Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮ್ಮ ಸರ್ಕಾರ ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಮಂತ್ರ ಅನುಸರಿಸುತ್ತದೆ: ಶಿರಡಿಯಲ್ಲಿ ಮೋದಿ

ಅಹ್ಮದ್‌ನಗರದ ಸಿವಿಲ್ ಆಸ್ಪತ್ರೆಯಲ್ಲಿ ಆಯುಷ್ ಆಸ್ಪತ್ರೆ, ಕುರ್ದುವಾಡಿ-ಲಾತೂರ್ ರಸ್ತೆ ರೈಲ್ವೆ ವಿಭಾಗದ (186 ಕಿಮೀ) ವಿದ್ಯುದ್ದೀಕರಣ, ಎನ್‌ಎಚ್-166 (ಪ್ಯಾಕೇಜ್-I) ನ ಸಾಂಗ್ಲಿಯಿಂದ ಬೋರ್ಗಾಂವ್ ಭಾಗಕ್ಕೆ ಚತುಷ್ಪಥ ಸೇರಿದಂತೆ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್‌ನ ಮನ್ಮಾಡ್ ಟರ್ಮಿನಲ್‌ನಲ್ಲಿ ಹೆಚ್ಚುವರಿ ಸೌಲಭ್ಯಗಳು ಮತ್ತು ಇತರ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಶಂಕುಸ್ಥಾಪನೆ ಮಾಡಿದರು

ನಮ್ಮ ಸರ್ಕಾರ 'ಸಬ್ ಕಾ ಸಾಥ್ ಸಬ್ ಕಾ ವಿಕಾಸ್' ಮಂತ್ರ ಅನುಸರಿಸುತ್ತದೆ: ಶಿರಡಿಯಲ್ಲಿ ಮೋದಿ
ನರೇಂದ್ರ ಮೋದಿ
Follow us
ರಶ್ಮಿ ಕಲ್ಲಕಟ್ಟ
|

Updated on: Oct 26, 2023 | 7:11 PM

ಶಿರಡಿ ಅಕ್ಟೋಬರ್ 26: ಮಹಾರಾಷ್ಟ್ರದ (Maharashtra) ಶಿರಡಿಯಲ್ಲಿ (Shirdi)ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಬಿಜೆಪಿ ಸರ್ಕಾರವು “ಸಬ್ ಕಾ ಸಾಥ್ ಸಬ್ಕಾ ವಿಕಾಸ್” ಮಂತ್ರವನ್ನು ಅನುಸರಿಸುತ್ತದೆ ಎಂದು ಹೇಳಿದರು. “ನಮ್ಮ ಡಬಲ್ ಇಂಡಿಯಾ ಸರ್ಕಾರದ ಹೆಚ್ಚಿನ ಆದ್ಯತೆಯು ಬಡವರ ಕಲ್ಯಾಣವಾಗಿದೆ” ಎಂದು ಶಿರಡಿಯಲ್ಲಿ ಪ್ರಧಾನಿ ಮೋದಿ ಹೇಳಿದರು. ಮಹಾರಾಷ್ಟ್ರದ ಶಿರಡಿಯಲ್ಲಿ ಸುಮಾರು 7,500 ಕೋಟಿ ರೂಪಾಯಿಗಳ ಬಹು ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಗುರುವಾರ ಶಂಕುಸ್ಥಾಪನೆ ಮಾಡಿದರು. ಪ್ರಧಾನಿಯವರೊಂದಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪ ಮುಖ್ಯಮಂತ್ರಿಗಳಾದ ದೇವೇಂದ್ರ ಫಡ್ನವೀಸ್ ಮತ್ತು ಅಜಿತ್ ಪವಾರ್ ಇದ್ದರು.

