AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊವ್ಯಾಕ್ಸಿನ್​ ಎರಡೂ ಡೋಸ್​ ಲಸಿಕೆ ಪಡೆದವರೂ ಇನ್ಮುಂದೆ ಯುಎಸ್​ಗೆ ಪ್ರಯಾಣಿಸಬಹುದು !

ಭಾರತದಲ್ಲಿ ಜನವರಿಯಿಂದಲೇ ಕೊವ್ಯಾಕ್ಸಿನ್​ ಕೊವಿಡ್​ 19 ಲಸಿಕೆ ನೀಡಲಾಗುತ್ತಿತ್ತಾದರೂ ಕಡಿಮೆ ಜನರಿಗೆ ನೀಡಲಾಗುತ್ತಿತ್ತು. ಕೊವಿಶೀಲ್ಡ್​ ಕೊರೊನಾ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮತಿ ನೀಡಿದ್ದರೂ ಕೊವ್ಯಾಕ್ಸಿನ್​​ಗೆ ಅನುಮತಿ ನೀಡಿರಲಿಲ್ಲ.

ಕೊವ್ಯಾಕ್ಸಿನ್​ ಎರಡೂ ಡೋಸ್​ ಲಸಿಕೆ ಪಡೆದವರೂ ಇನ್ಮುಂದೆ ಯುಎಸ್​ಗೆ ಪ್ರಯಾಣಿಸಬಹುದು !
ಕೊವ್ಯಾಕ್ಸಿನ್ ಲಸಿಕೆ
TV9 Web
| Edited By: |

Updated on:Nov 09, 2021 | 5:46 PM

Share

ವಾಷಿಂಗ್ಟನ್​: ಭಾರತ್​ ಬಯೋಟೆಕ್​ನ ಕೊವ್ಯಾಕ್ಸಿನ್ (Covaxin)​ ಲಸಿಕೆ ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮತಿ ನೀಡಿದ ಬೆನ್ನಲ್ಲೇ ಒಂದೊಂದೇ ರಾಷ್ಟ್ರಗಳು ಕೊವ್ಯಾಕ್ಸಿನ್​​ಗೆ ಮಾನ್ಯತೆ ನೀಡುತ್ತಿವೆ. ಇದೀಗ ಯುಎಸ್​​ನ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರವೂ ಕೂಡ ಕೊವ್ಯಾಕ್ಸಿನ್​​ಗೆ ಅನುಮೋದನೆ ನೀಡಿದೆ. ಇದರ ಅನ್ವಯ  ಇನ್ನುಮುಂದೆ  ಎರಡೂ ಡೋಸ್​ ಕೊವ್ಯಾಕ್ಸಿನ್​ ಲಸಿಕೆ ಪಡೆದ ಭಾರತೀಯರು ಅಥವಾ ಭಾರತದಲ್ಲಿರುವ ಇನ್ಯಾವುದೇ ದೇಶದವರು ಅಮೆರಿಕಕ್ಕೆ ಪ್ರಯಾಣ ಮಾಡಬಹುದಾಗಿದೆ.  

