Viral Video: ಶಿಮ್ಲಾ ಹೈವೇಯಲ್ಲಿ ಹೋಗುತ್ತಿದ್ದ ಕಾರ್ ಡೋರ್ ತೆಗೆದು ನೇತಾಡಿದ ಯುವತಿ; ಆಮೇಲೇನಾಯ್ತು ಅಂತ ನೀವೇ ನೋಡಿ!
ಈ ವಿಡಿಯೋದಲ್ಲಿ ಕಾರನ್ನು ವೇಗವಾಗಿ ಓಡಿಸುತ್ತಿದ್ದಾಗ ಯುವತಿ ಹೊರಗೆ ನೇತಾಡುತ್ತಿರುವುದನ್ನು ಕಾಣಬಹುದು. ಈ ಇಡೀ ಘಟನೆಯ ವೀಡಿಯೊ ಅಸ್ಪಷ್ಟವಾಗಿದೆ. ಆದರೆ, ಆ ಯುವತಿ ಕಾರಿನ ಬಾಗಿಲು ತೆರೆದು ಹೊರಗೆ ನೇತಾಡುತ್ತಿದ್ದಳು ಎಂಬುದು ಸ್ಪಷ್ಟವಾಗಿದೆ.
ಶಿಮ್ಲಾ: ಕಾನೂನಿನ ಪ್ರಕಾರ ರಸ್ತೆಗಳಲ್ಲಿ ವೀಲಿಂಗ್ (Wheeling) , ಸ್ಟಂಟ್ಗಳನ್ನು ಮಾಡುವುದು ಕಾನೂನುಬಾಹಿರ. ಆದರೂ ಜನರು ಭಾರತದ ರಸ್ತೆಗಳಲ್ಲಿ ಸಾಹಸಗಳನ್ನು ಪ್ರದರ್ಶಿಸುವ ಹಲವಾರು ವೀಡಿಯೊಗಳಿವೆ. ಇದೀಗ ಶಿಮ್ಲಾದ ಹೈವೇಯಲ್ಲಿ ಯುವತಿಯೊಬ್ಬಳು ಅಪಾಯಕಾರಿಯಾದ ಸ್ಟಂಟ್ (Stunt) ಮಾಡುತ್ತಿರುವ ವಿಡಿಯೋ ವೈರಲ್ (Viral Video) ಆಗಿದೆ. ಎನ್‌ಎಚ್ 5 ಪರ್ವಾನೂ-ಶಿಮ್ಲಾ ಹೆದ್ದಾರಿಯಲ್ಲಿ ಯುವತಿಯೊಬ್ಬಳು ಸಾಹಸ ಪ್ರದರ್ಶಿಸುತ್ತಿರುವ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಆಕೆಯ ಸ್ಟಂಟ್ನ ವಿಡಿಯೋವನ್ನು ಆ ರಸ್ತೆಯಲ್ಲಿ ಹಾದುಹೋಗುವ ಇತರರು ಚಿತ್ರೀಕರಿಸಿದ್ದಾರೆ.
ಈ ವಿಡಿಯೋದಲ್ಲಿ ಕಾರನ್ನು ವೇಗವಾಗಿ ಓಡಿಸುತ್ತಿದ್ದಾಗ ಯುವತಿ ಆ ವಾಹನದಿಂದ ಹೊರಗೆ ನೇತಾಡುತ್ತಿರುವುದನ್ನು ಕಾಣಬಹುದು. ಈ ಇಡೀ ಘಟನೆಯ ವೀಡಿಯೊ ಅಸ್ಪಷ್ಟವಾಗಿದೆ. ಆದರೆ, ಆ ಯುವತಿ ಕಾರಿನ ಬಾಗಿಲು ತೆರೆದು ಹೊರಗೆ ನೇತಾಡುತ್ತಿದ್ದಳು ಎಂಬುದು ಸ್ಪಷ್ಟವಾಗಿದೆ. ಅದಾಗಿ ಸ್ವಲ್ಪ ಸಮಯದ ನಂತರ ಕಾರಿನ ಚಾಲಕ ನಿಯಂತ್ರಣವನ್ನು ಕಳೆದುಕೊಂಡಿದ್ದಾನೆ. ನಂತರ ಆ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ.