ಶಿರಡಿಯಲ್ಲಿ ಪ್ರಧಾನಿ ಮೋದಿಯವರ ಭಾಷಣದ ಹೈಲೈಟ್ಸ್ ಇಲ್ಲಿದೆ

  1. ಇಂದು ಸಾಯಿಬಾಬಾರವರ ಆಶೀರ್ವಾದದಿಂದ 7,500 ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯಾಗಿದೆ.
  2. ಮಹಾರಾಷ್ಟ್ರ 5 ದಶಕಗಳಿಂದ ಕಾಯುತ್ತಿದ್ದ ನೀಲವಾಂಡೆ ಅಣೆಕಟ್ಟಿನ ಕಾಮಗಾರಿಯೂ ಪೂರ್ಣಗೊಂಡಿದೆ.
  3. ಶಿರಸಿಯಲ್ಲಿ “ಜಲಪೂಜೆ” ಮಾಡುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟವೆಂದೇ ಭಾವಿಸುತ್ತೇನೆ.
  4. ನಮ್ಮ ಸರ್ಕಾರ “ಸಬ್ ಕಾ ಸಾಥ್ ಸಬ್ ಕಾ ವಿಕಾಸ್” ಮಂತ್ರವನ್ನು ಅನುಸರಿಸುತ್ತಿದೆ. ನಮ್ಮ ಸರ್ಕಾರದ ಹೆಚ್ಚಿನ ಆದ್ಯತೆಯು ಬಡವರ ಕಲ್ಯಾಣವಾಗಿದೆ.
  5. ಇಂದು, ದೇಶದ ಆರ್ಥಿಕತೆಯು ಬೆಳೆಯುತ್ತಿರುವಾಗ, ಬಡವರ ಕಲ್ಯಾಣಕ್ಕಾಗಿ ಸರ್ಕಾರದ ಬಜೆಟ್ ಕೂಡ ಹೆಚ್ಚುತ್ತಿದೆ.
  6. ಇಂದು ಮಹಾರಾಷ್ಟ್ರದಲ್ಲಿ 1.10 ಕೋಟಿ ಆಯುಷ್ಮಾನ್ ಕಾರ್ಡ್‌ಗಳನ್ನು ನೀಡಲಾಗುತ್ತಿದೆ. ಆಯುಷ್ಮಾನ್ ಭಾರತ್ ಯೋಜನೆಯಡಿ ಬಡವರಿಗೆ ಉಚಿತ ಚಿಕಿತ್ಸೆ ನೀಡಲಾಗಿದೆ.
  7. 2014 ಕ್ಕೂ ಮೊದಲು, ನೀವು ಅಂಕಿಅಂಶಗಳನ್ನು ಕೇಳುತ್ತೀರಿ, ಆದರೆ ಆ ಅಂಕಿಅಂಶಗಳು ಯಾವುವು? ಇಷ್ಟು ಲಕ್ಷದ ಭ್ರಷ್ಟಾಚಾರ, ಇಷ್ಟು ಕೋಟಿಯ ಭ್ರಷ್ಟಾಚಾರ, ಲಕ್ಷ ಕೋಟಿಯ ಹಗರಣ ಮತ್ತು ಈಗ ಏನಾಗುತ್ತಿದೆ?
  8. ನಾವು ಪಿಎಂ ಕಿಸಾನ್ ಸಮ್ಮಾನ್ ನಿಧಿಯನ್ನು ಪ್ರಾರಂಭಿಸಿದ್ದೇವೆ, ಇದರ ಸಹಾಯದಿಂದ ದೇಶಾದ್ಯಂತ ಕೋಟಿಗಟ್ಟಲೆ ಸಣ್ಣ ರೈತರಿಗೆ 2 ಲಕ್ಷ 60 ಸಾವಿರ ಕೋಟಿ ರೂ. ಮಹಾರಾಷ್ಟ್ರದ ಸಣ್ಣ ರೈತರ ಬ್ಯಾಂಕ್ ಖಾತೆಗಳಿಗೆ 26,000 ಕೋಟಿ ರೂ.ಗಳನ್ನು ನೇರವಾಗಿ ವರ್ಗಾಯಿಸಲಾಗಿದೆ.

