Gujarat earthquake: ಗುಜರಾತ್‌ನ ಕಚ್‌ನಲ್ಲಿ ಕಂಪಿಸಿದ ಭೂಮಿ: ರಿಕ್ಟರ್ ಮಾಪಕದಲ್ಲಿ 3.5ರಷ್ಟು ತೀವ್ರತೆ ದಾಖಲು

|

Updated on: Jun 14, 2023 | 7:13 PM

ಗುರುವಾರ ಕಚ್‌ನಲ್ಲಿ ಬಿಪೋರ್‌ಜಾಯ್ ಚಂಡಮಾರುತದ ಅಪ್ಪಳಿಸುವ ಸಾಧ್ಯತೆ ಇದ್ದು, ಅದಕ್ಕಿಂತ ಮುನ್ನ ಇಲ್ಲಿ ಭೂಕಂಪ ಉಂಟಾಗಿದೆ

Gujarat earthquake: ಗುಜರಾತ್‌ನ ಕಚ್‌ನಲ್ಲಿ ಕಂಪಿಸಿದ ಭೂಮಿ: ರಿಕ್ಟರ್ ಮಾಪಕದಲ್ಲಿ 3.5ರಷ್ಟು ತೀವ್ರತೆ ದಾಖಲು
ಪ್ರಾತಿನಿಧಿಕ ಚಿತ್ರ
Follow us on

ಗುಜರಾತ್‌ನ (Gujarat) ಕಚ್ ಜಿಲ್ಲೆಯಲ್ಲಿ (Kutch) ಬುಧವಾರ ಭೂಮಿ ಕಂಪಿಸಿದ್ದು (Earthquake)  3.5 ತೀವ್ರತೆಯ ಭೂಕಂಪ  ದಾಖಲಾಗಿದೆ. ಗುರುವಾರ ಕಚ್‌ನಲ್ಲಿ ಬಿಪೋರ್‌ಜಾಯ್ ಚಂಡಮಾರುತದ ಅಪ್ಪಳಿಸುವ ಸಾಧ್ಯತೆ ಇದ್ದು, ಅದಕ್ಕಿಂತ ಮುನ್ನ ಇಲ್ಲಿ ಭೂಕಂಪ ಉಂಟಾಗಿದೆ. ಇನ್‌ಸ್ಟಿಟ್ಯೂಟ್ ಆಫ್ ಸಿಸ್ಮಾಲಾಜಿಕಲ್ ರಿಸರ್ಚ್, ಗಾಂಧಿನಗರದ ಪ್ರಕಾರ ಭೂಕಂಪದ ಕೇಂದ್ರಬಿಂದು ಕಚ್ ಜಿಲ್ಲೆಯ ಭಚೌದಿಂದ ಪಶ್ಚಿಮ-ನೈಋತ್ಯಕ್ಕೆ 5 ಕಿಲೋಮೀಟರ್ ದೂರದಲ್ಲಿದೆ. ಬುಧವಾರ ಸಂಜೆ 5:05ಕ್ಕೆ ಭೂಕಂಪ ಸಂಭವಿಸಿದೆ.

ಬಿಪೋರ್‌ಜಾಯ್ ಅಪ್ಪಳಿಸುವ ಮುನ್ನ ಗುಜರಾತ್​​ನಲ್ಲಿ ರೆಡ್ ಅಲರ್ಟ್

ಬಿಪೋರ್‌ಜಾಯ್  ಚಂಡಮಾರುತದ ಹಿನ್ನೆಲೆಯಲ್ಲಿ ಗುಜರಾತ್‌ನ ಸೌರಾಷ್ಟ್ರ, ದ್ವಾರಕಾ ಮತ್ತು ಕಚ್ ಕರಾವಳಿಯಲ್ಲಿ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ರೆಡ್ ಅಲರ್ಟ್ ಘೋಷಿಸಿದೆ. ಈ ಚಂಡಮಾರುತವು ಭಾರಿ ಹಾನಿಯನ್ನುಂಟುಮಾಡುವ ನಿರೀಕ್ಷೆಯಿದ್ದು ಹಲವಾರು ರಾಜ್ಯಗಳಿಗೆ ಭಾರೀ ಮಳೆಯ ಎಚ್ಚರಿಕೆಯನ್ನು ನೀಡಲಾಗಿದೆ.

ಚಂಡಮಾರುತವು ಕಚ್ ಕರಾವಳಿಯತ್ತ ಅಪ್ಪಳಿಸುತ್ತಿರುವುದರಿಂದ ಗುಜರಾತ್‌ನ ಎಂಟು ಜಿಲ್ಲೆಗಳಲ್ಲಿ ಸಮುದ್ರದ ಸಮೀಪ ವಾಸಿಸುತ್ತಿದ್ದ ಸುಮಾರು 50,000 ಜನರನ್ನು ಸ್ಥಳಾಂತರಿಸಲಾಗಿದೆ.

ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಹದಿನೆಂಟು ಎನ್‌ಡಿಆರ್‌ಎಫ್ ತಂಡಗಳನ್ನು ಗುಜರಾತ್‌ನಲ್ಲಿ ಇರಿಸಲಾಗಿದ್ದು, ಕಚ್ ಜಿಲ್ಲೆಯಲ್ಲಿ ನಾಲ್ಕು ಎನ್‌ಡಿಆರ್‌ಎಫ್ ತಂಡಗಳು, ರಾಜ್‌ಕೋಟ್ ಮತ್ತು ದೇವಭೂಮಿ ದ್ವಾರಕಾದಲ್ಲಿ ತಲಾ ಮೂರು, ಜಾಮ್‌ನಗರದಲ್ಲಿ ಎರಡು, ಪೋರಬಂದರ್,ಗಾಂಧಿನಗರ, ಜುನಾಗಢ್, ಗಿರ್ ಸೋಮನಾಥ್, ಮೋರ್ಬಿ, ವಲ್ಸಾದ್ ಮತ್ತು ತಲಾ ಒಂದು ತಂಡಗಳನ್ನು ನಿಯೋಜಿಸಲಾಗಿದೆ.

ಇದನ್ನೂ ಓದಿ: Senthil Balaji: ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿಯ ಬಂಧನಕ್ಕೆ ಕಾರಣವಾದ ಘಟನೆಗಳ ಟೈಮ್‌ಲೈನ್

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮೂರು ಸೇನಾ ಮುಖ್ಯಸ್ಥರೊಂದಿಗೆ ಮಾತನಾಡಿದ್ದು, ಚಂಡಮಾರುತದ ಪ್ರಭಾವವನ್ನು ಎದುರಿಸಲು ಸಶಸ್ತ್ರ ಪಡೆಗಳ ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ ಎಂದು ಹೇಳಿದರು. ಚಂಡಮಾರುತದಿಂದ ಉಂಟಾಗಬಹುದಾದ ಯಾವುದೇ ಪರಿಸ್ಥಿತಿ ಅಥವಾ ಆಕಸ್ಮಿಕತೆಯನ್ನು ನಿಭಾಯಿಸಲು ಸಾಧ್ಯವಿರುವ ಎಲ್ಲ ನೆರವು ನೀಡಲು ಪಡೆಗಳು ಸಿದ್ಧವಾಗಿವೆ ಎಂದು ಅವರು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:53 pm, Wed, 14 June 23