ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಉಲ್ಲಂಘನೆ: ಬೈಜೂಸ್ ಸಿಇಒ ಬೈಜು ರವೀಂದ್ರನ್ ಮನೆ, ಕಚೇರಿ ಮೇಲೆ ಇಡಿ ದಾಳಿ

2011 ರಿಂದ 2023 ರ ಅವಧಿಯಲ್ಲಿ ಕಂಪನಿಯು ₹ 28,000 ಕೋಟಿಗಳಷ್ಟು (ಅಂದಾಜು) ವಿದೇಶಿ ನೇರ ಹೂಡಿಕೆಯನ್ನು ಸ್ವೀಕರಿಸಿದೆ ಎಂದು FEMA ಹುಡುಕಾಟಗಳು ಬಹಿರಂಗಪಡಿಸಿವೆ ಎಂದು ತನಿಖಾ ಸಂಸ್ಥೆಯ ಮಾಧ್ಯಮ ಪ್ರಕಟಣೆ ತಿಳಿಸಿದೆ

ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಉಲ್ಲಂಘನೆ: ಬೈಜೂಸ್ ಸಿಇಒ ಬೈಜು ರವೀಂದ್ರನ್ ಮನೆ, ಕಚೇರಿ ಮೇಲೆ ಇಡಿ ದಾಳಿ
ಬೈಜು ರವೀಂದ್ರನ್
ರಶ್ಮಿ ಕಲ್ಲಕಟ್ಟ

Updated on: Apr 29, 2023 | 3:11 PM

ಮುಖ್ಯಾಂಶಗಳು

  • ಥಿಂಕ್ & ಲರ್ನ್ ಪ್ರೈವೇಟ್ ಲಿಮಿಟೆಡ್' ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ಸಂಸ್ಥೆಯು ಬೆಂಗಳೂರಿನ ಎರಡು ವ್ಯಾಪಾರ ಮತ್ತು ಒಂದು ವಸತಿ ಆವರಣದಲ್ಲಿ ಶೋಧ
  • ನಾವು ಅಧಿಕಾರಿಗಳ ಜತೆ ಸಹಕರಿಸಿದ್ದು ಅವರು ವಿನಂತಿಸಿದ ಎಲ್ಲಾ ಮಾಹಿತಿಯನ್ನು ಅವರಿಗೆ ಒದಗಿಸಿದ್ದೇವೆ ಎಂದ ಬೈಜೂಸ್
  • ಈ ಶೋಧ ಕಾರ್ಯ FEMA ಅಡಿಯಲ್ಲಿ ವಾಡಿಕೆಯ ವಿಚಾರಣೆಗೆ ಸಂಬಂಧಿಸಿವೆ ಎಂದು ಬೈಜೂಸ್ ಹೇಳಿದೆ

ಬೆ: ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಉಲ್ಲಂಘಿಸಿದ ಆರೋಪದ ಮೇಲೆ ಜಾರಿ ನಿರ್ದೇಶನಾಲಯವು ಬೆಂಗಳೂರು ಮೂಲದ ಎಡ್-ಟೆಕ್ ಸಂಸ್ಥೆ  ಬೈಜೂಸ್ (BYJU’s) ಸಿಇಒ ಬೈಜು ರವೀಂದ್ರನ್ ಅವರ ಮನೆ ಮತ್ತು ಕಚೇರಿಯಲ್ಲಿ ಇಂದು ಶೋಧ ನಡೆಸಿತು. ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ (FEMA) ನಿಬಂಧನೆಗಳ ಅಡಿಯಲ್ಲಿ ರವೀಂದ್ರನ್ ಮತ್ತು ಅವರ ಕಂಪನಿ ‘ಥಿಂಕ್ & ಲರ್ನ್ ಪ್ರೈವೇಟ್ ಲಿಮಿಟೆಡ್’ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ಸಂಸ್ಥೆಯು ಬೆಂಗಳೂರಿನ ಎರಡು ವ್ಯಾಪಾರ ಮತ್ತು ಒಂದು ವಸತಿ ಆವರಣವನ್ನು ಶೋಧಿಸಿದೆ .ಶೋಧದ ವೇಳೆ ಹಲವಾರು ದೋಷಾರೋಪಣೆಯ ದಾಖಲೆಗಳು ಮತ್ತು ಡೇಟಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಡಿ ತಿಳಿಸಿದೆ. ತನಿಖಾ ಸಂಸ್ಥೆಯ ಬಹಿರಂಗಪಡಿಸಿದ ಕೆಲವೇ ನಿಮಿಷಗಳಲ್ಲಿ ಪ್ರತಿಕ್ರಿಯಿಸಿದ ಬೈಜೂಸ್, ಈ ಶೋಧ ಕಾರ್ಯ FEMA ಅಡಿಯಲ್ಲಿ ವಾಡಿಕೆಯ ವಿಚಾರಣೆಗೆ ಸಂಬಂಧಿಸಿವೆ ಎಂದು ಹೇಳಿದೆ.

