ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಈ ಜನರು ದುರುಪಯೋಗಿಸುತ್ತಿದ್ದಾರೆ, ಮೋದಿ ಅಲ್ಲ: ಮಮತಾ ಬ್ಯಾನರ್ಜಿ

| Updated By: ರಶ್ಮಿ ಕಲ್ಲಕಟ್ಟ

Updated on: Sep 19, 2022 | 8:40 PM

ಸಿಬಿಐ ಈಗ ಪಿಎಂಒ (ಪ್ರಧಾನ ಮಂತ್ರಿ ಕಚೇರಿ) ಗೆ ವರದಿ ಮಾಡುವುದಿಲ್ಲ ಎಂದು ನಿಮ್ಮಲ್ಲಿ ಅನೇಕರಿಗೆ ತಿಳಿದಿಲ್ಲ. ಅದು ಗೃಹ ಸಚಿವಾಲಯಕ್ಕೆ ವರದಿ ಮಾಡುತ್ತದೆ...

ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಈ ಜನರು ದುರುಪಯೋಗಿಸುತ್ತಿದ್ದಾರೆ, ಮೋದಿ ಅಲ್ಲ: ಮಮತಾ ಬ್ಯಾನರ್ಜಿ
ನರೇಂದ್ರ ಮೋದಿ-ಮಮತಾ ಬ್ಯಾನರ್ಜಿ
Follow us on

ಕೋಲ್ಕತ್ತಾ: ತನಿಖಾ ಸಂಸ್ಥೆಗಳ ಭಯದಿಂದಾಗಿ ದೇಶದಿಂದ ಪಲಾಯನ ಮಾಡುತ್ತಿರುವ ಉದ್ಯಮಿಗಳ ವಿಷಯದ ಬಗ್ಗೆ ಮಾತನಾಡಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) “ಉದ್ಯಮಿಗಳು ದೇಶ ಬಿಟ್ಟು ಓಡಿ ಹೋಗುತ್ತಿದ್ದಾರೆ. ಇಡಿ (Enforcement Directorate) ಮತ್ತು ಸಿಬಿಐ (Central Bureau of Investigation) ಭಯ ಮತ್ತು ದುರುಪಯೋಗದಿಂದ ಅವರು ಓಡಿಹೋಗುತ್ತಿದ್ದಾರೆ. ಮೋದಿ ಇದನ್ನು ಮಾಡಿಲ್ಲ ಎಂದು ನಾನು ನಂಬುತ್ತೇನೆ ಎಂದಿದ್ದಾರೆ. ಕೇಂದ್ರೀಯ ತನಿಖಾ ಸಂಸ್ಥೆಗಳ ವಿರುದ್ಧ ನಿರ್ಣಯದ ಬಗ್ಗೆ ವಿಧಾನಸಭೆಯಲ್ಲಿ ನಡೆದ ಚರ್ಚೆಯಲ್ಲಿ ಮಮತಾ ಈ ರೀತಿ ಹೇಳಿದ್ದಾರೆ. ಸಿಬಿಐ ಈಗ ಪಿಎಂಒ (ಪ್ರಧಾನ ಮಂತ್ರಿ ಕಚೇರಿ) ಗೆ ವರದಿ ಮಾಡುವುದಿಲ್ಲ ಎಂದು ನಿಮ್ಮಲ್ಲಿ ಅನೇಕರಿಗೆ ತಿಳಿದಿಲ್ಲ. ಅದು ಗೃಹ ಸಚಿವಾಲಯಕ್ಕೆ ವರದಿ ಮಾಡುತ್ತದೆ. ಕೆಲವು ಬಿಜೆಪಿ ನಾಯಕರು ಪಿತೂರಿ ಮಾಡುತ್ತಿದ್ದಾರೆ. ಅವರು ಆಗಾಗ್ಗೆ ನಿಜಾಮ್ ಅರಮನೆಗೆ ಹೋಗುತ್ತಾರೆ” ಎಂದಿದ್ದಾರೆ ಮಮತಾ. ಸಿಬಿಐ, ಇಡಿ ಮತ್ತು ಇತರ ಫೆಡರಲ್ ಏಜೆನ್ಸಿಗಳ ವಿರುದ್ಧ ವಿಧಾನಸಭೆಯಲ್ಲಿ ನಿರ್ಣಯವನ್ನು ಅಂಗೀಕರಿಸುವ ಮೂಲಕ ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರವು ವಿರೋಧ ಪಕ್ಷದ ನಾಯಕರ ವಿರುದ್ಧ ಕೇಂದ್ರ ತನಿಖಾ ಸಂಸ್ಥೆಗಳನ್ನು ಬಳಸುತ್ತಿದೆ ಎಂದು ಬಂಗಾಳ ಹೇಳಿದೆ.