ಈ ಬಗ್ಗೆ ಸಿಡಿಸಿ ಮಾಧ್ಯಮ ಅಧಿಕಾರಿ ಸ್ಕಾಟ್​ ಪೌಲೆ ಮಾಹಿತಿ ನೀಡಿದ್ದಾರೆ. ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಯುಎಸ್​​ನ ಎಫ್​ಡಿಎ (ಆಹಾರ ಮತ್ತು ಔಷಧ ಆಡಳಿತ)ಅನುಮೋದನೆ ನೀಡಿದ ಕೊವಿಡ್​ 19 ಲಸಿಕೆಗಳಿಗೆ ಸಿಡಿಸಿಯ ಪ್ರಯಾಣ ಮಾರ್ಗಸೂಚಿಯಲ್ಲಿ ಸೇರಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಲಸಿಕೆಯೂ ಸೇರ್ಪಡೆಯಾಗಲಿದೆ ಎಂದು ಹೇಳಿದ್ದಾರೆ.  ಯುಎಸ್​ನ ಫುಡ್​ ಆ್ಯಂಡ್​ ಡ್ರಗ್​ ಪ್ರಾಧಿಕಾರ ಮತ್ತು ಡಬ್ಲ್ಯೂಎಚ್​ಒ ಅನುಮೋದನೆ ನೀಡಿದ ಕೊವಿಡ್​ 19 ಲಸಿಕೆಗಳನ್ನು ಪಡೆದವರು ಯುಎಸ್​ ಪ್ರವೇಶ ಮಾಡಬಹುದು ಎಂಬ ನಿಯಮವುಳ್ಳ ಹೊಸ ಪ್ರಯಾಣ ಮಾರ್ಗಸೂಚಿಯನ್ನು ಯುಎಸ್​ ಕಳೆದವಾರವಷ್ಟೇ ಹೊರಡಿಸಿದೆ. ಈ ಮಾರ್ಗಸೂಚಿ ಹೊರಡಿಸುವ ಕೊನೇ ಕ್ಷಣದಲ್ಲಿ ಕೊವ್ಯಾಕ್ಸಿನ್​ ಲಸಿಕೆಯನ್ನೂ ಅದಕ್ಕೆ ಸೇರ್ಪಡೆ ಮಾಡಲಾಗಿದೆ ಎಂದು ಹೇಳಲಾಗಿದೆ. ಅದರ ಅನ್ವಯ ಫೈಜರ್​​, ಜಾನ್ಸನ್​ ಆ್ಯಂಡ್​ ಜಾನ್ಸನ್​, ಮಾಡೆರ್ನಾ, ಆಕ್ಸಫರ್ಡ್​, ಕೊವಿಶೀಲ್ಡ್​, ಸಿನೋಫಾರ್ಮ್​ ಮತ್ತು ಸಿನೋವ್ಯಾಕ್​ ಲಸಿಕೆಗಳನ್ನೂ ಕೂಡ ಯುಎಸ್​ ಒಪ್ಪಿಕೊಳ್ಳಲಿದೆ.

ಭಾರತದಲ್ಲಿ ಜನವರಿಯಿಂದಲೇ ಕೊವ್ಯಾಕ್ಸಿನ್​ ಕೊವಿಡ್​ 19 ಲಸಿಕೆ ನೀಡಲಾಗುತ್ತಿತ್ತಾದರೂ ಕಡಿಮೆ ಜನರಿಗೆ ನೀಡಲಾಗುತ್ತಿತ್ತು. ಕೊವಿಶೀಲ್ಡ್​ ಕೊರೊನಾ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮತಿ ನೀಡಿದ್ದರೂ ಕೊವ್ಯಾಕ್ಸಿನ್​​ಗೆ ಅನುಮತಿ ನೀಡಿರಲಿಲ್ಲ. ಅದರ ತುರ್ತು ಬಳಕೆ ಪಟ್ಟಿಯಲ್ಲಿ ಕೊವ್ಯಾಕ್ಸಿನ್​ ಸೇರ್ಪಡೆಯಾಗಿರಲಿಲ್ಲ. ಆದರೆ ಇತ್ತೀಚೆಗೆ ಕೊವ್ಯಾಕ್ಸಿನ್​ಗೆ ಕೂಡ ಅನುಮೋದನೆ ನೀಡಿದೆ.

ಇದನ್ನೂ ಓದಿ: ‘ನಾನು ಹೈಡ್ರೋಜನ್​ ಬಾಂಬ್ ಸ್ಫೋಟಿಸುತ್ತೇನೆ‘-ಫಡ್ನವೀಸ್​ಗೆ ನವಾಬ್​ ಮಲ್ಲಿಕ್​ ತಿರುಗೇಟು !

