Eid-ul-Fitr 2023: ಈದ್ ಹಬ್ಬದ ಶುಭಾಶಯ ಕೋರಿದ ಪ್ರಧಾನಿ ಮೋದಿ, ವಿಶ್ವ ನಾಯಕರು
ಈದ್-ಉಲ್-ಫಿತರ್ ಶುಭಾಶಯಗಳು. ನಮ್ಮ ಸಮಾಜದಲ್ಲಿ ಸೌಹಾರ್ದತೆ ಮತ್ತು ಸಹಾನುಭೂತಿಯ ಮನೋಭಾವ ಹೆಚ್ಚಲಿ. ಪ್ರತಿಯೊಬ್ಬರ ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ನಾನು ಪ್ರಾರ್ಥಿಸುತ್ತೇನೆ. ಈದ್ ಮುಬಾರಕ್ ಎಂದು ಪ್ರಧಾನ ನರೇಂದ್ರ ಮೋದಿ ಶನಿವಾರ ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ (Narendra Modi), ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu), ಅಮೆರಿಕದ ಅಧ್ಯಕ್ಷ ಜೋ ಬಿಡನ್ ಮತ್ತು ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಸೇರಿದಂತೆ ವಿಶ್ವದಾದ್ಯಂತದ ನಾಯಕರು ಈದ್-ಉಲ್-ಫಿತರ್ (Eid-ul-Fitr) ಶುಭಾಶಯಗಳನ್ನು ಕೋರಿದ್ದಾರೆ. ಈದ್-ಉಲ್-ಫಿತರ್ ಶುಭಾಶಯಗಳು. ನಮ್ಮ ಸಮಾಜದಲ್ಲಿ ಸೌಹಾರ್ದತೆ ಮತ್ತು ಸಹಾನುಭೂತಿಯ ಮನೋಭಾವ ಹೆಚ್ಚಲಿ. ಪ್ರತಿಯೊಬ್ಬರ ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ನಾನು ಪ್ರಾರ್ಥಿಸುತ್ತೇನೆ. ಈದ್ ಮುಬಾರಕ್ ಎಂದು ಪ್ರಧಾನ ನರೇಂದ್ರ ಮೋದಿ ಶನಿವಾರ ಟ್ವೀಟ್ ಮಾಡಿದ್ದಾರೆ. ಈದ್-ಉಲ್-ಫಿತರ್ ಸಂದರ್ಭದಲ್ಲಿ ನಾನು ಎಲ್ಲಾ ದೇಶವಾಸಿಗಳಿಗೆ ವಿಶೇಷವಾಗಿ ನಮ್ಮ ಮುಸ್ಲಿಂ ಸಹೋದರ ಸಹೋದರಿಯರಿಗೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ. ಪ್ರೀತಿ ಮತ್ತು ದಯೆಯ ಹಬ್ಬವಾಗಿರುವ ಈದ್ ನಮಗೆ ಇತರರಿಗೆ ಸಹಾಯ ಮಾಡುವ ಸಂದೇಶವನ್ನು ನೀಡುತ್ತದೆ. ಈ ಸಂದರ್ಭದಲ್ಲಿ ನಾವು ಒಟ್ಟಾಗಿ ಮುನ್ನಡೆಯುವ ಸಂಕಲ್ಪವನ್ನು ತೆಗೆದುಕೊಳ್ಳೋಣ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಟ್ವೀಟ್ ಮಾಡಿದ್ದಾರೆ.
Greetings on Eid-ul-Fitr. May the spirit of harmony and compassion be furthered in our society. I also pray for everyone’s wonderful health and well-being. Eid Mubarak!
— Narendra Modi (@narendramodi) April 22, 2023
ಎಲ್ಲರಿಗೂ ಈದ್ ಮುಬಾರಕ್! ಈ ಪವಿತ್ರ ಹಬ್ಬವು ಎಲ್ಲರಿಗೂ ಶಾಂತಿ, ಸಂತೋಷ ಮತ್ತು ಸಮೃದ್ಧಿಯನ್ನು ತರಲಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.