ಕೇಂದ್ರೀಯ ಸಂಸ್ಥೆಗಳ ಮಿತಿಮೀರಿದ ದಾಳಿ ವಿರುದ್ಧದ ನಿರ್ಣಯವನ್ನು 189 ಮತಗಳೊಂದಿಗೆ ಅಂಗೀಕರಿಸಲಾಯಿತು. 64 ಶಾಸಕರು ಅದರ ವಿರುದ್ಧ ಮತ ಚಲಾಯಿಸಿದರು.

ಚೀತಾ ವಿಷಯದ ಕುರಿತು ಸಲಹೆಗಾರರ ಮಾತು ಕೇಳಿ ಮೋದಿ ತಪ್ಪು ಮಾಡಿದ್ದಾರೆ ಎಂದು ಮಮತಾ ಹೇಳಿದ್ದಾರೆ .
ನಾನು ಪ್ರಧಾನಿಗೆ ಗೌರವದಿಂದಲೇ ಸಲಹೆ ನೀಡುತ್ತೇನೆ. ಬಂಗಾಳಕ್ಕೆ ಹಣವನ್ನು ನಿಲ್ಲಿಸಲು ಅವರು ನಿಮಗೆ ಸಲಹೆ ನೀಡುತ್ತಾರೆ. ಚೀತಾ ಖರೀದಿಸುವುದನ್ನು ನಿಲ್ಲಿಸುವಂತೆ ಅವರು ಏಕೆ ಸಲಹೆ ನೀಡುವುದಿಲ್ಲ? ನಾನು ನಿನ್ನೆ ಪ್ರಧಾನಿಗೆ ಹಾರೈಸಿದ್ದೆ. ಪಕ್ಷ ಮತ್ತು ಸರ್ಕಾರವನ್ನು ಮಿಶ್ರಣ ಮಾಡದಂತೆ ನಾನು ಅವರಿಗೆ ಸಲಹೆ ನೀಡುತ್ತೇನೆ. ನೀವು ಪೆಗಾಸಸ್ ಅನ್ನು ಬಳಸಿಕೊಂಡು ರಾಷ್ಟ್ರವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದೀರಿ. ನೀವು ಮುಂದೊಂದು ದಿನ ಅದಕ್ಕೇ ಬಲಿಯಾಗುತ್ತೀರಿ. ಪ್ರತಿಯೊಬ್ಬರ ಫೋನ್ ಅನ್ನು ಟ್ರ್ಯಾಕ್ ಮಾಡಲಾಗಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಇದೇ ಹೊತ್ತಲ್ಲಿ ಮಮತಾ ಸುವೇಂದು ಅಧಿಕಾರಿ ವಿರುದ್ಧ ಕಿಡಿ ಕಾರಿದ್ದಾರೆ.ನಿರ್ಣಯವು ಯಾರನ್ನೂ ಖಂಡಿಸುವ ಉದ್ದೇಶವನ್ನು ಹೊಂದಿಲ್ಲ ಎಂದ ಅವರು, ಇದು “ನಿಷ್ಪಕ್ಷಪಾತ” ಎಂದು ಹೇಳಿದರು. “ನಿಮ್ಮ ನಾಯಕನ ಮನೆ ಮೇಲೆ ಎಷ್ಟು ದಾಳಿ ನಡೆಸಲಾಗಿದೆ?” ಹಲವಾರು ಭ್ರಷ್ಟಾಚಾರ ಪ್ರಕರಣಗಳಲ್ಲಿ ವಾಟೆಂಡ್ ಆಗಿರುವ ಸುವೇಂದು ಅವರಿಗೆ ಟಾಂಗ್ ನೀಡಿ ಮಮತಾ ವಾಗ್ದಾಳಿ ನಡೆಸಿದ್ದಾರೆ.