ಮಹಾತ್ಮ ಗಾಂಧಿಯೊಂದಿಗೆ ನನ್ನನ್ನು ಹೋಲಿಸಬೇಡಿ, ಅವರು ಮಹಾನ್ ವ್ಯಕ್ತಿ: ರಾಹುಲ್ ಗಾಂಧಿ

ಅವರು ಒಬ್ಬ ಮಹಾನ್ ವ್ಯಕ್ತಿ, ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಲು ತಮ್ಮ ಜೀವನವನ್ನು ಮುಡಿಪಾಗಿಟ್ಟರು, 10-12 ವರ್ಷಗಳ ಕಾಲ ಜೈಲಿನಲ್ಲಿ ಇದ್ದರು, ಅವರ ಜಾಗವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ.ಯಾರಿಗೂ ಅವರಂತೆ ಆಗಲು ಸಾಧ್ಯವಿಲ್ಲ. ನನ್ನ ಹೆಸರನ್ನು ಅವರ ಜೊತೆಗೆ ಹೋಲಿಸಬಾರದು ಎಂದಿದ್ದಾರೆ ರಾಹುಲ್.

ಮಹಾತ್ಮ ಗಾಂಧಿಯೊಂದಿಗೆ ನನ್ನನ್ನು ಹೋಲಿಸಬೇಡಿ, ಅವರು ಮಹಾನ್ ವ್ಯಕ್ತಿ: ರಾಹುಲ್ ಗಾಂಧಿ
ರಾಹುಲ್ ಗಾಂಧಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Dec 15, 2022 | 8:23 PM

ದೆಹಲಿ: ರಾಹುಲ್ ಗಾಂಧಿ (Rahul Gandhi) ಇಂದು ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರಿಗೆ ನೇರ ಸಂದೇಶವೊಂದನ್ನು ನೀಡಿದ್ದಾರೆ. ಭಾರತ್ ಜೋಡೋ ಯಾತ್ರೆಯು (Bharat Jodo Yatra) ಪ್ರಸ್ತುತ ರಾಜಸ್ಥಾನದ (Rajasthan) ಮೂಲಕ ಹಾದುಹೋಗುತ್ತಿದ್ದು ಇನ್ನು ಮುಂದೆ ಸಹಾನುಭೂತಿ ಅಥವಾ ಹಿಂದಿನ ಸಮ್ಮಾನಗಳನ್ನು ಆಧರಿಸಿ ತಾನು ವಿಶ್ರಾಂತಿ ಪಡೆಯುವುದಿಲ್ಲ ರಾಹುಲ್ ಹೇಳಿದ್ದಾರೆ. ಅದೇ ವೇಳೆ ತನ್ನನ್ನು ಮಹಾತ್ಮ ಗಾಂಧಿಗೆ ಹೋಲಿಸಬೇಡಿ ಎಂದು ಅವರು ಹೇಳಿದ್ದಾರೆ. ಇದು ಸಂಪೂರ್ಣವಾಗಿ ತಪ್ಪು, ನಾವು ಒಂದೇ ರೀತಿಯಲ್ಲಿ ಇಲ್ಲ. ಹೋಲಿಕೆ ಮಾಡಬಾರದು. ಅವರು ಒಬ್ಬ ಮಹಾನ್ ವ್ಯಕ್ತಿ, ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಲು ತಮ್ಮ ಜೀವನವನ್ನು ಮುಡಿಪಾಗಿಟ್ಟರು, 10-12 ವರ್ಷಗಳ ಕಾಲ ಜೈಲಿನಲ್ಲಿ ಇದ್ದರು, ಅವರ ಜಾಗವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ.ಯಾರಿಗೂ ಅವರಂತೆ ಆಗಲು ಸಾಧ್ಯವಿಲ್ಲ. ನನ್ನ ಹೆಸರನ್ನು ಅವರ ಜೊತೆಗೆ ಹೋಲಿಸಬಾರದು ಎಂದಿದ್ದಾರೆ ರಾಹುಲ್. ರಾಜೀವ್ ಗಾಂಧಿ ಮತ್ತು ಇಂದಿರಾಗಾಂಧಿ ಏನು ಮಾಡಿದರು, ಅವರು ಹುತಾತ್ಮರಾದರು. ಅವರು ಚೆನ್ನಾಗಿ ಕೆಲಸ ಮಾಡಿದ್ದರು. ಆದರೆ ಕಾಂಗ್ರೆಸ್ ಪ್ರತಿ ಸಭೆಯಲ್ಲೂ ಅದರ ಬಗ್ಗೆ ತಲೆಕೆಡಿಸಿಕೊಳ್ಳಬಾರದು. ಇಂದಿರಾಗಾಂಧಿ, ರಾಜೀವ್ ಗಾಂಧಿ, ಸರ್ದಾರ್ ವಲ್ಲಭಭಾಯ್ ಪಟೇಲ್, ಜವಾಹರಲಾಲ್ ನೆಹರು, ಮಹಾತ್ಮ ಗಾಂಧಿ, ಅವರು ಎಲ್ಲವನ್ನೂ ಮಾಡಿದರು. ಅವರು ತಮ್ಮ ಪಾಲನ್ನು ಮಾಡಿದ್ದಾರೆ. ನಾವು ಏನು ಮಾಡಲಿದ್ದೇವೆ ಎಂಬುದರ ಮೇಲೆ ನಾವು ಗಮನಹರಿಸಬೇಕು. ನಾವು ಜನರಿಗೆ ಏನು ಮಾಡುತ್ತಿದ್ದೇವೆ ಎಂಬುದರ ಕುರಿತು ಯೋಚಿಸುವುದು ಉತ್ತಮ ಎಂದು ರಾಹುಲ್ ಹೇಳಿದ್ದಾರೆ.

