ಬಿಹಾರದ ವಿಧಾನಸಭೆ ಬಳಿ ಖಾಲಿ ಆಲ್ಕೋಹಾಲ್ ಬಾಟಲಿಗಳು ಪತ್ತೆ; ನಿತೀಶ್ ಕುಮಾರ್ ಸರ್ಕಾರಕ್ಕೆ ಭಾರೀ ಮುಖಭಂಗ
ನಿತೀಶ್ ಕುಮಾರ್ ರಾಜ್ಯದಲ್ಲಿ ಮದ್ಯ ಮಾರಾಟ ಮತ್ತು ಸೇವನೆ ಮೇಲೆ ನಿಷೇದ ಹೇರುವ ಬಗ್ಗೆ ಮಾತನಾಡುತ್ತಾರೆ. ಆದರೆ, ವಿಧಾನಸಭೆ ಆವರಣದಲ್ಲೇ ಮದ್ಯದ ಬಾಟಲ್‌ಗಳು ಬಿದ್ದಿವೆ ಎಂದರೆ ಇದು ಏನನ್ನು ಸೂಚಿಸುತ್ತಿವೆ? ರಾಜ್ಯದ ಗೃಹ ಸಚಿವರು ನಿದ್ರೆ ಮಾಡುತ್ತಿದ್ದಾರೆಯೇ? ಎಂದು ತೇಜಸ್ವಿ ಯಾದವ್ ಪ್ರಶ್ನಿಸಿದ್ದಾರೆ.
ಲಕ್ನೋ: ಬಿಹಾರ ವಿಧಾನಸಭೆ ಅಧಿವೇಶನದ ವೇಳೆ ವಿಧಾನಸಭೆ ಆವರಣದಲ್ಲಿ ಮದ್ಯದ ಬಾಟಲ್‌ಗಳು ಪತ್ತೆಯಾಗಿದೆ. ಇದರಿಂದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಸರ್ಕಾರ ತೀವ್ರ ಮುಜುಗರಕ್ಕೀಡಾಗಿದೆ. ಇಂದು ವಿಧಾನಸಭಾ ಅಧಿವೇಶನಕ್ಕೂ ಮೊದಲು ಬಿಹಾರ ವಿಧಾನಸಭೆ ಅವರಣದಲ್ಲಿ ಬಿದ್ದಿದ್ದ ಮದ್ಯದ ಬಾಟಲ್‌ಗಳ ಫೋಟೋವನ್ನು ವಿಪಕ್ಷ ನಾಯಕ ತೇಜಸ್ವಿ ಯಾದವ್ ತೋರಿಸಿದರು. ಈ ಕುರಿತು ತನಿಖೆ ನಡೆಸುವುದಾಗಿ ಬಿಹಾರ ಸರ್ಕಾರ ಭರವಸೆ ನೀಡಿದೆ.
ಈ ಹಿಂದೆ ಕರ್ನಾಟಕದ ವಿಧಾನಸೌಧದ ಮಹಡಿಯಲ್ಲೂ ಬಿಯರ್ ಬಾಟಲ್ ಬಿದ್ದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಇದೀಗ ಬಿಹಾರದ ವಿಧಾನಸಭೆ ಆವರಣದಲ್ಲಿ ಮದ್ಯದ ಬಾಟಲ್ ದೊರೆತಿರುವುದರಿಂದ ಆಡಳಿತ ಹಾಗೂ ವಿರೋಧ ಪಕ್ಷದ ನಾಯಕರ ನಡುವೆ ವಾದ ಏರ್ಪಟ್ಟಿತು. ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಈ ಬಗ್ಗೆ ಟೀಕಿಸಿದ್ದು, ಇದರಿಂದ ವಿಧಾನಸಭೆಯ ಪಾವಿತ್ರ್ಯತೆ ಹಾಳಾಗುತ್ತಿದೆ ಎಂದಿದ್ದಾರೆ. ನಿತೀಶ್ ಕುಮಾರ್ ರಾಜ್ಯದಲ್ಲಿ ಮದ್ಯ ಮಾರಾಟ ಮತ್ತು ಸೇವನೆ ಮೇಲೆ ನಿಷೇದ ಹೇರುವ ಬಗ್ಗೆ ಮಾತನಾಡುತ್ತಾರೆ. ಆದರೆ, ವಿಧಾನಸಭೆ ಆವರಣದಲ್ಲೇ ಮದ್ಯದ ಬಾಟಲ್‌ಗಳು ಬಿದ್ದಿವೆ ಎಂದರೆ ಇದು ಏನನ್ನು ಸೂಚಿಸುತ್ತಿವೆ? ರಾಜ್ಯದ ಗೃಹ ಸಚಿವರು ನಿದ್ರೆ ಮಾಡುತ್ತಿದ್ದಾರೆಯೇ? ಎಂದು ತೇಜಸ್ವಿ ಯಾದವ್ ಪ್ರಶ್ನಿಸಿದ್ದಾರೆ.
