ಕಂಠಪೂರ್ತಿ ಕುಡಿದು ಮಂಟಪದಲ್ಲೇ ಕುಸಿದುಬಿದ್ದ ಮದುಮಗ; ಮದುವೆಯಾಗಲ್ಲ ಎಂದು ಪಟ್ಟು ಹಿಡಿದ ವಧು!

ಬಿಹಾರದಲ್ಲಿ ಕಂಠಪೂರ್ತಿ ಕುಡಿದ ವರನೊಬ್ಬ ಮಂಟಪದಲ್ಲೇ ಕುಸಿದುಬಿದ್ದಿದ್ದಾನೆ. ವಧುವಿಗೆ ಹಾರ ಹಾಕುವಾಗ ಕುಸಿದುಬಿದ್ದ ಆತನನ್ನು ಮದುವೆಯಾಗುವುದಿಲ್ಲ ಎಂದು ವಧು ಹಠ ಹಿಡಿದಿದ್ದಾಳೆ. ಆತನ ಕುಡಿತದ ಚಟದಿಂದ ಮದುವೆಯೇ ನಿಂತುಹೋಗಿದೆ. ಬುಲ್ಬುಲ್ ಮಹತೋ ಅವರ ಮಗಳು ಕಾಜಿರ್ ಸಲ್ಪುರ್ ಗ್ರಾಮದಲ್ಲಿ ಭುಲ್ಲಾ ಮಹತೋ ಅವರ ಮಗನನ್ನು ಮದುವೆಯಾಗಬೇಕಿತ್ತು. ಆದರೆ, ವರ ಕಂಠಪೂರ್ತಿ ಕುಡಿದಿದ್ದನ್ನು ಕಂಡು ವಧುವಿನ ಕುಟುಂಬಸ್ಥರು ಬೆಚ್ಚಿಬಿದ್ದಿದ್ದಾರೆ.

ಕಂಠಪೂರ್ತಿ ಕುಡಿದು ಮಂಟಪದಲ್ಲೇ ಕುಸಿದುಬಿದ್ದ ಮದುಮಗ; ಮದುವೆಯಾಗಲ್ಲ ಎಂದು ಪಟ್ಟು ಹಿಡಿದ ವಧು!
ಮಂಟಪದಲ್ಲೇ ಕುಸಿದುಬಿದ್ದ ಮದುಮಗ
Follow us
ಸುಷ್ಮಾ ಚಕ್ರೆ
|

Updated on: Dec 10, 2024 | 9:43 PM

ಲಕ್ನೋ: ಬಿಹಾರದ ಬೇಗುಸರಾಯ್‌ನಲ್ಲಿ ಅತಿಯಾಗಿ ಅಮಲೇರಿಸಿಕೊಂಡ ವರನೊಬ್ಬ ಹಾರ ಹಾಕುವ ಮುನ್ನ ಮಂಟಪದ ಮೇಲೆ ಕುಸಿದುಬಿದ್ದಿದ್ದಾನೆ. ಬಿದ್ದ ವರನನ್ನು ಮದುವೆಯಾಗಲು ವಧು ನಿರಾಕರಿಸಿದ್ದಾಳೆ. ಡಿಸೆಂಬರ್ 8ರಂದು ಈ ಘಟನೆ ನಡೆದಿದೆ.

ಬುಲ್ಬುಲ್ ಮಹತೋ ಅವರ ಮಗಳು ಕಾಜಿರ್ ಸಲ್ಪುರ್ ಗ್ರಾಮದಲ್ಲಿ ಭುಲ್ಲಾ ಮಹತೋ ಅವರ ಮಗನನ್ನು ಮದುವೆಯಾಗಬೇಕಿತ್ತು. ಆದರೆ, ವರ ಬಂದಾಗ ಬಾಲಕಿಯ ಕುಟುಂಬಸ್ಥರು ಆತ ಕಂಠಪೂರ್ತಿ ಕುಡಿದಿದ್ದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ವರ ಹಾರ ಹಾಕುವಾಗ ನಿಯಂತ್ರಣ ತಪ್ಪಿ ಬಿದ್ದಿದ್ದಾನೆ. ಇದರಿಂದ ಕೋಪಗೊಂಡ ವಧು ಮದುವೆಯನ್ನು ನಿರಾಕರಿಸಿದ್ದಾಳೆ.

ಇದನ್ನೂ ಓದಿ: ಅದಾನಿ ಕುಟುಂಬದಲ್ಲಿ ಮದುವೆ ಸಂಭ್ರಮ: ಉದಯಪುರದ ಐಷಾರಾಮಿ ಹೋಟೆಲ್​ನಲ್ಲಿ ಭರ್ಜರಿ ಸಿದ್ಧತೆ

ಬಳಿಕ, ಹುಡುಗನ ಕುಟುಂಬವು ವಧುವಿನ ಕುಟುಂಬಕ್ಕೆ ಮದುವೆಯ ಉಡುಗೊರೆಯಾಗಿ ಪಡೆದ ಹಣ ಮತ್ತು ವಸ್ತುಗಳನ್ನು ಹಿಂದಿರುಗಿಸಿ ಆ ಮದುವೆಯನ್ನು ಮುರಿಯಲಾಯಿತು. ಅಷ್ಟರಲ್ಲಿ ಪೊಲೀಸರಿಗೆ ಘಟನೆಯ ಮಾಹಿತಿ ಸಿಕ್ಕಿದ್ದು, ವರನನ್ನು ಬಂಧಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