ಪ್ರಸ್ತುತ ರಾಜಸ್ಥಾನದಲ್ಲಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಪ್ರಮುಖ ನಾಯಕರು, ಕಾರ್ಯಕರ್ತರು, ತಂತ್ರಜ್ಞರು, ಸಿನಿಮಾ ಮತ್ತು ನಾಗರಿಕ ಸಮಾಜದ ಪ್ರಮುಖ ವ್ಯಕ್ತಿಗಳು ಭಾಗಿಯಾಗಿದ್ದಾರೆ. ನಿನ್ನೆ, ಮಾಜಿ ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ್ ರಾಜನ್ ಅವರು ರಾಹುಲ್ ಜತೆ ಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದಾರೆ.

ಇದನ್ನೂ ಓದಿ: ಮಾಜಿ ಸ್ಪೀಕರ್​ ರಮೇಶ್ ​​ಕುಮಾರ್ ‘ಕೈ‘ ಬಿಟ್ಟು, ಕೆ.ಹೆಚ್. ಮುನಿಯಪ್ಪಗೆ ಮಣೆ ಹಾಕಿ ಕಾಂಗ್ರೆಸ್ ಚುನಾವಣಾ ಸಮಿತಿ ರಚನೆ!

ಭಾರತ್ ಜೋಡೋ ಯಾತ್ರೆ ಈಗ 100 ದಿನಗಳನ್ನು ಪೂರೈಸಿದ್ದು ಪಕ್ಷದ ಹಿರಿಯ ನಾಯಕರು ಮತ್ತು ವೀಕ್ಷಕರು ತಾವು ಕೆಲವು ಉದ್ದೇಶಗಳನ್ನು ಸಾಧಿಸಿದ್ದೇವೆ ಎಂದು ಭಾವಿಸುತ್ತಾರೆ. ಈ ಯಾತ್ರೆ ರಾಹುಲ್ ಗಾಂಧಿಯವರ ರಾಜಕೀಯ ಬ್ರ್ಯಾಂಡ್ ಅನ್ನು ಪುನರುಜ್ಜೀವನಗೊಳಿಸಿದೆ. ಬಿಜೆಪಿಯು ತಮ್ಮ ‘ನಕಲಿ ಸುದ್ದಿ ದುರುದ್ದೇಶಪೂರಿತ ಪ್ರಚಾರ’ವನ್ನು ಬಳಸಿಕೊಂಡು ಇನ್ನು ಮುಂದೆ ಅವರನ್ನು ಅಪಹಾಸ್ಯ ಮಾಡಲು ಸಾಧ್ಯವಿಲ್ಲ. ಎರಡನೆಯದಾಗಿ, ಕಾಂಗ್ರೆಸ್ ಅಂತಿಮವಾಗಿ ಈ ಜನಾಂದೋಲನದ ಮೂಲಕ ಜನರೊಂದಿಗೆ ನೇರವಾಗಿ ಸಂಪರ್ಕ ಹೊಂದಿದೆ” ಎಂದು ಪಕ್ಷದ ಮಾಜಿ ನಾಯಕ ಸಂಜಯ್ ಝಾ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:21 pm, Thu, 15 December 22