ಶಿರಡಿಯಲ್ಲಿ ಪ್ರಧಾನಮಂತ್ರಿಯವರು ಚಾಲನೆ ನೀಡಿದ ಯೋಜನೆಗಳು ಇವು

ಅಹ್ಮದ್‌ನಗರದ ಸಿವಿಲ್ ಆಸ್ಪತ್ರೆಯಲ್ಲಿ ಆಯುಷ್ ಆಸ್ಪತ್ರೆ, ಕುರ್ದುವಾಡಿ-ಲಾತೂರ್ ರಸ್ತೆ ರೈಲ್ವೆ ವಿಭಾಗದ (186 ಕಿಮೀ) ವಿದ್ಯುದ್ದೀಕರಣ, ಎನ್‌ಎಚ್-166 (ಪ್ಯಾಕೇಜ್-I) ನ ಸಾಂಗ್ಲಿಯಿಂದ ಬೋರ್ಗಾಂವ್ ಭಾಗಕ್ಕೆ ಚತುಷ್ಪಥ ಸೇರಿದಂತೆ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್‌ನ ಮನ್ಮಾಡ್ ಟರ್ಮಿನಲ್‌ನಲ್ಲಿ ಹೆಚ್ಚುವರಿ ಸೌಲಭ್ಯಗಳು ಮತ್ತು ಇತರ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಶಂಕುಸ್ಥಾಪನೆ ಮಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರು ಶಿರಡಿಯಲ್ಲಿ ಫಲಾನುಭವಿಗಳಿಗೆ ಆಯುಷ್ಮಾನ್ ಕಾರ್ಡ್ ಮತ್ತು ಸ್ವಾಮಿತ್ವ ಕಾರ್ಡ್‌ಗಳನ್ನು ವಿತರಿಸಿದರು.

ಇದನ್ನೂ ಓದಿ:  ಮಹಾರಾಷ್ಟ್ರದ ಶಿರಡಿ ಸಾಯಿಬಾಬಾ ಮಂದಿರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ಮೋದಿ

ಇದಕ್ಕೂ ಮುನ್ನ ಶಿರಡಿಯ ಶ್ರೀ ಸಾಯಿಬಾಬಾ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ, ಹೊಸ ದರ್ಶನ್ ಸರತಿ ಸಾಲು ಸಂಕೀರ್ಣವನ್ನು ಉದ್ಘಾಟಿಸಿದರು. ಹೆಚ್ಚುವರಿಯಾಗಿ, ಪ್ರಧಾನಿಯವರು ಅಹ್ಮದ್‌ನಗರದ ನೀಲವಾಂಡೆ ಅಣೆಕಟ್ಟಿನ “ಜಲಪೂಜೆ” ಮಾಡಿದ್ದು ಅಣೆಕಟ್ಟಿನ ಕಾಲುವೆ ಜಾಲವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಅಣೆಕಟ್ಟು ಯೋಜನೆಯು ಏಳು ತಹಸಿಲ್‌ಗಳಿಂದ 182 ಹಳ್ಳಿಗಳಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಹೇಳಲಾಗಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶಿರಡಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡರು ಮತ್ತು “ನಮೋ ಶೋತ್ಕರಿ ಮಹಾಸನ್ಮಾನ್ ನಿಧಿ ಯೋಜನೆ” ಯನ್ನು ಪ್ರಾರಂಭಿಸಿದರು, ಇದು ಮಹಾರಾಷ್ಟ್ರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 86 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ವರ್ಷಕ್ಕೆ 6,000 ರೂ ಹೆಚ್ಚುವರಿ ಮೊತ್ತವನ್ನು ನೀಡುವ ಮೂಲಕ ಪ್ರಯೋಜನವನ್ನು ನೀಡುತ್ತದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