Eid Mubarak to everyone! May this auspicious festival bring peace, happiness & prosperity to all. pic.twitter.com/qLXF8lVX0G
— Rahul Gandhi (@RahulGandhi) April 22, 2023
ಬ್ರಿಟನ್ ಮತ್ತು ಪ್ರಪಂಚದಾದ್ಯಂತ ಮುಸ್ಲಿಂ ಸಮುದಾಯಗಳಿಗೆ ಈದ್ ಮುಬಾರಕ್!” ಎಂದು ಯುಕೆ ಪ್ರಧಾನಿ ರಿಷಿ ಸುನಕ್ ಹೇಳಿದ್ದಾರೆ.
#EidMubarak to Muslim communities celebrating across the UK and around the world! pic.twitter.com/W5NfP9XqO4
— UK Prime Minister (@10DowningStreet) April 20, 2023
ರಂಜಾನ್ ತಿಂಗಳು ಮುಕ್ತಾಯವಾಗುತ್ತಿದ್ದಂತೆ, ಜಿಲ್ ಮತ್ತು ನಾನು ಯುನೈಟೆಡ್ ಸ್ಟೇಟ್ಸ್ ಮತ್ತು ಪ್ರಪಂಚದಾದ್ಯಂತ ಈದ್ ಅಲ್-ಫಿತರ್ ಆಚರಿಸುವ ಮುಸ್ಲಿಮರಿಗೆ ನಮ್ಮ ಆತ್ಮೀಯ ಶುಭಾಶಯಗಳನ್ನು ಕೋರುತ್ತಿದ್ದೇವೆ. ಸಹಾನುಭೂತಿಯಿಂದ ತುಂಬಿದ ಸಂತೋಷದಾಯಕ ರಜಾದಿನವನ್ನು ನಾವು ಬಯಸುತ್ತೇವೆ. ಈದ್ ಮುಬಾರಕ್ ಎಂದು ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ಟ್ವೀಟ್ ಮಾಡಿದ್ದಾರೆ.
As the month of Ramadan comes to a close, Jill and I send our warmest greetings to Muslims celebrating Eid al-Fitr in the United States and across the world.
We wish you a joyous holiday filled with community and compassion. Eid Mubarak! pic.twitter.com/uha0qdg85o
— President Biden (@POTUS) April 21, 2023
ಇದನ್ನೂ ಓದಿ: ರಿಲಯನ್ಸ್ ವಿಮಾ ಭ್ರಷ್ಟಾಚಾರ ಪ್ರಕರಣ: ಜಮ್ಮು, ಕಾಶ್ಮೀರದ ಮಾಜಿ ಗವರ್ನರ್ ಸತ್ಯಪಾಲ್ ಮಲಿಕ್ಗೆ ಸಿಬಿಐ ಸಮನ್ಸ್
ಯುಎಇ ಮತ್ತು ಅದರ ಜನರಿಗೆ ಹೊಸ ವರ್ಷದ ಶುಭಾಶಯಗಳು. ನಮ್ಮ ಅರಬ್ ಮತ್ತು ಇಸ್ಲಾಮಿಕ್ ರಾಷ್ಟ್ರಕ್ಕೆ ಹೊಸ ವರ್ಷದ ಶುಭಾಶಯಗಳು. ಜಗತ್ತಿಗೆ ಹೊಸ ವರ್ಷದ ಶುಭಾಶಯಗಳು. ದೇವರು ನಿಮ್ಮ ವಿಧೇಯತೆಯನ್ನು ಸ್ವೀಕರಿಸಲಿ. ನಿಮ್ಮ ಸಂತೋಷಗಳನ್ನು ಶಾಶ್ವತಗೊಳಿಸಲಿ ಮತ್ತು ನಿಮ್ಮ ಎಲ್ಲಾ ಆಕಾಂಕ್ಷೆಗಳನ್ನು ಪೂರೈಸಲಿ ಎಂದು ಯುಎಇಯ ಉಪಾಧ್ಯಕ್ಷ ಮತ್ತು ಪ್ರಧಾನ ಮಂತ್ರಿ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಈದ್ ಶುಭಾಶಯಗಳನ್ನು ತಿಳಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