Big News: ಗುಜರಾತ್​​ನ 2 ಸ್ಥಳಗಳಲ್ಲಿ 2,000 ಕೋಟಿ ರೂ. ಮೌಲ್ಯದ ಡ್ರಗ್ಸ್​ ವಶಕ್ಕೆ

| Updated By: ಸುಷ್ಮಾ ಚಕ್ರೆ

Updated on: Aug 17, 2022 | 9:13 AM

ವಶಪಡಿಸಿಕೊಂಡ ಡ್ರಗ್ಸ್ ಅನ್ನು ಸುಮಾರು 6 ತಿಂಗಳ ಹಿಂದೆಯೇ ಸಿದ್ಧಪಡಿಸಲಾಗಿತ್ತು ಎಂದು ಎಟಿಎಸ್ ಡಿಐಜಿ ದೀಪೇನ್ ಭದ್ರನ್ ಹೇಳಿದ್ದಾರೆ. ದೇಶದ ವಿವಿಧ ಭಾಗಗಳಿಗೆ ಸರಬರಾಜಾಗುವ ಎಲ್ಲಾ ರೀತಿಯ ಡ್ರಗ್ಸ್​​ಗಳನ್ನು ಒಂದೇ ಬಾರಿಗೆ ಸಿದ್ಧಪಡಿಸಿರುವ ಸಾಧ್ಯತೆಗಳಿವೆ.

Big News: ಗುಜರಾತ್​​ನ 2 ಸ್ಥಳಗಳಲ್ಲಿ 2,000 ಕೋಟಿ ರೂ. ಮೌಲ್ಯದ ಡ್ರಗ್ಸ್​ ವಶಕ್ಕೆ
ಸಂಗ್ರಹ ಚಿತ್ರ
Follow us on

ಅಹಮದಾಬಾದ್: ಗುಜರಾತ್‌ನ ವಡೋದರಾ (Vadodara) ಮತ್ತು ಅಂಕಲೇಶ್ವರದಲ್ಲಿ (Ankleshwara) 713 ಕೆಜಿ ಡ್ರಗ್ ವಶಪಡಿಸಿಕೊಳ್ಳಲಾಗಿದ್ದು, ಇದರ ಮೌಲ್ಯ 2,000 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಗುಜರಾತ್​ನ (Gujarat) ಎಟಿಎಸ್ ವಡೋದರಾದಲ್ಲಿ ಅಪಾರ ಪ್ರಮಾಣದ ಡ್ರಗ್ಸ್ ವಶಪಡಿಸಿಕೊಂಡಿದ್ದು, ಮುಂಬೈ ಪೊಲೀಸರ ಆ್ಯಂಟಿ ನಾರ್ಕೋಟಿಕ್ಸ್ ಸೆಲ್ ಭರೂಚ್‌ನ ಅಂಕಲೇಶ್ವರದಿಂದ ಅಪಾರ ಪ್ರಮಾಣದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದೆ.

ವಡೋದರಾದ ಕಾರ್ಖಾನೆಯೊಂದರಲ್ಲಿ ಎಂಡಿಎಂಎ ಡ್ರಗ್ಸ್​ ಅನ್ನು ಅಕ್ರಮವಾಗಿ ತಯಾರಿಸಲಾಗುತ್ತಿತ್ತು. ಮೋಕ್ಸಿ ಗ್ರಾಮದ ಈ ಕಾರ್ಖಾನೆಯಿಂದ ವಶಪಡಿಸಿಕೊಂಡ 200 ಕೆಜಿ ಡ್ರಗ್ಸ್​ನ ಮೌಲ್ಯ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು 1,000 ಕೋಟಿ ರೂ. ಎನ್ನಲಾಗಿದೆ. ವಶಪಡಿಸಿಕೊಂಡ ಡ್ರಗ್ಸ್ ಅನ್ನು ಸುಮಾರು 6 ತಿಂಗಳ ಹಿಂದೆಯೇ ಸಿದ್ಧಪಡಿಸಲಾಗಿತ್ತು ಎಂದು ಎಟಿಎಸ್ ಡಿಐಜಿ ದೀಪೇನ್ ಭದ್ರನ್ ಹೇಳಿದ್ದಾರೆ. ದೇಶದ ವಿವಿಧ ಭಾಗಗಳಿಗೆ ಸರಬರಾಜಾಗುವ ಎಲ್ಲಾ ರೀತಿಯ ಡ್ರಗ್ಸ್​​ಗಳನ್ನು ಒಂದೇ ಬಾರಿಗೆ ಸಿದ್ಧಪಡಿಸಿರುವ ಸಾಧ್ಯತೆಗಳಿವೆ.

ಇದನ್ನೂ ಓದಿ: Murder: ಡ್ರಗ್ಸ್​​ ಸೇವಿಸುತ್ತಿದ್ದ ಮಗನನ್ನು ಕತ್ತರಿಸಿ, ಪ್ಲಾಸ್ಟಿಕ್ ಬ್ಯಾಗ್​ನಲ್ಲಿ ತುಂಬಿ ಬಿಸಾಡಿದ ಅಪ್ಪ!

