17 ವರ್ಷ ಮೇಲ್ಪಟ್ಟವರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಮುಂಗಡವಾಗಿ ಅರ್ಜಿ ಸಲ್ಲಿಸಲು ಅವಕಾಶ

| Updated By: ರಶ್ಮಿ ಕಲ್ಲಕಟ್ಟ

Updated on: Jul 28, 2022 | 12:56 PM

ಜನವರಿ 1ರಂದು 18 ವರ್ಷ ಪೂರ್ಣವಾಗಬೇಕು ಎಂದು ಕಾಯಬೇಕೆಂದಿಲ್ಲ. ಅದಕ್ಕಿಂತ ಮುಂಚೆಯೇ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಲು ಅರ್ಜಿ ಸಲ್ಲಿಸಬಹುದು ಎಂದು ಮುಖ್ಯ ಚುನಾವಣಾ ಅಧಿಕಾರಿ ಹೇಳಿದ್ದಾರೆ.

17 ವರ್ಷ ಮೇಲ್ಪಟ್ಟವರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಮುಂಗಡವಾಗಿ ಅರ್ಜಿ ಸಲ್ಲಿಸಲು ಅವಕಾಶ
ಚುನಾವಣಾ ಆಯೋಗ
Follow us on

ದೆಹಲಿ: ಜನವರಿ 1 ರಂದು 18 ವರ್ಷ ಪೂರ್ಣವಾಗುವವರೆಗೂ ಕಾಯುವ ಅಗತ್ಯವಿಲ್ಲ. ದೇಶದಲ್ಲಿ 17 ವರ್ಷ ಮೇಲ್ಪಟ್ಟವರು ಮತದಾರರ ಪಟ್ಟಿಗೆ (Voter’s List) ಹೆಸರು ಸೇರ್ಪಡೆ ಮಾಡಲು ಮುಂಗಡವಾಗಿ ಅರ್ಜಿ ಸಲ್ಲಿಸಬಹುದು ಎಂದು ಚುನಾವಣಾ ಆಯೋಗ (Election Commission of India) ಗುರುವಾರ ಹೇಳಿದೆ. ಅಂದಹಾಗೆ ಇನ್ಮುಂದೆ ಜನವರಿ 1ರಂದು 18 ವರ್ಷ ಪೂರ್ಣವಾಗಬೇಕು ಎಂದು ಕಾಯಬೇಕೆಂದಿಲ್ಲ. ಅದಕ್ಕಿಂತ ಮುಂಚೆಯೇ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಲು ಅರ್ಜಿ ಸಲ್ಲಿಸಬಹುದು ಎಂದು ಮುಖ್ಯ ಚುನಾವಣಾ ಅಧಿಕಾರಿ ಹೇಳಿದ್ದಾರೆ. ಈ ಬಗ್ಗೆ ಮುಖ್ಯ ಚುನಾವಣಾ ಅಧಿಕಾರಿ ರಾಜೀವ್ ಕುಮಾರ್ ಮತ್ತು ಚುನಾವಣಾ ಆಯುಕ್ತ ಅನೂಪ್ ಚಂದ್ರ ಪಾಂಡೆ ಎಲ್ಲ ರಾಜ್ಯಗಳ ಸಿಇಒ, ಇಆರ್​​ಒ. ಎಇಆರ್​​ಒಗಳಿಗೆ ನಿರ್ದೇಶನ ನೀಡಿದ್ದಾರೆ.

17 ವರ್ಷಕ್ಕಿಂತ ಮೇಲ್ಪಟ್ಟ ಯುವಕರು ಈಗ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಲು ಮುಂಚಿತವಾಗಿ ಅರ್ಜಿ ಸಲ್ಲಿಸಬಹುದು ಮತ್ತು ಒಂದು ವರ್ಷದ ಜನವರಿ 1 ರಂದು 18 ವರ್ಷ ವಯಸ್ಸನ್ನು ತಲುಪುವ ಪೂರ್ವ-ಅವಶ್ಯಕ ಮಾನದಂಡವನ್ನು ಕಾಯಬೇಕಿಲ್ಲ ಎಂದು ಚುನಾವಣಾ ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.

ಮುಂದಿನ ವರ್ಷ ಅವರಿಗೆ 18 ಪೂರ್ಣ ಆಗುವುದಾದರೆ ಮುಂಚಿತವಾಗಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೆ ಅರ್ಜಿ ಸಲ್ಲಿಸಬಹುದು. ನೋಂದಣಿ ಆದ ಮೇಲೆ ಅವರಿಗೆ ಎಲೆಕ್ಟ್ರಾಲ್ ಫೋಟೊ ಐಡೆಂಟಿಟಿ ಕಾರ್ಡ್ ಅಥವಾ ಗುರುತಿನ ಚೀಟಿ ನೀಡಲಾಗುತ್ತದೆ. 2023 ರ ಪ್ರಸ್ತುತ ಸುತ್ತಿನ ಮತದಾರರ ಪಟ್ಟಿಯ ವಾರ್ಷಿಕ ಪರಿಷ್ಕರಣೆಗಾಗಿ, 2023 ರ ಏಪ್ರಿಲ್ 1, ಜುಲೈ 1 ಮತ್ತು ಅಕ್ಟೋಬರ್ 1 ರೊಳಗೆ 18 ವರ್ಷ ವಯಸ್ಸಿನ ಯಾವುದೇ ನಾಗರಿಕರು ಮತದಾರರ ಪಟ್ಟಿಯ ಕರಡು ಪ್ರಕಟಣೆಯ ದಿನಾಂಕದಿಂದ ಮತದಾರರಾಗಿ ನೋಂದಣಿಗಾಗಿ ಮುಂಗಡ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

Published On - 12:45 pm, Thu, 28 July 22