Watch ಕೇರಳದ ಪುನ್ನಮಡ ಸರೋವರದಲ್ಲಿ ನಡೆದ ದೋಣಿ ಸ್ಪರ್ಧೆಯಲ್ಲಿ ಭಾಗವಹಿಸಿದ ಸಂಸದ ರಾಹುಲ್​​ ಗಾಂಧಿ

ಇದಕ್ಕೂ ಮುನ್ನ ರಾಹುಲ್ ಆಲಪ್ಪುಳದ ವಡಕಲ್ ಬೀಚ್‌ನಲ್ಲಿ ಮೀನುಗಾರರ ಸಮುದಾಯಗಳೊಂದಿಗೆ ಹೆಚ್ಚುತ್ತಿರುವ ಇಂಧನ ವೆಚ್ಚ, ಸಬ್ಸಿಡಿಗಳು ಮತ್ತು ಇತರ ವಿಷಯಗಳ ಬಗ್ಗೆ ಮಾತನಾಡಿದ್ದಾರೆ.

Watch ಕೇರಳದ ಪುನ್ನಮಡ ಸರೋವರದಲ್ಲಿ ನಡೆದ ದೋಣಿ ಸ್ಪರ್ಧೆಯಲ್ಲಿ ಭಾಗವಹಿಸಿದ ಸಂಸದ ರಾಹುಲ್​​ ಗಾಂಧಿ
ರಾಹುಲ್ ಗಾಂಧಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Sep 19, 2022 | 9:22 PM

ಕಾಂಗ್ರೆಸ್ ಪಕ್ಷದ ‘ಭಾರತ್ ಜೋಡೋ ಯಾತ್ರೆ’ (Bharat Jodo Yatra) ಅಂಗವಾಗಿ ಕೇರಳದಲ್ಲಿರುವ (Kerala) ವಯನಾಡ್ ಸಂಸದ ರಾಹುಲ್ ಗಾಂಧಿ (Rahul Gandhi) ಇಂದು(ಸೋಮವಾರ) ಪುನ್ನಮಡ ಸರೋವರದಲ್ಲಿ ನಡೆದ ದೋಣಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ದೋಣಿಯೊಂದರಲ್ಲಿ ಸ್ಪರ್ಧಿಗಳೊಂದಿಗೆ ಕುಳಿತು ರಾಹುಲ್ ಗಾಂಧಿ ದೋಣಿಗೆ ಹುಟ್ಟು ಹಾಕುತ್ತಿರುವ ವಿಡಿಯೊವನ್ನು ಎಎನ್ಐ ಸುದ್ದಿ ಸಂಸ್ಥೆ ಟ್ವೀಟ್ ಮಾಡಿದೆ. ಇದಕ್ಕೂ ಮುನ್ನ ರಾಹುಲ್ ಆಲಪ್ಪುಳದ ವಡಕಲ್ ಬೀಚ್‌ನಲ್ಲಿ ಮೀನುಗಾರರ ಸಮುದಾಯಗಳೊಂದಿಗೆ ಹೆಚ್ಚುತ್ತಿರುವ ಇಂಧನ ವೆಚ್ಚ, ಸಬ್ಸಿಡಿಗಳು ಮತ್ತು ಇತರ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಬೆಳಗ್ಗೆ 6 ಗಂಟೆಗೆ ಆಲಪ್ಪುಳದ ವಡಕಲ್ ಬೀಚ್‌ನಲ್ಲಿ ಮೀನುಗಾರರೊಂದಿಗೆ ರಾಹುಲ್ ಗಾಂಧಿ ಸಂವಾದ ನಡೆಸಿದರು ಹೆಚ್ಚುತ್ತಿರುವ ಇಂಧನ ವೆಚ್ಚಗಳು, ಕಡಿಮೆಯಾದ ಸಬ್ಸಿಡಿಗಳು, ಕ್ಷೀಣಿಸುತ್ತಿರುವ ಮೀನು ಸಂಗ್ರಹಣೆ, ಸಮಾಜ ಕಲ್ಯಾಣ ಮತ್ತು ಪಿಂಚಣಿ ಕೊರತೆ, ಅಸಮರ್ಪಕ ಶೈಕ್ಷಣಿಕ ಅವಕಾಶಗಳು ಮತ್ತು ಪರಿಸರ ನಾಶದ ಸವಾಲುಗಳು ಮೊದಲಾದ ವಿಷಯಗಳ ಬಗ್ಗೆ ಅವರು ಚರ್ಚಿಸಿದ್ದಾರೆ ಎಂದು ಹಿರಿಯ ನಾಯಕ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.

ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಆರಂಭವಾದ ಕಾಂಗ್ರೆಸ್ ಯಾತ್ರೆಯ 12 ನೇ ದಿನವಾಗಿದೆ ಇಂದು. ಐದು ತಿಂಗಳ ಅವಧಿಯಲ್ಲಿ ಹನ್ನೆರಡು ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ಭಾರತ್ ಜೋಡೋ ಯಾತ್ರೆ ಸುಮಾರು 3,500 ಕಿ.ಮೀ ಸಂಚರಿಸಲಿದೆ.

ಸೋಮವಾರ ಪುನ್ನಪ್ರಾದಿಂದ ಯಾತ್ರೆ ಆರಂಭವಾಯಿತು. ಕೆ ಮುರಳೀಧರನ್, ಕೆ ಸುರೇಶ್, ರಮೇಶ್ ಚೆನ್ನಿತ್ತಲ, ಕೆಸಿ ವೇಣುಗೋಪಾಲ್ ಮತ್ತು ಕೇರಳದ ವಿಪಕ್ಷ ನಾಯಕ ವಿಡಿ ಸತೀಶನ್ ರಾಹುಲ್ ಜತೆಗಿದ್ದರು. ಬಿಜೆಪಿಯಿಂದ ತೀವ್ರ ಟೀಕೆಗೆ ಗುರಿಯಾಗಿರುವ ‘ಭಾರತ್ ಜೋಡೋ ಯಾತ್ರೆ’ಯನ್ನು ಸಮರ್ಥಿಸಿಕೊಂಡ ರಾಹುಲ್ ಗಾಂಧಿ, ಕೆಲವರು ‘ಭಾರತ್ ಜೋಡೋ’ ಅಗತ್ಯವಿದೆ ಎಂದು ಕೇಳಿದ್ದಾರೆ, ಭಾರತವು ಸಾಧಿಸಲು ಹಲವು ನಿರ್ಣಾಯಕ ಗುರಿಗಳನ್ನು ಹೊಂದಿದೆ.ನಾವು ಕೋಟ್ಯಂತರ ಬಡವರ ನೋವನ್ನು ಕಡಿಮೆ ಮಾಡುವುದು ಸುಲಭವಲ್ಲ, ಭಾರತವು ವಿಭಜನೆಯಾದರೆ, ಕೋಪಗೊಂಡಿದ್ದರೆ, ತನ್ನ ಬಗ್ಗೆಯೇ ದ್ವೇಷದಿಂದ ಕೂಡಿದ್ದರೆ ಅದು ಸಾಧ್ಯವಿಲ್ಲ ಎಂದಿದ್ದಾರೆ.