Earthquake: ಮಹಾರಾಷ್ಟ್ರದ ನಾಸಿಕ್​ನಲ್ಲಿ 3.6 ತೀವ್ರತೆಯ ಭೂಕಂಪ

ಇಂದು (ಬುಧವಾರ) ಮುಂಜಾನೆ ಮಹಾರಾಷ್ಟ್ರದ (Maharashtra) ನಾಸಿಕ್ ಜಿಲ್ಲೆಯ ಪಶ್ಚಿಮ ಭಾಗದಲ್ಲಿ 3.6 ತೀವ್ರತೆಯ ಭೂಕಂಪ (Earthquake) ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ತಿಳಿಸಿದೆ.

Earthquake: ಮಹಾರಾಷ್ಟ್ರದ ನಾಸಿಕ್​ನಲ್ಲಿ 3.6 ತೀವ್ರತೆಯ ಭೂಕಂಪ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Nov 23, 2022 | 10:31 AM

ನಾಸಿಕ್: ಇಂದು (ಬುಧವಾರ) ಮುಂಜಾನೆ ಮಹಾರಾಷ್ಟ್ರದ (Maharashtra) ನಾಸಿಕ್ ಜಿಲ್ಲೆಯ ಪಶ್ಚಿಮ ಭಾಗದಲ್ಲಿ 3.6 ತೀವ್ರತೆಯ ಭೂಕಂಪ (Earthquake) ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ತಿಳಿಸಿದೆ. 23-11-2022 ರಂದು  ಭೂಕಂಪ ಸಂಭವಿಸಿದೆ.  3.6, 23-11-2022, 04:04:35 IST, ಲ್ಯಾಟ್: 19.95 ಮತ್ತು ಉದ್ದ: 72.94, ಆಳ: 5 ಕಿಮೀ, ಸ್ಥಳ: 89 ಕಿಮೀ ವಾಟ್ ನಾಸಿಕ್, ಮಹಾರಾಷ್ಟ್ರ, ಭಾರತ, ಎಂದು ಭೂಕಂಪಶಾಸ್ತ್ರದ ಕೇಂದ್ರ ರಾಷ್ಟ್ರೀಯ ಟ್ವೀಟ್ ಮಾಡಿದೆ.

ಮುಂಜಾನೆ 4 ಗಂಟೆ ಸುಮಾರಿಗೆ ಭೂಮಿಯಿಂದ 5 ಕಿ.ಮೀ ಆಳದಲ್ಲಿ ಭೂಕಂಪನ ಸಂಭವಿಸಿದೆ. ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿಗೆ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಮಂಗಳವಾರ, ಲಡಾಖ್‌ನ ಕಾರ್ಗಿಲ್ ಜಿಲ್ಲೆಯಲ್ಲಿ 4.3 ತೀವ್ರತೆಯ ಭೂಕಂಪ ಸಂಭವಿಸಿದೆ.

ಲಡಾಖ್‌ನಲ್ಲಿ 4.3 ತೀವ್ರತೆಯ ಭೂಕಂಪ

ನಿನ್ನೆ ಲಡಾಖ್‌ನ ಕಾರ್ಗಿಲ್‌ (Kargil) ಬಳಿ (ಮಂಗಳವಾರ) ಬೆಳಗ್ಗೆ 10.05ಕ್ಕೆ ರಿಕ್ಟರ್ ಮಾಪಕದಲ್ಲಿ 4.3 ತೀವ್ರತೆಯ ಭೂಕಂಪ (Earthquake) ಸಂಭವಿಸಿದೆ ಎಂದು ಭೂಕಂಪನದ ರಾಷ್ಟ್ರೀಯ ಕೇಂದ್ರ ತಿಳಿಸಿದೆ. ಆದರೆ, ಈ ಭೂಕಂಪದಿಂದ ಯಾವುದೇ ಹಾನಿಗಳು ಸಂಭವಿಸಿಲ್ಲ ಎನ್ನಲಾಗಿದೆ.

ಇದನ್ನು ಓದಿ:  ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪ, ಸಾವಿನ ಸಂಖ್ಯೆ 162ಕ್ಕೆ ಏರಿಕೆ!

ಲಡಾಖ್​​ನ ಕಾರ್ಗಿಲ್ ನಗರದಲ್ಲಿ ಇಂದು ಭೂಕಂಪನ ವರದಿಯಾಗುತ್ತಿದ್ದಂತೆ ಭಾರತದಲ್ಲಿ ಭೂಕಂಪಗಳ ಅಲೆ ಮುಂದುವರೆದಿದೆ. ಭೂಕಂಪದ ತೀವ್ರತೆ 4.3ರಷ್ಟಿದ್ದು, ಕಾರ್ಗಿಲ್​ನಲ್ಲಿ ಭೂ ಕಂಪನದಿಂದ ಯಾವುದೇ ಹಾನಿ ಸಂಭವಿಸಿಲ್ಲ. ಭೂಕಂಪನದ ರಾಷ್ಟ್ರೀಯ ಕೇಂದ್ರವು ಲಡಾಖ್‌ನಲ್ಲಿ ಭೂಕಂಪನದ ಬಗ್ಗೆ ಎಚ್ಚರಿಕೆಯನ್ನು ಕಳುಹಿಸಿದೆ. ಭೂಕಂಪನ ಇಲಾಖೆಯ ಪ್ರಕಾರ, ಇಂದು ಬೆಳಿಗ್ಗೆ 10.05ರ ಸುಮಾರಿಗೆ ಭೂಕಂಪನ ವರದಿಯಾಗಿದೆ.

ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:30 am, Wed, 23 November 22