ರಜೆಯಲ್ಲಿರುವ ಉದ್ಯೋಗಿಗಳಿಗೆ ಕರೆ ಮಾಡಿದರೆ ₹1 ಲಕ್ಷ ದಂಡ; ಡ್ರೀಮ್ 11 ಕಂಪನಿಯ ನೌಕರರಿಗೆ ಹೀಗಿದೆ ರಜಾ ಸವಲತ್ತು
ವರ್ಷಕ್ಕೊಮ್ಮೆ ಒಂದು ವಾರದವರೆಗೆ ರಜೆ ಇರುತ್ತದೆ ಎಂದು ಶೇತ್ ಹೇಳಿದ್ದಾರೆ. ಈ ರಜಾಕಾಲದಲ್ಲಿ ನಿಮಗೆ ಸ್ಲಾಕ್, ಇಮೇಲ್‌ಗಳು ಮತ್ತು ಕರೆಗಳು ಇರುವುದಿಲ್ಲ. ಏಕೆಂದರೆ ಆ ಒಂದು ವಾರದ ಅಡೆತಡೆಯಿಲ್ಲದ ಸಮಯವನ್ನು ಹೊಂದಲು ಇದು ನಿಮಗೆ ಹೆಚ್ಚು ಸಹಾಯ ಮಾಡುತ್ತದೆ.
ಪ್ರಪಂಚದಾದ್ಯಂತದ ಹೆಚ್ಚಿನ ಕೆಲಸಗಾರರಿಗೆ, ರಜಾದಿನಗಳು ಕಟ್ಟುನಿಟ್ಟಾಗಿ ವಿಶ್ರಾಂತಿ ಪಡೆಯುವ ಸಮಯವಾಗಿದೆ. ರಜಾಕಾಲದ ಮಜಾ ಅನುಭವಿಸಲು ಬೀಚ್‌ನಲ್ಲಿ ವಿಶ್ರಾಂತಿ ಪಡೆಯುವಾಗ ಅಥವಾ ಬೆಟ್ಟಗಳಲ್ಲಿ ಅಲೆದಾಡುವಾಗ ಸಹೋದ್ಯೋಗಿಗಳಿಂದ ಯಾವುದೇ ಕರೆ ಬಂದರೆ ಅದು ಕಿರಿಕಿರಿಯೇ. ಅಂತಹ ಕರೆಗಳು ಮತ್ತು ತುರ್ತು ಕೆಲಸ-ಸಂಬಂಧಿತ ವಿನಂತಿಗಳು ಈ ರಜಾ ಸಮಯದಲ್ಲಿ ಬಂದು ಬಿಟ್ಟರೆ ಇದು ರಜೆಯ ಮೂಡ್ನ್ನೇ ಹಾಳು ಮಾಡಿ ಬಿಡುತ್ತದೆ. ಇದೀಗ ಭಾರತೀಯ ಕಂಪನಿಯೊಂದು ಈ ಕಿರಿಕಿರಿಗೆ ಪರಿಹಾರವೊಂದನ್ನು ಕಂಡುಕೊಂಡಿದೆ. ಫ್ಯಾಂಟಸಿ ಸ್ಪೋರ್ಟ್ಸ್ ಪ್ಲಾಟ್‌ಫಾರ್ಮ್ ಅನ್ನು ನಡೆಸುತ್ತಿರುವ ಮುಂಬೈ ಮೂಲದ ಡ್ರೀಮ್ 11(Dream11) ನಲ್ಲಿನ ಉದ್ಯೋಗಿಗಳು ರಜಾಕಾಲದಲ್ಲಿ ಸಹೋದ್ಯೋಗಿಯನ್ನು ಸಂಪರ್ಕಿಸಿದರೆ 1 ಲಕ್ಷ ರೂಪಾಯಿ ದಂಡವನ್ನು ಪಾವತಿಸಬೇಕಾಗುತ್ತದೆ ಎಂದು ಸಹ-ಸಂಸ್ಥಾಪಕ ಭವಿತ್ ಶೇತ್ (Bhavit Sheth) ಸಿಎನ್‌ಬಿಸಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. 2008 ರಲ್ಲಿ ಸ್ಥಾಪನೆಯಾದ ಕಂಪನಿಯು ಕಾರ್ಮಿಕರಿಗೆ ವಾರ್ಷಿಕವಾಗಿ ಕನಿಷ್ಠ ಒಂದು ವಾರ ರಜೆ ತೆಗೆದುಕೊಳ್ಳುವುದನ್ನು ಕಡ್ಡಾಯಗೊಳಿಸುತ್ತದೆ.
