Rajasthan Earthquake: ರಾಜಸ್ಥಾನದ ಜೈಪುರ ಸುತ್ತಮುತ್ತ ಸರಣಿ ಭೂಕಂಪ, ಬೆಚ್ಚಿಬಿದ್ದ ಜನ
ರಾಜಸ್ಥಾನದ ಜೈಪುರ ಸುತ್ತಮುತ್ತ ಇಂದು(ಜುಲೈ 21) ಸರಣಿ ಭೂಕಂಪ ಸಂಭವಿಸಿದ್ದು, ಸ್ಥಳೀಯ ಜನರು ಬೆಚ್ಚಿಬಿದ್ದಿದ್ದಾರೆ.
ಜೈಪುರ, (ಜುಲೈ 21): ರಾಜಸ್ಥಾನದ(Rajasthan) ಜೈಪುರ ಸುತ್ತಮುತ್ತ ಇಂದು(ಜುಲೈ 21) ಸರಣಿ ಭೂಕಂಪ(earthquake) ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 4.4 ದಾಖಲಾಗಿದೆ. ಒಂದೇ ಗಂಟೆಯಲ್ಲಿ ಮೂರು ಬಾರಿ ಭೂಮಿ ಕಂಪಿಸಿದ್ದು, ಈ ಸರಣಿ ಭೂಕಂಪದಿಂದ ನಿದ್ದೆಗಣ್ಣಲ್ಲಿದ್ದ ಸ್ಥಳೀಯ ಜನತೆ ಎದ್ದು ಕುಳಿತುಕೊಂಡಿದ್ದಾರೆ. ಅಲ್ಲದೇ ಮೇಲಿಂದ ಮೇಲೆ ಭೂಮಿ ಮೂರು ಬಾರಿ ಕಂಪಿಸಿದ್ದರಿಂದ ಜನ ಆತಂಕಗೊಂಡಿದ್ದಾರೆ.
Another earthquake of Magnitude 3.4 strikes Jaipur, Rajasthan: National Center for Seismology
This is the 3rd earthquake that has struck Jaipur in an hour pic.twitter.com/zUoHX4Vwcz
— ANI (@ANI) July 20, 2023
ಭೂಮಿಯ ಪ್ರಬಲವಾಗಿ ಕಂಪಿಸಿದ್ದು, ನಿದ್ದೆಯಲ್ಲಿದ್ದ ಇಡೀ ಕುಟುಂಬವು ಎಚ್ಚರವಾಯಿತು. ಆದ್ರೆ, ಯಾವುದೇ ಹಾನಿಯಾಗಿ ಎಂದು ಸ್ಥಳೀಯ ನಿವಾಸಿ ವಿಕಾಸ್ ಎನ್ನುವವರು ಭೂಕಂಪ ಸಂಭವಿಸಿದ ಅನುಭವ ತಿಳಿಸಿದ್ದಾರೆ.
#WATCH | Jaipur: The tremors were strong, and my whole family woke up…no injuries: Vikas, a local, on the earthquake https://t.co/hCFUQuquwV pic.twitter.com/KLGohUkleI
— ANI (@ANI) July 20, 2023
An earthquake of magnitude 3.5 on Richter scale hits Manipur’s Ukhrul: National Center for Seismology pic.twitter.com/7yFvtNba0i
— ANI (@ANI) July 21, 2023
ಇನ್ನು ಮಣಿಪುರದ ಉಖ್ರುಲ್ ನಲ್ಲೂ ಸಹ ಭೂಕಂಪವಾಗಿದ್ದು, ರಿಕ್ಟರ್ ಮಾಪಕದಲ್ಲಿ 3.5 ತೀವ್ರತೆಯ ಭೂಕಂಪ ಸಂಭವಿಸಿದೆ. ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:22 am, Fri, 21 July 23