अदभुत! बिहार विधानसभा परिसर के अंदर में शराब की बोतलें बरामद।
अभी शीतकालीन सत्र चल रहा है। CM के चेंबर से मात्र चंद कदम की दूरी पर विभिन्न ब्रांड की शराब ही शराब उपलब्ध।
कड़ी सुरक्षा के बीच चालू सत्र में ही विधानसभा में शराब मिल रही है, शेष बिहार की आप बस कल्पना कीजिए! शर्मनाक! pic.twitter.com/v1Sj2kiBkK
— Tejashwi Yadav (@yadavtejashwi) November 30, 2021
ವಿಧಾನಸಭೆಯಲ್ಲಿ ಮದ್ಯದ ಬಾಟಲ್‌ಗಳು ದೊರೆತಿರುವುದು ನಾಚಿಕೆಗೇಡಿನ ಸಂಗತಿ. ನಿತೀಶ್ ಕುಮಾರ್ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯಬೇಕೆ ಎಂಬ ನೈತಿಕ ಪ್ರಶ್ನೆಯನ್ನು ತಮಗೆ ತಾವೇ ಕೇಳಿಕೊಳ್ಳಬೇಕು ಎಂದು ತೇಜಸ್ವಿ ಯಾದವ್ ಗುಡುಗಿದ್ದಾರೆ. ಇನ್ನು, ತೇಜಸ್ವಿ ಯಾದವ್ ಆರೋಪಗಳಿಗೆ ಪ್ರತ್ಯುತ್ತರ ನೀಡಿದ ನಿತೀಶ್ ಕುಮಾರ್, ವಿಧಾನಸಭೆ ಅವರಣದಲ್ಲಿ ಮದ್ಯದ ಬಾಟಲ್‌ಗಳು ದೊರೆತಿರುವುದನ್ನು ಸಹಿಸಲು ಸಾಧ್ಯವಿಲ್ಲ. ಈ ಕುರಿತು ಸ್ಪೀಕರ್ ಆದೇಶ ಪಡೆದು ತನಿಖೆಗೆ ಆದೇಶಿಸುವುದಾಗಿ ಭರವಸೆ ನೀಡಿದರು. ಅದರೆ ಇದೇ ವಿಷಯವನ್ನು ಮುಂದೆ ಮಾಡಿ ವಿಪಕ್ಷಗಳು ಸರ್ಕಾರದ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸುವುದು ಎಷ್ಟು ಸರಿ? ಎಂದು ನಿತೀಶ್ ಕುಮಾರ್ ಪ್ರಶ್ನಿಸಿದ್ದಾರೆ.
ಬಿಹಾರ ಸರ್ಕಾರದ ಮದ್ಯ ನಿಷೇಧ ನೀತಿಯ ಬಗ್ಗೆ ಯಾವಾಗಲೂ ಕಟು ಟೀಕಾಕಾರರಾಗಿರುವ ತೇಜಸ್ವಿ ಯಾದವ್ ರಾಜ್ಯವನ್ನು ಶುಷ್ಕವಾಗಿಡಲು ವಿಫಲರಾಗಿದ್ದಾರೆ ಎಂದು ಹೇಳುವ ಮೂಲಕ ಇತ್ತೀಚಿನ ಘಟನೆಯ ಬಗ್ಗೆ ಆಡಳಿತಾರೂಢ ಜೆಡಿಯು-ಬಿಜೆಪಿ ಆಡಳಿತ ಸರ್ಕಾರದ ಮೇಲೆ ದಾಳಿ ನಡೆಸಿದ್ದಾರೆ.
ಗೃಹ ವ್ಯವಹಾರಗಳ ಖಾತೆಯನ್ನು ಹೊಂದಿರುವ ಬಿಹಾರ ಮುಖ್ಯಮಂತ್ರಿ, ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಮತ್ತು ಲೋಪಕ್ಕೆ ಕಾರಣರಾದವರು ಕಠಿಣ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದು ಸದನಕ್ಕೆ ತಿಳಿಸಿದರು. ತನಿಖೆ ನಡೆಸುವಂತೆ ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿಗೆ ಹೇಳುತ್ತೇನೆ. ಬಾಟಲಿಗಳು ಇಲ್ಲಿಗೆ ಬಂದರೆ, ಅದು ಸಾಮಾನ್ಯ ವಿಷಯವಲ್ಲ. ಈ ರೀತಿ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.
ಇದನ್ನೂ ಓದಿ: MPI: ಬಿಹಾರ, ಜಾರ್ಖಂಡ್, ಉತ್ತರ ಪ್ರದೇಶ ದೇಶದ ಅತ್ಯಂತ ಬಡ ರಾಜ್ಯಗಳು; ಕರ್ನಾಟಕಕ್ಕೆ ಎಷ್ಟನೇ ಸ್ಥಾನ? ಇಲ್ಲಿದೆ ಮಾಹಿತಿ
40,000ಕ್ಕೂ ಹೆಚ್ಚು ತಮಿಳು ಬ್ರಾಹ್ಮಣರಿಗೆ ಸಿಗುತ್ತಿಲ್ಲ ವಧು; ಉತ್ತರ ಪ್ರದೇಶ, ಬಿಹಾರಕ್ಕೂ ವ್ಯಾಪಿಸಿದ ವಧು ಅನ್ವೇಷಣೆ
Published On - 7:20 pm, Tue, 30 November 21