ಕಾಂಗ್ರೆಸ್ ನಾಯಕರದ್ದು ತಪ್ಪಿಲ್ಲ ಎಂದರೆ ಅವರೇಕೆ ಹೆದರುತ್ತಾರೆ?: ರಾಜಸ್ಥಾನದಲ್ಲಿ ಇಡಿ ದಾಳಿ ಬಗ್ಗೆ ಪ್ರಲ್ಹಾದ್ ಜೋಶಿ

|

Updated on: Oct 26, 2023 | 8:48 PM

ರಾಜಸ್ಥಾನದಲ್ಲಿ 19 ಬಾರಿ  ಪೇಪರ್ ಸೋರಿಕೆಯಾಗಿ 70 ಲಕ್ಷಕ್ಕೂ ಹೆಚ್ಚು ಯುವಕರ ಭವಿಷ್ಯ ಹಾಳಾಗಿದೆ ಎಂದು ರಾಜಸ್ಥಾನದ ಕಾಂಗ್ರೆಸ್ ರಾಜ್ಯಾಧ್ಯಕ್ಷ ಗೋವಿಂದ್ ಸಿಂಗ್ ದೋಟಸಾರ ಅವರ ಮನೆಯಲ್ಲಿ ಇಡಿ ಕ್ರಮ ಕೈಗೊಂಡಿರುವ ಕುರಿತು ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಈ ಪ್ರಕರಣದಲ್ಲಿ ಕಾಂಗ್ರೆಸ್‌ನ ಮಾಜಿ ರಾಜ್ಯ ಸಚಿವ ಸೇರಿದಂತೆ ಆರ್‌ಪಿಎಸ್‌ಸಿ ಸದಸ್ಯರು ಕೂಡ ಸಿಕ್ಕಿಬಿದ್ದಿದ್ದಾರೆ

ಕಾಂಗ್ರೆಸ್ ನಾಯಕರದ್ದು ತಪ್ಪಿಲ್ಲ ಎಂದರೆ ಅವರೇಕೆ ಹೆದರುತ್ತಾರೆ?: ರಾಜಸ್ಥಾನದಲ್ಲಿ ಇಡಿ ದಾಳಿ ಬಗ್ಗೆ ಪ್ರಲ್ಹಾದ್ ಜೋಶಿ
ಪ್ರಲ್ಹಾದ್ ಜೋಶಿ
Follow us on

ಜೈಪುರ ಅಕ್ಟೋಬರ್ 26: ರಾಜಸ್ಥಾನ ಲೋಕಸೇವಾ ಆಯೋಗದಲ್ಲಿ(Rajasthan Public Service Commission) ನಡೆದ ಹಗರಣದಿಂದಾಗಿ ಇಡಿ ದಾಳಿ ನಡೆದಿದೆ. ಪತ್ರಿಕೆ 19 ಬಾರಿ ಸೋರಿಕೆಯಾಗಿದೆ.ನೀವು RPSCಗೆ ಅರ್ಜಿ ಸಲ್ಲಿಸಿದ 70 ಲಕ್ಷಕ್ಕೂ ಹೆಚ್ಚು ಜನರಿಗೆ ಅನ್ಯಾಯ ಮಾಡಿದ್ದೀರಿ ಎಂದು ರಾಜ್ಯ ಸರ್ಕಾರ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ವಾಗ್ದಾಳಿ ನಡೆಸಿದ್ದಾರೆ. ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಎರಡು ಪಟ್ಟಿಗಳನ್ನು ಬಿಜೆಪಿ ಬಿಡುಗಡೆ ಮಾಡಿದ್ದು, 124 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಎರಡೂ ಪಟ್ಟಿಗಳಲ್ಲಿ ಸೇರ್ಪಡೆಗೊಂಡಿರುವ ಹಲವು ಹೆಸರುಗಳ ವಿರುದ್ಧ ತಳಮಟ್ಟದಲ್ಲಿ ವಿರೋಧ ವ್ಯಕ್ತವಾಗಿದ್ದು, ಅಭ್ಯರ್ಥಿಗಳ ಹೆಸರನ್ನು ಮರುಪರಿಶೀಲಿಸಬೇಕೆಂಬ ಆಗ್ರಹಗಳು ಕೇಳಿ ಬರುತ್ತಿವೆ. ಏತನ್ಮಧ್ಯೆ, ಘೋಷಿತ ಅಭ್ಯರ್ಥಿಗಳ ಹೆಸರನ್ನು ಈಗ ಮರುಪರಿಶೀಲನೆ ಮಾಡುವುದಿಲ್ಲ, ಟಿಕೆಟ್ ನೀಡಿದ ಅಭ್ಯರ್ಥಿ ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂದು ರಾಜಸ್ಥಾನ ಚುನಾವಣಾ ಉಸ್ತುವಾರಿ ಪ್ರಹ್ಲಾದ್ ಜೋಶಿ ಸ್ಪಷ್ಟಪಡಿಸಿದ್ದಾರೆ.