ನಾವು ಅಧಿಕಾರಿಗಳ ಜತೆ ಸಹಕರಿಸಿದ್ದು ಅವರು ವಿನಂತಿಸಿದ ಎಲ್ಲಾ ಮಾಹಿತಿಯನ್ನು ಅವರಿಗೆ ಒದಗಿಸಿದ್ದೇವೆ. ನಮ್ಮ ಕಾರ್ಯಾಚರಣೆಗಳ ಸಮಗ್ರತೆಯ ಬಗ್ಗೆ ನಮಗೆ ಹೆಚ್ಚಿನ ವಿಶ್ವಾಸವಿದೆ. ನೈತಿಕತೆಯ ಉನ್ನತ ಗುಣಮಟ್ಟವನ್ನು ಎತ್ತಿಹಿಡಿಯಲು ನಾವು ಬದ್ಧರಾಗಿದ್ದೇವೆ ಎಂದು ಕಂಪನಿ ಹೇಳಿರುವುದಾಗಿ ಎನ್​​ಡಿಟಿವಿ ವರದಿ ಮಾಡಿದೆ.

2011 ರಿಂದ 2023 ರ ಅವಧಿಯಲ್ಲಿ ಕಂಪನಿಯು ₹ 28,000 ಕೋಟಿಗಳಷ್ಟು (ಅಂದಾಜು) ವಿದೇಶಿ ನೇರ ಹೂಡಿಕೆಯನ್ನು ಸ್ವೀಕರಿಸಿದೆ ಎಂದು FEMA ಹುಡುಕಾಟಗಳು ಬಹಿರಂಗಪಡಿಸಿವೆ ಎಂದು ತನಿಖಾ ಸಂಸ್ಥೆಯ ಮಾಧ್ಯಮ ಪ್ರಕಟಣೆ ತಿಳಿಸಿದೆ. ಇದೇ ಅವಧಿಯಲ್ಲಿ ಕಂಪನಿಯು ಸಾಗರೋತ್ತರ ನೇರ ಹೂಡಿಕೆಯ ಹೆಸರಿನಲ್ಲಿ ವಿವಿಧ ವಿದೇಶಿ ಸಂಸ್ಥೆಗಳಿಗೆ ಸುಮಾರು ₹ 9,754 ಕೋಟಿಗಳನ್ನು ಕಳುಹಿಸಿದೆ ಎಂದು ಅದು ಹೇಳಿದೆ.

ಖಾಸಗಿ ವ್ಯಕ್ತಿಗಳು ಸ್ವೀಕರಿಸಿದ ವಿವಿಧ ದೂರುಗಳ ಆಧಾರದ ಮೇಲೆ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅದು ಹೇಳಿದೆ, ರವೀಂದ್ರನ್ ಅವರಿಗೆ ಹಲವಾರ ಸಮನ್ಸ್‌ಗಳನ್ನು ನೀಡಲಾಗಿದ್ದರೂ ಅವರರು ಹಾಜರಾಗದೆ ತಪ್ಪಿಸಿಕೊಳ್ಳುತ್ತಿದ್ದರು ಎಂದು ಇಡಿ ಹೇಳಿದೆ.

ಇದನ್ನೂ ಓದಿ: Gift to PM Modi: ಬೆಳಗಾವಿಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಗೆ ‘ಬೆಲ್ಲದ ಮೋದಿ ಕಲಾಕೃತಿ’ ಗಿಫ್ಟ್​, ಹೇಗಿದೆ ನೋಡಿ

ಕಂಪನಿಯು 2020-21ರ ಆರ್ಥಿಕ ವರ್ಷದಿಂದ ತನ್ನ ಹಣಕಾಸಿನ ಹೇಳಿಕೆಗಳನ್ನು ಸಿದ್ಧಪಡಿಸಿಲ್ಲ ಮತ್ತು ಖಾತೆಗಳನ್ನು ಲೆಕ್ಕಪರಿಶೋಧನೆ ಮಾಡಿಲ್ಲ, ಇದು ಕಡ್ಡಾಯವಾಗಿದೆ ಎಂದು ಇಡಿ ಹೇಳಿದೆ.

ಕಂಪನಿಯು ವಿದೇಶಿ ನ್ಯಾಯವ್ಯಾಪ್ತಿಗೆ ರವಾನೆಯಾದ ಮೊತ್ತವನ್ನು ಒಳಗೊಂಡಂತೆ “ಜಾಹೀರಾತು ಮತ್ತು ಮಾರುಕಟ್ಟೆ ವೆಚ್ಚ” ಹೆಸರಿನಲ್ಲಿ ಸುಮಾರು ₹ 944 ಕೋಟಿಗಳನ್ನು ಕಾಯ್ದಿರಿಸಿದೆ ಎಂದು ತನಿಖಾ ಸಂಸ್ಥೆ ತಿಳಿಸಿದೆ.ಆದ್ದರಿಂದ, ಕಂಪನಿಯು ಒದಗಿಸಿದ ಅಂಕಿಅಂಶಗಳ ಬಗ್ಗೆ ಬ್ಯಾಂಕ್‌ಗಳಿಂದ ಕ್ರಾಸ್ ಚೆಕ್ ಮಾಡಲಾಗುವುದು ಎಂದು ಅದು ಹೇಳಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us