AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Assam Earthquake: ಅಸ್ಸಾಂನಲ್ಲಿ 5.1 ತೀವ್ರತೆಯ ಪ್ರಬಲ ಭೂಕಂಪ

ಅಸ್ಸಾಂನಲ್ಲಿ ಜನವರಿ 5 ರಂದು ಬೆಳಗಿನ ಜಾವ 5.1 ತೀವ್ರತೆಯ ಭೂಕಂಪ ಸಂಭವಿಸಿದೆ. ಮೋರಿಗಾಂವ್ ಜಿಲ್ಲೆಯಲ್ಲಿ ಕೇಂದ್ರೀಕೃತವಾಗಿದ್ದ ಕಂಪನವು ಅಸ್ಸಾಂ ಹಾಗೂ ನೆರೆಯ ರಾಜ್ಯಗಳಲ್ಲಿ ವ್ಯಾಪಕವಾಗಿ ಅನುಭವವಾಯಿತು. ಯಾವುದೇ ಜೀವಹಾನಿ ಅಥವಾ ಆಸ್ತಿ ಹಾನಿ ವರದಿಯಾಗಿಲ್ಲ. ಜನರನ್ನು ನಿದ್ದೆಯಿಂದ ಬಡಿದೆಬ್ಬಿಸಿದ ಭೂಕಂಪದಿಂದ ಆತಂಕ ಸೃಷ್ಟಿಯಾದರೂ, ದೊಡ್ಡ ಅನಾಹುತ ತಪ್ಪಿದೆ.

Assam Earthquake: ಅಸ್ಸಾಂನಲ್ಲಿ 5.1 ತೀವ್ರತೆಯ ಪ್ರಬಲ ಭೂಕಂಪ
ಭೂಕಂಪImage Credit source: ANI
ನಯನಾ ರಾಜೀವ್
|

Updated on: Jan 05, 2026 | 7:18 AM

Share

ಗುವಾಹಟಿ, ಜನವರಿ 05: ಅಸ್ಸಾಂನಲ್ಲಿ 5.1 ತೀವ್ರತೆಯ ಪ್ರಬಲ ಭೂಕಂಪ(Earthquake) ಸಂಭವಿಸಿದೆ. ಅಸ್ಸಾಂನ ಮೋರಿಗಾಂವ್ ಜಿಲ್ಲೆಯಲ್ಲಿ ಸೋಮವಾರ ಬೆಳಗಿನ ಜಾವ 4.17ಕ್ಕೆ ಭೂಕಂಪ ಸಂಭವಿಸಿದೆ. ಯಾವುದೇ ಜೀವಹಾನಿಯಾಗಲಿ, ಆಸ್ತಿಪಾಸ್ತಿ ಹಾನಿಯ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ. ಮೋರಿಗಾಂವ್ ಮತ್ತು ಹತ್ತಿರದ ಜಿಲ್ಲೆಗಳು ಸೇರಿದಂತೆ ಮಧ್ಯ ಅಸ್ಸಾಂನ ಹಲವಾರು ಭಾಗಗಳಲ್ಲಿ ಭೂಕಂಪನದ ಅನುಭವವಾಗಿದ್ದು, ನಿವಾಸಿಗಳು ತಮ್ಮ ಮನೆಗಳಿಂದ ಹೊರಗೆ ಓಡಿಬಂದಿದ್ದರು.

ಕಂಪನವು 50 ಕಿಲೋಮೀಟರ್ ಆಳದಲ್ಲಿತ್ತು. ಕಮ್ರೂಪ್ ಮೆಟ್ರೋಪಾಲಿಟನ್, ನಾಗಾಂವ್, ಪೂರ್ವ ಮತ್ತು ಪಶ್ಚಿಮ ಕರ್ಬಿ ಅಂಗ್ಲಾಂಗ್, ಹೊಜೈ, ದಿಮಾ ಹಸಾವೊ, ಗೋಲಾಘಾಟ್, ಜೋರ್ಹತ್, ಶಿವಸಾಗರ್, ಚರೈಡಿಯೊ, ಕ್ಯಾಚಾರ್, ಕರೀಮ್‌ಗಂಜ್, ಹೈಲಕಂಡಿ, ಧುಬ್ರಿ, ದಕ್ಷಿಣ ಸಲ್ಮಾರಾ ಮಂಕಚಾರ್ ಮತ್ತು ಗೋಲ್‌ಪಾರಾ ನಿವಾಸಿಗಳು ಕಂಪನ ಅನುಭವಿಸಿದ್ದಾರೆ. ದರ್ರಾಂಗ್, ತಮುಲ್‌ಪುರ್, ಸೋನಿತ್‌ಪುರ್, ಕಮ್ರೂಪ್, ಬಿಸ್ವನಾಥ್, ಉದಲ್‌ಗುರಿ, ನಲ್ಬರಿ, ಬಜಾಲಿ, ಬರ್ಪೇಟಾ, ಬಕ್ಸಾ, ಚಿರಾಂಗ್, ಕೊಕ್ರಜಾರ್, ಬೊಂಗೈಗಾಂವ್ ಮತ್ತು ಲಖಿಂಪುರ ಸೇರಿದಂತೆ ಉತ್ತರದ ಹಲವಾರು ಜಿಲ್ಲೆಗಳಲ್ಲಿಯೂ ಕಂಪನದ ಅನುಭವವಾಗಿದೆ.

