Fodder scam ಮೇವು ಹಗರಣ ಪ್ರಕರಣ: ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್‌ಗೆ 5 ವರ್ಷ ಜೈಲು ಶಿಕ್ಷೆ, ₹60 ಲಕ್ಷ ದಂಡ

| Updated By: ರಶ್ಮಿ ಕಲ್ಲಕಟ್ಟ

Updated on: Feb 21, 2022 | 2:43 PM

Lalu Prasad Yadav ವಿಶೇಷ ಕೇಂದ್ರೀಯ ತನಿಖಾ ದಳ (CBI) ನ್ಯಾಯಾಲಯವು ಕಳೆದ ವಾರ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯ ಪ್ರಮಾಣವನ್ನು ಘೋಷಿಸಿತು .ಕಳೆದ ವಾರ, ಮೇವು ಹಗರಣಕ್ಕೆ ಸಂಬಂಧಿಸಿದ ಡೊರಾಂಡಾ ಖಜಾನೆ ಪ್ರಕರಣದಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರನ್ನು ವಿಶೇಷ ಸಿಬಿಐ ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿತ್ತು.

Fodder scam ಮೇವು ಹಗರಣ ಪ್ರಕರಣ: ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್‌ಗೆ 5 ವರ್ಷ ಜೈಲು ಶಿಕ್ಷೆ, ₹60 ಲಕ್ಷ ದಂಡ
ಲಾಲು ಪ್ರಸಾದ್ ಯಾದವ್
Follow us on

ದೆಹಲಿ: ಮೇವು ಹಗರಣಕ್ಕೆ ಸಂಬಂಧಿಸಿದ ಡೊರಾಂಡಾ ಖಜಾನೆ (Doranda treasury) ಪ್ರಕರಣದಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ (Lalu Prasad Yadav)ಅವರಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ₹60 ಲಕ್ಷ ದಂಡವನ್ನೂ ಪಾವತಿಸಬೇಕು ಎಂದು ನ್ಯಾಯಾಲಯ ಸೋಮವಾರ ತೀರ್ಪು ನೀಡಿದೆ. ವಿಶೇಷ ಕೇಂದ್ರೀಯ ತನಿಖಾ ದಳ (CBI) ನ್ಯಾಯಾಲಯವು ಕಳೆದ ವಾರ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯ ಪ್ರಮಾಣವನ್ನು ಘೋಷಿಸಿತು .ಕಳೆದ ವಾರ, ಮೇವು ಹಗರಣಕ್ಕೆ ಸಂಬಂಧಿಸಿದ ಡೊರಾಂಡಾ ಖಜಾನೆ ಪ್ರಕರಣದಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರನ್ನು ವಿಶೇಷ ಸಿಬಿಐ ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿತ್ತು. ಜಾರ್ಖಂಡ್‌ನ ಡೊರಾಂಡಾ ಖಜಾನೆಯಿಂದ 139.35 ಕೋಟಿ ರೂಪಾಯಿ ಅಕ್ರಮವಾಗಿ ವಿತ್ ಡ್ರಾ ಮಾಡಿದ ಪ್ರಕರಣವಾಗಿದೆ ಇದು.  ಮೇವು ಹಗರಣವು ಲಾಲು ಪ್ರಸಾದ್ ಯಾದವ್ ಅವರು ಬಿಹಾರ ಮುಖ್ಯಮಂತ್ರಿಯಾಗಿದ್ದಾಗ ಜಾನುವಾರುಗಳಿಗೆ ಕಾಲ್ಪನಿಕ ವೆಚ್ಚಕ್ಕಾಗಿ ಮೇವು ಮತ್ತು ಇತರ ಅಗತ್ಯಗಳಿಗಾಗಿ ವಿವಿಧ ಸರ್ಕಾರಿ ಖಜಾನೆಗಳಿಂದ 950 ಕೋಟಿ ರೂಪಾಯಿಗಳ ಅಕ್ರಮವಾಗಿ ಹಿಂಪಡೆದಿದ್ದಾರೆ ಎಂಬುದನ್ನು ಉಲ್ಲೇಖಿಸುತ್ತದೆ. ಡೊರಾಂಡಾ ಖಜಾನೆ ಪ್ರಕರಣದ 99 ಆರೋಪಿಗಳ ಪೈಕಿ 24 ಮಂದಿಯನ್ನು ಖುಲಾಸೆಗೊಳಿಸಲಾಗಿದ್ದು, ಕಳೆದ ವಾರ 46 ಆರೋಪಿಗಳಿಗೆ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ಘೋಷಿಸಲಾಗಿದೆ.  ಜಾರ್ಖಂಡ್‌ನ ದುಮ್ಕಾ, ದಿಯೋಘರ್ ಮತ್ತು ಚೈಬಾಸಾ ಖಜಾನೆಗಳಿಗೆ ಸಂಬಂಧಿಸಿದ ಇತರ ನಾಲ್ಕು ಪ್ರಕರಣಗಳಲ್ಲಿ 73 ವರ್ಷದ ಲಾಲು ಪ್ರಸಾದ್ ಯಾದವ್ ಅವರಿಗೆ ಈ ಹಿಂದೆ 14 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು.