ಮುಂಬೈ ಪೊಲೀಸರು ಭರೂಚ್‌ನಿಂದ 513 ಕೆಜಿ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಮುಂಬೈ ಪೊಲೀಸರ ಆ್ಯಂಟಿ ನಾರ್ಕೋಟಿಕ್ಸ್ ಸೆಲ್ ಗುಜರಾತ್‌ನ ಭರೂಚ್ ಜಿಲ್ಲೆಯ ಅಂಕಲೇಶ್ವರದಲ್ಲಿ 513 ಕೆಜಿ ಎಂಡಿ ಡ್ರಗ್ ಅನ್ನು ವಶಪಡಿಸಿಕೊಂಡಿದೆ. ಈ ಪ್ರಕರಣದಲ್ಲಿ ಮಹಿಳೆ ಸೇರಿದಂತೆ 7 ಮಂದಿಯನ್ನು ನಾರ್ಕೋಟಿಕ್ ಸೆಲ್ ನ ವರ್ಲಿ ಶಾಖೆ ಬಂಧಿಸಿದೆ. ವಶಪಡಿಸಿಕೊಂಡ ಮಾದಕ ದ್ರವ್ಯದ ಮೌಲ್ಯ 1,260 ಕೋಟಿ ರೂ. ಎಂದು ಪೊಲೀಸರು ತಿಳಿಸಿದ್ದಾರೆ.

ವಡೋದರಾದಲ್ಲಿ ಕೆಮಿಕಲ್ ನೆಪದಲ್ಲಿ ಡ್ರಗ್ ತಯಾರಿಸಲಾಗುತ್ತಿತ್ತು ಎಂದು ಗುಜರಾತ್ ಎಟಿಎಸ್‌ನ ಡಿಐಜಿ ದೀಪೇನ್ ಭದ್ರನ್ ಹೇಳಿದ್ದಾರೆ. ವಡೋದರಾದ ಸಾವ್ಲಿ ತಹಸಿಲ್ ಬಳಿ ಮಾದಕ ವಸ್ತುಗಳ ರವಾನೆಯಾಗುತ್ತಿದೆ ಎಂಬ ರಹಸ್ಯ ಮಾಹಿತಿ ಲಭಿಸಿದ್ದರಿಂದ ಸೋಮವಾರ ಮೋಕ್ಷಿ ಗ್ರಾಮದ ಈ ಕಾರ್ಖಾನೆ ಮೇಲೆ ಎಟಿಎಸ್ ದಾಳಿ ನಡೆಸಿತ್ತು. ಅಲ್ಲಿ ಡ್ರಗ್ಸ್ ಸಂಗ್ರಹ ಪತ್ತೆಯಾಗಿದ್ದು ಮಾತ್ರವಲ್ಲದೇ ರಾಸಾಯನಿಕಗಳನ್ನು ತಯಾರಿಸುವ ನೆಪದಲ್ಲಿ ಎಂಡಿಎಂಎ ಡ್ರಗ್ಸ್ ತಯಾರಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ಈ ಪ್ರಕರಣದಲ್ಲಿ ಕೆಲವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ತನಿಖೆಯ ನಂತರವಷ್ಟೇ ಸಂಪೂರ್ಣ ಮಾಹಿತಿ ಹೊರಬೀಳಲಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಡ್ರಗ್ಸ್​ ಪಾರ್ಟಿ ಕೇಸ್: ವಿಚಾರಣೆಗೆ ಹಾಜರಾಗಲು ಕಾಲಾವಕಾಶ ಕೇಳಿದ ಸಿದ್ಧಾರ್ಥ ಕಪೂರ್

ಪ್ರಾಥಮಿಕ ತನಿಖೆಯಲ್ಲಿ ಗೋವಾ ಮತ್ತು ಮುಂಬೈಗೆ ಡ್ರಗ್ಸ್ ಪೂರೈಕೆಯಾಗುತ್ತಿರುವುದು ಪತ್ತೆಯಾಗಿದೆ ಎಂದು ದೀಪೇನ್ ಭದ್ರನ್ ಹೇಳಿದ್ದಾರೆ. ಇಲ್ಲಿಂದ ದೇಶದ ಇತರ ಭಾಗಗಳಿಗೂ ಡ್ರಗ್ಸ್ ರವಾನೆಯಾಗಿರುವ ಬಗ್ಗೆ ಎಟಿಎಸ್ ಶಂಕೆ ವ್ಯಕ್ತಪಡಿಸಿದೆ. ಈ ದಂಧೆಯಲ್ಲಿ ಭಾಗಿಯಾಗಿರುವವರನ್ನೂ ಪತ್ತೆ ಹಚ್ಚಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