ಕೈಯಲ್ಲಿ ಹರಿತವಾದ ಆಯುಧ ಹಿಡಿದು, ಸ್ವಧರ್ಮದ ಘೋಷಣೆ ಕೂಗುತ್ತ ಗೋರಖಪುರದ ದೇಗುಲಕ್ಕೆ ನುಗ್ಗಲು ಯತ್ನಿಸಿದ್ದ ಅಹ್ಮದ್ ಮುರ್ತಾಜಾನನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಆತನನ್ನು ವಿಚಾರಣೆ ನಡೆಸುತ್ತಿರುವ ಆ್ಯಂಟಿ ಟೆರರಿಸಂ ಸ್ಕ್ವಾಡ್ ಮಂಗಳವಾರ ಆತನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲು ಗೋರಖ್ಪುರದ ಸಾದರ್ ಆಸ್ಪತ್ರೆಗೆ ಕರೆದೊಯ್ದಿತ್ತು. ಆತನ ತಪಾಸಣೆಯನ್ನು ಡಾ. ಜೆ.ಎಸ್. ಪಿ.ಸಿಂಗ್ ಮಾಡಿದ್ದಾರೆ. ಆದರೆ ಆರೋಪಿಯ ಮಾನಸಿಕ ಆರೋಗ್ಯದ ಬಗ್ಗೆ ಯಾವುದೇ ರೀತಿಯ ಹೇಳಿಕೆ ನೀಡಲು ಅವರು ನಿರಾಕರಿಸಿದ್ದಾರೆ.
ಅಹ್ಮದ್ ಮುರ್ತಾಜಾ ಕೈ ಮೇಲೆ ಗಾಯವಾಗಿದ್ದು ಬಿಟ್ಟರೆ, ಬೇರೆನೂ ಸಮಸ್ಯೆ ಆಗಿಲ್ಲ. ಆ ಗಾಯಕ್ಕೆ ಈಗಾಗಲೇ ಚಿಕಿತ್ಸೆ ನೀಡಲಾಗಿದೆ. ಅದರ ಹೊರತಾಗಿ ಬೇರೇನೂ ಸಮಸ್ಯೆ ಆತನಿಗೆ ಆಗಿಲ್ಲ. ಕೈಗೆ ಎಕ್ಸ್ರೇಯನ್ನೂ ಮಾಡಲಾಗಿದೆ. ಆತನಿಗೆ ಆಗಿದ್ದು ಅಂಥ ದೊಡ್ಡ ಗಾಯವಲ್ಲ ಎಂದು ಹೇಳಿರುವ ವೈದ್ಯರು ಮುರ್ತಾಜಾ ಮಾನಸಿ ಆರೋಗ್ಯದ ಬಗ್ಗೆ ಜಾಸ್ತಿ ಏನೂ ಹೇಳಲಿಲ್ಲ. ಈ ಅಹ್ಮದ್ ಮುರ್ತಾಜಾ 29ವರ್ಷದವ. ಏಪ್ರಿಲ್ 3ರ ಸಂಜೆ 7ಗಂಟೆ ಹೊತ್ತಿಗೆ ಗೋರಖ್ಪುರ ದೇವಾಲಯದ ಒಳಗೆ ನುಗ್ಗುವಾಗ ತನ್ನ ಧರ್ಮಕ್ಕೆ ಸಂಬಂಧಪಟ್ಟ ಘೋಷಣೆಗಳನ್ನು ಕೂಗಿದ್ದ. ಬಳಿಕ ಸುತ್ತಲೂ ಇದ್ದ ಜನರೇ ಆತನನ್ನು ತಡೆದು, ಓಡಿಸಿದ್ದಾರೆ. ಈ ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟೆ ವೈರಲ್ ಆಗಿತ್ತು.. ಈತ ಕೈಯಲ್ಲಿ ಕತ್ತಿಯಂಥ ಹರಿತವಾದ ಆಯುಧ ಹಿಡಿದು, ದೊಡ್ಡದಾಗಿ ಕೂಗುತ್ತ ದೇಗುಲದೆಡೆಗೆ ಬರುವುದು ವಿಡಿಯೋದಲ್ಲಿ ಕಾಣಿಸುತ್ತದೆ. ಹಾಗೇ ಅಡ್ಡ ಬಂದ ಪೊಲೀಸರ ಮೇಲೆಯೂ ಹಲ್ಲೆ ನಡೆಸಿದ್ದ.
ಆತನನ್ನು ಪೊಲೀಸರು ಬಂಧಿಸಿದ್ದ ಬೆನ್ನಲ್ಲೇ ತಂದೆ ಪ್ರತಿಕ್ರಿಯೆ ನೀಡಿ, ಮುರ್ತಾಜಾ ಮಾನಸಿಕವಾಗಿ ಅಸ್ವಸ್ಥ. ಹೀಗಾಗಿ ಅಪರಾಧ ಮಾಡುವ ಉದ್ದೇಶದಿಂದ ಆತ ಹೀಗೆ ಮಾಡಿದ್ದಲ್ಲ. ಆತನೇನು ಮಾಡುತ್ತಿದ್ದಾನೆ ಎಂಬುದು ಅವನಿಗೇ ಗೊತ್ತಿಲ್ಲ. ಹಾಗಾಗಿ ಇದನ್ನು ಅಪರಾಧವೆಂದು ಪರಿಗಣಿಸಬಾರದು ಎಂದು ಹೇಳಿದ್ದರು. ಆದರೆ ತಾಪಸಣೆ ಮಾಡಿದ ವೈದ್ಯ, ಜೆ.ಎಸ್.ಪಿ.ಸಿಂಗ್, ಮುರ್ತಾಜಾ ಮಾನಸಿ ಅಸ್ವಸ್ಥ ಎಂಬುದನ್ನು ನಿಶ್ಚಯವಾಗಿ ಹೇಳಲು ನಮಗೆ ಪುರಾವೆಗಳು ಸಿಗುತ್ತಿಲ್ಲ ಎಂದು ಹೇಳಿದ್ದಾರೆ. ಅಷ್ಟು ಬಿಟ್ಟರೆ ಹೆಚ್ಚೇನೂ ವಿವರಣೆ ಕೊಟ್ಟಿಲ್ಲ.
ಏಪ್ರಿಲ್ 3ರಂದು ಸಂಜೆ ಈತ ಇಷ್ಟೆಲ್ಲ ಗಲಭೆ ಸೃಷ್ಟಿಸಿದ ಬೆನ್ನಲ್ಲೇ ಪೊಲೀಸರು ಇವನನ್ನ ಬಂಧಿಸಿದ್ದರು. ಇದು ಉಗ್ರಕೃತ್ಯ ಎಂಬುದನ್ನು ಅಲ್ಲಗಳೆಯಲಾಗದು ಎಂದು ಹೇಳಲಾಗಿತ್ತು. ಹಾಗಾಗಿ ಏಪ್ರಿಲ್ 6ರಂದು ಮುರ್ತಾಜಾನನ್ನು ಭಯೋತ್ಪಾದಕ ವಿರೋಧಿ ಸ್ಕ್ವಾಡ್ಗೆ ವರ್ಗಾಯಿಸಲಾಗಿತ್ತು.
ಇದನ್ನೂ ಓದಿ: IPL 2022: 5 ಇನ್ನಿಂಗ್ಸ್, ಕೇವಲ 107 ರನ್! ನಾಯಕತ್ವದಿಂದ ಕೆಳಗಿಳಿದರೂ ಬದಲಾಗಲಿಲ್ಲ ಕೊಹ್ಲಿ ಹಣೆಬರಹ