ವರ್ಷಕ್ಕೊಮ್ಮೆ ಒಂದು ವಾರದವರೆಗೆ ರಜೆ ಇರುತ್ತದೆ ಎಂದು ಶೇತ್ ಹೇಳಿದ್ದಾರೆ. ಈ ರಜಾಕಾಲದಲ್ಲಿ ನಿಮಗೆ ಸ್ಲಾಕ್, ಇಮೇಲ್‌ಗಳು ಮತ್ತು ಕರೆಗಳು ಇರುವುದಿಲ್ಲ. ಏಕೆಂದರೆ ಆ ಒಂದು ವಾರದ ಅಡೆತಡೆಯಿಲ್ಲದ ಸಮಯವನ್ನು ಹೊಂದಲು ಇದು ನಿಮಗೆ ಹೆಚ್ಚು ಸಹಾಯ ಮಾಡುತ್ತದೆ. ನಾವು ಯಾರ ಮೇಲೆ ಅವಲಂಬಿತರಾಗಿದ್ದೇವೆ ಎಂಬುದನ್ನು ತಿಳಿದುಕೊಳ್ಳಲು ಇದು ಸಹಕಾರಿ ಎಂದಿದ್ದಾರೆ ಶೇತ್. ಇಲ್ಲಿಯವರೆಗೆ ಈ ವ್ಯವಸ್ಥೆಯು ಪರಿಣಾಮಕಾರಿಯಾಗಿದೆ ಎಂದು ಶೇತ್ ಹೇಳಿದ್ದಾರೆ.
ಈ ಅಡೆತಡೆಯಿಲ್ಲದ ಸಮಯವು ಡ್ರೀಮ್‌ಸ್ಟರ್‌ಗಳಿಗೆ (ಡ್ರೀಮ್ 11 ರ ಉದ್ಯೋಗಿಗಳು) ವಿಶ್ರಾಂತಿ ಪಡೆಯಲು, ರೀಚಾರ್ಜ್ ಮಾಡಲು ಮತ್ತು ತಮ್ಮ ಅತ್ಯುತ್ತಮವಾದದ್ದನ್ನು ನೀಡಲು ಸಿದ್ಧರಾಗಿ ಕೆಲಸಕ್ಕೆ ಮರಳಲು ಅನುವು ಮಾಡಿಕೊಡುತ್ತದೆ ಎಂದು Dream11 ನಂಬುತ್ತದೆ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.
ಉತ್ತಮ ಗುಣಮಟ್ಟದ ರಜಾಕಾಲ ಆನಂದಿಸಲು ಕಾರ್ಮಿಕರಿಗೆ ಅವಕಾಶ ನೀಡಲು ದಂಡವು ಗಮನ ಸೆಳೆಯುವ ಮಾರ್ಗವಾಗಿದೆ. ಪ್ರತಿಭೆಯನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ, ಗೋಲ್ಡ್‌ಮನ್ ಸ್ಯಾಚ್ಸ್ ಗ್ರೂಪ್ ಇಂಕ್ ಸೇರಿದಂತೆ ಅನೇಕ ಇತರ ವ್ಯವಹಾರಗಳು ಸಿಬ್ಬಂದಿಗೆ ಅನಿಯಮಿತ ರಜೆಗಳನ್ನು ತೆಗೆದುಕೊಳ್ಳಲು ಅವಕಾಶ ನೀಡುತ್ತಿವೆ. ಆದರೆ ಕಳೆದ ವರ್ಷ ಯುಕೆ ನೇಮಕಾತಿ ಸಂಸ್ಥೆಯು ನೌಕರರು ನಿಜವಾಗಿಯೂ ಎಷ್ಟು ದಿನಗಳನ್ನು ತೆಗೆದುಕೊಳ್ಳಬೇಕೆಂದು ಪ್ರಶ್ನಿಸಿದ ನಂತರ ಆ ನೀತಿಯನ್ನು ರದ್ದುಗೊಳಿಸುವುದಾಗಿ ಹೇಳಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