ಇದನ್ನೂ ಓದಿ: Viral Video: ವಿಮಾನದ ಸಸ್ಯಾಹಾರ ಊಟದಲ್ಲಿ ಕತ್ತರಿಸಿದ ಹಾವಿನ ತಲೆ ಪತ್ತೆ! ವೈರಲ್ ವಿಡಿಯೋ ಇಲ್ಲಿದೆ
ಅತಿವೇಗದಲ್ಲಿ ಹೋಗುತ್ತಿದ್ದ ಆ ಕಾರು ಡಿವೈಡರ್‌ಗೆ ಹೊಡೆದಿದೆ. ನಿಯಂತ್ರಣ ಕಳೆದುಕೊಂಡ ಕಾರು ಮೇಲಕ್ಕೆ ಹಾರಿ ಪಕ್ಕದ ಡಿವೈಡರ್ ದಾಟಿ ಇನ್ನೊಂದು ರಸ್ತೆಗೆ ಹಾರಿ ಬಿದ್ದಿದೆ. ಅಲ್ಲಿ ಎದುರಿನಿಂದ ಬರುತ್ತಿದ್ದ ಕಾರಿಗೆ ಈ ಕಾರು ಡಿಕ್ಕಿ ಹೊಡೆದಿದೆ. ಸಿನಿಮೀಯವಾಗಿ ನಡೆದ ಈ ಅಪಘಾತದ ವಿಡಿಯೋ ಭಾರೀ ವೈರಲ್ ಆಗಿದೆ. ಈ ಘಟನೆ ನಡೆದ ಸ್ಥಳದಲ್ಲಿ ಕಾರಿನಲ್ಲಿದ್ದವರು ಎಲ್ಲಿಯೂ ಪತ್ತೆಯಾಗಿಲ್ಲ ಎಂದು ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಅಪಘಾತಕ್ಕೀಡಾದ ಆ ಕಾರನ್ನು ಕ್ರೇನ್ ವ್ಯವಸ್ಥೆ ಮಾಡಿ ಮೇಲೆತ್ತಲಾಯಿತು. ಆ ಕಾರಿನಲ್ಲಿ ಇಬ್ಬರು ಹುಡುಗರು ಮತ್ತು ಒಬ್ಬಳು ಯುವತಿ ಇದ್ದರು ಎಂಬುದು ಗಮನಿಸಬೇಕಾದ ಸಂಗತಿ.
#WATCH | HP: A video went viral showing a car jumping over a divider & colliding with railing on NH-5 in Solan; a resident from Amritsar tried performing stunts while rash driving. Vehicle damaged but driver safe. Case filed u/s 279 of IPC in Dharampur PS: Solan Police (25.07) pic.twitter.com/o5ajWRJuiG
— ANI (@ANI) July 25, 2022
ಕಾರಿನ ಡೋರ್ ತೆಗೆದು ಸ್ಟಂಟ್ ಮಾಡುತ್ತಾ ವೇಗವಾಗಿ ಹೋಗಿ ಅಪಘಾತಕ್ಕೀಡಾದ ಕಾರಿನಲ್ಲಿದ್ದ ಇದಲ್ಲದೆ, ಪೊಲೀಸರು ಯುವತಿಯ ವಿರುದ್ಧ ಐಪಿಸಿ ಸೆಕ್ಷನ್ 279 ಮತ್ತು 337 ರ ಅಡಿಯಲ್ಲಿ ನಿರ್ಲಕ್ಷ್ಯದ ಚಾಲನೆಯ ಪ್ರಕರಣವನ್ನು ದಾಖಲಿಸಿದ್ದಾರೆ.