Mekapati Goutham Reddy ಆಂಧ್ರಪ್ರದೇಶದ ಸಚಿವ ಮೇಕಪಟಿ ಗೌತಮ್ ರೆಡ್ಡಿ ಹೃದಯಾಘಾತದಿಂದ ನಿಧನ

ಸೋಮವಾರ ಮುಂಜಾನೆ ತಮ್ಮ ಮನೆಯಲ್ಲಿ ಕುಸಿದು ಬಿದ್ದ ರೆಡ್ಡಿ ಅವರನ್ನು ಅಪೋಲೋ ಆಸ್ಪತ್ರೆಗೆ ಸಾಗಿಸಲಾಯಿತು. ಬೆಳಗ್ಗೆ 9.16ಕ್ಕೆ ರೆಡ್ಡಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.

Mekapati Goutham Reddy ಆಂಧ್ರಪ್ರದೇಶದ ಸಚಿವ ಮೇಕಪಟಿ ಗೌತಮ್ ರೆಡ್ಡಿ ಹೃದಯಾಘಾತದಿಂದ ನಿಧನ
ಮೇಕಪಟಿ ಗೌತಮ್ ರೆಡ್ಡಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Feb 21, 2022 | 4:11 PM

ಹೈದರಾಬಾದ್: ಆಂಧ್ರಪ್ರದೇಶದ (Andhra Pradesh) ಕೈಗಾರಿಕಾ ಸಚಿವ ಮೇಕಪಟಿ ಗೌತಮ್ ರೆಡ್ಡಿ (Mekapati Goutham Reddy) ಅವರು ಸೋಮವಾರ ಬೆಳಗ್ಗೆ ಹೃದಯಾಘಾತದಿಂದ ಹೈದರಾಬಾದ್‌ನ (Hyderabad)ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 50 ವರ್ಷವಾಗಿತ್ತು. ಸೋಮವಾರ ಮುಂಜಾನೆ ತಮ್ಮ ಮನೆಯಲ್ಲಿ ಕುಸಿದು ಬಿದ್ದ ರೆಡ್ಡಿ ಅವರನ್ನು ಅಪೋಲೋ ಆಸ್ಪತ್ರೆಗೆ ಸಾಗಿಸಲಾಯಿತು. ಬೆಳಗ್ಗೆ 9.16ಕ್ಕೆ ರೆಡ್ಡಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. “ಇಂದು ಬೆಳಿಗ್ಗೆ ಗೌತಮ್ ರೆಡ್ಡಿ ಅವರನ್ನು ತುರ್ತು ಪರಿಸ್ಥಿತಿಯಲ್ಲಿ ಜುಬಿಲಿ ಹಿಲ್ಸ್‌ನ ಅಪೋಲೋ ಆಸ್ಪತ್ರೆಗಳಿಗೆ ಕರೆತರಲಾಯಿತು. ಅವರು ಮನೆಯಲ್ಲಿ ಇದ್ದಕ್ಕಿದ್ದಂತೆ ಕುಸಿದುಬಿದ್ದರು. ಅವರು 07:45 ಕ್ಕೆ ನಮ್ಮ ಆಸ್ಪತ್ರೆಗೆ ದಾಖಲಾದಾಗ ಸ್ಪಂದಿಸುತ್ತಿರಲಿಲ್ಲ. ಉಸಿರಾಡುತ್ತಿರಲಿಲ್ಲ, ಆ ಹೊತ್ತಿಗೆ ಹೃದಯ ಸ್ತಂಭನವಾಗಿತ್ತು. ಎಂದು ಆಸ್ಪತ್ರೆಯು ಹೇಳಿಕೆಯಲ್ಲಿ ತಿಳಿಸಿದೆ. ನಮ್ಮ ತುರ್ತು ವಿಭಾಗದಲ್ಲಿ ತಕ್ಷಣ ಸಿಪಿಐಪ್ ಮತ್ತು ಸುಧಾರಿತ ಕಾರ್ಡಿಯಾಕ್ ಲೈಫ್ ಸಪೋರ್ಟ್ ನೀಡಲಾಯಿತು. ಸಿಪಿಆರ್ ಅನ್ನು 90 ನಿಮಿಷಗಳಿಗಿಂತ ಹೆಚ್ಚು ಕಾಲ ಮಾಡಲಾಯಿತು. ನಮ್ಮ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ ಅವರನ್ನು ಬದುಕಿಸಲು ಸಾಧ್ಯವಾಗಲಿಲ್ಲ” ಎಂದು ಆಸ್ಪತ್ರೆ ಹೇಳಿಕೆಯಲ್ಲಿ ತಿಳಿಸಿದೆ. ಸಚಿವರಿಗೆ ಗೌರವ ಸೂಚಕವಾಗಿ ಆಂಧ್ರ ಸರ್ಕಾರ ಎರಡು ದಿನಗಳ ಶೋಕಾಚರಣೆಯನ್ನು ಘೋಷಿಸಿದೆ. ಎಕ್ಸ್‌ಪೋ 2022 ಗಾಗಿ ದುಬೈನಲ್ಲಿ 10 ದಿನಗಳನ್ನು ಕಳೆದ ನಂತರ ರೆಡ್ಡಿ ಭಾನುವಾರ ಹೈದರಾಬಾದ್‌ಗೆ ಮರಳಿದರು. ಅವರು ಮಾಹಿತಿ ತಂತ್ರಜ್ಞಾನ ಖಾತೆ ಸಹ ಹೊಂದಿದ್ದರು.