ಅವಿಭಜಿತ ಬಿಹಾರದ ವಿವಿಧ ಜಿಲ್ಲೆಗಳಲ್ಲಿನ ಸರ್ಕಾರಿ ಖಜಾನೆಗಳಿಂದ ಸಾರ್ವಜನಿಕ ಹಣವನ್ನು ವಂಚನೆಯಿಂದ ಹಿಂತೆಗೆದುಕೊಳ್ಳುವ ರೂ 950 ಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಒಟ್ಟು 170 ಚಾರ್ಜ್ ಶೀಟ್‌ಗಳನ್ನು ಸಲ್ಲಿಸಿತ್ತು. ಲಾಲೂ ಸೇರಿದಂತೆ ಮಾಜಿ ಸಂಸದ ಜಗದೀಶ್ ಶರ್ಮಾ, ಅಂದಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಅಧ್ಯಕ್ಷ ಧ್ರುವ ಭಗತ್, ಪಶುಸಂಗೋಪನಾ ಕಾರ್ಯದರ್ಶಿ ಬೆಕ್ ಜೂಲಿಯಸ್ ಮತ್ತು ಪಶುಸಂಗೋಪನಾ ಸಹಾಯಕ ನಿರ್ದೇಶಕ ಡಾ.ಕೆ.ಎಂ.ಪ್ರಸಾದ್ ಪ್ರಮುಖ ಆರೋಪಿಗಳಾಗಿದ್ದಾರೆ, ಪ್ರಸ್ತುತ 99 ಮಂದಿ ವಿಚಾರಣೆ ಎದುರಿಸುತ್ತಿದ್ದರೆ, ಬಿಹಾರದ ಮಾಜಿ ಮುಖ್ಯಮಂತ್ರಿ ಡಾ. ಜಗನ್ನಾಥ್ ಮಿಶ್ರಾ ಸೇರಿದಂತೆ 55 ಆರೋಪಿಗಳು ಸಾವನ್ನಪ್ಪಿದ್ದಾರೆ, ಏಳು ಮಂದಿ ಸರ್ಕಾರಿ ಸಾಕ್ಷಿಯಾಗಿದ್ದಾರೆ, ಇಬ್ಬರು ತಮ್ಮ ವಿರುದ್ಧದ ಆರೋಪಗಳನ್ನು ಒಪ್ಪಿಕೊಂಡಿದ್ದಾರೆ ಮತ್ತು ಆರು ಮಂದಿ ತಲೆಮರೆಸಿಕೊಂಡಿದ್ದಾರೆ.

ಡೊರಾಂಡಾ ಖಜಾನೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ನಂತರ ಲಾಲು ಮರಳಿ ಜೈಲಿಗೆ ಕಳುಹಿಸುವವರೆಗೆ ಅವರು ಮಂಗಳವಾರದವರೆಗೆ ಆ ಪ್ರಕರಣಗಳಲ್ಲಿ ಜಾಮೀನಿನ ಮೇಲೆ ಹೊರಗಿದ್ದರು. ಬಳಿಕ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಏನಿದು ಮೇವು ಹಗರಣ?
1996ರ ಜನವರಿಯಲ್ಲಿ ಪಶು ಸಂಗೋಪನಾ ಇಲಾಖೆ ಮೇಲೆ ದಾಳಿ ನಡೆಸಿದ ಬಳಿಕ ಮೇವು ಹಗರಣ ಬೆಳಕಿಗೆ ಬಂದಿತ್ತು. ಸಿಬಿಐ ಜೂನ್ 1997 ರಲ್ಲಿ ಪ್ರಸಾದ್ ಅವರನ್ನು ಆರೋಪಿ ಎಂದು ಹೆಸರಿಸಿತು. ಸಂಸ್ಥೆಯು ಲಾಲು ಮತ್ತು ಮಾಜಿ ಬಿಹಾರ ಮುಖ್ಯಮಂತ್ರಿ ಜಗನ್ನಾಥ್ ಮಿಶ್ರಾ ವಿರುದ್ಧ ಆರೋಪಗಳನ್ನು ದಾಖಲಿಸಿತು. ಸೆಪ್ಟೆಂಬರ್ 2013 ರಲ್ಲಿ, ವಿಚಾರಣಾ ನ್ಯಾಯಾಲಯವು ಮೇವು ಹಗರಣಕ್ಕೆ ಸಂಬಂಧಿಸಿದ ಒಂದು ಪ್ರಕರಣದಲ್ಲಿ ಲಾಲು, ಮಿಶ್ರಾ ಮತ್ತು ಇತರ 45 ಜನರನ್ನು ದೋಷಿ ಎಂದು ಘೋಷಿಸಿತು ಮತ್ತು ಲಾಲು ಅವರನ್ನು ರಾಂಚಿ ಜೈಲಿನಲ್ಲಿರಿಸಲಾಯಿತು. ಡಿಸೆಂಬರ್ 2013 ರಲ್ಲಿ, ಸುಪ್ರೀಂ ಕೋರ್ಟ್ ಈ ಪ್ರಕರಣದಲ್ಲಿ ಲಾಲು ಅವರಿಗೆ ಜಾಮೀನು ನೀಡಿತು. ಡಿಸೆಂಬರ್ 2017 ರಲ್ಲಿ, ಸಿಬಿಐ ನ್ಯಾಯಾಲಯವು ಲಾಲು ಮತ್ತು ಇತರ 15 ಮಂದಿಯನ್ನು ತಪ್ಪಿತಸ್ಥರೆಂದು ಘೋಷಿಸಿ ಬಿರ್ಸಾ ಮುಂಡಾ ಜೈಲಿಗೆ ಕಳುಹಿಸಿತು.

ಇದನ್ನೂ ಓದಿ: Murder: ಕೇರಳದ ಕಣ್ಣೂರಿನಲ್ಲಿ ಸಿಪಿಐಎಂ ಕಾರ್ಯಕರ್ತನ ಬರ್ಬರ ಹತ್ಯೆ; ಕೊಲೆಯ ಹಿಂದೆ ಆರ್​ಎಸ್​ಎಸ್​ ಕೈವಾಡದ ಆರೋಪ

Published On - 2:20 pm, Mon, 21 February 22