Video: ಛತ್ತೀಸ್‌ಗಡ ಆಸ್ಪತ್ರೆಯಲ್ಲಿ ಮಹಿಳಾ ರೋಗಿಗೆ ಥಳಿಸಿದ ಡಾಕ್ಟರ್

ತಡರಾತ್ರಿ ತಾಯಿ ಸುಖಮತಿ ಅವರ ಆರೋಗ್ಯ ಹದಗೆಟ್ಟಿತ್ತು. ಸಹಾಯವಾಣಿ 108 ಮತ್ತು 112ಕ್ಕೆ ಕರೆ ಮಾಡಿದರೂ ಸಮಯ ಹಿಡಿಯುತ್ತದೆ ಎಂದು ಅಲ್ಲಿಂದ ಪ್ರತಿಕ್ರಿಯೆ ಬಂತು ಎಂದು ರೋಗಿಯ ಮಗ ಗೇರ್ವಾನಿ ಗ್ರಾಮದ ಶ್ಯಾಮ್ ಕುಮಾರ್ ಹೇಳಿದ್ದಾರೆ.

Video: ಛತ್ತೀಸ್‌ಗಡ ಆಸ್ಪತ್ರೆಯಲ್ಲಿ ಮಹಿಳಾ ರೋಗಿಗೆ ಥಳಿಸಿದ ಡಾಕ್ಟರ್
ಆಸ್ಪತ್ರೆಯ ದೃಶ್ಯ
Edited By:

Updated on: Nov 10, 2022 | 1:37 PM

ಕೊರ್ಬಾ (ಛತ್ತೀಸ್‌ಗಡ): ಮದ್ಯದ ಅಮಲಿನಲ್ಲಿ ವೈದ್ಯರೊಬ್ಬರು ಮಹಿಳಾ ರೋಗಿಯೊಬ್ಬರಿಗೆ ಥಳಿಸಿದ ಘಟನೆ ಛತ್ತೀಸ್‌ಗಡದ (Chhattisgarh )ಕೊರ್ಬಾ ಜಿಲ್ಲೆಯ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಡೆದಿದೆ. ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗಿರುವ ಹಿನ್ನೆಲೆಯಲ್ಲಿ ಆಸ್ಪತ್ರೆ ಆಡಳಿತ ಮಂಡಳಿ ವೈದ್ಯರ ವಿರುದ್ಧ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ತಡರಾತ್ರಿ ತಾಯಿ ಸುಖಮತಿ ಅವರ ಆರೋಗ್ಯ ಹದಗೆಟ್ಟಿತ್ತು. ಸಹಾಯವಾಣಿ 108 ಮತ್ತು 112ಕ್ಕೆ ಕರೆ ಮಾಡಿದರೂ ಸಮಯ ಹಿಡಿಯುತ್ತದೆ ಎಂದು ಅಲ್ಲಿಂದ ಪ್ರತಿಕ್ರಿಯೆ ಬಂತು ಎಂದು ರೋಗಿಯ ಮಗ ಗೇರ್ವಾನಿ ಗ್ರಾಮದ ಶ್ಯಾಮ್ ಕುಮಾರ್ ಹೇಳಿದ್ದಾರೆ. ಆಕೆಯ ಆರೋಗ್ಯ ಕ್ಷೀಣಿಸುತ್ತಿರುವುದನ್ನು ಕಂಡ ಕೂಡಲೇ ಆಟೋ ರಿಕ್ಷಾದಲ್ಲಿ ಆಕೆಯನ್ನು ಆಸ್ಪತ್ರೆಗೆ ಕರೆತಂದಿದ್ದೇವೆ. ಚಿಕಿತ್ಸೆ ವೇಳೆ ವೈದ್ಯರು ತಾಯಿಗೆ ಥಳಿಸಿದ್ದಾರೆ. ಇದರ ವಿರುದ್ಧ ನಾನು ದನಿಯೆತ್ತಿದಾಗ ನನ್ನ ಬಾಯ್ಮುಚ್ಚಿಸಿದರು ಎಂದು ಶ್ಯಾಮ್ ಹೇಳಿದ್ದಾರೆ.

ಈ ವಿಚಾರ ತಮ್ಮ ಗಮನಕ್ಕೆ ಬಂದಿದ್ದು, ವೈದ್ಯರ ವಿರುದ್ಧ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ ಎಂದು ವೈದ್ಯಕೀಯ ಕಾಲೇಜು ಆಸ್ಪತ್ರೆಯ ಡೀನ್ ಡಾ.ಅವಿನಾಶ್ ಮೆಶ್ರಾಮ್ ತಿಳಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದ್ದು, ಅದರಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