ರೆಡ್ಡಿ ಅವರ ನಿಧನಕ್ಕೆ “ಆಳವಾದ ಆಘಾತ ಮತ್ತು ಆಳವಾದ ದುಃಖ” ವ್ಯಕ್ತಪಡಿಸಿದ ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಸಂತಾಪ ವ್ಯಕ್ತಪಡಿಸಿದ್ದಾರೆ.  ಅವರನ್ನು ” ಭರವಸೆಯ ಯುವ ನಾಯಕ” ಎಂದು ಕರೆದ ಮುಖ್ಯಮಂತ್ರಿಗಳು ತಮ್ಮ ಸುದೀರ್ಘ ವರ್ಷಗಳ ಒಡನಾಟವನ್ನು ಸ್ಮರಿಸಿದರು. “ನನ್ನ ಯುವ ಕ್ಯಾಬಿನೆಟ್ ಸಹೋದ್ಯೋಗಿಯ ನಷ್ಟವನ್ನು ವಿವರಿಸಲು ಪದಗಳು ವಿಫಲವಾಗಿವೆ” ಎಂದು ಅವರು ಹೇಳಿದ್ದಾರೆ.

ರೆಡ್ಡಿ ಮೃದು ಸ್ವಭಾವದ ವ್ಯಕ್ತಿ ಮತ್ತು ಅವರ ಉದ್ದೇಶಕ್ಕೆ ಬದ್ಧರಾಗಿರುವವರು ಎಂದು ಬಣ್ಣಿಸಿದ ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು, ಅವರು ಅಗಲಿದ ಸಚಿವರ ತಾತನ ಕಾಲದಿಂದಲೂ ಗೌತಮ್ ರೆಡ್ಡಿ ಅವರ ಕುಟುಂಬದ ಕುಟುಂಬದೊಂದಿಗೆ ಆತ್ಮೀಯರಾಗಿದ್ದರು ಎಂದು ಹೇಳಿದರು.

ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಕೂಡ ಸಚಿವರ ನಿಧನಕ್ಕೆ ಆಘಾತ ವ್ಯಕ್ತಪಡಿಸಿದ್ದಾರೆ. “ಗೌತಮ್ ಅವರ ನಿಧನವು ನನಗೆ ಆಳವಾದ ಆಘಾತವನ್ನುಂಟು ಮಾಡಿತು. ಅವರು ಮೃದುಭಾಷಿ ಮತ್ತು ಸಭ್ಯ ಸಚಿವರಾಗಿ ವಿಶೇಷ ಮನ್ನಣೆಯನ್ನು ಗಳಿಸಿದರು. ಭರವಸೆಯ ಭವಿಷ್ಯವನ್ನು ಹೊಂದಿರುವ ನಾಯಕ ಇಷ್ಟು ಬೇಗ ನಿರ್ಗಮಿಸಿರುವುದು ಅಪಾರ ದುಃಖವಾಗಿದೆ” ಎಂದು ನಾಯ್ಡು ಹೇಳಿದರು. ರೆಡ್ಡಿ ಮಾಜಿ ಸಂಸದ ಮೇಕಪಟಿ ರಾಜಮೋಹನ್ ರೆಡ್ಡಿ ಅವರ ಪುತ್ರ. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಅವರು ಮೊದಲು 2014 ರಲ್ಲಿ ಆತ್ಮಕೂರಿನಿಂದ ಶಾಸಕರಾಗಿ ಆಯ್ಕೆಯಾದರು ಮತ್ತು ನಂತರ 2019 ರಲ್ಲಿ ಅವರು 2019 ರಲ್ಲಿ ವೈಎಸ್ಆರ್ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ಆಂಧ್ರಪ್ರದೇಶ ಸಂಪುಟದಲ್ಲಿ ಸಚಿವರಾದರು.

ಇದನ್ನೂ ಓದಿ: Fodder scam ಮೇವು ಹಗರಣ ಪ್ರಕರಣ: ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್‌ಗೆ 5 ವರ್ಷ ಜೈಲು ಶಿಕ್ಷೆ, ₹60 ಲಕ್ಷ ದಂಡ

Published On - 3:52 pm, Mon, 21 February 22