ಪೋಷಕರನ್ನು ವಂಚಿಸಿದ ಆರೋಪ: ಕೇರಳದ ವೈದ್ಯಕೀಯ ಕಾಲೇಜಿನ ಬ್ಯಾಂಕ್ ಠೇವಣಿ ವಶಪಡಿಸಿದ ಇಡಿ

ಡಾ ಎಸ್‌ಎಂ ಸಿಎಸ್‌ಐ ವೈದ್ಯಕೀಯ ಕಾಲೇಜಿನಲ್ಲಿ ಮಕ್ಕಳಿಗೆ ಪ್ರವೇಶ ನೀಡುವ ನೆಪದಲ್ಲಿ ಪೋಷಕರಿಂದ ಹಣವನ್ನು ಸಂಗ್ರಹಿಸಲಾಗಿದೆ ಎಂದು ತನಿಖೆಯಲ್ಲಿ ಕಂಡುಬಂದಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.

ಪೋಷಕರನ್ನು ವಂಚಿಸಿದ ಆರೋಪ: ಕೇರಳದ ವೈದ್ಯಕೀಯ ಕಾಲೇಜಿನ ಬ್ಯಾಂಕ್ ಠೇವಣಿ ವಶಪಡಿಸಿದ ಇಡಿ
ಡಾ.ಸೋಮರ್ವೆಲ್ ಮೆಮೋರಿಯಲ್ ಸಿಎಸ್‌ಐ ವೈದ್ಯಕೀಯ ಕಾಲೇಜು Image Credit source: smcsimch.ac.in
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Nov 22, 2022 | 9:49 PM

ತಮ್ಮ ಮಕ್ಕಳಿಗೆ ಪ್ರವೇಶ ನೀಡುವ ಭರವಸೆ ನೀಡಿ ಪೋಷಕರಿಗೆ ವಂಚಿಸಿದ ಆರೋಪದ ಪ್ರಕರಣದಲ್ಲಿ ಕೇರಳದ(Kerala) ವೈದ್ಯಕೀಯ ಕಾಲೇಜಿನ 95.25 ಲಕ್ಷ ರೂಪಾಯಿ ಮೌಲ್ಯದ ಬ್ಯಾಂಕ್ ಠೇವಣಿಗಳನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾನೂನಿನ ಅಡಿಯಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಇಡಿ (ED)ಮಂಗಳವಾರ ತಿಳಿಸಿದೆ. ತಿರುವನಂತಪುರಂ ಜಿಲ್ಲೆಯ ಕಾರಕೋಣಂನಲ್ಲಿರುವ ಡಾ.ಸೋಮರ್ವೆಲ್ ಮೆಮೋರಿಯಲ್ ಸಿಎಸ್‌ಐ ವೈದ್ಯಕೀಯ ಕಾಲೇಜು(Dr. Somervell Memorial CSI Medical College) ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ವೈದ್ಯಕೀಯ ಕಾಲೇಜನ್ನು ಚರ್ಚ್ ಆಫ್ ಸೌತ್ ಇಂಡಿಯಾದ ದಕ್ಷಿಣ ಕೇರಳ ಡಯಾಸಿಸ್ ನಡೆಸುತ್ತಿದ್ದು ದಕ್ಷಿಣ ಕೇರಳ ವೈದ್ಯಕೀಯ ಮಿಷನ್ ಇದನ್ನು ನಿರ್ವಹಿಸುತ್ತದೆ. ವೈದ್ಯಕೀಯ ಕಾಲೇಜುಗಳು ಮತ್ತು ಅದರ ಪ್ರವರ್ತಕರ ವಿರುದ್ಧ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಕೇರಳ ಪೊಲೀಸರು ಅನೇಕ ಎಫ್‌ಐಆರ್‌ ದಾಖಲಿಸಿದ್ದಾರೆ. ಡಾ ಎಸ್‌ಎಂ ಸಿಎಸ್‌ಐ ವೈದ್ಯಕೀಯ ಕಾಲೇಜಿನಲ್ಲಿ ಮಕ್ಕಳಿಗೆ ಪ್ರವೇಶ ನೀಡುವ ನೆಪದಲ್ಲಿ ಪೋಷಕರಿಂದ ಹಣವನ್ನು ಸಂಗ್ರಹಿಸಲಾಗಿದೆ ಎಂದು ತನಿಖೆಯಲ್ಲಿ ಕಂಡುಬಂದಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ. ಆದರೆ, ಹಣ ಪಡೆದರೂ ಪ್ರವೇಶ ನೀಡಿಲ್ಲ ಎಂದು ಆರೋಪ ಈ ಸಂಸ್ಥೆ ಮೇಲಿದೆ.

ಹೇಳಲಾದ ನಗದಿನ ಒಂದು ಭಾಗವನ್ನು ವೈದ್ಯಕೀಯ ಕಾಲೇಜಿನ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ಬಳಸಲಾಯಿತು. ಉಳಿದ ಮೊತ್ತವನ್ನು ಮಾತೃ ಸಂಸ್ಥೆಯಾದ ದಕ್ಷಿಣ ಕೇರಳ ಡಯಾಸಿಸ್ (SKD) ಸಂಸ್ಥೆಗೆ ವರ್ಗಾಯಿಸಲಾಗಿದೆ ಎಂದು ಇಡಿ ಹೇಳಿದೆ.

ಬೆನೆಟ್ ಅಬ್ರಹಾಂ ಮತ್ತು ಎ ಧರ್ಮರಾಜ್ ರಸಾಲಂ ಅವರು  ಅಪರಾಧದ ಹಣದ ಕಮಿಷನ್ ಮೂಲಕ ಒಟ್ಟು ರೂ 95,25,000  ಆದಾಯವನ್ನು ಪಡೆದಿದ್ದಾರೆ ಎಂದು ತನಿಖಾ ಸಂಸ್ಥೆ ಹೇಳಿದೆ. ಆದಾಗ್ಯೂ, ಕಾಲೇಜಿನ ಮೂಲಕ ಅಬ್ರಹಾಂ ಮತ್ತು ಎ ಧರ್ಮರಾಜ್ ರಸಾಲಂ ಸೃಷ್ಟಿಸಿದ “ಅಪರಾಧದ ಆದಾಯ” ಮುಗಿದಿದೆ. ಇದೀಗ ತಾತ್ಕಾಲಿಕ ಆದೇಶದ ನಂತರ ಕಾಲೇಜಿನ ಬ್ಯಾಂಕ್ ಖಾತೆಯಿಂದ ಸಮಾನವಾದ ಮೊತ್ತವನ್ನು ತಾತ್ಕಾಲಿಕವಾಗಿ ವಶಪಡಿಸಲಾಗಿದೆ ಎಂದು ಇಡಿ ಹೇಳಿದೆ.