Published On - 5:46 pm, Tue, 9 November 21

Follow Us
TV9 Web
TV9 Web

TV9 Kannada

Read More
ಅವಧಿಗೂ ಮುನ್ನ SIR ಅಂತ್ಯ: 2.01 ಲಕ್ಷ ಮತದಾರರ ಹೆಸರು ಡಿಲೀಟ್​
ಅವಧಿಗೂ ಮುನ್ನ SIR ಅಂತ್ಯ: 2.01 ಲಕ್ಷ ಮತದಾರರ ಹೆಸರು ಡಿಲೀಟ್​
ಕಾಂಗ್ರೆಸ್​​​ನ 25 ಶಾಸಕರು ಬಿಜೆಪಿ ಸೇರಲು ರೆಡಿ ಇದ್ದಾರೆ: ವಿಜಯೇಂದ್ರ
ಕಾಂಗ್ರೆಸ್​​​ನ 25 ಶಾಸಕರು ಬಿಜೆಪಿ ಸೇರಲು ರೆಡಿ ಇದ್ದಾರೆ: ವಿಜಯೇಂದ್ರ
ಹಿಂಡಲಗಾ ಜೈಲಿಗೆ ಹೋಗ್ತಿದ್ದ ಪ್ರಜ್ವಲ್ ಇದ್ದ ವಾಹನ ಅರ್ಧಕ್ಕೆ ವಾಪಸ್
ಹಿಂಡಲಗಾ ಜೈಲಿಗೆ ಹೋಗ್ತಿದ್ದ ಪ್ರಜ್ವಲ್ ಇದ್ದ ವಾಹನ ಅರ್ಧಕ್ಕೆ ವಾಪಸ್
ಮಂಜನಿಗೆ ಮುಂದೆ ಒಳ್ಳೆಯ ಭವಿಷ್ಯ ಇದೆ: ಸಂಗೀತಾ ಭಟ್ ಅಚ್ಚರಿಯ ಹೇಳಿಕೆ
ಮಂಜನಿಗೆ ಮುಂದೆ ಒಳ್ಳೆಯ ಭವಿಷ್ಯ ಇದೆ: ಸಂಗೀತಾ ಭಟ್ ಅಚ್ಚರಿಯ ಹೇಳಿಕೆ
ಸಿಎಂ ಡಿಕೆಶಿ​​ ಕುರ್ತಾ ಹಿಡಿದು ತಳ್ಳಿದ ರಾಹುಲ್ ಗಾಂಧಿ! ಕನ್ನಡಿಗರ ಆಕ್ರೋಶ
ಸಿಎಂ ಡಿಕೆಶಿ​​ ಕುರ್ತಾ ಹಿಡಿದು ತಳ್ಳಿದ ರಾಹುಲ್ ಗಾಂಧಿ! ಕನ್ನಡಿಗರ ಆಕ್ರೋಶ
ಕಿತ್ತೂರು ರಾಜಗುರುಗಳ ವಂಶಸ್ಥರಿಂದ ತಲೆಮಾರುಗಳ ಪರಂಪರೆ ಮುಂದುವರಿಕೆ
ಕಿತ್ತೂರು ರಾಜಗುರುಗಳ ವಂಶಸ್ಥರಿಂದ ತಲೆಮಾರುಗಳ ಪರಂಪರೆ ಮುಂದುವರಿಕೆ
ಪ್ರತಿಭಟನೆ ವೇಳೆ ಎಬಿವಿಪಿ ಕಾರ್ಯಕರ್ತನಿಗೆ ಎಸಿಪಿ ಕಪಾಳಮೋಕ್ಷ
ಪ್ರತಿಭಟನೆ ವೇಳೆ ಎಬಿವಿಪಿ ಕಾರ್ಯಕರ್ತನಿಗೆ ಎಸಿಪಿ ಕಪಾಳಮೋಕ್ಷ
ಬಿಗ್ ಬಾಸ್: ಸಂಗೀತಾ ಭಟ್ ಆರೋಗ್ಯ ಕೈಕೊಟ್ಟಿದ್ದಕ್ಕೆ ಇಲ್ಲಿದೆ ಅಸಲಿ ಕಾರಣ
ಬಿಗ್ ಬಾಸ್: ಸಂಗೀತಾ ಭಟ್ ಆರೋಗ್ಯ ಕೈಕೊಟ್ಟಿದ್ದಕ್ಕೆ ಇಲ್ಲಿದೆ ಅಸಲಿ ಕಾರಣ
ಕಳೆದ 10 ವರ್ಷಗಳಿಂದ ಹದಗೆಟ್ಟಿದ್ದ ಪೀಣ್ಯ ಔಟರ್ ರಿಂಗ್ ರಸ್ತೆಗೆ ಡಾಂಬರ್ ಭಾಗ
ಕಳೆದ 10 ವರ್ಷಗಳಿಂದ ಹದಗೆಟ್ಟಿದ್ದ ಪೀಣ್ಯ ಔಟರ್ ರಿಂಗ್ ರಸ್ತೆಗೆ ಡಾಂಬರ್ ಭಾಗ
ವಿ. ಸೋಮಣ್ಣ ಕಾರು ಮುತ್ತಿಗೆಗೆ ಯುವ ಕಾಂಗ್ರೆಸ್ ಕಾರ್ಯಕರ್ತರಿಂದ ಯತ್ನ
ವಿ. ಸೋಮಣ್ಣ ಕಾರು ಮುತ್ತಿಗೆಗೆ ಯುವ ಕಾಂಗ್ರೆಸ್ ಕಾರ್ಯಕರ್ತರಿಂದ ಯತ್ನ