ಲ. ಈಗಾಗಲೇ ಸೋನಿಯಾ, ರಾಹುಲ್ಗೂ ಕಿರುಕುಳ ನೀಡಿದ್ದಾರೆ. ಇಡಿ ಬಳಸಿಕೊಂಡು 240 ಶಾಸಕರನ್ನು ಪಕ್ಷಾಂತರ ಮಾಡಿದ್ದಾರೆ. ಜನಾಭಿಪ್ರಾಯ ಮೇಲೆ ವಿಪಕ್ಷ ಮಣಿಸಲು ಬಿಜೆಪಿಗೆ ಸಾಧ್ಯವಾಗ್ತಿಲ್ಲ. ಹೀಗಾಗಿ ಇಡಿ, ಸಿಬಿಐಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇಡಿ, ಸಿಬಿಐ ಬಿಜೆಪಿಯ ಡ್ರಾಮಾ ಕಂಪನಿ ಎಂದು ಡಿಕೆ ಸುರೇಶ್ ವಾಗ್ದಾಳಿ ನಡೆಸಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:43 pm, Mon, 19 September 22