ಮಣಿಪುರದಲ್ಲಿ ಸತತ 2ದಿನಗಳಿಂದ ಭೂಕಂಪ; ಇಂದು 3.8ರಷ್ಟು ತೀವ್ರತೆ ದಾಖಲು

Manipur Earthquake: ಇತ್ತೀಚೆಗೆ ಭಾರತದಲ್ಲಿ ಅಲ್ಲಲ್ಲಿ ಭೂಕಂಪನದ ಪ್ರಮಾಣ ಜಾಸ್ತಿಯಾಗಿದೆ. ಆದರೆ ದೊಡ್ಡಮಟ್ಟದ ಹಾನಿಗಳು ಆಗಿಲ್ಲ. ಸಾಮಾನ್ಯವಾಗಿ ಭೂಮೇಲ್ಮೈನಿಂದ ಎಷ್ಟು ಕಿಮೀ ಆಳದಲ್ಲಿ ಕಂಪನವಾಗುತ್ತದೆ ಎಂಬುದರ ಆಧಾರದ ಮೇಲೆ ಹಾನಿಯ ಪ್ರಮಾಣವೂ ನಿರ್ಧರಿತವಾಗುತ್ತದೆ.

ಮಣಿಪುರದಲ್ಲಿ ಸತತ 2ದಿನಗಳಿಂದ ಭೂಕಂಪ; ಇಂದು 3.8ರಷ್ಟು ತೀವ್ರತೆ ದಾಖಲು
ಸಾಂಕೇತಿಕ ಚಿತ್ರ
Follow us
TV9 Web
| Updated By: Lakshmi Hegde

Updated on: Nov 09, 2021 | 4:44 PM

ಮಣಿಪುರದಲ್ಲಿ ಇಂದು ಮುಂಜಾನೆ ಭೂಕಂಪ (Earthquake) ಉಂಟಾಗಿದ್ದು, ರಿಕ್ಟರ್​ ಮಾಪಕದಲ್ಲಿ 3.8ರಷ್ಟು ತೀವ್ರತೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರ ತಿಳಿಸಿದೆ. ನಿನ್ನೆಯೂ ಕೂಡ ಮಣಿಪುರದ ಉಖ್ರುಲ್​​ನಲ್ಲಿ ಭೂಕಂಪ ಉಂಟಾಗಿತ್ತು. ಅದರ ತೀವ್ರತೆ 4.4ರಷ್ಟಿತ್ತು. ಇಂದು ಬೆಳಗ್ಗೆ 9.47ರ ಹೊತ್ತಿಗೆ ಮಣಿಪುರದ ಶಿರುಯಿಯಲ್ಲಿ ಭೂಕಂಪ ಉಂಟಾಗಿದೆ. ಅಂದರೆ ಶಿರುಯಿಯಿಂದ ಈಶಾನ್ಯಕ್ಕೆ 62 ಕಿಮೀ ದೂರದಲ್ಲಿ ಭೂ ಮೇಲ್ಮೈ ಆಳದಿಂದ 60 ಕಿಮೀ ಆಳದಲ್ಲಿ ಭೂಮಿ ನಡುಗಿದೆ.   

ಅದಕ್ಕೂ ಮೊದಲು ಕಳೆದ ಗುರುವಾರವೂ ಕೂಡ ಮಣಿಪುರದಲ್ಲಿ ಭೂಕಂಪನ ಉಂಟಾಗಿತ್ತು. ಅಂದು ಮೊಯಿರಂಗ್​ ಸಮೀಪ ಸುಮಾರು 3.5 ರಷ್ಟು ತೀವ್ರತೆಯಲ್ಲಿ, ಭೂ ಮೇಲ್ಮೈಯಿಂದ 57 ಕಿಮೀ ಆಳದಲ್ಲಿ ಭೂಮಿ ನಡುಗಿತ್ತು.  ಆದರೆ ಇದುವರೆಗೆ ಮೂರ್ನಾಲ್ಕು ಬಾರಿ ಭೂಕಂಪನವಾದರೂ ಕೂಡ ಯಾವುದೇ ದೊಡ್ಡ ಮಟ್ಟದ ಹಾನಿಯಾಗಿಲ್ಲ. ಯಾರ ಜೀವಕ್ಕೂ ಅಪಾಯ ಆಗಿಲ್ಲ.

ಇತ್ತೀಚೆಗೆ ಭಾರತದಲ್ಲಿ ಅಲ್ಲಲ್ಲಿ ಭೂಕಂಪನದ ಪ್ರಮಾಣ ಜಾಸ್ತಿಯಾಗಿದೆ. ಆದರೆ ದೊಡ್ಡಮಟ್ಟದ ಹಾನಿಗಳು ಆಗಿಲ್ಲ. ಸಾಮಾನ್ಯವಾಗಿ ಭೂಮೇಲ್ಮೈನಿಂದ ಎಷ್ಟು ಕಿಮೀ ಆಳದಲ್ಲಿ ಕಂಪನವಾಗುತ್ತದೆ ಎಂಬುದರ ಆಧಾರದ ಮೇಲೆ ಹಾನಿಯ ಪ್ರಮಾಣವೂ ನಿರ್ಧರಿತವಾಗುತ್ತದೆ. ಹಾಗೊಮ್ಮೆ ಪ್ರಬಲ ಭೂಕಂಪನವಾದರೆ ಕಟ್ಟಡಗಳು, ಅಣೆಕಟ್ಟುಗಳು, ಸೇತುವೆಗಳೆಲ್ಲ ಕುಸಿದು ಬೀಳುತ್ತವೆ. ಜನರ ಜೀವವೂ ಹೋಗುತ್ತದೆ. ಹಿಂದೆಲ್ಲ ಹಲವು ಬಾರಿ ಭಾರತದಲ್ಲಿ ಇಂಥ ದೊಡ್ಡಮಟ್ಟದ ಭೂಕಂಪಗಳು ಉಂಟಾಗಿದ್ದವು.

ಇದನ್ನೂ ಓದಿ: Covid Vaccines: ಭಾರತದಲ್ಲಿ ಬಳಕೆಯಾಗದೆ ಉಳಿದ ಕೊವಿಡ್ ಲಸಿಕೆಗಳ ಪ್ರಮಾಣ 15 ಕೋಟಿ!