Fact Check ಗೇಟ್ ವೇ ಆಫ್ ಇಂಡಿಯಾಕ್ಕೆ ಬಡಿಯುತ್ತಿರುವ ಅಲೆ, ಈಗ ವೈರಲ್ ಆಗಿರುವ ವಿಡಿಯೊ ಹಳೇದು
ನಡುವೆ ಗೇಟ್‌ವೇ ಆಫ್ ಇಂಡಿಯಾದ ಗೋಡೆಗಳ ಮೇಲೆ ನೀರು ಚಿಮ್ಮುತ್ತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ರೊಚ್ಚಿಗೆದ್ದಂತಿರುವ ಅಲೆಗಳು ಗೇಟ್ ವೇ ಆಫ್ ಇಂಡಿಯಾಗೆ ಬಡಿಯುತ್ತಿದ್ದು...
ಭಾರತೀಯ ಹವಾಮಾನ ಇಲಾಖೆ (IMD) ಸೆಪ್ಟೆಂಬರ್ 15 ರಿಂದ ಸೆಪ್ಟೆಂಬರ್ 19 ರವರೆಗೆ ಮಹಾರಾಷ್ಟ್ರದ ವಿವಿಧ ಭಾಗಗಳಿಗೆ ಯೆಲ್ಲೋ ಮತ್ತು ಆರೆಂಜ್ ಎಚ್ಚರಿಕೆಗಳನ್ನು ನೀಡಿದೆ. ಮುಂಬೈ (Mumbai) ಸೇರಿದಂತೆ ಹಲವಾರು ಪ್ರದೇಶಗಳು ಭಾರೀ ಮಳೆಯಿಂದಾಗಿ ಜಲಾವೃತವಾಗಿದೆ. ಹಲವಾರು ನೆಟ್ಟಿಗರು ಸಾಮಾಜಿಕ ಮಾಧ್ಯಮಗಳಲ್ಲಿ ಮಳೆ, ಮಳೆ ಅವಾಂತರಗಳ ಫೋಟೊ, ವಿಡಿಯೊಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ನಡುವೆ ಗೇಟ್‌ವೇ ಆಫ್ ಇಂಡಿಯಾದ (Gateway of India) ಗೋಡೆಗಳ ಮೇಲೆ ನೀರು ಚಿಮ್ಮುತ್ತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ರೊಚ್ಚಿಗೆದ್ದಂತಿರುವ ಅಲೆಗಳು ಗೇಟ್ ವೇ ಆಫ್ ಇಂಡಿಯಾಗೆ ಬಡಿಯುತ್ತಿದ್ದು ಹಿನ್ನಲೆಯಲ್ಲಿ ಬಲವಾದ ಗಾಳಿಯ ಶಬ್ದವೂ ಕೇಳಿಸಿತು. ಈ ವಿಡಿಯೊವನ್ನು ಸೆಪ್ಟೆಂಬರ್ 16, 2022 ರಂದು ಚಿತ್ರೀಕರಿಸಲಾಗಿದೆ ಎಂದು ಹೇಳಲಾಗಿದೆ. ಅಂದಹಾಗೆ ಈ ವಿಡಿಯೊ ಇತ್ತೀಚಿನದ್ದಲ್ಲ. ಇದು 2021ರಲ್ಲಿ ಮಹಾರಾಷ್ಟ್ರದಲ್ಲಿ ಚಂಡಮಾರುತ ಬಂದಾಗ ಚಿತ್ರೀಕರಿಸಿದ ವಿಡಿಯೊ ಆಗಿದೆ ಎಂದು ಇಂಡಿಯಾ ಟುಡೇ ಫ್ಯಾಕ್ಟ್ ಚೆಕ್ ಮಾಡಿದೆ.
#MumbaiRains It is Gateways of India just opposite Taj Mahal hotel. Colaba. Mumbai. pic.twitter.com/E30xNC0582
— AbdulKader عبدالقادر (@AbdulkaderMB) September 16, 2022
ಫ್ಯಾಕ್ಟ್ ಚೆಕ್
ವಿಡಿಯೊ ಫ್ರೇಮ್ಗಳನ್ನು ರಿವರ್ಸ್ ಚೆಕ್ ಮಾಡಿದಾಗ ನ್ಯೂಸ್ 18 ವರದಿಯಲ್ಲಿನ ವಿಡಿಯೊ ಸಿಕ್ಕಿದೆ.ಈ ವರದಿ ಪ್ರಕಾರ, ಮೇ 2021 ರಲ್ಲಿ ಮಹಾರಾಷ್ಟ್ರಕ್ಕೆ ಟೌಕ್ಟೆ ಚಂಡಮಾರುತ ಅಪ್ಪಳಿಸಿದಾಗ ಗೇಟ್‌ವೇ ಆಫ್ ಇಂಡಿಯಾವನ್ನು ಅಪ್ಪಳಿಸುವ ಅಲೆಗಳ ವಿಡಿಯೊ ಇದಾಗಿದೆ. ಅತ್ಯಂತ ತೀವ್ರವಾದ ಚಂಡಮಾರುತ ಎಂದು ವರ್ಗೀಕರಿಸಲಾದ ಟೌಕ್ಟೆ ಮಹಾರಾಷ್ಟ್ರದಲ್ಲಿ ಕನಿಷ್ಠ ಆರು ಜೀವಗಳನ್ನು ಬಲಿ ತೆಗೆದುಕೊಂಡಿತ್ತು. “ಎನ್‌ಎಸ್ ನೌ” ಎಂಬ ಸುದ್ದಿ ಔಟ್‌ಲೆಟ್ ಮೂಲಕ YouTube ನಲ್ಲಿ ಹಂಚಿಕೊಂಡ ವಿಡಿಯೊದಲ್ಲಿ “ಗೇಟ್‌ವೇ ಆಫ್ ಇಂಡಿಯಾ ಮುಂಬೈ ಇನ್ ಟೌಕ್ಟೆ ತೂಫಾನ್. ಸೈಕ್ಲೋನ್ ಟೌಕ್ಟೆ, ಎನ್‌ಎಸ್ ನೌ ಎಂದು ವಿಡಿಯೊಗೆ ಶೀರ್ಷಿಕೆ ನೀಡಲಾಗಿದೆ. ಸುದ್ದಿ ವರದಿಗಳ ಪ್ರಕಾರ ಗೇಟ್ ವೇ ಆಫ್ ಇಂಡಿಯಾಕ್ಕೆ ಯಾವುದೇ ಹಾನಿಯಾಗದಿದ್ದರೂ, ಈ ಘಟನೆಯಲ್ಲಿ ಸಮುದ್ರಕ್ಕೆ ಎದುರು ಭಾಗದಲ್ಲಿ ನಿರ್ಮಿಸಿರುವ ಸುರಕ್ಷತಾ ಗೋಡೆ ಮತ್ತು ಕಬ್ಬಿಣದ ಗೇಟ್‌ಗಳು ನಾಶವಾಗಿವೆ. ಆದಾಗ್ಯೂ ಸೆಪ್ಟೆಂಬರ್ 16, 2022 ರಂದು ಮುಂಬೈ ಮಳೆಯ ವೈರಲ್ ವಿಡಿಯೊ ಎಂದು ಈಗ ವೈರಲ್ ಆಗಿರುವ ವಿಡಿಯೊ ಕಳೆದ ವರ್ಷದ್ದು.
Published On - 6:22 pm, Mon, 19 September 22