ಅಭ್ಯರ್ಥಿಯನ್ನು ಬದಲಾಯಿಸುವ ಪ್ರಶ್ನೆಯೇ ಇಲ್ಲ

ಬಿಜೆಪಿ ಒಮ್ಮೆ ನಿರ್ಧಾರ ತೆಗೆದುಕೊಂಡರೆ ಹಿಂದೆ ಸರಿಯುವುದಿಲ್ಲ ಎಂದು ರಾಜ್ಯ ಚುನಾವಣಾ ಉಸ್ತುವಾರಿ ಪ್ರಲ್ಹಾದ ಜೋಶಿ ಸ್ಪಷ್ಟಪಡಿಸಿದ್ದಾರೆ. ಟಿಕೆಟ್ ಬದಲಾಯಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಟಿಕೆಟ್ ಬದಲಾವಣೆಗೆ ಒತ್ತಡ ಹೇರುತ್ತಿರುವ ನಾಯಕರಿಗೆ ಜೋಶಿ ದಿಟ್ಟ ಸಂದೇಶ ನೀಡಿದ್ದಾರೆ. ಇದರೊಂದಿಗೆ ಅಭ್ಯರ್ಥಿಗಳ ಮೂರನೇ ಪಟ್ಟಿಯ ಕುರಿತು ಜೋಶಿ ಮಾತನಾಡಿ, ಚಿಂತನ ಮಂಥನ ನಡೆಯುತ್ತಿದೆ, ಶೀಘ್ರದಲ್ಲೇ ಪಕ್ಷವು ತನ್ನ ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಲಿದೆ ಎಂದಿದ್ದಾರೆ


ರಾಜ್ಯದ ಕಾಂಗ್ರೆಸ್ ನಾಯಕರ ವಿರುದ್ಧ ಇಡಿ ಕ್ರಮವನ್ನು ಸಮರ್ಥಿಸಿಕೊಂಡ ಜೋಶಿ, ನಿರುದ್ಯೋಗಿಗಳಿಗೆ ಆಗಿರುವ ಅನ್ಯಾಯದ ವಿರುದ್ಧ ನ್ಯಾಯ ಸಿಗುವ ಸಮಯ ಬಂದಾಗ ಕಾಂಗ್ರೆಸ್ ಮತ್ತು ಮುಖ್ಯಮಂತ್ರಿಗಳಿಗೆ ನೋವು ಯಾಕಾಗುತ್ತಿದೆ? ಎಂದು ಕೇಳಿದ್ದಾರೆ.

ಇದನ್ನೂ ಓದಿ: ನಮ್ಮ ಸರ್ಕಾರ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಮಂತ್ರ ಅನುಸರಿಸುತ್ತದೆ: ಶಿರಡಿಯಲ್ಲಿ ಮೋದಿ

ರಾಜಸ್ಥಾನದಲ್ಲಿ 19 ಬಾರಿ  ಪೇಪರ್ ಸೋರಿಕೆಯಾಗಿ 70 ಲಕ್ಷಕ್ಕೂ ಹೆಚ್ಚು ಯುವಕರ ಭವಿಷ್ಯ ಹಾಳಾಗಿದೆ ಎಂದು ರಾಜಸ್ಥಾನದ ಕಾಂಗ್ರೆಸ್ ರಾಜ್ಯಾಧ್ಯಕ್ಷ ಗೋವಿಂದ್ ಸಿಂಗ್ ದೋಟಸಾರ ಅವರ ಮನೆಯಲ್ಲಿ ಇಡಿ ಕ್ರಮ ಕೈಗೊಂಡಿರುವ ಕುರಿತು ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಈ ಪ್ರಕರಣದಲ್ಲಿ ಕಾಂಗ್ರೆಸ್‌ನ ಮಾಜಿ ರಾಜ್ಯ ಸಚಿವ ಸೇರಿದಂತೆ ಆರ್‌ಪಿಎಸ್‌ಸಿ ಸದಸ್ಯರು ಕೂಡ ಸಿಕ್ಕಿಬಿದ್ದಿದ್ದಾರೆ. ಹೀಗಿರುವಾಗ ಇಡಿ ಕ್ರಮ ಕೈಗೊಳ್ಳಲಾಗುತ್ತಿದ್ದು, ಕಾಂಗ್ರೆಸ್ ನಾಯಕರದ್ದು ತಪ್ಪಿಲ್ಲ ಎಂದರೆ ಅವರೇಕೆ ಹೆದರುತ್ತಾರೆ? , ರಾಜಸ್ಥಾನದಲ್ಲಿ ಸರ್ಕಾರ ಎಸಿಬಿಯನ್ನು ದುರ್ಬಲಗೊಳಿಸದಿದ್ದರೆ ಮತ್ತು ಭ್ರಷ್ಟ ನಾಯಕರಿಗೆ ರಕ್ಷಣೆ ನೀಡದಿದ್ದರೆ ಕ್ರಮದ ಅಗತ್ಯವಿರಲಿಲ್ಲ ಎಂದು ಅವರು ಹೇಳಿದರು. ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸರ್ಕಾರದಲ್ಲಿ ಸರ್ಕಾರಿ ಕಚೇರಿಗಳಲ್ಲಿ ಕೋಟ್ಯಂತರ ರೂಪಾಯಿ ಹಣ ಬರುತ್ತಿದೆಯಾದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