ಶಾಲೆಗಳಲ್ಲಿ ಮದರಂಗಿ, ರಾಖಿ, ತಿಲಕ ಧರಿಸಿ ಬಂದ ವಿದ್ಯಾರ್ಥಿಗಳನ್ನು ಶಿಕ್ಷಿಸಬೇಡಿ: ಮಕ್ಕಳ ಹಕ್ಕುಗಳ ಸಂಸ್ಥೆ
ರಕ್ಷಾ ಬಂಧನದ ಸಂದರ್ಭದಲ್ಲಿ ಶಾಲೆಗಳಲ್ಲಿ ಮಕ್ಕಳಿಗೆ ರಾಖಿ ಅಥವಾ ತಿಲಕ ಅಥವಾ ಮೆಹಂದಿಯನ್ನು ಧರಿಸಲು ಶಾಲೆಗಳು ಅನುಮತಿಸುವುದಿಲ್ಲ. ಹೀಗೆ ಧರಿಸಿ ಬಂದ ಮಕ್ಕಳಿಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿರುವುದು ಗಮನಕ್ಕೆ ಬಂದಿದೆ. RTE ಕಾಯಿದೆ, 2009 ರ 17ಸೆಕ್ಷನ್ ಅಡಿಯಲ್ಲಿ ಶಾಲೆಗಳಲ್ಲಿ ದೈಹಿಕ ಶಿಕ್ಷೆಯನ್ನು ನಿಷೇಧಿಸಲಾಗಿದೆ ಎಂದು ಎನ್‌ಸಿಪಿಸಿಆರ್ ಹೇಳಿದೆ.
ದೆಹಲಿ ಆಗಸ್ಟ್ 31: ಮಕ್ಕಳ ಹಕ್ಕುಗಳ ಸಂಸ್ಥೆ, ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (NCPCR), ರಕ್ಷಾ ಬಂಧನದ (Raksha Bandhan) ಸಂದರ್ಭದಲ್ಲಿ ಶಾಲೆಗಳಲ್ಲಿ ರಾಖಿ, ತಿಲಕ ಅಥವಾ ಮದರಂಗಿ (ಮೆಹೆಂದಿ) ಧರಿಸಿದ್ದಕ್ಕಾಗಿ ವಿದ್ಯಾರ್ಥಿಗಳನ್ನು ಶಿಕ್ಷಿಸದಂತೆ ಶಾಲೆಗಳಿಗೆ ಬುಧವಾರ ಸೂಚಿಸಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಶಾಲಾ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ನೀಡಿದ ಪತ್ರದಲ್ಲಿ ಎನ್‌ಸಿಪಿಸಿಆರ್ ಹಬ್ಬಗಳ ಆಚರಣೆಯ ಕಾರಣದಿಂದ ಶಾಲಾ ಅಧಿಕಾರಿಗಳಿಂದ ಮಕ್ಕಳಿಗೆ ಕಿರುಕುಳ ಮತ್ತು ತಾರತಮ್ಯ ಬಗ್ಗೆ ವರದಿಯಾಗಿರುವುದನ್ನು ಗಮನಿಸಿದೆ ಎಂದು ಹೇಳಿದೆ.
ರಕ್ಷಾ ಬಂಧನದ ಸಂದರ್ಭದಲ್ಲಿ ಶಾಲೆಗಳಲ್ಲಿ ಮಕ್ಕಳಿಗೆ ರಾಖಿ ಅಥವಾ ತಿಲಕ ಅಥವಾ ಮೆಹಂದಿಯನ್ನು ಧರಿಸಲು ಶಾಲೆಗಳು ಅನುಮತಿಸುವುದಿಲ್ಲ. ಹೀಗೆ ಧರಿಸಿ ಬಂದ ಮಕ್ಕಳಿಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿರುವುದು ಗಮನಕ್ಕೆ ಬಂದಿದೆ. RTE ಕಾಯಿದೆ, 2009 ರ 17ಸೆಕ್ಷನ್ ಅಡಿಯಲ್ಲಿ ಶಾಲೆಗಳಲ್ಲಿ ದೈಹಿಕ ಶಿಕ್ಷೆಯನ್ನು ನಿಷೇಧಿಸಲಾಗಿದೆ ಎಂದು ಎನ್‌ಸಿಪಿಸಿಆರ್ ಹೇಳಿದೆ.
The National Commission for Protection of Child Rights has written to all States to make sure children are not beaten, harassed, discriminated against, or subjected to corporal punishment on account of wearing a Rakhi during Raksha bandhan celebrations.
This is India in 2023. pic.twitter.com/Ok0vDrBfdA
— Anand Ranganathan (@ARanganathan72) August 30, 2023
ಮಕ್ಕಳನ್ನು ದೈಹಿಕ ಶಿಕ್ಷೆ ಅಥವಾ ತಾರತಮ್ಯಕ್ಕೆ ಒಡ್ಡುವ ಇಂತ ಕ್ರಮಗಳು ಸಂಭವಿಸದಂತೆ ನೋಡಿಕೊಳ್ಳಲು ನಿರ್ದೇಶನಗಳನ್ನು ನೀಡುವಂತೆ ಅದು ಸಂಬಂಧಿತ ಅಧಿಕಾರಿಗಳಿಗೆ ಕೇಳಿದೆ ಎಂದು ಆಯೋಗ ಹೇಳಿದೆ. ಎನ್‌ಸಿಪಿಸಿಆರ್ ಭಾರತದಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಯನ್ನು ನೋಡಿಕೊಳ್ಳುವ ಉನ್ನತ ಮಕ್ಕಳ ಹಕ್ಕುಗಳ ಸಂಸ್ಥೆಯಾಗಿದೆ.
ರಕ್ಷಾ ಬಂಧನ ಮತ್ತು ಇತರ ಹಬ್ಬಗಳ ಸಂದರ್ಭದಲ್ಲಿ ರಾಖಿ, ತಿಲಕ ಮತ್ತು ಇತರ ಧಾರ್ಮಿಕ ಆಭರಣಗಳನ್ನು ಧರಿಸಿದ್ದಕ್ಕಾಗಿ ಶಾಲೆಗಳು ವಿದ್ಯಾರ್ಥಿಗಳಿಗೆ ಕಠಿಣ ಶಿಕ್ಷೆಯನ್ನು ವಿಧಿಸಿರುವ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದವು. ಅಂತಹ ಸಂದರ್ಭಗಳಲ್ಲಿ, ಕೆಲವು ಅಧಿಕಾರಿಗಳು ತಮ್ಮ ರಕ್ಷಣೆಗಾಗಿ, ನೀತಿ ಸಂಹಿತೆ ಮತ್ತು ಅಂತರ್ಗತ ವಾತಾವರಣವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ಧಾರ್ಮಿಕ ಚಿಹ್ನೆಗಳನ್ನು ಪ್ರದರ್ಶಿಸುವುದನ್ನು ನಿಷೇಧಿಸಲು ಕಾರಣವೆಂದು ಸೂಚಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