ಭೂಕಂಪದ ಪರಿಣಾಮ ಅಸ್ಸಾಂನ ಆಚೆಗೂ ವಿಸ್ತರಿಸಿದೆ. ಮಧ್ಯ ಪಶ್ಚಿಮ ಅರುಣಾಚಲ ಪ್ರದೇಶದ ಕೆಲವು ಭಾಗಗಳು, ಇಡೀ ಮೇಘಾಲಯ ರಾಜ್ಯ, ಹಾಗೆಯೇ ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರ ಮತ್ತು ಪಶ್ಚಿಮ ಬಂಗಾಳದಿಂದ ಕಂಪನಗಳು ವರದಿಯಾಗಿವೆ. ಭೂಕಂಪನ ವರದಿಯ ಪ್ರಕಾರ, ಮಧ್ಯ ಪೂರ್ವ ಭೂತಾನ್, ಚೀನಾ ಮತ್ತು ಬಾಂಗ್ಲಾದೇಶದ ಕೆಲವು ಭಾಗಗಳಲ್ಲಿ ಕಂಪನದ ಅನುಭವವಾಗುವಷ್ಟು ಪ್ರಬಲವಾಗಿತ್ತು.

ಮತ್ತಷ್ಟು ಓದಿ: Taiwan Earthquake: ತೈವಾನ್​ನಲ್ಲಿ ಪ್ರಬಲ ಭೂಕಂಪ, ನಲುಗಿದ ಕಟ್ಟಡಗಳು

ಬೆಳಗಿನ ಜಾವ ಸಂಭವಿಸಿದ ಹಠಾತ್ ಭೂಕಂಪನವು ಜನರನ್ನು ನಿದ್ದೆಯಿಂದ ಬಡಿದೆಬ್ಬಿಸಿದಂತಾಗಿತ್ತು, ಅನೇಕರು ತಮ್ಮ ಮನೆಗಳಿಂದ ಹೊರಗೆ ಓಡಿಹೋಗುವಂತೆ ಮಾಡಿತು.

ಮೆಕ್ಸಿಕೋದಲ್ಲಿ ಭೂಕಂಪ

ಶುಕ್ರವಾರ ದಕ್ಷಿಣ ಮತ್ತು ಮಧ್ಯ ಮೆಕ್ಸಿಕೋದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ, ಅಧ್ಯಕ್ಷರಾದ ಕ್ಲೌಡಿಯಾ ಶೀನ್‌ಬಾಮ್ ಅವರ ಹೊಸ ವರ್ಷದ ಮೊದಲ ಪತ್ರಿಕಾಗೋಷ್ಠಿಯ ಸಂದರ್ಭದಲ್ಲಿ ಭೂಕಂಪ ಸಂಭವಿಸಿತ್ತು. ಘಟನೆಯಲ್ಲಿ ಇಬ್ಬರು ಪ್ರಾಣ ಕಳೆದುಕೊಂಡಿದ್ದರು. ಭೂಕಂಪದ ತೀವ್ರತೆ 6.5 ರಷ್ಟಿದ್ದು, ಅದರ ಕೇಂದ್ರಬಿಂದು ದಕ್ಷಿಣ ರಾಜ್ಯವಾದ ಗೆರೆರೊದ ಸ್ಯಾನ್ ಮಾರ್ಕೋಸ್ ಪಟ್ಟಣದ ಬಳಿ, ಪೆಸಿಫಿಕ್ ಕರಾವಳಿ ರೆಸಾರ್ಟ್ ಅಕಾಪುಲ್ಕೊ ಬಳಿ ಇತ್ತು.

500 ಕ್ಕೂ ಹೆಚ್ಚು ನಂತರದ ಕಂಪನಗಳು ದಾಖಲಾಗಿವೆ. ಗೆರೆರೋ ನಾಗರಿಕ ರಕ್ಷಣಾ ಸಂಸ್ಥೆಯು ಅಕಾಪುಲ್ಕೊ ಸುತ್ತಮುತ್ತ ಮತ್ತು ರಾಜ್ಯದಾದ್ಯಂತದ ಇತರ ಹೆದ್ದಾರಿಗಳಲ್ಲಿ ಹಲವಾರು ಭೂಕುಸಿತಗಳು ಸಂಭವಿಸಿವೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